ಭಯಾನಕ ವೀಡಿಯೊ…| ಬಂಡೀಪುರ : ಫೋಟೋ ತೆಗೆಯಲು ಮುಂದಾದವನ ಅಟ್ಟಾಡಿಸಿಕೊಂಡು ಹೋಗಿ ಮೆಟ್ಟಿದ ಕಾಡಾನೆ

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇರಳದ ಪ್ರವಾಸಿಯೊಬ್ಬರ ಮೇಲೆ ಕಾಡು ಆನೆ ದಾಳಿ ನಡೆಸಿದೆ. ಪ್ರವಾಸಿಗನನ್ನು ನೆಲಕ್ಕೆ ತಳ್ಳಿದ ಆನೆ ಕಾಲಿನಿಂದ ತುಳಿದಿದೆ. ಆದರೆ ಉಳಿದ ಪ್ರವಾಸಿಗರು ಬೊಬ್ಬೆ ಹೊಡೆದ ನಂತರ ಆತನನ್ನು ಬಿಟ್ಟುಹೋಗಿದೆ. ಪ್ರವಾಸಿಗನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ, ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗಸ್ಟ್‌ 16ರ ವರೆಗೆ ಭಾರಿ ಗಾಳಿಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 16ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಉತ್ತರ ಒಳನಾಡು, ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಈ ಅವಧಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ. … Continued

ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆಂಬ ಆರೋಪ ; ದಾಖಲೆ ನೀಡುವಂತೆ ರಾಹುಲ್​ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ಬೆಂಗಳೂರು : ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿರುವ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದ್ದಾರೆ. ಈ ದಾಖಲೆಗಳು ವಿವರವಾದ ತನಿಖೆ ನಡೆಸಲು ಸಹಾಯ ಮಾಡುತ್ತದೆ ಎಂದು ರಾಹುಲ್‌ ಗಾಂಧಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ … Continued

ವೀಡಿಯೊ…| ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ಪೂಜಾ ಪಾತ್ರೆ ತೊಳೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಹೂವು ಕಟ್ಟಿದ ಸುಧಾಮೂರ್ತಿ

ಉಡುಪಿ: ಕರ್ನಾಟಕದ ಉಡುಪಿಗೆ ಭೇಟಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪೂಜಾ ಪಾತ್ರೆ ತೊಳೆಯುವ ಮೂಲಕ ಸರಳತೆ ಮೆರೆದಿದ್ದಾರೆ. ಅವರಿಗೆ ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಸಾಥ್ ನೀಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಹೊಸ್ತಿಲು ಪೂಜೆ, ದೇವರ … Continued

ಬೆಂಗಳೂರಿಗೆ ಬಂದ ಪ್ರಧಾನಿ ಮೋದಿಗೆ 5 ವರ್ಷದ ಬಾಲಕಿ ಬರೆದ ಪತ್ರ ವೈರಲ್‌; ಪತ್ರದಲ್ಲೇನಿದೆ ಗೊತ್ತೆ..?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ, ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಹಾಗೂ ಮೂರು ವಂದೇ ಭಾರತ ರೈಲುಗಳಿಗೆ ಇಂದು, (ಆಗಸ್ಟ್‌ 10) ಚಾಲನೆ ನೀಡಿದ್ದಾರೆ. ಬೆಂಗಳೂರಿಗೆ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ನಗರದ 5 ವರ್ಷದ ಬಾಲಕಿ ಪ್ರಧಾನಿಗೆ ಪತ್ರ ಬರೆದಿದ್ದು, ಇದು ವೈರಲ್‌ ಆಗಿದೆ. ಬೆಂಗಳೂರಿನ ರಸ್ತೆಗಳ … Continued

ಕಾರವಾರ | ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕಾರವಾರ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಜಡಿಗದ್ದಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ರೈಲಿಗೆ ಡಿಕ್ಕಿಯಾಗಿ ಚಿರತೆ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ಸುಮಾರು 8 ವರ್ಷದ ಗಂಡು ಚಿರತೆ ಹಲವು ದಿನಗಳಿಂದ ತೋಡೂರು … Continued

ವೀಡಿಯೊ | ವಿಶ್ವ ಸಂಸ್ಕೃತ ದಿನ 2025 : ಸಂಸ್ಕೃತದಲ್ಲೇ ಶುಭಾಶಯ ಕೋರಿ ಗಮನ ಸೆಳೆದ ಮಾಜಿ ಕ್ರಿಕೆಟರ್‌ ಅನಿಲ ಕುಂಬ್ಳೆ ದಂಪತಿ

ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಜೆಂಡರಿ ಲೆಗ್-ಸ್ಪಿನ್ನರ್ ಅನಿಲ ಕುಂಬ್ಳೆ ಹಾಗೂ ಅವರ ಪತ್ನಿ ಚೇತನಾ ಕುಂಬ್ಳೆ ಅವರೊಂದಿಗೆ, ವಿಶ್ವ ಸಂಸ್ಕೃತ ದಿನದ ಅಂಗವಾಗಿ ಎಲ್ಲರಿಗೂ ಸಂಸ್ಕೃತದಲ್ಲಿಯೇ ವಿಶೇಷ ವೀಡಿಯೊ ಸಂದೇಶ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ವರ್ಷ ಆಗಸ್ಟ್ 9 ರಂದು ಆಚರಿಸಲಾಗುವ ವಿಶ್ವ ಸಂಸ್ಕೃತ ದಿನವು … Continued

ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ವ್ಯಕ್ತಿ ಪರಾರಿ

ನವದೆಹಲಿ: ಶುಕ್ರವಾರ ರಾತ್ರಿ ದೆಹಲಿಯ ಕರವಾಲ್ ನಗರ ಪ್ರದೇಶದ ಮನೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮಕ್ಕಳು 5 ಮತ್ತು 7 ವರ್ಷದ ಹೆಣ್ಣು ಮಕ್ಕಳಾಗಿದ್ದಾರೆ. 28 ವರ್ಷದ ಪತ್ನಿ ಜಯಶ್ರೀ ಜೊತೆಗಿನ ದೀರ್ಘಕಾಲದ ಜಗಳವೇ ಈ ಕೊಲೆಗಳಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು … Continued

ಸಹಪಾಠಿಗಳಿಂದ ರ‍್ಯಾಗಿಂಗ್‌ ; ಡೆತ್‌ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ : ಸಹಪಾಠಿಗಳ ರ‍್ಯಾಗಿಂಗ್‌ಗೆ ಮನನೊಂದು ಬಿಎ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಖಾಸಗಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಂಜಲಿ ಮುಂಡಾಸ (21) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಶುಕ್ರವಾರ ಕಾಲೇಜಿನಲ್ಲಿ ಸಹಪಾಠಿಗಳು ವಿದ್ಯಾರ್ಥಿನಿಗೆ ರ‍್ಯಾಗಿಂಗ್ ಮಾಡಿದ್ದು, … Continued

ಮತಗಳ್ಳತನ ಆರೋಪ : ಚುನಾವಣಾ ಆಯೋಗಕ್ಕೆ ದೂರು ನೀಡಲು ಹಿಂದೇಟು ಹಾಕಿದರೇ ರಾಹುಲ್ ಗಾಂಧಿ…?

ಬೆಂಗಳೂರು : ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಅಕ್ರಮವಾಗಿ ಮತದಾನ ನಡೆಸಲಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ದೆಹಲಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಇಂದು (ಆಗಸ್ಟ್ 8) ಬೆಂಗಳೂರಿನ ಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ … Continued