ಎನ್‌ಕೌಂಟರ್‌ ನಲ್ಲಿ 30 ಮಾವೋವಾದಿಗಳ ಹತ್ಯೆ

ರಾಯ್ಪುರ : ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ 30 ಮಾವೋವಾದಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ. ಈ ಎನ್‌ಕೌಂಟರ್ ಛತ್ತೀಸ್‌ಗಢದಲ್ಲಿ ಮಾವೋವಾದಿ ದಂಗೆಯ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಒಂದು ದೊಡ್ಡ ಯಶಸ್ಸನ್ನು ಸೂಚಿಸುತ್ತದೆ. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್ಮದ್ ಅರಣ್ಯದಲ್ಲಿ ಮಧ್ಯಾಹ್ನ 1 … Continued

ವೀಡಿಯೊ…| ಮಹಾರಾಷ್ಟ್ರ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್‌…! ಆದರೆ…

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಉಪ ಸ್ಪೀಕರ್ ನರಹರಿ ಜಿರ್ವಾಲ್ ಮತ್ತು ಇತರ ಮೂವರು ಶಾಸಕರು ಸಮುದಾಯವೊಂದನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ವಿರೋಧಿಸಿ ಸಚಿವಾಲಯದ ಮೂರನೇ ಮಹಡಿಯಿಂದ ಜಿಗಿದ ಘಟನೆ ಶುಕ್ರವಾರ ಮುಂಬೈನ ರಾಜ್ಯ ಸಚಿವಾಲಯದಲ್ಲಿ ನಡೆದಿದೆ. ಈ ನಾಯಕರು ಅಳವಡಿಸಲಾಗಿದ್ದ ಬಲೆಗೆ ಬಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ನರಹರಿ ಝಿರ್ವಾಲ್ ಮತ್ತು ಬಿಜೆಪಿ ಸಂಸದ ಸೇರಿದಂತೆ … Continued

ತಿರುಪತಿ ಲಡ್ಡು ವಿವಾದ: ತನಿಖೆಗೆ ಸಿಬಿಐ ಉಸ್ತುವಾರಿಯಲ್ಲಿ ಎಸ್‌ಐಟಿ ರಚಿಸಿ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ತನಿಖೆ ನಡೆಸಲು ಸಿಬಿಐನ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡ ರಚಿಸಿ ಶುಕ್ರವಾರ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ … Continued

ಶಾಕಿಂಗ್‌ …| ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಸಿಲುಕಿದ್ದಾಳೆಂದು ಪೊಲೀಸರ ವೇಷದಲ್ಲಿ ವಂಚಕರಿಂದ ಫೋನ್‌ ಕಾಲ್‌ : ಶಿಕ್ಷಕಿ ಹೃದಯಘಾತದಿಂದ ಸಾವು…!

ಆಗ್ರಾ : ಮೊಬೈಲ್‌ ಕರೆ ವಂಚನೆಗಳು ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ವಂಚನೆ ಕಾಲ್‌ ಮಹಿಳೆಯೊಬ್ಬರ ಜೀವವನ್ನೇ ಆಹುತಿ ತೆಗೆದುಕೊಂಡ ಘಟನೆ ವರದಿಯಾಗಿದೆ. ಆಗ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ಪೊಲೀಸ್ ಅಧಿಕಾರಿ ಫೋಟೋ ಪೋಸಿನಲ್ಲಿದ್ದ ವ್ಯಕ್ತಿಯಿಂದ ವಾಟ್ಸಾಪ್ ಕರೆ ಸ್ವೀಕರಿಸಿದ್ದಾರೆ. ತನ್ನ ಕಾಲೇಜಿಗೆ … Continued

ಆರ್‌.ಜಿ. ಕರ್ ಭ್ರಷ್ಟಾಚಾರ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ನಾಯಕನ ಬಂಧನ

ಕೋಲ್ಕತ್ತಾ : ಇಲ್ಲಿನ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ನಂಟು ಹೊಂದಿರುವ ವ್ಯಕ್ತಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ. ಟಿಎಂಸಿ ಯುವ ಮುಖಂಡ ಆಶಿಶ್ ಪಾಂಡೆ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ ಘೋಷ್ … Continued

ಸದ್ಗುರುಗೆ ದೊಡ್ಡ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್‌ : ಈಶಾ ಫೌಂಡೇಷನ್ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ತಡೆ

ನವದೆಹಲಿ: ಅಧ್ಯಾತ್ಮ ಗುರು ಜಗ್ಗಿ ವಾಸುದೇವ ಅವರ ಈಶಾ ಪ್ರತಿಷ್ಠಾನ ವಿರುದ್ಧ ಪೊಲೀಸ್‌ ಕ್ರಮ ಕೈಗೊಳ್ಳವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ. ಅಲ್ಲದೆ, ಪ್ರತಿಷ್ಠಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ನಿಂದ ತನಗೆ ವರ್ಗಾಯಿಸಿಕೊಂಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಈಚೆಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶ … Continued

ಐದು ಭಾಷೆಗಳಿಗೆ ‘ಶಾಸ್ತ್ರೀಯ ಭಾಷಾ’ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಪ್ರಮುಖ ನಿರ್ಧಾರವೊಂದರಲ್ಲಿ ಕೇಂದ್ರ ಸಚಿವ ಸಂಪುಟವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಈ ಐದು ಭಾಷೆಗಳಿಗೆ “ಶಾಸ್ತ್ರೀಯ ಭಾಷೆ” ಸ್ಥಾನಮಾನ ನೀಡುವುದಕ್ಕೆ ಗುರುವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದೊಂದಿಗೆ ಶಾಸ್ತ್ರೀಯ ಭಾಷೆ” ಸ್ಥಾನಮಾನ ಹೊಂದಿರುವ ಭಾಷೆಗಳ ಸಂಖ್ಯೆ ಆರರಿಂದ 11 ಕ್ಕೆ ಏರಿದೆ. ಮೊದಲು ಸಂಸ್ಕೃತ, … Continued

ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತು ಕೀಳುಮಟ್ಟದ ಹೇಳಿಕೆ : ಸಚಿವೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟ ನಾಗಾರ್ಜುನ

ಹೈದರಾಬಾದ್‌ : ನಟರಾದ ನಾಗ ಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನದ ಕುರಿತು ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರ ಮಾನಹಾನಿಕರ ಹೇಳಿಕೆ ವಿರುದ್ಧ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾಗ ಚೈತನ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೂರಿನಲ್ಲಿ ನಾಗಾರ್ಜುನ ಅವರು ಕೊಂಡ ಸುರೇಖಾ ಅವರು ಅಕ್ಕಿನೇನಿ ಕುಟುಂಬದ ಸಾರ್ವಜನಿಕ … Continued

ವೀಡಿಯೊ..| ತನ್ನೆಲ್ಲ ಶಕ್ತಿ ಬಳಸಿ ದರೋಡೆಕೋರರು ಬಾಗಿಲು ತೆಗೆಯದಂತೆ ತಡೆದ ಒಂಟಿ ಮಹಿಳೆ ; ಸೋತು ಪರಾರಿಯಾದ ದುಷ್ಕರ್ಮಿಗಳು…!

ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಮೂವರು ದರೋಡೆಕೋರರನ್ನು ತನ್ನ ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಕಳ್ಳರು ಬಲವಂತವಾಗಿ ಒಳಗೆ ಹೋಗಲು ಪ್ರಯತ್ನಿಸುತ್ತಲೇ ಇದ್ದರೂ ಬಾಗಿಲು ಒತ್ತಿ ಹಿಡಿದ ಮಹಿಳೆ ದುಷ್ಕರ್ಮಿಗಳು ಒಳಗೆ ಬರದಂತೆ ತಡೆದಿದ್ದಾರೆ. ದರೋಡೆಕೋರರು ಮನೆಗೆ ಪ್ರವೇಶಿಲು ಯತ್ನಿಸಿದ್ದ ಸಮಯದಲ್ಲಿ ಮಹಿಳೆ ಮನದೀಪ್‌ ಕೌರ್‌ ಅವರ ಪತಿ ಮನೆಯಲ್ಲಿ ಇರಲಿಲ್ಲ. ಮನದೀಪ್‌ ಕೌರ್‌ ತಮ್ಮ … Continued

ಕಿತ್ತೂರು ಉತ್ಸವ ಚಾಲನೆ ವೇಳೆ ಸಿಎಂ ಸಿದ್ದರಾಮಯ್ಯ ಬಟ್ಟೆಗೆ ತಾಗಿದ ಬೆಂಕಿ

ಬೆಂಗಳೂರು: ಕಿತ್ತೂರು ಉತ್ಸವಕ್ಕೆ (Kittur Utsav 2024) ಚಾಲನೆ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜುಬ್ಬಾದ ಕೈಗೆ ಸಣ್ಣ ಪ್ರಮಾಣದಲ್ಲಿ ಬೆಂಕಿಯ ಕಿಡಿ ತಾಗಿದೆ. ತಕ್ಷಣವೇ ಅವರ ಭದ್ರತಾ ಸಿಬ್ಬಂದಿ ಕೂಡಲೇ ಅದನ್ನು ನಂದಿಸಿದ್ದರಿಂದ ಅವಘಡ ತಪ್ಪಿದೆ. ಬುಧವಾರ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ … Continued