ಲೋಕಸಭೆ ಚುನಾವಣೆಯಲ್ಲಿ ದೀದಿ ವಾರಾಣಸಿ ಸ್ಪರ್ಧೆ: ಜೈ ಶ್ರೀರಾಂ ಘೋಷಣೆಯೊಂದಿಗೆ ಮೋದಿ ಆಹ್ವಾನ

2024ರಲ್ಲಿ ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಶುಕ್ರವಾರ ಹೇಳಿದ ಬೆನ್ನಲ್ಲೇ ಜೈ ಶ್ರೀರಾಮ್ ಘೋಷಣೆಯೊಂದಿಗೆ ಮಮತಾ ಬ್ಯಾನರ್ಜಿಯವರನ್ನು ತಮ್ಮ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಸನರ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಶನಿವಾರ ಮಾತನಾಡಿದ … Continued

ನಂದಿಗ್ರಾಮದಲ್ಲಿ ಸೋಲುವ ಭಯದಿಂದ ಬೇರೆಡೆ ಸ್ಪರ್ಧಿಸ್ತೀರಾ: ದೀದಿಗೆ ಮೋದಿ ಪ್ರಶ್ನೆ, ಅಲ್ಲಿ ಗೆಲ್ಲೋದು ನಾವೇ, ಬೇರೆಡೆ ಯಾಕೆ ಸ್ಪರ್ಧಿಸ್ಬೇಕು:ಟಿಎಂಸಿ ತಿರುಗೇಟು

ಕೊಲ್ಕತ್ತಾ: ದೀದಿ, ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಾಣುವ ಭಯ ನಿಮ್ಮನ್ನ ಕಾಡುತ್ತಿದ್ದು, ಮತ್ತೊಂದು ಸುರಕ್ಷಿತ ಕ್ಷೇತ್ರದಿಂದ ನಾಮಪತ್ರ ಸಲ್ಲಿಸ್ತೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ಸತ್ಯಾಂಶವಿದೆಯಾ ಎಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವ್ರನ್ನ ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ. ಜಿಲ್ಲೆಯ ಉಲುಬೇರಿಯಾದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದೀದಿ ನಿಮ್ಮ ವರ್ತನೆ ನೋಡಿದರೆ … Continued

ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಬಾಂಗ್ಲಾಕ್ಕೆ ಭಾರತದಿಂದ 12 ಲಕ್ಷ ಕೊರೊನಾ ಲಸಿಕೆ ಕೊಡುಗೆ

ಢಾಕಾ : ಭಾರತವು ಶನಿವಾರ ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆಗಳನ್ನೊಳಗೊಂಡ ಪ್ರಾತಿನಿಧಿಕ ಪೆಟ್ಟಿಗೆಯೊಂದನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಗೆ ಹಸ್ತಾಂತರಿಸಿದರು. ಅದೇ ವೇಳೆ, ಮೋದಿ 109 ಅಂಬುಲೆನ್ಸ್‌ಗಳ ಪ್ರಾತಿನಿಧಿಕ ಕೀ ಹಸೀನಾರಿಗೆ ನೀಡಿದರು. ಉಭಯ ನಾಯಕರು … Continued

ಪ.ಬಂಗಾಳ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾ ಪ್ರವಾಸ: ಚುನಾವಣಾ ಆಯೋಗಕ್ಕೆ ದೂರು ನೀಡುವೆ ಎಂದ ಮಮತಾ

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರ ವೀಸಾ ರದ್ದುಗೊಳಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪ್ರಧಾನ ಮಂತ್ರಿಗಳ ಬಾಂಗ್ಲಾದೇಶದ ಭೇಟಿಯು ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಹೇಳಿರುವ ಅವರು, ಮೋದಿ ಅವರ ಬಾಂಗ್ಲಾದೇಶದ ವೀಸಾ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು … Continued

ಮೋದಿ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಾಲ್ವರು ಸಾವು

ನವ ದೆಹಲಿ: ಇಸ್ಲಾಮಿಕ್ ಮೂಲಭೂತವಾದಿ ಗುಂಪಿನ ಹೆಫಜತ್-ಎ-ಇಸ್ಲಾಂನ ಕಾರ್ಯಕರ್ತರು ಮತ್ತು ಎಡ ಪಕ್ಷಗಳ ಸಂಯೋಜಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ ವಿರೊಧಿಸಿ ನಡೆದ ಪ್ರತಿಭಟನೆ ಪೊಲೀಸರೊಂದಿಗೆ ಘರ್ಷಣೆಗೆ ತಿರುಗಿದಾಗ ಚಿತ್ತಗಾಂಗ್‌ನಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದಾರೆ. ಮೋದಿಯವರ ನಿಗದಿತ ಭೇಟಿಯ ವಿರುದ್ಧ ಈಗಾಗಲೇ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ … Continued

ಬೇಕಾದರೆ ನನ್ನ ತಲೆ ಮೇಲೆ ಕಾಲಿಟ್ಟು ಒದೆಯಿರಿ, ಆದರೆ ಬಂಗಾಳಿ ಜನರ ಕನಸನ್ನು ಒದೆಯಲು ಬಿಡುವುದಿಲ್ಲ: ಮಮತಾ ವಿರುದ್ಧ ಮೋದಿ ವಾಗ್ದಾಳಿ

ಕೊಲ್ಕತ್ತಾ :ಬೇಕಿದ್ದರೆ ನನ್ನ ತಲೆಯ ಮೇಲೆ ನಿಮ್ಮ ಕಾಲಿಟ್ಟು ನನ್ನನ್ನು ಒದೆಯಿರಿ, ಆದರೆ, ನೀವು ಬಂಗಾಳದ ಅಭಿವೃದ್ಧಿ ಮತ್ತು ಅದರ ಜನರ ಕನಸುಗಳನ್ನು ಕಾಲಿನಿಂದ ಒದೆಯುವುದಕ್ಕೆ ನಾನು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಂಕುರಾದಲ್ಲಿ ಭಾನುವಾರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ವಿರುದ್ಧ ಮೇಲೆ ವಾಗ್ದಾಳಿ ನಡೆಸಿದರು. ಬಂಗಾಳದ ಬೀದಿಗಳಲ್ಲಿ … Continued

ಸಾರ್ವಜನಿಕ ಆಸ್ತಿ ಖಾಸಗಿಗೆ ನೀಡುವುದೇ ಮೋದಿ ಸರ್ಕಾರದ ದೊಡ್ಡ ಸಾಧನೆ: ಶಿವಸೇನಾ ವ್ಯಂಗ್ಯ

ಮುಂಬೈ: ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ಖಾಸಗೀಯವರಿಗೆ ನೀಡುತ್ತಿರುವ ಕ್ರಮವನ್ನು ಖಂಡಿಸಿದ ಶಿವಸೇನಾ ಕೇಂದ್ರ ಸರಕಾರ ಇಬ್ಬಗೆ ನಿಲುವು ಹೊಂದಿದೆ ಎಂದು ಜರಿದಿದೆ. ರೈಲ್ವೆ ಖಾಸಗೀಕರಣ ಮಾಡುವುದಿಲ್ಲ ಎಂದು ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಹೇಳಿದರೆ, ಭಾರತೀಯ ಜೀವವಿಮಾ ಸಂಸ್ಥೆಯನ್ನು ಖಾಸಗೀಯವರಿಗೆ ನೀಡುವುದಿಲ್ಲ ಎಂದು … Continued

ಕೊರೊನಾ ಎರಡನೇ ಅಲೆ ಕಾಲಘಟ್ಟದಲ್ಲಿ ನಾವು,ತಡೆಯದಿದ್ದರೆ ಮಹಾಸ್ಫೋಟವಾಗಲಿದೆ: ಪ್ರಧಾನಿ ಎಚ್ಚರಿಕೆ

ನವ ದೆಹಲಿ: ಪ್ರಧಾನಿ ಮೋದಿ ಮುಖ್ಯಮಂತ್ರಿಗಳೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹತ್ತು ಹಲವು ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕೊರೊನಾ ಎರಡನೇ ಅಲೆಗಳ ಬಗ್ಗೆ (ಕೋವಿಡ್-19 ರ) ಸೂಚನೆ ನೀಡಿದ್ದು, ಭಾರತದಲ್ಲಿ ಮಹಾರಾಷ್ಟ್ರ, ಪಂಜಾಬ್ ನಂತಹ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ … Continued

ಮೋದಿ..ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ:ಬೈಡೆನ್‌

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ನಿಮ್ಮನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಕ್ವಾಡ್ ರಾಷ್ಟ್ರಗಳ ಮೊದಲ ಸಮ್ಮೇಳನದಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸ್ವಾಗತಿಸುತ್ತಿದ್ದಂತೆ ಪ್ರಧಾನಿ ಮೋದಿ ಕೂಡ ಅವರನ್ನು ಸ್ವಾಗತಿಸಿದರು. ಕ್ವಾಡ್ ಸಮ್ಮೇಳನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನಿ ಪ್ರಧಾನಮಂತ್ರಿ … Continued