ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ-ಬಿಜೆಪಿ, ಇತರ ಪಕ್ಷಗಳ ಸೀಟು ಹಂಚಿಕೆ ಅಂತಿಮ

ಚೆನ್ನೈ: ತಮಿಳುನಾಡಿನ 234 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸೋಮವಾರ ತನ್ನ ಸೀಟು ಹಂಚಿಕೆಯನ್ನು ಅಧಿಕೃತವಾಗಿ ಅಂತಿಮಗೊಳಿಸಿದೆ. ಚೆನ್ನೈನಲ್ಲಿರುವ ಎಐಎಡಿಎಂಕೆ (AIADMK) ಕೇಂದ್ರ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ (AIADMK) 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಳೆದ … Continued

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನಿನಿಂದ 18 ಕೋಟಿ ರೂಪಾಯಿಗೂ ಹೆಚ್ಚು ಸುಂಕ…!

ತೆಹ್ರಾನ್‌ : ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆ, ಜಾಗತಿಕ ಹಡಗು ಸಂಚಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಇರಾನ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೆಲವು ಹಡಗುಗಳು ಜಲಸಂಧಿಯನ್ನು ದಾಟಲು 2 ಮಿಲಿಯನ್ ಡಾಲರ್ (ಸುಮಾರು 18.8 ಕೋಟಿ ರೂಪಾಯಿ) ಶುಲ್ಕವನ್ನು ಪಾವತಿಸುವಂತೆ ಇರಾನ್ … Continued

ಲಷ್ಕರ್ ಉಗ್ರ ಸಂಘಟನೆ ಕಮಾಂಡರ್‌ ಬಿಲಾಲ್ ಆರಿಫ್ ಹತ್ಯೆ : ಕುಟುಂಬ ಸದಸ್ಯರಿಂದಲೇ ಚಾಕು ಇರಿತ, ಗುಂಡೇಟು

ನವದೆಹಲಿ: ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಫಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಈದ್ ಪ್ರಾರ್ಥನೆಯ ನಂತರ ಆತನ ಕುಟುಂಬ ಸದಸ್ಯರೇ ಚಾಕುವಿನಿಂದ ಇರಿದಿದ್ದಾರೆ ಮತ್ತು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವು ವರದಿಗಳು ತಿಳಿಸಿವೆ. ಈ ಘಟನೆಯು ಮುರಿದ್ಕೆಯ ಮರ್ಕಜ್ ಬಳಿಯಿರುವ ಧ್ವಂಸಗೊಂಡ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಸಮೀಪ ನಡೆದಿದೆ ಎಂದು ವರದಿಯಾಗಿದೆ. … Continued

ಹಾರ್ಮುಜ್ ಜಲಸಂಧಿ ಉಳಿದವರಿಗೆ ತೆರೆದಿದೆ, ಶತ್ರುಗಳಿಗೆ ಮಾತ್ರ ಬಂದ್ ; ಅಮೆರಿಕ ಎಚ್ಚರಿಕೆಯ ನಂತರ ಇರಾನ್‌

ತೆಹ್ರಾನ್: ಇರಾನ್‌ ಸಂಘರ್ಷದಿಂದ ಕಚ್ಚಾ ತೈಲದ ಬಗ್ಗೆ ಜಾಗತಿಕವಾಗಿ ಅನಿಶ್ಚಿತತೆ ಉಂಟಾಗಿರುವ ಬೆನ್ನಲ್ಲೇ, ಇರಾನ್ ಭಾನುವಾರ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ತೆರೆದಿದೆ, ಆದರೆ ಅದು ಇರಾನ್ ಶತ್ರುಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ ಎಂದು ಇರಾನ್ ತಿಳಿಸಿದೆ. ವಿದೇಶಿ ಹಡಗುಗಳು ‘ಸುರಕ್ಷತೆ ಮತ್ತು ಭದ್ರತೆ’ಗಾಗಿ ಇರಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರೆ, ಈ … Continued

48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ; ಇರಾನಿಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಕೂಡಲೇ ಸಂಪೂರ್ಣವಾಗಿ ತೆರೆಯಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ … Continued

ವೀಡಿಯೊ | ಈದ್ ಹಬ್ಬದ ದಿನವೇ ಜೆರುಸಲೇಂ ಮೇಲೆ ಇರಾನ್ ದಾಳಿ: ಅಲ್-ಅಕ್ಸಾ ಮಸೀದಿ ಸಮೀಪವೇ ಬಿದ್ದ ಕ್ಷಿಪಣಿ

ಜೆರುಸಲೇಂ: ಈದ್ ಉಲ್-ಫಿತರ್ ಹಬ್ಬದ ಸಂಭ್ರಮದ ನಡುವೆಯೇ ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಜೆರುಸಲೇಂನ ಪವಿತ್ರ ಅಲ್-ಅಕ್ಸಾ ಮಸೀದಿಯಿಂದ ಕೇವಲ ನೂರಾರು ಮೀಟರ್ ದೂರದಲ್ಲಿ ಬಂದು ಬಿದ್ದಿದೆ. ಭದ್ರತಾ ಕಾರಣಗಳಿಂದಾಗಿ ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಳೆಯ ನಗರದ (Old City) ಪ್ರವೇಶವನ್ನು ನಿರ್ಬಂಧಿಸಲಾಗಿದ್ದರಿಂದ, ನೂರಾರು ಮುಸ್ಲಿಮರು ದ್ವಾರಗಳ ಹೊರಗಡೆಯೇ ಈದ್ ಪ್ರಾರ್ಥನೆ ಸಲ್ಲಿಸಬೇಕಾದ … Continued

ಇರಾನಿನ ನತಾಂಜ್ ಪರಮಾಣು ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ

ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶನಿವಾರ ಇರಾನ್‌ನ ಅತ್ಯಂತ ಪ್ರಮುಖ ಯುರೇನಿಯಂ ಪುಷ್ಟೀಕರಣ ಕೇಂದ್ರವಾದ ನತಾಂಜ್ (Natanz) ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ‘ಮಿಜಾನ್’ ವರದಿ ಮಾಡಿದೆ. ಪಶ್ಚಿಮ ಏಷ್ಯಾದ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಈ … Continued

ಜಾಗತಿಕ ತೈಲ ಬೆಲೆ ಏರಿಕೆ ನಿಯಂತ್ರಣಕ್ಕೆ ಇರಾನ್ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ಅಮೆರಿಕ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ತೈಲ ಪೂರೈಕೆ ಬಿಕ್ಕಟ್ಟನ್ನು ನಿಯಂತ್ರಿಸಲು ಅಮೆರಿಕದ ಖಜಾನೆ ಇಲಾಖೆಯು (US Treasury) ಮಹತ್ವದ ನಿರ್ಧಾರ ಕೈಗೊಂಡಿದೆ. ಹಡಗುಗಳಲ್ಲಿ ಈಗಾಗಲೇ ಲೋಡ್ ಆಗಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾರ್ಚ್ 20ರ ಮೊದಲು ಹಡಗುಗಳಿಗೆ ತುಂಬಲಾದ ಇರಾನ್‌ನ ಕಚ್ಚಾ ತೈಲ ಮತ್ತು ಇತರ ಪೆಟ್ರೋಲಿಯಂ … Continued

ಉನ್ನತ ನಾಯಕರ ಸಾವು, ಸಾರ್ವಜನಿಕವಾಗಿ ಕಾಣಿಸದ ಸುಪ್ರೀಂ ಲೀಡರ್ : ಹಾಗಾದ್ರೆ ಈಗ ಇರಾನ್ ಮುನ್ನಡೆಸುತ್ತಿರೋದು ಯಾರು?

ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ … Continued

19 ವರ್ಷದ ಖ್ಯಾತ ಕುಸ್ತಿಪಟು ಸೇರಿ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್‌

ಇರಾನ್ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ತನ್ನ ದಮನಕಾರಿ ನೀತಿಯನ್ನು ತೀವ್ರಗೊಳಿಸಿದ್ದು, ಸರ್ಕಾರಿ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಕ್ಯೂಮ್ (Qom) ನಗರದಲ್ಲಿ 19 ವರ್ಷದ ಚಾಂಪಿಯನ್ ಕುಸ್ತಿಪಟು ಮತ್ತು ಇತರ ಇಬ್ಬರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ವರದಿ ಪ್ರಕಾರ, ಉದಯೋನ್ಮುಖ ಕುಸ್ತಿ ಪ್ರತಿಭೆ ಸಲೇಹ್ ಮೊಹಮ್ಮದಿ (Saleh Mohammadi), ಸಯೀದ್ ದಾವೋದಿ … Continued