ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಸಾಧನ ಹೊಂದಿದ್ದ ಅಮೆರಿಕ ಪ್ರಜೆ ವಶಕ್ಕೆ

ನವದೆಹಲಿ: ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಡಿಕೆಯ ತಪಾಸಣೆಯ ವೇಳೆ, ನಿಷೇಧಿತ ಸ್ಯಾಟಲೈಟ್ ಟ್ರ್ಯಾಕಿಂಗ್ ಸಾಧನವನ್ನು (Satellite tracking device) ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದವರಲ್ಲಿ ಒಬ್ಬರನ್ನು ಅಮೆರಿಕದ … Continued

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು : ಇರಾನ್ ವಿರುದ್ಧದ ಯುದ್ಧಕ್ಕೆ ಸೌದಿ ಅರೇಬಿಯಾ, ಯುಎಇ ಎಂಟ್ರಿ..? ಸಂಘರ್ಷ ಮತ್ತಷ್ಟು ತೀವ್ರ ?

ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇರಾನ್ ಸಂಘರ್ಷವು ಭಾರಿ ಉಲ್ಬಣದತ್ತ ಸಾಗುತ್ತಿದ್ದು, ಕೊಲ್ಲಿಯ ಪ್ರಮುಖ ಆರ್ಥಿಕ ಶಕ್ತಿಗಳಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಯುದ್ಧದಲ್ಲಿ ಭಾಗಿಯಾಗುವ ಹಾದಿಯಲ್ಲಿವೆ ಎಂಬ ಸೂಚನೆಗಳು ಸಿಗುತ್ತಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಎರಡೂ … Continued

ಹಾರ್ಮುಜ್ ಜಲಸಂಧಿ ಬಳಿ ಇರಾನ್ ಕ್ಷಿಪಣಿ ನೆಲೆಗಳ ಮೇಲೆ 2,200 ಕೆಜಿ ತೂಕದ ‘ಬಂಕರ್ ಬಸ್ಟರ್’ ಬಾಂಬ್ ಹಾಕಿದ ಅಮೆರಿಕ

ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ  (Strait of Hormuz) ಮೇಲೆ ನಿಯಂತ್ರಣ ಪಡೆಯಲು ಅಮೆರಿಕ ಸೇನೆಯು ತನ್ನ ಮೊದಲ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಇರಾನ್‌ನ ಕರಾವಳಿ ತೀರದಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ‘ಬಂಕರ್ ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಪ್ರಕಟಿಸಿದೆ. ಅಮೆರಿಕದ … Continued

ವೀಡಿಯೊ..| ಇರಾನಿನ 16 ನೌಕೆಗಳನ್ನು ಹೊಡೆದುರುಳಿಸಿದ ಅಮೆರಿಕ ; ತೈಲ ರಫ್ತು ತಡೆಯುವ ಎಚ್ಚರಿಕೆ ನೀಡಿದ ಇರಾನ್

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಂಗಳವಾರ ಇರಾನ್‌ನ ಸ್ಫೋಟಕಗಳನ್ನು ಇರಿಸುವ (mine-laying) 16 ನೌಕೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕ ಮಿಲಿಟರಿ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ, ಈ ಭಾಗದಿಂದ ಶತ್ರು ರಾಷ್ಟ್ರಗಳಿಗೆ “ಒಂದು ಲೀಟರ್ ತೈಲವನ್ನೂ” ರಫ್ತು ಮಾಡಲು ಬಿಡುವುದಿಲ್ಲ ಎಂದು ಇರಾನ್ ಪ್ರತಿಜ್ಞೆ ಮಾಡಿದೆ. … Continued

ಪರ್ಷಿಯನ್ ಕೊಲ್ಲಿಯಲ್ಲಿ ಇರಾನಿನ ಮತ್ತೊಂದು ಯುದ್ಧನೌಕೆ ಮೇಲೆ ಅಮೆರಿಕ ದಾಳಿ ; ವಿಡಿಯೋ ವೈರಲ್

ನವದೆಹಲಿ: ಅಮೆರಿಕದ ಮಿಲಿಟರಿ ದಾಳಿಯಿಂದಾಗಿ ಇರಾನ್‌ನ ನೌಕಾಪಡೆಯ ಹಡಗೊಂದು ಸಮುದ್ರದ ಮಧ್ಯೆ ಸ್ಫೋಟಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪರ್ಷಿಯನ್ ಗಲ್ಫ್‌ನ ‘ಪೋರ್ಟ್‌ ಲೆಂಗೆಹ್’ (Bandar Lengeh) ಸಮೀಪ ಈ ಘಟನೆ ನಡೆದಿದೆ ಎಂದು ರಕ್ಷಣಾ ವ್ಯವಹಾರಗಳ ಮೇಲೆ ನಿಗಾ ಇಡುವ ಹಲವಾರು ಸಾಮಾಜಿಕ ಜಾಲತಾಣದ ಅಕೌಂಟ್ಸ್‌ಗಳು ವರದಿ ಮಾಡಿವೆ. ಈ ವಿಡಿಯೋದಲ್ಲಿರುವ ಹಡಗು ಇಸ್ಲಾಮಿಕ್ … Continued

ಅಮೆರಿಕ-ಇರಾನ್‌ ಸಂಘರ್ಷ : ಮಧ್ಯಪ್ರಾಚ್ಯಕ್ಕೆ ಸೈನ್ಯ ಜಮಾವಣೆಗೆ ಬೃಹತ್ “ವೈಮಾನಿಕ ಸೇತುವೆ” ನಿರ್ಮಿಸಿದ ಅಮೆರಿಕ

ಇರಾನ್ ಜೊತೆಗಿನ ಪರಮಾಣು ಒಪ್ಪಂದದ ಮಾತುಕತೆಗಳು ಅನಿಶ್ಚಿತತೆಯಲ್ಲಿರುವ ಬೆನ್ನಲ್ಲೇ, ಅಮೆರಿಕವು ಮಧ್ಯಪ್ರಾಚ್ಯದತ್ತ ತನ್ನ ಮಿಲಿಟರಿ ವಿಮಾನಗಳ ಸಂಚಾರವನ್ನು ತೀವ್ರಗೊಳಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಪ್ರಕಾರ, ಯುದ್ಧೋಪಕರಣಗಳು ಮತ್ತು ಸೈನಿಕರನ್ನು ಹೊತ್ತ ವಿಮಾನಗಳು ನಿರಂತರವಾಗಿ ಈ ಪ್ರದೇಶದತ್ತ ಸಾಗುತ್ತಿವೆ. ಫ್ಲೈಟ್‌ ರಾಡಾರ್ ವಿಡಿಯೋಗಳು ಅಮೆರಿಕದ ನೆಲೆಗಳಿಂದ ಹೊರಟ ಫೈಟರ್ ಜೆಟ್ ಮತ್ತು ಟ್ಯಾಂಕರ್ ವಿಮಾನಗಳು ಅಟ್ಲಾಂಟಿಕ್ ಸಾಗರ, … Continued

ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ವಿದ್ಯಾವಂತ ಧಾರ್ಮಿಕ ಸಮುದಾಯ…

ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಧಾರ್ಮಿಕ ಸಮುದಾಯಗಳ ಪೈಕಿ ಹಿಂದೂಗಳು ಅತ್ಯಂತ ಹೆಚ್ಚು ವಿದ್ಯಾವಂತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ ‘ಪ್ಯೂ ರಿಸರ್ಚ್ ಸೆಂಟರ್’ (Pew Research Center) ನಡೆಸಿದ ಇತ್ತೀಚಿನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ (Religious Landscape Study) ಈ ಕುತೂಹಲಕಾರಿ ಮತ್ತು ಹೆಮ್ಮೆಯ ವಿಚಾರವನ್ನು ಹೊರಹಾಕಿದೆ. ಈ ಸಮೀಕ್ಷೆಯ ಪ್ರಕಾರ, ಅಮೆರಿಕಾದಲ್ಲಿ ಯಹೂದಿಗಳಿಗಿಂತಲೂ ಹಿಂದೂಗಳೇ … Continued

ವೀಡಿಯೊ | ನಮ್ಮನ್ನು ‘ಟಾಯ್ಲೆಟ್ ಪೇಪರ್’ ನಂತೆ ಬಳಸಿ ಎಸೆದ ಅಮೆರಿಕ : ದೊಡ್ಡಣ್ಣನ ವಿರುದ್ಧ ಉರಿದುಬಿದ್ದ ಪಾಕ್ ರಕ್ಷಣಾ ಸಚಿವ…!

ಇಸ್ಲಾಮಾಬಾದ್: ಅಮೆರಿಕದ ಜೊತೆಗಿನ ಪಾಕಿಸ್ತಾನದ ಹಿಂದಿನ ಸಂಬಂಧಗಳ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅತ್ಯಂತ ಕಠಿಣ ಮಾತುಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನವನ್ನು “ದುರುಪಯೋಗಪಡಿಸಿಕೊಂಡಿದೆ” ಮತ್ತು ಉದ್ದೇಶ ಈಡೇರಿದ ನಂತರ ನಮ್ಮನ್ನು “ಟಾಯ್ಲೆಟ್ ಪೇಪರ್‌ನಂತೆ ಬಳಸಿ ಎಸೆದಿದೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ … Continued

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿವಾಸದ ಮೇಲೆ ದಾಳಿ: ಓರ್ವ ವಶಕ್ಕೆ

ವಾಷಿಂಗ್ಟನ್ : ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಓಹಿಯೋದಲ್ಲಿರುವ ನಿವಾಸದ ಮೇಲೆ ಸೋಮವಾರ ದಾಳಿ ನಡೆದಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ವ್ಯಾನ್ಸ್ ಅವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿರುವುದು ಕಂಡುಬಂದಿದೆ. ಆದರೆ, ಈ ದಾಳಿಯ ಹಿಂದಿನ … Continued

ಅಮೆರಿಕದ ಸ್ಯಾನ್ ಕಾರ್ಲೋಸ್ ನಗರದ ನೂತನ ಮೇಯರ್ ಆಗಿ ಭಾರತೀಯ ಮೂಲದ ಪ್ರಣೀತಾ ವೆಂಕಟೇಶ ಆಯ್ಕೆ

ಕ್ಯಾಲಿಫೋರ್ನಿಯಾ (ಅಮೆರಿಕ) : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಕಾರ್ಲೋಸ್ ನಗರದ ನೂತನ ಮೇಯರ್ ಆಗಿ ಭಾರತೀಯ ಮೂಲದ ಪ್ರಣೀತಾ ವೆಂಕಟೇಶ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಅವರು ಈ ನಗರದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎನಿಸಿಕೊಂಡಿದ್ದಾರೆ ಮತ್ತು ಈ ಸ್ಥಾನಕ್ಕೇರಿದ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು … Continued