ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ : ಇದರಿಂದ ಭಾರತಕ್ಕೇನು ತೊಂದರೆ ?

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಈ ವರ್ಷದ 2ನೇ ಚಂಡ ಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ಶುರುವಾಗಿರುವ ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಡಲಾಗಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಿದೆ. … Continued

ಸೂಪರ್‌ ಶ್ವಾನ…: ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದ ನಾಯಿ ; ಮುಂದೇನಾಯ್ತು ನೋಡಿ

ಮನುಷ್ಯ ಎತ್ತರದ ಕಟ್ಟಡದ ಮೇಲಿನಿಂದ ವಿವಿಧ ಸಾಹಸಗಳನ್ನು ಮಾಡುವುದನ್ನು ನೀವೆಲ್ಲಾ ನೋಡಿರ್ತಿರಾ. ಆದ್ರೆ ಅದೇ ರೀತಿ ನಾಯಿಯೊಂದು ಸಾಹಸವನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ X ನಲ್ಲಿ ಕಪ್ಪು ಬಣ್ಣದ ಬೀದಿ ನಾಯಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿಯುವ ಸಣ್ಣ ವೀಡಿಯೊ ಕ್ಲಿಪ್‌ ಈಗ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ … Continued

ದರ್ಶನ್ ಹೀರಾನಂದಾನಿಗೆ ಅಫಿಡವಿಟ್ ಸಹಿ ಹಾಕುವಂತೆ ಪಿಎಂಒ ಒತ್ತಡ : ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಎರಡು ಪುಟಗಳ ಪತ್ರಿಕಾ ಪ್ರಕಟಣೆಯಲ್ಲಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಸ್ಫೋಟಕ ಅಫಿಡವಿಟ್‌ಗೆ ಉತ್ತರಿಸಿದ್ದಾರೆ. ಪ್ರಧಾನಿ ಕಾರ್ಯಾಲಯವು ಈಗ “ಮಾಧ್ಯಮಗಳಿಗೆ ಸೋರಿಕೆಯಾದ” ಪತ್ರಕ್ಕೆ ಸಹಿ ಹಾಕುವಂತೆ ಹಿರಾನಂದಾನಿ ಅವರನ್ನು ಒತ್ತಾಯಿಸಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಮಹುವಾ ಮೊಯಿತ್ರಾ ಅವರು ಸಂಸತ್ತಿನ ನೈತಿಕ ಸಮಿತಿ … Continued

ವಿಶ್ವಕಪ್‌ : ಕೊಹ್ಲಿ 48ನೇ ಶತಕ, ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಏಳು ವಿಕೆಟ್‌ಗಳ ಭರ್ಜರಿ ಜಯ

ಪುಣೆ: ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಓಟ ಅಡೆತಡೆಯಿಲ್ಲದೆ ಮುಂದುವರಿದಿದೆ. ಗುರುವಾರ ರಾತ್ರಿ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತದ ತಂಡವು ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಬಾಂಗ್ಲಾದೇಶದ ಎಂಟು ವಿಕೆಟ್‌ಗೆ 256 ರನ್‌ಗಳಿಗೆ ಉತ್ತರವಾಗಿ ಭಾರತವು 41.3 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 261 ರನ್ ಗಳಿಸಿ ಗೆಲುವಿನ … Continued

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ 2023 : ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆ, ಸದ್ಯ ಕಾಂಗ್ರೆಸ್‌ಗಿಂತ ಮುಂದಿರುವ ಬಿಜೆಪಿ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ ಟಿವಿ-ಸಿಎನ್‌ಎಕ್ಸ್‌ (India TV-CNX) ಚುನಾವಣಾ ಪೂರ್ವ ಸಮೀಕ್ಷೆಯು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಹೇಳಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಮಾಹಿತಿಯ ಪ್ರಕಾರ, ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ 2023 ರಲ್ಲಿ 230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ … Continued

ಪ್ಯಾಲೆಸ್ತೀನ್ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ : ಭಾರತದಿಂದ ಮಾನವೀಯ ನೆರವಿನ ಭರವಸೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಹಾಗೂ ಗಾಜಾ ಆಸ್ಪತ್ರೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ನಾಗರಿಕರ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ, ಪ್ಯಾಲೆಸ್ತೀನ್ ಜನರಿಗೆ ಭಾರತವು ಮಾನವೀಯ ನೆರವು ಕಳುಹಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ … Continued

ಒಡಿಶಾ, ತ್ರಿಪುರಕ್ಕೆ ರಾಜ್ಯಪಾಲರ ನೇಮಕ

ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುವರ ದಾಸ್ ಮತ್ತು ತೆಲಂಗಾಣ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಇಂದ್ರ ಸೇನಾ ರೆಡ್ಡಿ ನಲ್ಲು ಅವರನ್ನು ಕ್ರಮವಾಗಿ ಒಡಿಶಾ ಮತ್ತು ತ್ರಿಪುರಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಗುರುವಾರ (ಅಕ್ಟೋಬರ್ 18) ತಿಳಿಸಿದೆ. ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ದಾಸ್ ಅವರು 2014 ರಿಂದ 2019 … Continued

ಯುಜಿಸಿಯಿಂದ ವಾಟ್ಸಪ್ ಚಾನೆಲ್ ಆರಂಭ

ನವದೆಹಲಿ: ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗೆ ಸಂಪರ್ಕದಲ್ಲಿರಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಯುಜಿಸಿ ಇಂಡಿಯಾ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು (HIE ಗಳು), ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರರು ವಾಟ್ಸಾಪ್ ಚಾನೆಲ್ ಮೂಲಕ ಸಂಪರ್ಕದಲ್ಲಿರಲು ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಒಂದೇ ಕ್ಲಿಕ್‌ ಮೂಲಕ ತಮ್ಮ ಬೆರಳ ತುದಿಯಲ್ಲಿ ಅಧಿಕೃತ ಮತ್ತು … Continued

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂಗೆ ಕೊಕ್‌ ; ಮಾಜಿ ಸಿಎಂ ಕುಮಾರಸ್ವಾಮಿಗೆ ಪಟ್ಟ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಮುಕ್ತಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಹಂಗಾಮಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಹಿಂದಿನ ಅಧ್ಯಕ್ಷರ ಹೇಳಿಕೆ ಬಗ್ಗೆ … Continued