ವೀಡಿಯೊ | ರಾಮನವಮಿಯಂದು ಅಯೋಧ್ಯೆ ರಾಮಂದಿರದಲ್ಲಿ ರಾಮಲಲ್ಲಾನ ಹಣೆಗೆ ಸ್ಪರ್ಷಿಸಿದ ʼಸೂರ್ಯ ತಿಲಕʼ : ವೀಕ್ಷಿಸಿ

ಅಯೋಧ್ಯಾ : ಇಂದು ರಾಮನವಮಿಯ ಶುಭ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪವಿತ್ರ ನಗರವಾದ ಅಯೋಧ್ಯೆ ರಾಮಮಂದಿರವು ರಾಮ ಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವು ನೇರವಾಗಿ ಬೀಳುವ ‘ಸೂರ್ಯ ತಿಲಕ’ ಎಂದು ಕರೆಯಲ್ಪಡುವ ವಿದ್ಯಮಾನದ ಒಂದು ದೈವಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ಸಾಂಕೇತಿಕವಾಗಿ ಭಗವಾನ್ ರಾಮನ ಜನ್ಮವನ್ನು ಆಚರಿಸಿತು. ಅಯೋಧ್ಯೆಯ ರಾಮಮಂದಿರದಲ್ಲಿ ಪುರೋಹಿತರು ರಾಮಲಲ್ಲಾನಿಗೆ … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ; ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ

ಬರೇಲಿ : ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದನ್ನು ಸ್ವಾಗತಿಸಿದ್ದಾರೆ. ಇದು ಬಡ ಹಾಗೂ ಹಿಂದುಳಿದ ಮುಸ್ಲಿಮರಿಗೆ ಗಮನಾರ್ಹ ಆರ್ಥಿಕ ಲಾಭ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮಸೂದೆಯ ಪರವಾಗಿ ಮತ ಚಲಾಯಿಸಿದ ಎಲ್ಲಾ ಲೋಕಸಭಾ ಸದಸ್ಯರಿಗೆ ನಾನು … Continued

ವೀಡಿಯೊ…| 14ನೇ ಮಗುವಿಗೆ ಜನ್ಮ ನೀಡಿದ 50 ವರ್ಷದ ಮಹಿಳೆ…! ಆಂಬುಲೆನ್ಸ್‌ ನಲ್ಲಿ ಹೆರಿಗೆ

ಹಾಪುರ: ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 14ನೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. 50 ವರ್ಷದ ಗರ್ಭಿಣಿ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿದ್ದಾಗ ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಇಮಾಮುದ್ದೀನ್ ಎಂಬ ವ್ಯಕ್ತಿಯ ಪತ್ನಿ ಗುಡಿಯಾ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ತನ್ನ 14 ನೇ ಮಗುವನ್ನು ಸ್ವಾಗತಿಸಿದರು. … Continued

ಪತ್ನಿ, ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ ಬಿಜೆಪಿ ನಾಯಕ, ಇಬ್ಬರು ಮಕ್ಕಳು ಸಾವು

ಸಹರಾನ್ಪುರ: ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಬಿಜೆಪಿ ಮುಖಂಡ ಯೋಗೇಶ ರೋಹಿಲ್ಲಾ ಅವರು ಪತ್ನಿ ಮತ್ತು ಮೂವರು ಮಕ್ಕಳಿಗೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಹರಾನಪುರ ಜಿಲ್ಲೆಯ ಗಂಗೋಹ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗತೇಡ ಗ್ರಾಮದಲ್ಲಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಅವರ ಮಗ ಮತ್ತು 11 ವರ್ಷದ … Continued

“ಪಾಪಾ ಡ್ರಮ್ ಒಳಗಿದ್ದಾರೆ…” : ತಾಯಿಯಿಂದಲೇ ನಡೆದ ತಂದೆಯ ಭೀಕರ ಹತ್ಯೆಯನ್ನು ಬಯಲು ಮಾಡಿದ 6 ವರ್ಷದ ಮಗಳು…!

ಮೀರತ್ :  ಉತ್ತರಪ್ರದೇಶದ ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆ ಪ್ರಕರಣ ದೇಶಾದ್ಯಂತ ದಿಗ್ಭ್ರಮೆಗೆ ಕಾರಣವಾಗಿದೆ. ಪ್ರೀತಿಸಿ, ಮದುವೆಯಾದವಳಿಗಾಗಿ ಕುಟುಂಬದವರಿಂದ ದೂರವಾಗಿದ್ದ ಸೌರಭ್ ಕೊನೆಗೆ ತಾನು ಪ್ರೀತಿಸಿದವಳಿಂದಲೇ ಹತ್ಯೆಯಾಗಿದ್ದ. ನಂತರ ಆತನ ಶವವನ್ನು ಹದಿನೈದು ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್‌ನಿಂದ ಕಾಂಕ್ರೀಟ್‌ ಹಾಕಿ ಮುಚ್ಚಲಾಗಿತ್ತು. ಆದರೂ ಈ ಕೊಲೆ ಬಯಲಾಗಿದೆ. ಹಾಗೂ … Continued

ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಬೆಕ್ಕು ಅಡ್ಡ ಬಂತೆಂದು ಅದನ್ನು ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ-ಇತರರು….!

ನವದೆಹಲಿ: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ತಾವು ಹೋಗುತ್ತಿದ್ದ ಬೈಕ್‌ ದಾರಿಯಲ್ಲಿ ಬೆಕ್ಕು ಅಡ್ಡಬಂದು ದಾಟಿದೆ ಎಂದು ಕೋಪಗೊಂಡ ಮಹಿಳೆ ಮತ್ತು ಆಕೆಯ ಸ್ನೇಹಿತರು ಅದನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ. ಬೆಕ್ಕನ್ನು ಜೀವಂತವಾಗಿ ಸೆರೆಹಿಡಿದು ಸುಟ್ಟು ಹಾಕಿರುವ ಮಹಿಳೆ ಮತ್ತು ಆಕೆಯ ಸ್ನೇಹಿತರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ … Continued

ವಿಷಕಾರಿ ಇಂಜೆಕ್ಷನ್ ನೀಡಿ ಹಿರಿಯ ಬಿಜೆಪಿ ನಾಯಕನ ಹತ್ಯೆ….!?

ಸಂಭಲ್‌ : ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಬಿಜೆಪಿಯ ಹಿರಿಯ ನಾಯಕರೊಬ್ಬರು ಸೋಮವಾರ “ನಿಗೂಢ ರೀತಿಯಲ್ಲಿ” ಸಾವಿಗೀಡಾಗಿದ್ದಾರೆ. ಅವರನ್ನು ವಿಷಪೂರಿತ ಚುಚ್ಚುಮದ್ದಿನ ಮೂಲಕ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಹೊರಬಿದ್ದಿವೆ. ವರದಿಗಳ ಪ್ರಕಾರ, ಮೃತ ಬಿಜೆಪಿ ನಾಯಕ ಗುಲ್ಫಾಮ್ ಸಿಂಗ್ ಯಾದವ್ (60) ಮಧ್ಯಾಹ್ನ 1 ಗಂಟೆ ಸುಮಾರಿಗೆ ದಫ್ತಾರಾ ಗ್ರಾಮದ … Continued

ಮದುವೆಯ ಮೊದಲ ರಾತ್ರಿಯೇ ಶವವಾಗಿ ಪತ್ತೆಯಾದ ನವದಂಪತಿ…!

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯ ಮೊದಲ ರಾತ್ರಿಯಂದು ನವದಂಪತಿ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಆಘಾತಕಾರಿ ಘಟನೆಯಿಂದಾಗಿ ಮದುವೆಯ ಸಂಭ್ರಮವು ಶೋಕಾಚರಣೆಯಾಗಿ ಮಾರ್ಪಟ್ಟಿತು. ಅಯೋಧ್ಯೆ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ಪ್ರದೀಪ ಎಂಬವರು ಶನಿವಾರ ಶಿವಾನಿ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು … Continued

ಪ್ರಯಾಗರಾಜ್‌ ತ್ರಿವೇಣಿ ಸಂಗಮ ನೀರು ಸ್ನಾನಕ್ಕೆ ಯೋಗ್ಯವಲ್ಲ ; ಸಿಪಿಸಿಬಿ ವರದಿಯಲ್ಲಿ ಬಹಿರಂಗ

ಪ್ರಯಾಗರಾಜ್‌ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ ಮಂಗಳವಾರ 55 ಕೋಟಿ ದಾಟಿದ್ದು, ಹೊಸ ದಾಖಲೆ ಬರೆದಿದೆ. ಆದರೆ ಇದೇವೇಳೆ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದ ಹಲವೆಡೆ ನದಿಯ ನೀರು ಕಲುಷಿತವಾಗಿದ್ದು, ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿಯೊಂದು ಬಹಿರಂಗಪಡಿಸಿದೆ. ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ನ ಹಲವಾರು ಸ್ಥಳಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದ ಫೀಕಲ್ ಕೋಲಿಫಾರ್ಮ್‌ನಿಂದಾಗಿ … Continued

5 ವರ್ಷದ ಮಗಳು ಬಿಡಿಸಿದ ಚಿತ್ರದಿಂದ ಬಯಲಾಯ್ತು ಆತ್ಮಹತ್ಯೆ ಎಂದು ನಂಬಿದ್ದ ಆಕೆಯ ತಾಯಿಯ ಕೊಲೆ ರಹಸ್ಯ….!

ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿವಾಹಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಬಭಾವಿಸಲಾಗಿದ್ದ ಈ ಘಟನೆಯನ್ನು ಇದು ಕೊಲೆ ಎಂದು ಅವರ ಐದು ವರ್ಷದ ಮಗಳು ಪೇಂಟಿಂಗ್‌ ಮೂಲಕ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವವನ್ನು ಪ್ರಾರಂಭದಲ್ಲಿ ಎಲ್ಲರೂ ಆತ್ಮಹತ್ಯೆಯೆಂದೇ ಭಾವಿಸಿದ್ದರು.. ಆದರೆ ಆ ದಂಪತಿಯ … Continued