ದೇಶದಲ್ಲಿ ಮತ್ತೆ ೧೮ ಸಾವಿರದ ಗಡಿ ದಾಟಿದ ಕೊರೊನಾ..!

ನವದೆಹಲಿ: ದೇಶದಲ್ಲಿ ಬಹುದಿನಗಳ ನಂತರ ಕೊರಿನಾ ಮತ್ತೆ ೧೮ ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಕೊರೊನಾ ೧೦ ಸಾವಿರದ ಗಡಿ ದಾಟಿದ್ದು,  ಮತ್ತೆ ಎಚ್ಚರಿಕೆಗಂಟೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,327 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ ಒ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ ಮಹಾಮಾರಿ ವೈರಸ್ಸಿಗೆ … Continued

ಸಿಬಿಎಸ್‌ಇ ೧೦, ೧೨ನೇ ತರಗತಿ ಕೆಲ ಪರೀಕ್ಷೆಗಳ ದಿನಾಂಕ ಬದಲು

ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳಿಗೆ ಗಣಿತ, ವಾಣಿಜ್ಯ ಮತ್ತು ಭೌತಶಾಸ್ತ್ರ ಸೇರಿದಂತೆ ಕೆಲವು ವಿಷಯಗಳಿಗೆ ಪರಿಷ್ಕೃತ ಬೋರ್ಡ್ ಪರೀಕ್ಷೆಯ ದಿನಾಂಕವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. 10ನೇ ತರಗತಿಗೆ, ವಿಜ್ಞಾನ ಪರೀಕ್ಷೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ. ಇದಕ್ಕೂ ಮೊದಲು ಅದನ್ನು ಮೇ 15 ಕ್ಕೆ ನಿಗದಿ ಪಡಿಸಲಾಗಿತ್ತು. ಮೇ 21ಕ್ಕೆ ನಿಗದಿಯಾಗಿದ್ದ ಗಣಿತ ಪರೀಕ್ಷೆಯನ್ನು … Continued

ಕೊವಿಡ್‌ ವ್ಯಾಕ್ಸಿನೇಶನ್‌ ಪ್ರಮಾಣಪತ್ರದ ಮೇಲಿನ ಮೋದಿ ಚಿತ್ರ ತೆಗೆಯಲು ಹೇಳಿದ ಚುನಾವಣಾ ಆಯೋಗ

ಮಾದರಿ ನೀತಿ ಸಂಹಿತೆಯ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಮತದಾನದ ವ್ಯಾಪ್ತಿಯ ರಾಜ್ಯಗಳಲ್ಲಿ ವಿತರಿಸಲಾದ ಕೊವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ತೆಗೆದುಹಾಕಲು ಭಾರತ ಚುನಾವಣಾ ಆಯೋಗ (ಇಸಿಐ) ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯವನ್ನು ಕೇಳಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ . ಕೊವಿಡ್‌ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವು … Continued

ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆ ಹೊಣೆ: ಸುಪ್ರೀಂಕೋರ್ಟ್ ತೀರ್ಪು

ಮಗನಿಗೆ ಪದವಿ ವರೆಗೆ ಶಿಕ್ಷಣ ನೀಡುವುದು ತಂದೆಯ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವ ವರೆಗೆ ಆತನ ಖರ್ಚಿನ ಜೊತೆಗೆ ಮಗ ಮೊದಲ ಪದವಿ ಪಡೆಯುವವರೆಗೂ ಆತನ ಖರ್ಚನ್ನು ನೋಡಿಕೊಳ್ಳಬೇಕು ಎಂದು ತೀರ್ಪು ನೀಡಿದೆ. ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ ಹಾಗೂ ಎಂ ಆರ್ ಶಾ ನೇತೃತ್ವದ ನ್ಯಾಯಪೀಠ … Continued

ಮಹಾರಾಷ್ಟ್ರ; ಈ ವರ್ಷದಲ್ಲಿ ಮೊದಲ ಬಾರಿಗೆ ಒಂದು ದಿನಕ್ಕೆ ೧೦ ಸಾವಿರ ದಾಟಿದ ಕೊರೊನಾ ಸೋಂಕು..

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ (ಮಾರ್ಚ್ 5) 10,216 ಹೊಸ ಸಿಒವಿಐಡಿ -19 ಪ್ರಕರಣಗಳು ವರದಿಯಾಗಿದ್ದು. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 10,000 ಕ್ಕೂ ಹೆಚ್ಚು ಸಿಒವಿಐಡಿ -19 ಪ್ರಕರಣಗಳು ದಾಖಲಾಗಿವೆ. ದಿನದಲ್ಲಿ 53 ಕೊವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,393 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.38% … Continued

ತಮಿಳುನಾಡು ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಎಐಎಡಿಎಂಕೆ

ಚೆನ್ನೈ; ಆಡಳಿತಾರೂಢ ಎಐಎಡಿಎಂಕೆ ಶುಕ್ರವಾರ ರಾಜ್ಯದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ತವರು ನೆಲವಾದ ಎಡಪ್ಪಾಡಿಯಿಂದ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದು, ಉಪಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ ತಮ್ಮ ಬೋಡಿನಾಯಕನೂರ್‌ ಭದ್ರಕೋಟೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಬ್ಬರೂ 2011 ರಿಂದ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. ಎಐಎಡಿಎಂಕೆ ಫೆಬ್ರವರಿ 24 ರಂದು ಮಾಜಿ ಮುಖ್ಯಮಂತ್ರಿ … Continued

ತೈಲೆ ಬೆಲೆ ಗ್ರಾಹಕರಿಗೆ ಹೊರೆ ಎಂದು ಒಪ್ಪಿದ ನಿರ್ಮಲಾ

ನವ ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ತಗ್ಗಿಸಬೇಕು ಎಂದು ಗ್ರಾಹಕರು ಒತ್ತಾಯಿಸಿರುವುದರಲ್ಲಿ ಅರ್ಥವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಒಪ್ಪಿಕೊಂಡರು. ಇಂಧನದ ಬೆಲೆ ಕಡಿಮೆಯಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸುಂಕ ಮತ್ತು ತೆರಿಗೆ ಕಡಿಮೆ ಮಾಡಬೇಕು ಎಂದು ಅವರು ಹೇಳಿದರು. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಬೆಲೆಯಲ್ಲಿ … Continued

ಅಯೋಧ್ಯೆಯಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಹೊರ ರಾಷ್ಟ್ರಗಳಿಗೆ ಅವಕಾಶ

ಲಖನೌ: ಅಯೋಧ್ಯೆ ಅಂತಾರಾಷ್ಟ್ರೀಯ ಧಾರ್ಮಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಕೋರಿದ್ದ ಸುಮಾರು ೧೨ ಹೊರ ರಾಷ್ಟ್ರಗಳಿಗೆ ಯೋಗಿ ಆದಿತ್ಯ ನಾಥ್ ಸರ್ಕಾರ ಅವಕಾಶ ನೀಡಿದೆ. ಭಗವಾನ್ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ತಮ್ಮ ಅತಿಥಿ ಗೃಹ ನಿರ್ಮಿಸಿಕೊಳ್ಳಲು ಮಾರಿಷಿಯಸ್‌, ಕೆನಡಾ, ನೇಪಾಳ, ಶ್ರೀಲಂಕಾ,ಫಿಜಿ, ಕೀನ್ಯಾ, ಇಂಡೋನೇಷ್ಯಾ, ಕೊರಿಯಾ, ಮಲೇಷ್ಯಾ, ಟ್ರಿನಿಡಿಯಾ, … Continued

ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯ ಟ್ವಿಟರ್ ಸಮೀಕ್ಷೆಯಲ್ಲಿ ಬೆಳಕಿಗೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವಿಟರ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರು ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಕೊಟ್ಟು ಮಾತನಅಡುತ್ತಾರೆ ಎಂಬ ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಟ್ವಿಟರಿನ ಸ್ವತಂತ್ರ ಸಮೀಕ್ಷೆ ಇದಾಗಿದ್ದು, ಮಹಿಳಾ ಟ್ವಿಟ್ಟರ್ ಖಾತೆಗಳಿಂದ ಜನವರಿ 2019 ಮತ್ತು ಫೆಬ್ರವರಿ 2021ರ ನಡುವೆ 10 ಭಾರತೀಯ ನಗರಗಳಲ್ಲಿ ಮಹಿಳೆಯರು ಕಳುಹಿಸಿದ 5, 22,992 … Continued

ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ: ಕಾರು ಮಾಲೀಕ ಶವವಾಗಿ ಪತ್ತೆ

ಮುಂಬೈ: ಏಶಿಯಾದ ಅಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅವರ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ಕಾರಿನ ಮಾಲೀಕನ ಶವ ಪತ್ತೆಯಾಗಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಕಾರು ಮಾಲೀಕ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕಾರು ಮಾಲೀಕ ಮನ್ಸುಕ ಹಿರೆನ್ ಶವ ಥಾಣೆಯ … Continued