ಶಾಕಿಂಗ್‌ ವೀಡಿಯೊ..| ಬೈರುತ್‌ ನಲ್ಲಿ ಬೃಹತ್‌ ಅಪಾರ್ಟ್‌ಮೆಂಟ್‌ ಅನ್ನು ಧೂಳಾಗಿ ಪರಿವರ್ತಿಸಿದ ಭಯಾನಕ ಇಸ್ರೇಲಿ ಕ್ಷಿಪಣಿ ದಾಳಿ…!

ಬೈರುತ್ (ಲೆಬನಾನ್) : ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ನಡೆಯುತ್ತಿರುವ ಘರ್ಷಣೆಗಳ ನಡುವೆ ಲೆಬನಾನಿನ ಬೈರುತ್‌ನಲ್ಲಿ ಮಂಗಳವಾರ ಇಸ್ರೇಲಿ ಕ್ಷಿಪಣಿಯೊಂದು ವಸತಿ ಕಟ್ಟಡಕ್ಕೆ ಅಪ್ಪಳಿಸಿದ ವೀಡಿಯೊ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬಹುಮಹಡಿ ಕಟ್ಟಡವು ನಗರದ ಉದ್ಯಾನವನವಾದ ಹೋರ್ಶ್ ಬೈರುತ್‌ನ ಪಕ್ಕದಲ್ಲಿ ತಯೂನೆ ಪ್ರದೇಶದಲ್ಲಿತ್ತು ಎಂದು … Continued

20 ಓವರ್‌ಗಳಲ್ಲಿ 344 ರನ್‌ ಗಳು : T20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ…!

ನೈರೋಬಿ: ಬುಧವಾರ ನಡೆದ T20 ವಿಶ್ವಕಪ್‌ನ ಉಪ ಪ್ರಾದೇಶಿಕ ಆಫ್ರಿಕಾ B ಗುಂಪಿನ ಅರ್ಹತಾ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ 4 ವಿಕೆಟ್‌ಗೆ 344 ರನ್ ಗಳಿಸುವ ಮೂಲಕ ಜಿಂಬಾಬ್ವೆ T20I ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು . ಇತ್ತೀಚಿನ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ಆಡುವ ಜಿಂಬಾಬ್ವೆ ತಂಡದ ನಾಯಕ … Continued

ವೀಡಿಯೊ..| ದಣಿದಿದ್ದರೂ ಚಿಕಿತ್ಸೆ ಕೊಡಿಸಲು ಗಾಯಗೊಂಡ ತಂಗಿಯನ್ನು ಹೆಗಲ ಮೇಲೆ 2 ಕಿಮೀ ಹೊತ್ತೊಯ್ದ ಪುಟ್ಟ ಪ್ಯಾಲೇಸ್ತಿನಿಯನ್ ಹುಡುಗಿ..

ದಣಿದ ಪ್ಯಾಲೇಸ್ತಿನಿಯನ್ ಪುಟ್ಟ ಹುಡುಗಿಯೊಬ್ಬಳು ಗಾಯಗೊಂಡಿರುವ ತನ್ನ ಸಹೋದರಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ತನ್ನ ಭುಜದ ಮೇಲೆ ಹೊತ್ತುಕೊಂಡು ಗಾಜಾ ಪಟ್ಟಿಯ ಬೀದಿಗಳಲ್ಲಿ ಹೋಗುತ್ತಿರುವ ವೀಡಿಯೊ ಸೋಮವಾರ ಹೊರಹೊಮ್ಮಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ತುಣುಕಿನ ಪ್ರಕಾರ, ಹುಡುಗಿ ತನ್ನ ಸಹೋದರಿಯನ್ನು ಹೊತ್ತೊಯ್ಯುವಾಗ ದಣಿದಿದ್ದಾಳೆ. ಪುಟ್ಟ ಮಗುವಿನ ಭುಜದ ಮೇಲಿದ್ದ ಮತ್ತೊಂದು ಮಗುವಿನ ಒಂದು ಕಾಲಿಗೆ ಪೆಟ್ಟಾದಂತೆ … Continued

ಮಹಿಳಾ ಟಿ20 ವಿಶ್ವಕಪ್‌ 2024 ; ನ್ಯೂಜಿಲೆಂಡ್‌ ತಂಡ ಚಾಂಪಿಯನ್‌

ದುಬೈ: ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ ತಂಡವು ಮಹಿಳಾ ಟಿ20 ವಿಶ್ವಕಪ್‌ನ (Womens T20 World Cup) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಭಾನುವಾರ (ಅಕ್ಟೋಬರ್‌ 20) ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (NZW vs SAW) ಮತ್ತು ನ್ಯೂಜಿಲೆಂಡ್‌ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾವನ್ನು ಮಣಿಸಿದ … Continued

ವೀಡಿಯೊ..| ರಷ್ಯಾದ ಪಡೆಗಳ ಮೇಲೆ ಹಾರಾಡಿದ ಉಕ್ರೇನ್ ಡ್ರೋನ್ ; ನಂತರ ರಾಕೆಟ್ ನಿಂದ ಬೆಂಕಿಯ ಮಳೆ…!

ರಷ್ಯಾದ ಆಕ್ರಮಿತ ದಕ್ಷಿಣ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಒಬ್ಲಾಸ್ಟ್‌ನಲ್ಲಿರುವ ರಷ್ಯಾದ ಸೈನಿಕರ ಮಿಲಿಟರಿ ತರಬೇತಿ ಸೌಲಭ್ಯದ ಮೇಲೆ ಉಕ್ರೇನಿಯನ್ ಡ್ರೋನ್ ದಾಳಿ ಮಾಡಿದೆ. ಉಕ್ರೇನಿಯನ್ ಡ್ರೋನ್ ರಷ್ಯಾದ ಪಡೆಗಳನ್ನು ಗುರುತಿಸುತ್ತಿದ್ದಂತೆ, ಅದು ಹೊತ್ತೊಯ್ದಿದ್ದ 660-ಪೌಂಡ್ ರಾಕೆಟ್ ನೂರಾರು ಗ್ರೆನೇಡ್-ಗಾತ್ರದ ಸಬ್‌ಮ್ಯುನಿಷನ್‌ಗಳೊಂದಿಗೆ ರಷ್ಯಾ ಸೈನಿಕರ ಮೇಲೆ ದಾಳಿ ಮಾಡಿತು. ಅಕ್ಟೋಬರ್ 15 ರಂದು ನಡೆದ ದಾಳಿಯ ಸಮಯದಲ್ಲಿ, ಈ … Continued

‘ಬೇಯಿಸಿದ ಶಿಶುಗಳನ್ನು ತಿನ್ನಿಸಿದರು…ಅತ್ಯಾಚಾರ ಮಾಡಿದರು’: ಐಸಿಸ್‌ ಭಯಾನಕ ಕ್ರೌರ್ಯದ ಬಗ್ಗೆ ಬಿಚ್ಚಿಟ್ಟ ಗಾಜಾದಿಂದ ಪಾರಾಗಿಬಂದ ಒತ್ತೆಯಾಳು…!

ಇಸ್ರೇಲಿ ರಕ್ಷಣಾ ಪಡೆ (IDF) ಮತ್ತು ಅಮೆರಿಕ ರಾಯಭಾರ ಕಚೇರಿಯಿಂದ ಗಾಜಾದಲ್ಲಿ ರಕ್ಷಿಸಲ್ಪಟ್ಟ ಯಾಜಿದಿ ಮಹಿಳೆ ಫೌಜಿಯಾ ಅಮೀನ್ ಸಿಡೊ ಅವರು ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದನೆ ಸಂಘಟನೆ ಬಗ್ಗೆ ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ತನ್ನನ್ನು ಇತರ ಯಾಜಿದಿಗಳೊಂದಿಗೆ ಅಪಹರಿಸಿದ ನಂತರ ಅವರು ತಮಗೆ ಯಾಜಿದಿ ಸಮುದಾಯದ ಶಿಶುಗಳ ಮಾಂಸವನ್ನು ತಿನ್ನಿಸಿದರು … Continued

ವೀಡಿಯೊ..| ಕಳೆದ ವರ್ಷ ಅಕ್ಟೋಬರ್ 7ರ ದಾಳಿ ಮೊದಲು ಹಮಾಸ್ ಮುಖ್ಯಸ್ಥ ಸಿನ್ವಾರ್ ಗಾಜಾದ ಭೂಗತ ಸುರಂಗಕ್ಕೆ ಹೋದ ವೀಡಿಯೊ ಹಂಚಿಕೊಂಡ ಇಸ್ರೇಲ್

ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹತ್ಯೆ ನಡೆಸಿದ ಹಮಾಸ್‌ ಗುಂಪಿನ ದಾಳಿಯ ಸಂಚಿನ ರೂವಾರಿ ಎಂದೇ ಇಸ್ರೇಲಿನಿಂದ ಬಿಂಬಿತವಾಗಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಈ ದಾಳಿ ನಡೆಸುವ ಕೆಲವೇ ಗಂಟೆಗಳ ಮುನ್ನ ಗಾಜಾದ ಭೂಗತ ಸುರಂಗಕ್ಕೆ ತನ್ನ ಕುಟುಂಬ ಹಾಗೂ ವಸ್ತುಗಳನ್ನು ಸಾಗಿಸುತ್ತಿರುವ ದೃಶ್ಯವನ್ನು ಇಸ್ರೇಲ್ ಶನಿವಾರ ಬಿಡುಗಡೆ ಮಾಡಿದೆ. … Continued

ವೀಡಿಯೊ..| ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇಸ್ರೇಲ್ ಪ್ರಧಾನಿ ಮನೆ ಮೇಲೆ ಹಿಜ್ಬೊಲ್ಲಾ ಡ್ರೋನ್ ದಾಳಿ ವಿಫಲಗೊಳಿಸಿದ ಭದ್ರತಾ ಸಿಬ್ಬಂದಿ

ಟೆಲ್ ಅವೀವ್: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಡ್ರೋನ್ ದಾಳಿ ನಡೆಸಿರುವ ಹಿಜ್ಬೊಲ್ಲಾ ಉಗ್ರಸಂಘಟನೆ ಪ್ರಯತ್ನವನ್ನು ಇಸ್ರೇಲ್‌ ಭದ್ರತಾ ಸಿಬ್ಬಂದಿ ಇದನ್ನು ವಿಫಲಗೊಳಿಸಿವೆ. ಅವರು ಡ್ರೋನ್ ಹೊಡೆದುರುಳಿಸುವ ಮೂಲಕ‌ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು … Continued

ವೀಡಿಯೊ: ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ ಟ್ಯಾಂಕ್ ದಾಳಿಯ ವೀಡಿಯೊ ಹಂಚಿಕೊಂಡ ಇಸ್ರೇಲ್

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ದಕ್ಷಿಣ ಗಾಜಾದ ರಫಾದಲ್ಲಿ ನಡೆಸಿದ ಭೂ ದಾಳಿಯಲ್ಲಿ ಇಸ್ರೇಲ್‌ ಕೊಂದು ಹಾಕಿದೆ. ಇಸ್ರೇಲ್‌ನ 828 ನೇ ಬ್ರಿಗೇಡ್ “ಗುಪ್ತಚರ ಆಧಾರಿತ ದಾಳಿಗಳನ್ನು” ನಡೆಸಿದ ವೇಳೆ ಸಿನ್ವಾರ್‌ ಕೊಲ್ಲಲ್ಪಟ್ಟಿದ್ದಾರೆ. ರಫಾದಲ್ಲಿನ ಹಮಾಸ್ ಮುಖ್ಯಸ್ಥನ ಅಡಗುತಾಣದ ಮೇಲೆ ಇಸ್ರೇಲಿ ಟ್ಯಾಂಕ್ ನಡೆಸಿದ ದಾಳಿಯ ವೀಡಿಯೊವನ್ನು ಐಡಿಎಫ್‌ (IDF) ಹಂಚಿಕೊಂಡಿದೆ. ಡ್ರೋನ್ ಫೂಟೇಜ್ … Continued

ತಲೆಯೊಳಗೆ ಗುಂಡು, ಕತ್ತರಿಸಲ್ಪಟ್ಟ ಬೆರಳು….: ಹಮಾಸ್‌ ಮುಖ್ಯಸ್ಥನ ಶವಪರೀಕ್ಷೆಯ ವಿವರಗಳು

ಇಸ್ರೇಲ್ ನಡೆಸಿದ ಶವಪರೀಕ್ಷೆಯಲ್ಲಿ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ತಲೆಗೆ ಗುಂಡೇಟು ತಗುಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಕಂಡುಬಂದಿದೆ. ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಮೆಡಿಸಿನ್‌ನ ಪರಿಣಿತರು ಹಮಾಸ್ ನಾಯಕನ ಮೃತದೇಹವು ಕೈ ಬೆರಳನ್ನು ಕತ್ತರಿಸಿದ ಸ್ಥಿತಿಯಲ್ಲಿ ತಮ್ಮಲ್ಲಿಗೆ ಬಂದಿತ್ತು ಎಂದು ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಡಿಎನ್‌ಎ ವಿಶ್ಲೇಷಣೆಗಾಗಿ ಸಿನ್ವಾರ್‌ನ ಬೆರಳನ್ನು ಕತ್ತರಿಸಿದೆ … Continued