ಟ್ರಂಪ್ ಪಾಕಿಸ್ತಾನಕ್ಕೆ ಭೇಟಿ ನೀಡಲ್ಲ ಎಂದು ಶ್ವೇತಭವನ ಸ್ಪಷ್ಟನೆ ; ಸುಳ್ಳು ಸುದ್ದಿ ಪ್ರಸಾರ ಮಾಡಿ ಕ್ಷಮೆಯಾಚಿಸಿದ ಪಾಕ್‌ ಸುದ್ದಿ ವಾಹಿನಿಗಳು…!

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಪಾಕಿಸ್ತಾನದ ಟಿವಿ ಮಾಧ್ಯಮಗಳು ಜಾಗತಿಕವಾಗಿ ಮುಜುಗರ ಎದುರಿಸಬೇಕಾಯಿತು. ನಂತರ ಪಾಕಿಸ್ತಾನದ ಎರಡು ಪ್ರಮುಖ ಟಿವಿ ಸುದ್ದಿ ವಾಹಿನಿಗಳು ವರದಿಗಳನ್ನು ಹಿಂತೆಗೆದುಕೊಂಡವು, ಅವುಗಳಲ್ಲಿ ಒಂದು ಟಿವಿ ಸುದ್ದಿವಾಹಿನಿ ಕ್ಷಮೆಯಾಚಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಮಾ ಟಿವಿ, ಜಿಯೋ … Continued

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೇರಿ 8 ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಅಮೆರಿಕದ ಎಫ್‌ ಬಿಐ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ (United States) ಗ್ಯಾಂಗ್‌ಗೆ ಸಂಬಂಧಿತ ಅಪಹರಣ (Kidnapping) ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ (Indian-Origin ) ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಬಟಾಲಾ ನಿಷೇಧಿತ ಭಯೋತ್ಪಾದಕ ಸಂಘಟನೆ … Continued

ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಹೊಸ ಪಕ್ಷ ಘೋಷಿಸಿದ ಎಲೋನ್‌ ಮಸ್ಕ್‌…

ವಾಷಿಂಗ್ಟನ್‌ : ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರು ಶನಿವಾರ ‘ಅಮೇರಿಕಾ ಪಾರ್ಟಿ’ ಎಂಬ ಹೆಸರಿನ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ. ಸಾಮಾಜಿಕ ವೇದಿಕೆ X ನಲ್ಲಿ ತಾವು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಾರ್ವಜನಿಕ ತಿಕ್ಕಾಟದ ನಂತರ ಈ ಘೋಷಣೆ … Continued

ವೀಡಿಯೊ…| ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ; ಡಾಕ್ ಮಾಡಿದ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ

ನವದೆಹಲಿ: ಆಕ್ಸಿಯಮ್-4 ಮಿಷನ್‌ ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿರುವ ಬಾಹ್ಯಾಕಾಶ ನೌಕೆ ಡ್ರ್ಯಾಗನ್ ಕ್ಯಾಪ್ಸುಲ್ ಗುರುವಾರ ಸಂಜೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಡಾಕ್ ಮಾಡಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇದು 28 ​​ಗಂಟೆಗಳ ಹಾರಾಟವನ್ನು ಪೂರ್ಣಗೊಳಿಸಿದ ನಂತರ ಅದು ಉತ್ತರ ಅಟ್ಲಾಂಟಿಕ್ ಮಹಾಸಾಗರದಿಂದ 424 ಕಿಮೀ … Continued

ಅಮೆರಿಕ ದಾಳಿಯಲ್ಲಿ ತನ್ನ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ಒಪ್ಪಿಕೊಂಡ ಇರಾನ್‌

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು ಬುಧವಾರ, ಅಮೆರಿಕದ ದಾಳಿಯಿಂದ ದೇಶದ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ದೃಢಪಡಿಸಿದ್ದಾರೆ. ಅಲ್ ಜಜೀರಾ ಟಿವಿ ಜೊತೆ ಮಾತನಾಡಿದ ಬಘೈ ಅವರು, ಈ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಆದರೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿಕೊಂಡು ಅಮೆರಿಕದ ಬಿ -2 ಬಾಂಬರ್‌ಗಳು ಭಾನುವಾರ ನಡೆಸಿದ … Continued

ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ…

ನಾಲ್ಕು ದಿನಗಳ ಹಿಂದೆ ಇರಾನಿನ ಮೂರು ಕೇಂದ್ರ ಪರಮಾಣು ಕೇಂದ್ರಗಳ ಮೇಲೆ ಅಮೆರಿಕದ “ಬಂಕರ್ ಬಸ್ಟರ್” ಬಾಂಬ್‌ ದಾಳಿಯ ನಂತರ, ಗರಿಷ್ಠ 10 ಪರಮಾಣು ಬಾಂಬ್‌ಗಳನ್ನು ನಿರ್ಮಿಸಲು ಸಾಕಾಗುವಷ್ಟು, ಶೇಕಡಾ 60 ರಷ್ಟು ಪುಷ್ಟೀಕರಿಸಿದ ಯುರೇನಿಯಂನ 400 ಕಿಲೋಗ್ರಾಂಗಳಷ್ಟು ಸಂಗ್ರಹವು ಕಾಣೆಯಾಗಿದೆ. ಕಾಣೆಯಾದ ಯುರೇನಿಯಂ ಇನ್ನೂ ಇದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕದ … Continued

ವೀಡಿಯೊ…| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ…: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

ಅಮೆರಿಕದ ವಾಯು ಪ್ರಾಬಲ್ಯದ ಸಂಕೇತವಾದ B-2 ಬಾಂಬರ್, ಇರಾನಿನ ಪರಮಾಣು ತಾಣಗಳನ್ನು ನಾಶಮಾಡಲು ಮತ್ತೊಮ್ಮೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಇವುಗಳು ಅಮೆರಿಕದ ಮಿಸೌರಿಯಲ್ಲಿರುವ ವೈಟ್‌ಮ್ಯಾನ್ ವಾಯುಪಡೆಯ ನೆಲೆಯಿಂದ ಹಾರಿದವು, ಆಕಾಶದಲ್ಲಿ ಹಲವಾರು ಬಾರಿ ಇಂಧನ ತುಂಬಿಸಿಕೊಂಡವು, ಪತ್ತೆಯಾಗದ ಗುರುಗಳ ಮೇಲೆ ನಿಖರವಾಗಿ ದಾಳಿ ನಡೆಸಿದವು. ಆಪರೇಷನ್ ಮಿಡ್‌ನೈಟ್ ಹ್ಯಾಮರ್ B-2 ಸ್ಪಿರಿಟ್‌ 2001 ರಿಂದ ಹಾರಿದ … Continued

ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ಅಮೆರಿಕವು ಇರಾನಿನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಬಿ -2 ಬಾಂಬರ್‌ಗಳು ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಗೆ ಹಿಂತಿರುಗುತ್ತಿರುವ ವೀಡಿಯೊವನ್ನು ಸೋಮವಾರ ಅಮೆರಿಕದ ಶ್ವೇತಭವನ ಹಂಚಿಕೊಂಡಿದೆ. ಒಂದು ನಿಮಿಷದ ದೃಶ್ಯಾವಳಿಯು ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಒಂದಾದ ಬಿ -2 ಬಾಂಬರ್ … Continued

ಇರಾನ್‌-ಇಸ್ರೇಲ್‌ ಯುದ್ಧದಲ್ಲಿ ಅಮೆರಿಕ ಎಂಟ್ರಿ ; ಇರಾನಿನ 3 ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಾಟಕೀಯ ಏರಿಕೆಯಲ್ಲಿ, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕವು “ಅತ್ಯಂತ ಯಶಸ್ವಿ ದಾಳಿ”ಯನ್ನು ಪೂರ್ಣಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ (ಸ್ಥಳೀಯ ಸಮಯ) ಪ್ರಕಟಿಸಿದ್ದಾರೆ. ಅಮೆರಿಕದ ಸಂಭಾವ್ಯ ದಾಳಿಗಳ ಮೊದಲು ನಿರ್ಧರಿಸಲು ಇರಾನ್‌ಗೆ ಎರಡು ವಾರಗಳ “ಗರಿಷ್ಠ” ಕಾಲಾವಕಾಶ ನೀಡುವ ಟ್ರಂಪ್ … Continued

ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, … Continued