ಹಮಾಸ್ ಉಗ್ರರ ಸದೆಬಡಿಯಲು ಗಾಜಾ ‘ಸಂಪೂರ್ಣ ಮುತ್ತಿಗೆ’ಗೆ ಇಸ್ರೇಲ್‌ ಆದೇಶ : ಒಳನುಗ್ಗಲು 3 ಲಕ್ಷ ಸೈನಿಕರು ಸಜ್ಜು ; ವಿದ್ಯುತ್, ಆಹಾರ ಪೂರೈಕೆ ಸ್ಥಗಿತ

ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾದ ಮೇಲೆ ‘ಸಂಪೂರ್ಣ ಮುತ್ತಿಗೆ’ ಆದೇಶ ನೀಡಿದ್ದಾರೆ, ಹಮಾಸ್ ಉಗ್ರಗಾಮಿಗಳ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ಅಧಿಕಾರಿಗಳು ಪ್ರದೇಶಕ್ಕೆ ವಿದ್ಯುತ್, ಆಹಾರ ಮತ್ತು ಇಂಧನದ ಪೂರೈಕೆ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಇಸ್ರೇಲ್ ವಾಯು ಪಡೆ ಗಾಜಾ ಪಟ್ಟಿಯಲ್ಲಿ ಇರುವ ಹಮಾಸ್ ಉಗ್ರರ 500ಕ್ಕೂ ಹೆಚ್ಚು ನೆಲೆಗಳ ಮೇಲೆ … Continued

ಪಟಾಕಿ ಘಟಕದಲ್ಲಿ ಬೆಂಕಿ ಅವಘಡ ; ಒಂಬತ್ತು ಸಾವು, ಐವರಿಗೆ ಗಾಯ

ಚೆನ್ನೈ: ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಸೋಮವಾರ ಪಟಾಕಿ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದ್ದು, ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಇಲಾಖೆಯವರು ನಂದಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರಿಯಲೂರು ಜಿಲ್ಲೆಯ ವೀರಗಳೂರು ಗ್ರಾಮದಲ್ಲಿ ಖಾಸಗಿ ಘಟಕದಲ್ಲಿ ಈ ಘಟನೆ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ: 41 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿಯಲ್ಲಿ 7 ಸಂಸದರ ಹೆಸರು, ವಸುಂಧರಾ ರಾಜೆ ನಿಷ್ಠರ ಹೆಸರಿಲ್ಲ…

ನವದೆಹಲಿ: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 41 ಅಭ್ಯರ್ಥಿಗಳ ಪಟ್ಟಿಯಲ್ಲಿ ಏಳು ಸಂಸದರ ಹೆಸರಿದೆ. ಆದರೆ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನಿಷ್ಠಾವಂತರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಶಾಸಕ ನರಪತ್ ಸಿಂಗ್ ರಾಜ್‌ವೀ ಮತ್ತು ರಾಜ್‌ಪಾಲ್ ಸಿಂಗ್ ಶೇಖಾವತ್ … Continued

ಹರ್ದೀಪ್ ನಿಜ್ಜರ್ ಹತ್ಯೆ ಹಿಂದೆ ಚೀನಾ ? ಇದು ಚೀನಾದ ದೊಡ್ಡ ಪಿತೂರಿ ಎಂದು ಆರೋಪಿಸಿದ ಬ್ಲಾಗರ್

ಸ್ವತಂತ್ರ ಬ್ಲಾಗರ್ ಆಗಿರುವ ಜೆನ್ನಿಫರ್ ಜೆಂಗ್ ಅವರು ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಪಾತ್ರವಿದೆ ಎಂದು ಸೂಚಿಸುವ ಆರೋಪವನ್ನು ಮುಂದಿಟ್ಟಿದ್ದಾರೆ. “ಭಾರತ ಮತ್ತು ಪಶ್ಚಿಮದ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಭಾರತವನ್ನು ದೂಷಿಸುವಂತೆ ಮಾಡುವುದು ಚೀನಾದ ಉದ್ದೇಶವಾಗಿದೆ” ಎಂದು ಝೆಂಗ್ ಆರೋಪಿಸಿದ್ದಾರೆ. ತೈವಾನ್‌ಗೆ ಸಂಬಂಧಿಸಿದಂತೆ ಕ್ಸಿ ಜಿನ್‌ಪಿಂಗ್ … Continued

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕಗಳ ಘೋಷಣೆ

ನವದೆಹಲಿ: ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಚುನಾವಣಾ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಪ್ರಕಟಿಸಿದೆ. ಈ ಐದು ರಾಜ್ಯಗಳ ಚುನಾವಣೆಗಳು ನವೆಂಬರ್ 7ರಿಂದ ನಡೆಯಲಿದ್ದು, ಮತಗಳ ಎಣಿಕೆ ಡಿಸೆಂಬರ್ 3, 2023 ರಂದು ನಡೆಯಲಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಸುಗಮ ಮತ್ತು … Continued

ಹೊಡೆದಾಟದ ಅಖಾಡವಾದ ಐಐಟಿ ಕಾನ್ಪುರ್ ಕ್ರೀಡಾ ಉತ್ಸವದ ಕಬಡ್ಡಿ ಪಂದ್ಯಾವಳಿ | ವೀಕ್ಷಿಸಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ್‌ನ ಇಂಟರ್‌ಕಾಲೇಜಿಯೇಟ್ ಕ್ರೀಡಾ ಉತ್ಸವವು ಹೊಡೆದಾಟದ ಪಂದ್ಯವಾಗಿ ಮಾರ್ಪಟ್ಟ ಘಟನೆಯ ವರದಿಯಾಗಿದೆ. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಎರಡು ಕಬಡ್ಡಿ ತಂಡಗಳ ಆಟಗಾರರ ನಡೆದ ಜಗಳ ಕೆಲವೇ ಕ್ಷಣದಲ್ಲಿ ಅದು ಹಿಂಸಾತ್ಮಕ ಕಾದಾಟಕ್ಕೆ ತಿರುಗಿದೆ. ಯಾವುದೋ ಕಾರಣಕ್ಕೆ ಕಬಡ್ಡಿ ಆಟಗಾರರು … Continued

ಫ್ರಿಡ್ಜ್ ಕಂಪ್ರೆಸರ್ ಸ್ಫೋಟ : ಮೂವರು ಮಕ್ಕಳು ಸೇರಿದಂತೆ 5 ಮಂದಿ ಸಾವು

ಜಲಂಧರ : ಪಂಜಾಬ್‌ನ ಜಲಂಧರದ ಮನೆಯೊಂದರಲ್ಲಿ ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಗರದ ಅವತಾರ್ ನಗರ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸ್ಫೋಟದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರನ್ನು ಜಲಂಧರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ … Continued

ಸೂಪರ್‌ಸ್ಟಾರ್‌ ಶಾರುಖ್ ಖಾನಗೆ ಕೊಲೆ ಬೆದರಿಕೆ ನಂತರ Y+ ಭದ್ರತೆ

ಮುಂಬೈ: ‘ಪಠಾಣ್’ ಮತ್ತು ‘ಜವಾನ್’ ಚಿತ್ರದ ಯಶಸ್ಸಿನ ನಂತರ ತಮಗೆ ಅವರಿಗೆ ಕೊಲೆ ಬೆದರಿಕೆ ಇದೆ ಎಂದು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್‌ ಅವರು ದೂರು ನೀಡಿದ ನಂತರದ ಮುಂಬೈ ಪೊಲೀಸರು ಅವರಿಗೆ Y+ ಭದ್ರತೆ ಒದಗಿಸಿದ್ದಾರೆ. Y+ ಭದ್ರತಾ ಭದ್ರತೆ ಅಡಿಯಲ್ಲಿ, ಶಾರುಖ್ ಖಾನ್ ಅವರ ಸುತ್ತ ಆರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಇರುತ್ತಾರೆ. … Continued

ದಲೈಲಾಮಾ ದೆಹಲಿ ಏಮ್ಸ್‌ಗೆ ದಾಖಲು

ನವದೆಹಲಿ : ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಅವರನ್ನು ಭಾನುವಾರ ಸಂಜೆ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌(ಏಮ್ಸ್‌)ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಕಾರ್ಡಿಯಾಲಜಿ ಪ್ರಾಧ್ಯಾಪಕ ಡಾ.ರಾಜೀವ್ ನಾರಂಗ್ ಅವರ ಕಾರ್ಡಿಯೋ-ನ್ಯೂರೋ ಸೆಂಟರ್‌ನ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ. ದಲೈಲಾಮಾ ಅವರನ್ನು ಸಂಜೆ ವೈದ್ಯಕೀಯ ಸೌಲಭ್ಯಕ್ಕೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ. … Continued

ಕ್ಯಾಮರಾದಲ್ಲಿ ಸೆರೆ : ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಕಾಲುವೆಗೆ ಎಸೆದ ಪೊಲೀಸರು…!

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಶವವನ್ನು ಪೊಲೀಸರು ಕಾಲುವೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ದಾರಿಹೋಕರೊಬ್ಬರು ತೆಗೆದ ವಿಡಿಯೋ ತುಣುಕಿನಲ್ಲಿ ಪೊಲೀಸರು ತಮ್ಮ ಲಾಠಿಗಳಿಂದ ಶವವನ್ನು ಕಾಲುವೆಗೆ ತಳ್ಳುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲೋಪವನ್ನು ಒಪ್ಪಿಕೊಂಡ ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ರಕ್ಷಿಸಲು ಸಾಧ್ಯವಾಗದ ದೇಹದ … Continued