ಪಿಂಕಿ ಈಸ್ ಕಿಲ್ಲಿಂಗ್ ಮೀ ; ಹೆಂಡತಿ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ

ಹುಬ್ಬಳ್ಳಿ : 40 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಕಿರುಕುಳದಿಂದ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೀಟರ್‌ ಗೊಲ್ಲಪಲ್ಲಿ ಎಂಬವರು ಪತ್ನಿ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಪತ್ನಿಯ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

ಬೆಂಗಳೂರು : ವಿಚ್ಛೇದನ (divorce) ಅರ್ಜಿಯನ್ನು ಹಿಂಪಡೆಯಲು ಪತ್ನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ಗುರುವಾರ ನಡೆದಿದೆ. ಪತ್ನಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿ ತನ್ನ ಪತ್ನಿಯ ನಿವಾಸದ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಮೃತ ಪತಿ 39 ವರ್ಷ ವಯಸ್ಸಿನ ಮಂಜುನಾಥ ಕುಣಿಗಲ್ ಪೇಟೆಯಲ್ಲಿ ವಾಸವಿದ್ದ ಎಂದು ಪೊಲೀಸರು … Continued

40 ವರ್ಷದಲ್ಲಿ ಬರೋಬ್ಬರಿ 12 ಸಲ ಡೈವೋರ್ಸ್‌; 12 ಬಾರಿ ಮರುಮದುವೆಯಾದ ಅದೇ ದಂಪತಿ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…

ಈ ದಂಪತಿ 40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಡಿವೋರ್ಸ್‌ ನೀಡಿ 12 ಸಲ ಮರುಮದುವೆಯಾಗಿದ್ದಾರೆ. ಇದೀಗ ಈ ದಂಪತಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯ ಡೈವೋರ್ಸ್‌ ಸುದ್ದಿ ಭಾರೀ ವೈರಲ್‌ ಆಗುತ್ತಿದೆ. ಆಸ್ಟ್ರಿಯನ್ ದಂಪತಿ ಸರ್ಕಾರದಿಂದ ಕೊಡುವ ಪಿಂಚಣಿಯ ಲಾಭ ಪಡೆಯುವ ಸಲುವಾಗಿ 73 ವರ್ಷ ವಯಸ್ಸಿನ ಮಹಿಳೆಯು ಪಿಂಚಣಿ ಪಡೆಯಲು ಕಾನೂನನ್ನು … Continued

ಮುರಿದುಬಿದ್ದ ಎ.ಆರ್‌. ರೆಹಮಾನ್‌ ದಾಂಪತ್ಯ ; ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ ಬಾನು

ಚೆನ್ನೈ : ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ತಾವು ಪತಿಯಿಂದ ಬೇರ್ಪಡುವುದಾಗಿ ಪ್ರಕಟಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ಅವರು ದಂಪತಿ ಬೇರ್ಪಟ್ಟ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ತಮ್ಮ ಪತಿ ಎ.ಆರ್. ರೆಹಮಾನ್‌ ಅವರಿಂದ ಬೇರ್ಪಡುವ ಕಠಿಣ … Continued

ಊರ್ಮಿಳಾ ಮಾತೋಂಡ್ಕರ್ ದಾಂಪತ್ಯದಲ್ಲಿ ಬಿರುಕು; ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ : ವರದಿ

ಮುಂಬೈ : ಮದುವೆಯಾದ ಎಂಟು ವರ್ಷಗಳ ನಂತರ ಊರ್ಮಿಳಾ ಮಾತೋಂಡ್ಕರ್ ತನ್ನ ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಬಾಂದ್ರಾ ನ್ಯಾಯಾಲಯದಲ್ಲಿ ನಾಲ್ಕು ತಿಂಗಳ ಹಿಂದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಚ್ಛೇದನದ ಹಿಂದಿನ ಕಾರಣಗಳು ಸ್ಪಷ್ಟವಾಗಿಲ್ಲ. ದಂಪತಿ ಫೆಬ್ರವರಿ 4, 2016 ರಂದು … Continued

15 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಜಯಂ ರವಿ-ಆರತಿ

ಚೆನ್ನೈ: ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ಪರಸ್ಪರ ಭೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ. ಸೆಪ್ಟೆಂಬರ್ 9 ರಂದು ನಟ ಜಯಂ ರವಿ ಸ್ವತಃ ಸಾಮಾಜಿಕ ಮಾಧ್ಯಮದ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರು ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ‘ಆರತಿ ಅವರೊಂದಿಗಿನ ಅವರ ವಿವಾಹ ಸಂಬಂಧ’ ಅಂತ್ಯಗೊಳಿಸುವ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಗಣಿಸಿದ … Continued

ಅಷ್ಟೊಂದು ಹಣ ಬೇಕಾದ್ರೆ ಆಕೆ ದುಡಿದು ಸಂಪಾದಿಸಲಿ : ಗಂಡನಿಂದ ಪ್ರತಿತಿಂಗಳು 6 ಲಕ್ಷ ರೂ.ಜೀವನಾಂಶ ಕೇಳಿದ ಪತ್ನಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ತನ್ನಿಂದ ದೂರವಿರುವ ಪತಿಯಿಂದ ಪ್ರತಿ ತಿಂಗಳು 6 ಲಕ್ಷ ರೂ. ಜೀವನಾಂಶ ಕೋರಿದ ಪತ್ನಿಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಆಕೆ ಇಷ್ಟು ಹಣವನ್ನು ಖರ್ಚು ಮಾಡಬೇಕೆಂದು ಬಯಸಿದರೆ ತಾನೇ ದುಡಿದು ಸಂಪಾದಿಸಲಿ ಎಂದು ತರಾಟೆಗೆ ತೆಗೆದುಕೊಂಡಿದೆ. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು … Continued

ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ-ನತಾಶಾ 4 ವರ್ಷಗಳ ದಾಂಪತ್ಯ ಅಂತ್ಯ ; ವಿಚ್ಛೇದನ ಘೋಷಣೆ

ಭಾರತದ ಸ್ಟಾರ್ ಕ್ರಿಕೆಟ್‌ ಆಟಗಾರ ಹಾರ್ದಿಕ್ ಪಾಂಡ್ಯ ಗುರುವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾನು ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ‘ಪರಸ್ಪರ ಬೇರೆಯಾಗಿದ್ದೇವೆ’ ಎಂದು ಪ್ರಕಟಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸೆಲೆಬ್ರಿಟಿ ದಂಪತಿ ಬೇರೆಯಾಗುತ್ತಿದ್ದಾರೆ ಎಂಬ ವದಂತಿಗಳು ಇದ್ದವು ಮತ್ತು ಗುರುವಾರ (ಜುಲೈ 18)ದ ಈ ಪ್ರಕಟಣೆಯೊಂದಿಗೆ ಅದು ಅಧಿಕೃತವಾಗಿ ದೃಢೀಕರಿಸಲ್ಪಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಹಾರ್ದಿಕ್ … Continued

ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಬಹುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ. ಹಾಗೂ ಅವರ ಧರ್ಮವನ್ನು ಲೆಕ್ಕಿಸದೆ ಇದು ಎಲ್ಲಾ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ತನ್ನ ಮಾಜಿ ಪತ್ನಿಗೆ ₹10,000 ಮಧ್ಯಂತರ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ … Continued

ವೀಡಿಯೊ….| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ…!

ರೂಢಿಯಿಂದ ವಿಭಿನ್ನವಾದ ನಡೆಯಲ್ಲಿ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಮಗಳು ವಿಚ್ಛೇದನ ಪಡೆದ ನಂತರದಲ್ಲಿ ತಮ್ಮ ಮನೆಗೆ ವಾಪಸ್‌ ಬರುವಾಗ ಆಕೆಯನ್ನು ಸಂಭ್ರಮದಿಂದಲೇ ಬರಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮಗಳನ್ನು ಮದುವೆ ಮಾಡಿಕೊಟ್ಟ ಮನೆಗೆ ಕಳುಹಿಸುವಾಗ ಹೇಗೆ ಬ್ಯಾಂಡ್‌ -ವಾದ್ಯಗಳ ಮೂಲಕ ಸಂಭ್ರಮದಿಂದ ಕಳುಹಿಸಿ ಕೊಡುತ್ತಾರೆಯೋ ವಿಚ್ಛೇದನ ಪಡೆದ ಮಗಳು ಮನೆಗೆ ಬರುವಾಗ ತಂದೆ ಅದೇ ರೀತಿ ಬ್ಯಾಂಡ್‌ -ವಾದ್ಯಗಳ … Continued