ಅಯೋಧ್ಯಾ ರಾಮಮಂದಿರಕ್ಕೆ ೧೭ ಕೋಟಿ ರೂ. ದೇಣಿಗೆ ನೀಡಿದ ಜಮ್ಮು-ಕಾಶ್ಮೀರ ಜನರು

ಶ್ರೀನಗರ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಜಮ್ಮು-ಕಾಶ್ಮೀರದ ಜನರು ೧೭ ಕೋಟಿ ರೂ. ದೇಣಿಗೆ ನೀಡಿದ್ದಾರೆ. ೪೪ ದಿನಗಳ ಕಾಲ ನಡೆದ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನದಲ್ಲಿ ೨೧,೩೩೧ ಕಾರ್ಯಕರ್ತರು ೪೬೯೩ ಗ್ರಾಮಗಳು ಹಾಗೂ ಪಟ್ಟಣಗಳ ೬.೩೭ ಲಕ್ಷ ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿದರು ಎಂದು ಆರ್‌ಎಸ್‌ಎಸ್‌ ಪ್ರಾಂತ ಸಹ ಸಂಘಚಾಲಕ ಗೌತಮ್‌ … Continued

ನಿಕಿತಾ ತೋಮರ್‌ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ನಿಕಿತಾ ತೋಮರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಫರಿದಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಹರಿಯಾಣದ ಫರಿದಾಬಾದ್‌ನ ಬಲ್ಲಾಬ್‌ಗಡದಲ್ಲಿ ನಿಕಿತಾ ತೋಮರ್‌ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ತೌಸೆಫ್ ಮತ್ತು ಆತನ ಸ್ನೇಹಿತ ರೆಹಾನ್ ಅವರು ನ್ಯಾಯಾಲಯ ತಪ್ಪಿತಸ್ಥರೆಂದು ನ್ಯಾಯಾಲಯ ಹೇಳಿತ್ತು. ಆದರೆ ಶಿಕ್ಷೆಗೆ ಒಳಪಡಿಸಿರಲಿಲ್ಲ. ಈ ಪ್ರಕರಣದಲ್ಲಿ ಟೌಸೆಫ್ ಮತ್ತು ರೆಹನ್‌ಗೆ ಜೀವಾವಧಿ … Continued

ಬಾಂಗ್ಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಮೋದಿ ಭೇಟಿ,ನಮನ

  ಢಾಕಾ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಾಂಗ್ಲಾದೇಶದ ಢಾಕಾದ ಸಾವರ್ ಉಪಜಿಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕ್ಕೆ ಭೇಟಿ ನೀಡಿದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಮಾಲಾರ್ಪಣೆ ಮಾಡಿದರು. ಎರಡು ದಿನಗಳ ಭೇಟಿಗೆ ಶುಕ್ರವಾರ ಬೆಳಿಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಕ್ … Continued

ಅವಧಿ ಮೀರಿದ ವಾಹನ ದಾಖಲೆಗಳ ಡಿಎಲ್, ಆರ್‌ಸಿ ಮಾನ್ಯತೆ ಅವಧಿ ವಿಸ್ತರಣೆ

ನವ ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅವಧಿ ಮೀರಿದ ಮೋಟಾರು ವಾಹನ ದಾಖಲೆಗಳ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ)ಗಳ ಸಿಂಧುತ್ವವನ್ನು 2021 ರ ಜೂನ್ 30ರ ವರೆಗೆ ಸರ್ಕಾರ ವಿಸ್ತರಿಸಿದೆ. ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ, ಫೆಬ್ರವರಿ 1, 2020, ಅಥವಾ ಮಾರ್ಚ್ 31, 2021 ರೊಳಗೆ ಮುಕ್ತಾಯಗೊಳ್ಳುವ … Continued

ಕೊವಿಡ್‌; ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600ಕ್ಕೂ ಹೆಚ್ಚು ರೂಪಾಂತರ…!

ಭೋಪಾಲ್: ಐಐಟಿ-ಇಂದೋರ್ ನಡೆಸಿದ ಅಧ್ಯಯನವು ವಿಶ್ವದ ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಹೇಳಿದೆ. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಡಾ.ಹೆಮ್ ಚಂದ್ರ ಝಾ (ಐಐಟಿ-ಇಂದೋರ್‌ನ ಜೈವಿಕ ವಿಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ) ನೇತೃತ್ವದ ಸಂಶೋಧಕರ ತಂಡವು ಏಪ್ರಿಲ್ 2020 ಮತ್ತು ಸೆಪ್ಟೆಂಬರ್ … Continued

ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಿಡಿ ಯುವತಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆಯಾಗಿದ್ದು, ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಶುಕ್ರವಾರ (ಮಾ.೨೬) ಮಧ್ಯಾಹ್ನ ಯುವತಿ ಪರವಾಗಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರು … Continued

ಮಹತ್ವದ ತೀರ್ಪು: ಟಾಟಾ ಸನ್ಸ್‌ನಿಂದ ಸೈರಸ್ ಮಿಸ್ತ್ರಿ ಉಚ್ಚಾಟನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವ ದೆಹಲಿ: ನ್ಯಾಷನಲ್ ಕಂಪನಿ ಲಾ ಅಪೀಲೆಟ್ ಟ್ರಿಬ್ಯೂನಲ್ (ಎನ್‌ಸಿಎಲ್‌ಎಟಿ) ಆದೇಶದ ವಿರುದ್ಧ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈರಸ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿದೆ. ರತನ್ ಟಾಟಾ ಅವರ ನಂತರ ಸೈರಸ್‌ ಮಿಸ್ತ್ರಿ 2012 ರಲ್ಲಿ 100 ಶತಕೋಟಿಗಿಂತಲೂ … Continued

ತನ್ನ ಬಳಿಯಿದ್ದ 6 ಕೋಟಿ ರೂ.ಬಹುಮಾನ ಗೆದ್ದ ಲಾಟರಿ ಟಿಕೆಟ್‌ ಫಲಾನುಭವಿಗೆ ಹಸ್ತಾಂತರಿಸಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ

ತನ್ನ ಬಳಿ ಇದ್ದ ೬ ಕೋಟಿ ರೂಪಾಯಿ ಗೆದ್ದ ಲಾಟರಿ ಟಿಕೆಟ್‌ ಅನ್ನು ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ ಟಿಕೆಟ್​ ಅನ್ನು ಚಂದ್ರನ್​ ಎಂಬವರಿಗೆ ಮಾರಾಟ ಮಾಡಿದ್ದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸ್ಮಿಜಾ ಕೊವಿಡ್‌ ಆರ್ಥಿಕ ಸಂಕಷ್ಟದಲ್ಲಿಯೂ … Continued

ಭಾರತ ಬಂದ್‌: ಹಲವೆಡೆ ರೈಲು ಸಂಚಾರ, ಸಾರಿಗೆ ವ್ಯತ್ಯಯ

ನವ ದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ದೆಹಲಿಯ ಗಡಿಯಲ್ಲಿ ನಾಲ್ಕು ತಿಂಗಳ ಆಂದೋಲನದ ಹಿನ್ನೆಲೆಯಲ್ಲಿ ಇಂದು ಭಾರತ್ ಬಂದ್ ನಡೆಯುತ್ತಿದ್ದು, ಇಂದು ಬೆಳಿಗ್ಗೆಯಿಂದಲೇ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ದೆಹಲಿಯಿಂದ ಚಂಡೀಗಡ, ಅಮೃತಸರ, ಕಲ್ಕಾಗೆ ಹೋಗುವ ಕೆಲವು ರೈಲುಗಳನ್ನು ಬೆಳಿಗ್ಗೆ ರದ್ದುಪಡಿಸಲಾಗಿದೆ. ಕೆಲವು ಭಾಗಗಳಲ್ಲಿ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ರಾಷ್ಟ್ರ ರಾಜಧಾನಿ … Continued

ಭಾರತದಲ್ಲಿ 159 ದಿನಗಳ ನಂತರ ಅತಿ ಹೆಚ್ಚು ದೈನಂದಿನ ಕೊರೊನಾ ಉಲ್ಬಣ…!!

ನವ ದೆಹಲಿ : ದೇಶದಲ್ಲಿ ಕೊರೋನಾ ಉಲ್ಬಣ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 257 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 17ರ ನಂತರ 159 ದಿನಗಳಲ್ಲಿ ದೈನಂದನ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32,987 … Continued