ಅಮೆರಿಕದ ಅಧ್ಯಕ್ಷ ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ 17 ವರ್ಷದ ವಿದ್ಯಾರ್ಥಿ…!

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. … Continued

ಈಗಲೇ ದೇಶ ಬಿಟ್ಟು ಹೊರಡಿ……”: ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳಿಗೆ ಟ್ರಂಪ್‌ ಆಡಳಿತದ ಎಚ್ಚರಿಕೆ ಏನೆಂದರೆ….

ವಾಷಿಂಗ್ಟನ್‌ : 30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅದನ್ನು ಪಾಲಿಸಲು ವಿಫಲವಾದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಅಧೀನದಲ್ಲಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ. ‘ಅಕ್ರಮ ವಲಸಿಗರಿಗೆ ಸಂದೇಶ’ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ, ಗೃಹ ಭದ್ರತಾ ಇಲಾಖೆ (DHS) … Continued

ಅಮೆರಿಕದಲ್ಲಿರುವ ಎಚ್‌-1ಬಿ, ಗ್ರೀನ್ ಕಾರ್ಡ್ ಇರುವ ಭಾರತೀಯರ ಬಳಿ ಈಗ ದಿನದ 24 ಗಂಟೆಯೂ ಐಡಿ ಇರಬೇಕು: ಇದು ಹೊಸ ನಿಯಮ

ವಾಷಿಂಗ್ಟನ್‌ : ಡೊನಾಲ್ಡ್ ಟ್ರಂಪ್ ಆಡಳಿತವು ವಲಸಿಗರಿಗೆ ಹೊಸ ನಿಯಮವನ್ನು ತಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಎಲ್ಲಾ ವಲಸಿಗರು ತಮ್ಮ ಕಾನೂನು ಸ್ಥಾನಮಾನದ ಪುರಾವೆಗಳನ್ನು ಯಾವಾಗಲೂ ಹೊಂದಿರಬೇಕು ಎಂದು ಈ ನಿಯಮ ಹೇಳುತ್ತದೆ. ಇದು ಏಪ್ರಿಲ್ 11 ರಿಂದ ಜಾರಿಗೆ ಬಂದಿತು ಮತ್ತು ಅಕ್ರಮ ವಲಸೆಯನ್ನು ಹತ್ತಿಕ್ಕುವ ಮತ್ತು ಅಕ್ರಮವಾಗಿ ವಾಸಿಸುವ ಲಕ್ಷಾಂತರ ಜನರನ್ನು ಗಡೀಪಾರು … Continued

ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಿಪ್‌ಗಳಿಗೆ ಪ್ರತಿಸುಂಕಗಳಿಂದ ವಿನಾಯಿತಿ ಘೋಷಿಸಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸೆಮಿಕಂಡಕ್ಟರ್ ಚಿಪ್‌ಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಪ್ರತಿ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ಚೀನಾದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ಸೇರಿವೆ. ಈ ಉತ್ಪನ್ನಗಳು ಚೀನಾದ ಮೇಲೆ ವಿಧಿಸಲಾಗುವ ಪ್ರಸ್ತುತ ಶೇಕಡಾ 145 ಸುಂಕಗಳಿಗೆ ಅಥವಾ ಬೇರೆಡೆ ವಿಧಿಸಲಾಗುವ ಶೇಕಡಾ 10 ರಷ್ಟು … Continued

ಟ್ರಂಪ್‌ಗೆ ಕ್ಸಿ ಟಕ್ಕರ್‌ ; ಅಮೆರಿಕದ ಸರಕುಗಳ ಮೇಲೆ ಶೇ 125% ತೆರಿಗೆ ವಿಧಿಸಿದ ಚೀನಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೆ ಕಾಣುತ್ತಿಲ್ಲ. ಅದಿ ಈಗ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಮರವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ (China) ಮೇಲೆ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಈಗ ಅಮೆರಿಕದ ಸರಕುಗಳ ಮೇಲೆ ಚೀನಾ 125%ರಷ್ಟು ಸುಂಕ ವಿಧಿಸಿದೆ. … Continued

75ಕ್ಕೂ ಹೆಚ್ಚು ದೇಶಗಳ ಸರಕಿಗೆ ವಿಧಿಸಿದ್ದ ಸುಂಕ 90 ದಿನ ತಡೆಹಿಡಿದ ಟ್ರಂಪ್‌ ; ಆದ್ರೆ ಚೀನಾ ಸರಕುಗಳ ಮೇಲಿನ ಸುಂಕ 125%ಕ್ಕೆ ಹೆಚ್ಚಳ…!

ವಾಷಿಂಗ್ಟನ್‌ : ಜಾರಿಗೆ ಬಂದ ಕೇವಲ 24 ಗಂಟೆಗಳ ನಂತರ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕ ವಿಧಿಸಿದ್ದನ್ನು 90 ದಿನಗಳ ಕಾಲ ತಡೆಹಿಡಿಯುವುದಾಗಿ ಘೋಷಿಸಿದ್ದಾರೆ. ಇದು ಒಂದು ಪ್ರಮುಖ ವ್ಯಾಪಾರ ಯುದ್ಧದ ಭಯಕ್ಕೆ ಕಾರಣವಾಗಿ ಜಾಗತಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು. ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಸೃಷ್ಟಿಸಿತು. ಆದರೆ … Continued

ಚೀನಾದ ಮೇಲೆ 104% ಸುಂಕ ವಿಧಿಸಿದ ಅಮೆರಿಕ ; ದೃಢಪಡಿಸಿದ ಶ್ವೇತಭವನ : ಏಪ್ರಿಲ್ 9 ರಿಂದ ಜಾರಿಗೆ

ವಾಷಿಂಗ್ಟನ್‌ : ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಅಮೆರಿಕವು ಚೀನಾದ ಮೇಲೆ ಶೇ. 104 ರಷ್ಟು ಸುಂಕಗಳನ್ನು ವಿಧಿಸಿದ್ದು, ಶ್ವೇತಭವನವು ಫಾಕ್ಸ್ ಬಿಸಿನೆಸ್ ವರದಿಗಾರರಿಗೆ ದೃಢಪಡಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪ್ರತಿಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ನೀಡಿದ ಎಚ್ಚರಿಕೆ ಮತ್ತು ಒಂದು ದಿನದ ಗಡುವಿನ … Continued

ಅಮೆರಿಕದ ರಫ್ತಿನ ಮೇಲೆ ಪ್ರತಿಸುಂಕ ವಿಧಿಸಿದ ಚೀನಾಕ್ಕೆ 50%ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ ಟ್ರಂಪ್‌ ; ಒಂದು ದಿನದ ಗಡುವು

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಶೇ. 34 ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ ಚೀನಾ ಪ್ರತಿಸುಂಕ ವಿಧಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಸೋಮವಾರ ಚೀನಾಕ್ಕೆ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪರಸ್ಪರ ಸುಂಕ ವಿಧಿಸುವ ಘೋಷಣೆಯನ್ನು … Continued

ವೀಡಿಯೊ..| ಹೌತಿ ಬಂಡುಕೋರರ ಮೇಲೆ ಅಮೆರಿಕದ ಮಾರಣಾಂತಿಕ ವಾಯು ದಾಳಿಯ ವೀಡಿಯೊ ಹಂಚಿಕೊಂಡ ಅಧ್ಯಕ್ಷ ಟ್ರಂಪ್

ಹೌತಿ ಬಂಡುಕೋರರ ಮೇಲೆ ಅಮೆರಿಕ ವಾಯಪಡೆಯ ಮಾರಣಾಂತಿಕ ದಾಳಿಯ ವೀಡಿಯೊವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಅವರು ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಗುಂಪಿನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆದೇಶಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ಹಂಚಿಕೊಂಡಿದ್ದಾರೆ. ಟ್ರಂಪ್ ಹಂಚಿಕೊಂಡ ಕಪ್ಪು-ಬಿಳುಪು ವೀಡಿಯೊ ತುಣುಕಿನಲ್ಲಿ ಮಿಲಿಟರಿ ಡ್ರೋನ್‌ಗಳು ಅಥವಾ ಇತರ ವಿಮಾನಗಳಿಂದ ಚಿತ್ರೀಕರಿಸಲಾದ … Continued

ಭಾರತದ ರಫ್ತಿನ ಮೇಲೆ 26%ರಷ್ಟು ಪ್ರತಿ ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ : ಭಾರತದ ಯಾವ ವಲಯದ ಮೇಲೆ ಪರಿಣಾಮ…?

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 26% ಪ್ರತಿ ಸುಂಕವನ್ನು ಘೋಷಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪ್ರಮುಖ ವ್ಯಾಪಾರದ ಹೊಡೆತ ನೀಡಿದ್ದಾರೆ. ಅವರ ‘ವಿಮೋಚನಾ ದಿನ’ ಭಾಷಣದಲ್ಲಿ ಘೋಷಿಸಿದ ಈ ಕ್ರಮವು ಹೊಸ ವ್ಯಾಪಾರ ಅಡೆತಡೆಗಳಿಗಿಂತ ಸುಂಕದ ರಿಯಾಯಿತಿಗಳನ್ನು ನಿರೀಕ್ಷಿಸುತ್ತಿದ್ದ ಭಾರತಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಏಪ್ರಿಲ್ 9 ರಿಂದ … Continued