ರಾಜಸ್ಥಾನ ವಿಧಾನಸಭೆ ಚುನಾವಣೆ: ಯಾವ್ಯಾವ ಸಮುದಾಯಗಳ ಒಲವು ಯಾವ ಪಕ್ಷಗಳತ್ತ ? ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವುದೇನು..?

ಮುಂದಿನ ತಿಂಗಳು ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಸಮುದಾಯಗಳಿಗೆ ಯಾವ್ಯಾವ ಪಕ್ಷಗಳು ಪ್ರಮುಖ ಆಯ್ಕೆಯಾಗಿವೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ತಿಳಿಸಿದೆ. ರಜಪೂತ, ಬನಿಯಾ, ಜಾಟ್ ಮತ್ತು ಮೀನಾ ಸೇರಿದಂತೆ ಹಲವು ಸಮುದಾಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಸಮೀಕ್ಷೆಗಳು ತೋರಿಸಿವೆ. ರಾಜ್ಯದಲ್ಲಿ ಗುಜ್ಜರ್, ಮಾಲಿ ಮತ್ತು ಮುಸ್ಲಿಮರ ಮತಗಳನ್ನು … Continued

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ : ವಿವಿಧ ಸಮುದಾಯಗಳ ಮತದಾರರ ಒಲವು ಯಾರತ್ತ..? ಬಿಜೆಪಿಯೋ-ಕಾಂಗ್ರೆಸ್ಸೋ..? ಇಂಡಿಯಾ ಟಿವಿ ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಮುಂದಿನ ತಿಂಗಳು ನವೆಂಬರ್ 17 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿವಿಧ ಸಮುದಾಯಗಳಿಗೆ ನಂಬರ್ ಒನ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಕಂಡುಬಂದಿದೆ. ಬ್ರಾಹ್ಮಣ, ಬನಿಯಾ, ಕಿರಾರ್-ಧಕಡ್, ಕುರ್ಮಿ, ಯಾದವ್, ಜಾತವ್-ಸತ್ನಾಮಿ ಮತ್ತು ರಜಪೂತ್, ಅಲ್ಪಸಂಖ್ಯಾತ ಸೇರಿದಂತೆ … Continued

ಲೋಕಸಭೆಯ ನೈತಿಕ ಸಮಿತಿ ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ ಮಹುವಾ ಮೊಯಿತ್ರಾ

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯ ನೈತಿಕ ಸಮಿತಿಯು ಪ್ರಶ್ನೆಗಳಿಗೆ ಹಣದ ಆರೋಪಕ್ಕೆ ನೀಡಿದ ಸಮನ್ಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಅವರ ಉತ್ತರದಲ್ಲಿ, ಅವರು ಅಕ್ಟೋಬರ್ 31 ರಂದು ನಿಗದಿಪಡಿಸಿದ ದಿನಾಂಕದಂದು ಸಮಿತಿಯ ಮುಂದೆ ಹಾಜರಾಗಲು ತನ್ನ ಅಸಮರ್ಥತೆಯನ್ನು ತಿಳಿಸಿದರು. ಆದಾಗ್ಯೂ, ಅವರು ನವೆಂಬರ್ 5 ರ ನಂತರದಲ್ಲಿ ಯಾವುದೇ ಸಮಯ ಹಾಗೂ … Continued

ವಿಶ್ವಕಪ್ : ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 1 ವಿಕೆಟ್‌ ಗೆಲುವು

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದವರು ಪಾಕಿಸ್ತಾನ ತಂಡದ ವಿರುದ್ಧ 1 ವಿಕೆಟ್‌ ರೋಚಕ ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ ಹಾಗೂ ಸತತ ನಾಲ್ಕು ಪಂದ್ಯ ಸೋಲು ಕಂಡ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸುವ … Continued

ಧರ್ಮವು ಅನುಮತಿಸಿದರೂ ಸಹ….ಮೊದಲ ಪತ್ನಿ ಜೀವಂತ ಇದ್ದಾಗ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ : ಅಸ್ಸಾಂ ಸರ್ಕಾರ

ಗುವಾಹತಿ : ಅಸ್ಸಾಂ ಸರ್ಕಾರಿ ನೌಕರರು ತಮ್ಮ ಪತ್ನಿ ಜೀವಂತವಾಗಿದ್ದಾಗ ಸರ್ಕಾರದ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಅವಕಾಶ ಇಲ್ಲ ಎಂದು ಹೇಳಿದೆ. ಯಾವುದೇ ಧರ್ಮದ ವೈಯಕ್ತಿಕ ಕಾನೂನು ಎರಡನೇ ಮದುವೆಗೆ ಅನುಮತಿಸಿದ್ದರೂ ಸಹ ಎರಡನೇ ಬಾರಿಗೆ ಮದುವೆಯಾಗುವಂತಿಲ್ಲ ಎಂದು ಸರ್ಕಾರ ಹೇಳಿದೆ. ಯಾವುದೇ ಸಮುದಾಯವನ್ನು ಉಲ್ಲೇಖಿಸದೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಧರ್ಮವು … Continued

ಪಡಿತರ ಹಗರಣ: ಕೋರ್ಟ್​​ನೊಳಗೆ ಮೂರ್ಛೆ ಹೋದ ಬಂಧಿತ ಪಶ್ಚಿಮ ಬಂಗಾಳದ ಸಚಿವ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶುಕ್ರವಾರ (ಅ.27) ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಕೋರ್ಟ್​ಗೆ ಹಾಜರುಪಡಿಸಿದ ವೇಳೆ ಆದೇಶ ಕೇಳಿದ ನಂತರ ಸಚಿವರು ನ್ಯಾಯಾಲಯದೊಳಗೆ ದಿಢೀರ್​ ಮೂರ್ಛೆ ಹೋದ ಘಟನೆ ನಡೆದಿದೆ. ನ್ಯಾಯಾಲಯದ ಒಳಗೆ … Continued

ಪ್ಯಾಲೆಸ್ತೀಯನ್ನರ ಬೆಂಬಲಿಸಿ ನಡೆದ ಐಯುಎಂಎಲ್‌ ಸಮಾವೇಶದಲ್ಲಿ ಹಮಾಸ್ ‘ಭಯೋತ್ಪಾದಕ ಗುಂಪು’ ಎಂದ ಶಶಿ ತರೂರ್ : ಹಲವರ ವಿರೋಧದ ನಂತರ‌ ಸ್ಪಷ್ಟನೆ

ತಿರುವನಂತಪುರಂ: ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್‌ ದಾಳಿಯನ್ನು ʼಭಯೋತ್ಪಾದಕರ ದಾಳಿʼ ಎಂದು ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಹೇಳಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೇರಳದ ಐಯುಎಂಎಲ್ ಮತ್ತು ಹಮಾಸ್ ಪರ ಕೆಲವು ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಂತರ ಈ ಬಗ್ಗೆ ತರೂರ್‌ ಸ್ಪಷ್ಟನೆ ನೀಡಿದ್ದು, ನಾನು ಯಾವಾಗಲೂ ಪ್ಯಾಲೆಸ್ತೀನ್ ಜನರೊಂದಿಗೆ … Continued

ಇದು ಅಧಿಕೃತ : ಭಾರತದ ವಿಸ್ಟ್ರಾನ್ ಘಟಕ ಖರೀದಿಸಲಿರುವ ಟಾಟಾ ಗ್ರೂಪ್‌ ; ಜಾಗತಿಕ ಮಾರುಕಟ್ಟೆಗಾಗಿ ಐಫೋನ್‌ ತಯಾರಿಸಲಿರುವ ಟಾಟಾ

ನವದೆಹಲಿ: ವಿಸ್ಟ್ರಾನ್ ಕಾರ್ಪೊರೇಷನ್ ದಕ್ಷಿಣ ಭಾರತದಲ್ಲಿನ ತನ್ನ ಘಟಕವನ್ನು ಟಾಟಾ ಸಮೂಹಕ್ಕೆ ಮಾರಾಟ ಮಾಡಲು ಒಪ್ಪಿಕೊಂಡ ನಂತರ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಸುವ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕನಾಗಲು ಟಾಟಾ ಗ್ರೂಪ್ ಸಿದ್ಧವಾಗಿದೆ. ವಿಸ್ಟ್ರಾನ್‌ನ ಮಂಡಳಿಯು ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಅನ್ನು ಟಾಟಾಗೆ $125 ಮಿಲಿಯನ್‌ಗೆ ಮಾರಾಟ ಮಾಡಲು … Continued

ಪ್ರಿಯಾಂಕಾ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್

ನವದೆಹಲಿ : ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ರಾಷ್ಟ್ರೀಯ ಚುನಾವಣಾ ಆಯೋಗ ಶೋಕಾಸ್​ ನೋಟಿಸ್​ ಕಳುಹಿಸಿದೆ. ಬಿಜೆಪಿ ಬುಧವಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ನಂತರ ಈ ಕ್ರಮ ಬಂದಿದೆ. ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಸುಳ್ಳು ಆರೋಪ ಮಾಡುವ … Continued

ಮಹುವಾ ಮೊಯಿತ್ರಾ ವಿರುದ್ಧದ ಆರೋಪ “ಗಂಭೀರ”ವಾದದ್ದು ಎಂದ ಸಂಸತ್ತಿನ ನೈತಿಕ ಸಮಿತಿ: ಅಕ್ಟೋಬರ್ 31 ರಂದು ಹಾಜರಾಗುವಂತೆ ಮೊಯಿತ್ರಾಗೆ ಸಮನ್ಸ್

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಸಂಸತ್ತಿನ ಸಮಿತಿಯು ಸಮನ್ಸ್ ನೀಡಲಿದ್ದು, ಅಕ್ಟೋಬರ್ 31 ರಂದು ಅದರ ಮುಂದೆ ಹಾಜರಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮಹುವಾ ಮೊಯಿತ್ರಾ ವಿರುದ್ಧದ ‘ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಕ್ಕಾಗಿ ಹಣ’ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಸಭೆಯ ನಡುವೆಯೇ ಈ ವಿಷಯ ಬಹಿರಂಗವಾಗಿದೆ. ಸಂಸದೆ ಮಹುವಾ ಮೊಯಿತ್ರಾ … Continued