ವೀಡಿಯೊ…| ಬೆಂಗಳೂರು : ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂವರು ಕಾರ್ಮಿಕರ ಸಾವು, ಹಲವರು ಸಿಲುಕಿರುವ ಶಂಕೆ

ಬೆಂಗಳೂರು: ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ ಸುರಿಯುತ್ತಿರುವ ಮಳೆಯ ಪರಿಣಾಮ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರ ತೆಗೆದಿದ್ದಾರೆ ಹಾಗೂ ಮೂವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. … Continued

ಕಾಶ್ಮೀರ | ಉಗ್ರರ ದಾಳಿಯಲ್ಲಿ ಸತ್ತವರ ಸಂಖ್ಯೆ ಏರಿಕೆ ; ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿ 6 ಮಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ ನಲ್ಲಿ ಭಾನುವಾರ (ಅಕ್ಟೋಬರ್‌ 20) ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ. ಭಯೋತ್ಪಾದಕರ ದಾಳಿಯಲ್ಲಿ ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿದಂತೆ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 6 ಮಂದಿ ಸಾವಿಗೀಡಾಗಿರುವುದನ್ನು … Continued

ಮುಂಬೈನಲ್ಲಿ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ ; ಅಂತಿಮ ನಮನ ಸಲ್ಲಿಸಿದ ಸಾವಿರಾರು ಜನರು

ಮುಂಬೈ: ಹೃದಯವಂತ ಕೈಗಾರಿಕೋದ್ಯಮಿ ರತನ್ ನೇವಲ್ ಟಾಟಾ ಅವರ ಅಂತಿಮ ವಿಧಿಗಳನ್ನು ಗುರುವಾರ ಮಧ್ಯಾಹ್ನ ಮುಂಬೈನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.ಮುಂಬೈನ ವೋರ್ಲಿಯಲ್ಲಿರುವ ಶವಾಗಾರದಲ್ಲಿ ಪಾರ್ಥಿವ ಶರೀರವನ್ನು ದಹನ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ರತನ್‌ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಅನೇಕ ಉನ್ನತ ಮಟ್ಟದ … Continued

ನಾಲ್ಕು ಬಾರಿ ಪ್ರೇಮಾಂಕುರ…ಆದರೂ ರತನ್ ಟಾಟಾ ಮದುವೆಯಾಗಲಿಲ್ಲ ಯಾಕೆ …?!

ಖ್ಯಾತ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಅವರು ಬುಧವಾರ 86 ನೇ ವಯಸ್ಸಿನಲ್ಲಿ ನಿಧನರಾದರು. ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದ ನಂತರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಬುಧವಾರ ರಾತ್ರಿ ಮೃತಪಟ್ಟಿದ್ದು, ವ್ಯಾಪಾರ ಮತ್ತು ಲೋಕೋಪಕಾರದ ಜಗತ್ತಿನಲ್ಲಿ ಸಾಟಿಯಿಲ್ಲದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ವೃತ್ತಿಪರ … Continued

ಹಿರಿಯ ಕೈಗಾರಿಕೋದ್ಯಮಿ-ರಾಷ್ಟ್ರೀಯ ಐಕಾನ್‌ ರತನ್ ಟಾಟಾ ಇನ್ನಿಲ್ಲ

ಮುಂಬೈ : ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎಮೆರಿಟಸ್ ರತನ್ ಟಾಟಾ ಅವರು ಬುಧವಾರ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಕ್ತದೊತ್ತಡದಲ್ಲಿ ಹಠಾತ್ ಕುಸಿತದಿಂದಾಗಿ ಅವರನ್ನು ಸೋಮವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಂತರ ಅವರು ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ಸೋಮವಾರ (ಅಕ್ಟೋಬರ್ 7) ಸಾಮಾಜಿಕ ಮಾಧ್ಯಮದಲ್ಲಿ … Continued

ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ : ಒಂದೇ ಕುಟುಂಬದ 7 ಮಂದಿ ಸಾವು

ಮುಂಬೈ: ಮುಂಬೈನ ಚೆಂಬೂರಿನಲ್ಲಿ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನರು ಸಾವಿಗೀಡಾಗಿದ್ದಾರೆ. ಸಿದ್ದಾರ್ಥ ಕಾಲೋನಿಯಲ್ಲಿರುವ ಕಟ್ಟಡದಲ್ಲಿ ಭಾನುವಾರ ಮುಂಜಾನೆ 5:20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಟ್ಟಡದ ನೆಲ ಮಹಡಿಯನ್ನು ಅಂಗಡಿಯಾಗಿ ಮತ್ತು ಮೇಲಿನ ಮಹಡಿಯನ್ನು ನಿವಾಸವಾಗಿ ಬಳಸಲಾಗುತ್ತಿತ್ತು ಎಂದು … Continued

ಶಾಕಿಂಗ್‌ …| ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಸಿಲುಕಿದ್ದಾಳೆಂದು ಪೊಲೀಸರ ವೇಷದಲ್ಲಿ ವಂಚಕರಿಂದ ಫೋನ್‌ ಕಾಲ್‌ : ಶಿಕ್ಷಕಿ ಹೃದಯಘಾತದಿಂದ ಸಾವು…!

ಆಗ್ರಾ : ಮೊಬೈಲ್‌ ಕರೆ ವಂಚನೆಗಳು ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ವಂಚನೆ ಕಾಲ್‌ ಮಹಿಳೆಯೊಬ್ಬರ ಜೀವವನ್ನೇ ಆಹುತಿ ತೆಗೆದುಕೊಂಡ ಘಟನೆ ವರದಿಯಾಗಿದೆ. ಆಗ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ಪೊಲೀಸ್ ಅಧಿಕಾರಿ ಫೋಟೋ ಪೋಸಿನಲ್ಲಿದ್ದ ವ್ಯಕ್ತಿಯಿಂದ ವಾಟ್ಸಾಪ್ ಕರೆ ಸ್ವೀಕರಿಸಿದ್ದಾರೆ. ತನ್ನ ಕಾಲೇಜಿಗೆ … Continued

ವೀಡಿಯೊ…| ಪುಣೆ ಸಮೀಪ ಹೆಲಿಕಾಪ್ಟರ್ ಪತನ : ಇಬ್ಬರು ಪೈಲಟ್‌ ಸೇರಿ ಮೂವರು ಸಾವು

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪುಣೆಯ ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ಕೂಡಲೇ ನಗರದ ವಸತಿ ಉಪನಗರವಾದ ಬವ್‌ಧಾನ್‌ ಗುಡ್ಡಗಾಡು ಪ್ರದೇಶದ ಬಳಿ ಇಂದು, ಬುಧವಾರ ಬೆಳಿಗ್ಗೆ 6:45 ರ ಸುಮಾರಿಗೆ ಪತನಗೊಂಡಿದೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್‌ … Continued

ವೀಡಿಯೊ..| ಅಸ್ಸಾಂನಲ್ಲಿ ಬೈಕ್ ಸವಾರನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದುಹಾಕಿದ ಘೇಂಡಾಮೃಗ…

ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಪೊಬಿತೋರಾ ವನ್ಯಜೀವಿ ಅಭಯಾರಣ್ಯದ ಬಳಿ ಘೇಂಡಾಮೃಗವೊಂದು ಅಟ್ಟಿಸಿಕೊಂಡು ಹೋಗಿ ದಾಳಿ ಮಾಡಿದ ನಂತರ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸದ್ದಾಂ ಹುಸೇನ್ (37 ವರ್ಷ) ಘಟನೆಯ ಸ್ಥಳದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ. ಅವರು ತಮ್ಮ ದ್ವಿಚಕ್ರ … Continued

ಬಿಹಾರ | ‘ಜೀವಿತ ಪುತ್ರಿಕಾ’ ಉತ್ಸವದಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿ 43 ಸಾವು

ಪಾಟ್ನಾ : ಬಿಹಾರದಲ್ಲಿ ‘ಜೀವಿತ್‌ ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ ಕನಿಷ್ಠ 43 ಜನರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ. ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು … Continued