ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

ನವದೆಹಲಿ: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಬೆಳಗ್ಗೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿದ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ 39.50 ರೂ.ಗಳಷ್ಟು ಅಗ್ಗವಾಗಿದೆ. ಈ ಕಡಿತವನ್ನು 19 ಕಿಲೋ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಮಾತ್ರ ಮಾಡಲಾಗಿದೆ. ಮನೆ ಬಳಕೆ ಗ್ಯಾಸ್‌ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಇದೀಗ … Continued

ಕಾಣೆಯಾಗಿರುವ ಭಾರತೀಯಳ ಬಗ್ಗೆ ಮಾಹಿತಿ ನೀಡಿದವರಿಗೆ $10,000 ಬಹುಮಾನ ಘೋಷಿಸಿದ ಅಮೆರಿಕದ ಎಫ್‌ಬಿಐ

ನ್ಯೂಯಾರ್ಕ್: ನಾಲ್ಕು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಕಾಣೆಯಾದ ಭಾರತದ 29 ವರ್ಷದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಿದವರಿಗೆ ಎಫ್‌ಬಿಐ 10,000 USD ವರೆಗೆ ಬಹುಮಾನ ಘೋಷಿಸಿದೆ. ಏಪ್ರಿಲ್ 29, 2019 ರ ಸಂಜೆ ಮಯೂಷಿ ಭಗತ್ ಅವರು “ಬಣ್ಣದ ಪೈಜಾಮ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್” ಧರಿಸಿ ಜರ್ಸಿ ಸಿಟಿಯಲ್ಲಿರುವ ತನ್ನ ಅಪಾರ್ಟ್ಮೆಂಟ್‌ನಿಂದ ಹೊರಹೋಗುತ್ತಿರುವಾಗ ಕೊನೆಯ … Continued

ಹಳಿಗಳ ಮೇಲೆ ವೀಡಿಯೊ ಚಿತ್ರೀಕರಣ ಮಾಡುವಾಗ ರೈಲು ಡಿಕ್ಕಿ ಹೊಡೆದು ಮೂವರು ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ರೈಲಿಗೆ ಡಿಕ್ಕಿ ಹೊಡೆದು ಮೂವರು ಬಾಲಕರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ರೈಲ್ವೇ ಸೇತುವೆಯ ಮೇಲೆ ಸಾಮಾಜಿಕ ಜಾಲತಾಣಗಳಿಗಾಗಿ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಸುಜ್ನಿಪಾರಾ ಮತ್ತು ಅಹಿರೋನ್ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆ ಮೇಲೆ ಹಳಿಗಳ ಮಧ್ಯೆ ಐವರು ಯುವಕರು ರೀಲ್ಸ್ ಮಾಡುತ್ತಿದ್ದರು. ಈ … Continued

ಜಮ್ಮು-ಕಾಶ್ಮೀರದಲ್ಲಿ ಸೇನಾ ಟ್ರಕ್ ಮೇಲೆ ಭಯೋತ್ಪಾದಕರ ಹೊಂಚು ದಾಳಿ: 4 ಸೈನಿಕರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕರು ಹೊಂಚು ಹಾಕಿ ಎರಡು ಸೇನಾ ವಾಹನಗಳ ಮೇಲೆ ನಡೆಸಿದ ದಾಳಿಯ ನಂತರ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳು ಬುಧವಾರ ರಾತ್ರಿಯಿಂದ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಾಗಿ ಬುಫ್ಲಿಯಾಜ್ ಬಳಿಯ ಪ್ರದೇಶದಿಂದ ಸೈನಿಕರನ್ನು ಸಾಗಿಸುತ್ತಿತ್ತು. ಕಾರ್ಯಾಚರಣೆಯು ಡಿಕೆಜಿ (ಡೇರಾ ಕಿ … Continued

ಮೋದಿ, ಶಾ ಜೇಬುಗಳ್ಳರು ಹೇಳಿಕೆ : ರಾಹುಲ್‌ ಗಾಂಧಿಗೆ ಈಗ ಮತ್ತೊಂದು ಸಂಕಷ್ಟ

ನವದೆಹಲಿ: ನವೆಂಬರ್ 22ರಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ‘ಜೇಬುಗಳ್ಳರು’ ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ. ಹೇಳಿಕೆಯು “ಉತ್ತಮ ಅಭಿರುಚಿಯಲ್ಲಿಲ್ಲ” … Continued

ವೀಡಿಯೊ…| ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್ ಭೂಷಣ ಸಹಾಯಕ ಆಯ್ಕೆ : ಅಳುತ್ತಲೇ ಕುಸ್ತಿಗೆ ವಿದಾಯ ಹೇಳಿದ ಒಲಿಂಪಿಕ್ ಕುಸ್ತಿಪಟು

ನವದೆಹಲಿ : ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ ಸಿಂಗ್ ಹುದ್ದೆಯಿಂದ ಕೆಳಗಿಳಿದ ನಂತರ ನಡೆದ ಚುನಾವಣೆಯ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ಭಾವನಾತ್ಮಕ ಗುಡ್‌ ಬೈ ಹೇಳಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಸಂಜಯ ಸಿಂಗ್ ಅವರು 12 … Continued

ಯುವನಿಧಿ ಯೋಜನೆ ನೋಂದಣಿ ಡಿ. 26ರಿಂದ ಆರಂಭ; ಜ.12ರಂದು ಖಾತೆಗೆ ಹಣ ಜಮೆ : ಈ ಯೋಜನೆಗೆ ಅರ್ಹರು ಯಾರು, ಅರ್ಜಿ ಸಲ್ಲಿಕೆ ಹೇಗೆ ? ಇಲ್ಲಿದೆ ಮಾಹಿತಿ

ಬೆಂಗಳೂರು: ಸರ್ಕಾರದ ಐದನೆಯ ಮತ್ತು ಕೊನೆಯ ಗ್ಯಾರಂಟಿಗೆ ಈಗ ಮುಹೂರ್ತ ಫಿಕ್ಸ್‌ ಆಗಿದೆ. ಇದೇ ಡಿ. 26ರಿಂದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಸ್ವಾಮಿ ವಿವೇಕಾನಂದ ಜನ್ಮದಿನವಾದv ಜನವರಿ 12ರಂದು ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ … Continued

ಭ್ರಷ್ಟಾಚಾರ ಪ್ರಕರಣ : ತಮಿಳುನಾಡಿನ ಹಿರಿಯ ಸಚಿವರಿಗೆ 3 ವರ್ಷ ಜೈಲು

ಚೆನ್ನೈ:  ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಕೆ ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಿದೆ ಸಚಿವರು ಮತ್ತು ಅವರ ಪತ್ನಿ ತಮ್ಮ ವೈದ್ಯಕೀಯ ದಾಖಲೆಯನ್ನು ಸಲ್ಲಿಸಿದರು ಮತ್ತು ಪ್ರಕರಣವು ತುಂಬಾ ಹಳೆಯದಾಗಿದ್ದು, ಈಗ ಸಚಿವರಿಗೆ … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಖರ್ಗೆಗೆ ಆಹ್ವಾನ

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿಪಕ್ಷಗಳ ನಾಯಕರನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್‌.ಡಿ. ದೇವೇಗೌಡರಿಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಆಹ್ವಾನ … Continued

ವೀಡಿಯೊ..| 5,000 ಅಮೆರಿಕನ್ ವಜ್ರಗಳು-2 ಕೆಜಿ ಬೆಳ್ಳಿ ಬಳಸಿ ʼರಾಮಮಂದಿರʼ ನೆಕ್ಲೇಸ್ ತಯಾರಿಕೆ : ವಜ್ರದ ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ನೆಕ್ಲೇಸ್ ಸಮರ್ಪಣೆ

ಸೂರತ್: ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುನ್ನ ವಜ್ರದ ವ್ಯಾಪಾರಿಯೊಬ್ಬರು ರಾಮಮಂದಿರದ ನೆಕ್ಲೇಸ್ ಅನ್ನು ತಯಾರಿಸಿದ್ದಾರೆ. ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೆಕ್ಲೇಸ್ ಅನ್ನು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕೆಜಿ ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ. ‘ಡೈಮಂಡ್-ಸಿಟಿ’ ಸೂರತ್‌ನಲ್ಲಿ ವಜ್ರದ ವ್ಯಾಪಾರದಿಂದ ನೆಕ್ಲೇಸ್ ಮಾಡಲಾಗಿದೆ. ನೆಕ್ಲೇಸ್ ತಯಾರಿಕೆಯಲ್ಲಿ ಏನು ಬಳಸಲಾಗಿದೆ? ಒಟ್ಟು 40 ಕುಶಲಕರ್ಮಿಗಳು … Continued