೧೦ ಕೋಟಿ ಕೊವಿಡ್‌ ಲಸಿಕೆ ಖರೀದಿಗೆ ಆದೇಶ ನೀಡಿದ ಕೇಂದ್ರ

ನವ ದೆಹಲಿ: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ, ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ಪೂರೈಸಲು ಕೇಂದ್ರವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (ಎಸ್‌ಐಐ) ಹೊಸ ಖರೀದಿ ಆದೇಶ ನೀಡಿದೆ. ಸಾರ್ವಜನಿಕ ವಲಯದ ಸಂಸ್ಥೆಯಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಮಾರ್ಚ್ 12 ರಂದು ಪುಣೆ ಮೂಲದ ಎಸ್‌ಐಐನಲ್ಲಿ ಸರ್ಕಾರ ಮತ್ತು ನಿಯಂತ್ರಣ … Continued

ಕರ್ನಾಟಕದಲ್ಲಿ ಸಾವಿರ ಗಡಿದಾಟಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ…!!

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕೂಡ ಕೊರೊನಾದಲ್ಲಿ ಭಾರೀ ಹೆಚ್ಚಳವಾಗಿದ್ದು, ಸಾವಿರದ ಗಡಿ ದಾಟಿದೆ…! ಕಳೆದ ೨೪ ತಾಸಿನಲ್ಲಿ ದೈನಂದಿನ ಕೊರೊನಾ ಪ್ರಕರಣ 1135 ದಾಖಲಾಗಿದ್ದು, ಸರ್ಕಾರದ ಚಿಂತೆಗೆ ಕಾರಣವಾಗಿದೆ. ಇದರೊಂದಿಗೆ ಸಕ್ರಿಯ ಪ್ರಕಣಗಳ ಸಂಖ್ಯೆ 9428ಕ್ಕೆ ಏರಿಕೆಯಾಗಿದ್ದು, 129 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 9,62,339 ಕ್ಕೆ ಏರಿಕೆಯಾಗಿದೆ. … Continued

ಸಿಡಿ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌: ಮಗಳು ಕಿಡ್ನ್ಯಾಪ್‌, ಹುಡುಕಿ ಕೊಡಿ ಎಂದು ತಂದೆಯಿಂದ ದೂರು ದಾಖಲು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೊಂದು ತಿರುವು ಕಂಡಿದೆ. ಸಿಡಿ ಪ್ರಕರಣದಲ್ಲಿದ್ದಾಳೆ ಎನ್ನಲಾದ ಯುವತಿಯ ತಂದೆ ತನ್ನ ಮಗಳು ಕಿಡ್ನ್ಯಾಪ್‌ ಆಗಿದ್ದಾಳೆ ಎಂದು ಬೆಳಗಾವಿಯಲ್ಲಿ ದೂರು ದಾಖಲಿಸಿದ್ದಾರೆ. ಸಿಡಿ ದೃಶ್ಯದಲ್ಲಿದ್ದಾಳೆ ಎಂದು ಹೇಳಲಾದ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ಮಾರ್ಚ್ 2 ರಿಂದ ನನ್ನ ಪುತ್ರಿ … Continued

ಮಹಾರಾಷ್ಟ್ರದಲ್ಲಿ ೨೦೦೦ ವರ್ಷ ಪ್ರಾಚೀನ ಗುಹೆಗಳು ಪತ್ತೆ…!

ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯಲ್ಲಿ ಸುಮಾರು ೨೦೦೦ ವರ್ಷ ಪುರಾತನವಾದ ಗುಹೆಗಳು ಪತ್ತೆಯಾಗಿವೆ. ಜಿಲ್ಲೆಯ ಥೋಪ್ಡಾ ತೆಹಸಿಲ್‌ ಪ್ರದೇಶದಲ್ಲಿ ಗುಹೆಗಳು ಪತ್ತೆಯಾಗಿವೆ. ದಕ್ಷಿಣ ಭಾರತವನ್ನು ಹೆಚ್ಚು ಅವಧಿಯವರೆಗೆ ಆಳಿದ ಶಾತವಾಹನರ ಕಾಲದ ರಹಸ್ಯ ಗುಹೆಗಳು ಇವಾಗಿರಬಹುದು ಎಂದು ಜಲಗಾಂವ ಪುರಾತತ್ವ ಶಾಸ್ತ್ರಜ್ಞ ರಾಮರಾವ್‌ ಬೋಬ್ಡೆ ತಿಳಿಸಿದ್ದಾರೆ. ಚೌಗಾವ್‌ ಗ್ರಾಮಸ್ಥರಿಗೆ ಗುಹೆಗಳಿರುವುದು ತಿಳಿದಿರಲಿಲ್ಲ. ಡೆಕ್ಕನ್‌ ಪುರಾತತ್ವ ಸಂಶೋಧನಾ ಸಂಸ್ಥೆಯ … Continued

ಕರ್ನಾಟಕದ ಉಪಚುನಾವಣೆ ದಿನಾಂಕ ಪ್ರಕಟ, ; ಏಪ್ರಿಲ್ 17ಕ್ಕೆ ಮತದಾನ, ಮೇ 2ಕ್ಕೆ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದ ಎರಡು ವಿಧಾನ ಸಭೆ ಮತ್ತು ಒಂದು ಲೋಕ ಸಭಾ ಉಪಚುನಾವಣೆಗೆ ಏಪ್ರಿಲ್‌ 17 ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಬೆಳಗಾವಿ ಲೋಕಸಭಾ ಸ್ಥಾನ ಹಾಗೂ ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ ೧೭ರಂದು ಚುನಾವಣೆ ನಡೆಯಲಿದೆ. … Continued

ಐಕ್ಯೂಏರ್ ವರದಿ:ಸತತ ಮೂರನೇ ವರ್ಷವೂ ದೆಹಲಿಗೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಕುಖ್ಯಾತಿ…!

2020ರಲ್ಲಿ ಸತತ ಮೂರನೇ ವರ್ಷವೂ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ. ಸ್ವಿಸ್ ಗುಂಪಿನ ಐಕ್ಯೂಏರ್ (IQAir,) ಅಧ್ಯಯನ ವರದಿ ಸತತ ಮೂರನೇ ವರ್ಷವೂ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂದು ಹೇಳಿದೆ. ಶ್ವಾಸಕೋಶದ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ವಾಯು ಗುಣಮಟ್ಟದ ಮಟ್ಟವನ್ನು … Continued

ಲಾಕ್‌ಡೌನ್‌ ಮಾಡುವುದು, ಬಿಡುವುದು ನಿಮ್ಮ ಕೈಯ್ಲಿದೆ; ಒಂದು ವಾರ ಕಾದು ನೋಡ್ತೇವೆ: ಸಿಎಂ

ಬೆಂಗಳೂರು: ರಾಜ್ಯವನ್ನು ಲಾಕ್‌ ಡೌನ್‌ ಮಾಡುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ರಾಜ್ಯವನ್ನು ಮತ್ತೊಮ್ಮೆ ಲಾಕ್‌ ಡೌನ್‌ ಮಾಡಬಾರದು ಎಂಬ ಮನಸ್ಸು ನಿಮ್ಮಲ್ಲಿದ್ದರೆ, ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೊನಾ ಮಟ್ಟ ಹಾಕಲು ಇರುವುದು ಇದೊಂದೇ ಮಾರ್ಗ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ರೋಗದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ … Continued

ಸ್ಟೆಮ್ ಸೆಲ್ ಮೂಲಕ ಅಪ್ರಬುದ್ಧ ಮಾನವ ಅಂಡಾಣು ಸೃಷ್ಟಿ: ಜಪಾನ್ ವಿಜ್ಞಾನಿಗಳ ಮಹತ್ತರ ಸಾಧನೆ

ಪ್ರಯೋಗಶಾಲೆಯಲ್ಲಿ ಮಾನವ ಅಂಡಾಣುಗಳನ್ನು ಸೃಷ್ಟಿಸುವತ್ತ ವಿಜ್ಞಾನಿಗಳು ಹೆಜ್ಜೆ ಇಟ್ಟಿದ್ದಾರೆ.ಜಪಾನಿನ ವಿಜ್ಞಾನಿಗಳ ಒಂದು ತಂಡ ಮಾನವ ರಕ್ತ ಕಣಗಳನ್ನು ಸ್ಟೆಮ್ ಸೆಲ್ ಆಗಿ ಪರಿವರ್ತಿಸಿ, ನಂತರ ಅವು ಅಪ್ರಬುದ್ಧ ಮಾನವ ಅಂಡಾಣುಗಳಾಗಿ ಪರಿವರ್ತನೆ ಮಾಡಿದಂತಹದ ಪ್ರಯೋಗ ಮಾಡಿದ್ದಾರೆ. ಈಗ ಸೃಷ್ಟಿಯಾದ ಅಂಡಾಣುಗಳು ಮಗುವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮಾನವ ಸಂತಾನೋತ್ಪತ್ತಿಗೆ ಉಪಯುಕ್ತ ಮತ್ತು ಸುರಕ್ಷಿತವಾದ ಅಂಡಾಣುಗಳನ್ನು ಸೃಷ್ಟಿಸಲು ಇನ್ನೂ … Continued

ದೆಹಲಿ ಬಾಟ್ಲಾ ಎನ್‌ಕೌಂಟರ್‌ ಪ್ರಕರಣ: ಉಗ್ರ ಅರಿಜ್‌ ಖಾನಗೆ ಮರಣದಂಡನೆ

    ನವ ದೆಹಲಿ: 2008 ರ ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೆಹಲಿ ನ್ಯಾಯಾಲಯ ಸೋಮವಾರ ಉಗ್ರ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.ನ್ಯಾಯಾಲಯವು ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಹೇಳಿದೆ. ಇದಕ್ಕೂ ಮೊದಲು, ಖಾನ್ ಗೆ ಪೊಲೀಸರು … Continued

ಸದನದಲ್ಲಿ ಸಿಎಂ ಭರವಸೆ: ಪಂಚಮಸಾಲಿ ಮೀಸಲು ಹೋರಾಟ ತಾತ್ಕಾಲಿಕ ಕೈಬಿಟ್ಟ ಸ್ವಾಮೀಜಿ

ಬೆಂಗಳೂರು: ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ಕೂಡಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಇದನ್ನು ಖಚಿತ ಪಡಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸುವ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಪಂಚಮಸಾಲಿ ಮೀಸಲಾತಿ ಹೋರಾಟವನ್ನ ತಾತ್ಕಾಲಿಕವಾಗಿ ಕೈಬಿಡುತ್ತಿದ್ದೇವೆ ಎಂದರು. ವಿಜಯಪುರ … Continued