ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು … Continued

ಪ್ರಯಾಗರಾಜ್‌ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ; ತಾಯಿ, ಮಗಳು ಸೇರಿ ಬೆಳಗಾವಿಯ ನಾಲ್ವರು ಸಾವು

ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ ಕೋರ್ಪಡೆ ಹಾಗೂ ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತರು ಎಂದು … Continued

ಮಹಾಕುಂಭ ಮೇಳ 2025 : ಪ್ರಯಾಗರಾಜ್‌ ನಲ್ಲಿದ್ದಾರೆ ಈಗ ಸುಮಾರು 10 ಕೋಟಿ ಭಕ್ತರು…!

ಪ್ರಯಾಗರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾದ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ “ನಿಯಂತ್ರಣದಲ್ಲಿದೆ” ಮತ್ತು ‘ಮೌನಿ ಅಮಾವಾಸ್ಯೆ’ ಸಂದರ್ಭದಲ್ಲಿ ‘ಅಮೃತ ಸ್ನಾನ’ (ರಾಯಲ್ ಟಬ್) ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ. “ಘಟನೆಯು ಮಂಗಳವಾರ ಮಧ್ಯರಾತ್ರಿ 1 ಗಂಟೆ ಮತ್ತು 2 … Continued

ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ಷರತ್ತುಬದ್ಧ ಅನುಮೋದನೆ

ಬೆಂಗಳೂರು: ತಜ್ಞರು, ಸಂರಕ್ಷಣಾವಾದಿಗಳು, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ವಿರೋಧದ ಹೊರತಾಗಿಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೋಗ ಮೀಸಲು ಅರಣ್ಯದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳುವ ಇಂಧನ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶರಾವತಿ … Continued

ಮಹಾಕುಂಭದಲ್ಲಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣ ; 30 ಜನರಿಗೆ ಗಾಯ

ಪ್ರಯಾಗರಾಜ್‌ : ಮೌನಿ ಅಮಾವಾಸ್ಯೆಯ ಬೆಳಿಗ್ಗೆ ಮಹಾಕುಂಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಸುಮಾರು 30 ಮಹಿಳೆಯರು ಗಾಯಗೊಂಡಿದ್ದಾರೆ. ‘ಅಮೃತ ಸ್ನಾನ’ಕ್ಕೆ ಮುನ್ನ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಟೆಂಟ್‌ ಸಿಟಿಗೆ ಕೋಟಿಗಟ್ಟಲೆ ಭಕ್ತರು ಹರಿದು ಬಂದರಂತೆ. ‘ಸಂಗಮ’ದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಜನಸಂದಣಿಯ ಮಧ್ಯೆ, ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದರು. ಈ ವೇಳೆ ಜನದಟ್ಟೆಣೆಯಿಂದಾಗಿ ಉಸಿರಾಟದ ಸಮಸ್ಯೆ … Continued

ಇಂದು ರಾತ್ರಿ 8 ಗಂಟೆಯೊಳಗೆ ʼಯಮುನಾ ವಿಷ ಮಿಶ್ರಣʼದ ಬಗ್ಗೆ ಪುರಾವೆ ನೀಡಿ: ಕೇಜ್ರಿವಾಲಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನೀರನ್ನು ವಿಷಪೂರಿತಗೊಳಿಸಿದೆ ಎಂಬ ಎಂದು ಗಂಭೀರ ಆರೋಪ ಮಾಡಿದ್ದು, ಈ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯೊಳಗೆ ಸಾಕ್ಷ್ಯಾಧಾರಗಳನ್ನು ಪ್ರಸ್ತುಪಡಿಸುವಂತೆ ಸೂಚಿಸಿರುವ ಚುನಾವಣಾ ಆಯೋಗವು, ಇದು … Continued

ವೀಡಿಯೊಗಳು..| ಧಾರ್ಮಿಕ ಕಾರ್ಯಕ್ರಮದಲ್ಲಿ ಮರದ ವೇದಿಕೆ ಕುಸಿದು ಏಳು ಮಂದಿ ಸಾವು ; 60 ಮಂದಿಗೆ ಗಾಯ

ಬಾಗ್ಪತ್: ಉತ್ತರ ಪರಾದೇಶದ ಬಾಗ್ಪತ್‌ ಜಿಲ್ಲೆಯ ಬದೌತ್‌ನಲ್ಲಿ ಮಂಗಳವಾರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮರದ ರಚನೆಯೊಂದು ಕುಸಿದುಬಿದ್ದು ಏಳು ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗ್ಪತ್ ಜಿಲ್ಲೆಯ ಬರೌತ್ ನಗರದ ಗಾಂಧಿ ರಸ್ತೆಯಲ್ಲಿರುವ ಶ್ರೀ ದಿಗಂಬರ ಜೈನ್ ಪದವಿ ಕಾಲೇಜು ಮೈದಾನದಲ್ಲಿ ಭಗವಾನ್ ಆದಿನಾಥರ ‘ಅಭಿಷೇಕ’ ಕಾರ್ಯಕ್ರಮದ ವೇಳೆ … Continued

ಮುಡಾ ಪ್ರಕರಣ | ಸಿಎಂ ವಿರುದ್ಧ ಸಿಬಿಐ ತನಿಖೆ ಕೋರಿ ಅರ್ಜಿ; ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣಕ್ಕೆ (Muda Case) ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಾದ- ಪ್ರತಿವಾದ ಆಲಿಸಿ … Continued

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿದ ಜಂಟಿ ಸಂಸದೀಯ ಸಮಿತಿ ; 14 ತಿದ್ದುಪಡಿಗಳಿಗೆ ಅನುಮೋದನೆ

ನವದೆಹಲಿ : ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೋಮವಾರ ಅದನ್ನು ಅಂಗೀಕರಿಸಿದೆ ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಅಂಗೀಕರಿಸಿದೆ. ದೇಶಾದ್ಯಂತ ವಕ್ಫ್ ಬೋರ್ಡ್‌ಗಳನ್ನು ನಿರ್ವಹಿಸುವ ರೀತಿಯಲ್ಲಿ ಸುಧಾರಣೆಗಳನ್ನು ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯು ಜೆಪಿಸಿ 16:10 ಸದಸ್ಯರ (ಎನ್‌ಡಿಎಯಿಂದ … Continued

ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನಾಗರಿಕ ಸಂಹಿತೆ (UCC) ಜಾರಿ ; ಇದನ್ನು ಜಾರಿಗೆ ತಂದ ಮೊದಲ ರಾಜ್ಯ ; ಏನೇನು ಬದಲಾವಣೆ..?

ನವದೆಹಲಿ: ಉತ್ತರಾಖಂಡದಲ್ಲಿ ಇಂದಿನಿಂದ (ಜನವರಿ 27) ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯಾಗುತ್ತಿದ್ದು, ಎಲ್ಲಾ ನಾಗರಿಕರಿಗೆ ಮದುವೆ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಮತ್ತು ದತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಏಕರೂಪದ ಚೌಕಟ್ಟನ್ನು ಹಾಕುತ್ತದೆ. ಇದು ಗೋವಾದ ನಂತರ ನಾಗರಿಕರಿಗೆ ಏಕರೂಪದ ಕಾನೂನು ಚೌಕಟ್ಟನ್ನು ಹೊಂದಲಿರುವ ಎರಡನೇ ರಾಜ್ಯವಾಗಲಿದೆ. 2022ರ ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ … Continued