ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ … Continued

ʼಹೈ ಹೀಲ್ಸ್‌ʼ ಚಪ್ಪಲಿ ಕೊಡಿಸಿಲ್ಲವೆಂದು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹೆಂಡತಿ…!

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಅಸಮಾಮಾನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ಎತ್ತರದ ಹಿಮ್ಮಡಿಯ (ಹೈ ಹೀಲ್ಸ್‌) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ…! ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನ ಹಂತಕ್ಕೆ ತಲುಪಿದ್ದು, ಇಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ … Continued

ಮಹಾಕುಂಭ ಮೇಳ 2025 : ಪ್ರಯಾಗರಾಜ್‌ ನಲ್ಲಿದ್ದಾರೆ ಈಗ ಸುಮಾರು 10 ಕೋಟಿ ಭಕ್ತರು…!

ಪ್ರಯಾಗರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾದ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ “ನಿಯಂತ್ರಣದಲ್ಲಿದೆ” ಮತ್ತು ‘ಮೌನಿ ಅಮಾವಾಸ್ಯೆ’ ಸಂದರ್ಭದಲ್ಲಿ ‘ಅಮೃತ ಸ್ನಾನ’ (ರಾಯಲ್ ಟಬ್) ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ. “ಘಟನೆಯು ಮಂಗಳವಾರ ಮಧ್ಯರಾತ್ರಿ 1 ಗಂಟೆ ಮತ್ತು 2 … Continued

ವೀಡಿಯೊ..| ನಡುರಸ್ತೆಯಲ್ಲೇ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ ; ವೀಡಿಯೊ ವೈರಲ್‌ ಆದ ನಂತರ ದೂರು ದಾಖಲಿಸಿದ ಚಾಲಕ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣ ದರದ ಬಗ್ಗೆ ಉಂಟಾದ ಜಗಳದ ನಂತರ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಥಳಿಸಿದ ವೀಡಿಯೊ ವೈರಲ್ ಆಗಿದೆ. ಪ್ರಿಯಾಂಶಿ ಪಾಂಡೆ ಎಂಬ ಯುವತಿ ಆಟೋ ಡ್ರೈವರ್ ವಿಮಲೇಶಕುಮಾರ ಶುಕ್ಲಾ ಎಂಬವರನ್ನು ಬೈಯುತ್ತ ಸೀಟಿನಿಂದ ಎಳೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೈಮುಗಿದು ಬೇಡಿಕೊಂಡರೂ ಆಕೆ ಆತನಿಗೆ ಥಳಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆಟೋ … Continued

ಮಹಾಕುಂಭ 2025 | ಜ.16 ರಂದು 10 ದೇಶಗಳ 21 ಪ್ರತಿನಿಧಿಗಳಿಂದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ಪ್ರಯಾಗರಾಜ್‌ : 10 ದೇಶಗಳ 21 ಪ್ರತಿನಿಧಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ನಿಯೋಗವು ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಸಿದ್ಧವಾಗಿದೆ. ಜಾಗತಿಕ ಗಮನವನ್ನು ಸೆಳೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಸಂಯೋಜಿಸಲ್ಪಟ್ಟ ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಫಿಜಿ, ಫಿನ್‌ಲ್ಯಾಂಡ್, ಗಯಾನಾ, ಮಲೇಷ್ಯಾ, ಮಾರಿಷಸ್, ಸಿಂಗಾಪುರ, ದಕ್ಷಿಣ … Continued

ವೀಡಿಯೊ…| ಹೆಲ್ಮೆಟ್ ಇಲ್ಲದ್ದಕ್ಕೆ ಪೆಟ್ರೋಲ್ ಕೊಡಲ್ಲ ಎಂದ ಪೆಟ್ರೋಲ್‌ ಪಂಪ್‌ ಸಿಬ್ಬಂದಿ ; ಪಂಪ್‌ ಸಿಬ್ಬಂದಿಗೆ ʼಕತ್ತಲುʼ ಶಿಕ್ಷೆ ನೀಡಿದ ವ್ಯಕ್ತಿ…!

ಲಕ್ನೋ : ‘ಹೆಲ್ಮೆಟ್ ಇಲ್ಲ, ಪೆಟ್ರೋಲ್ ಇಲ್ಲ’ ನಿಯಮವನ್ನು ಅನುಸರಿಸಲು ಪೆಟ್ರೋಲ್‌ ಪಂಪ್ ಸಿಬ್ಬಂದಿ ಹೇಳಿದ ನಂತರ ಇದು ಯಾರೂ ಊಹಿಸಿರದ ಪರಿಣಾಮಗಳಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಹೆಲ್ಮೆಟ್‌ ಇಲ್ಲದ ಕಾರಣಕ್ಕೆ ಪೆಟ್ರೋಲ್‌ ಪಂಪ್‌ನವರು ಇಂಧನ ನಿರಾಕರಿಸಿದ ನಂತರ ವಿದ್ಯುತ್‌ ಇಲಾಖೆಯ ನೌಕರನಾಗಿದ್ದ ಬೈಕ್ ಸವಾರ … Continued

ಮಹಾಕುಂಭ 2025 : ತಲೆ ಮೇಲೆ 45 ಕಿಲೋ ತೂಕದ ರದ್ರಾಕ್ಷಿ ಸರ ಹೊತ್ತ ಸನ್ಯಾಸಿ….!

ಪ್ರಯಾಗರಾಜ್‌ : ಉತ್ತರ ಪ್ರದೇಶದ ಪ್ರಯಾಗರಾಜದ ಸಂಗಮದ ಮಹಾ ಕುಂಭ 2025 ಸೋಮವಾರದಿಂದ ಆರಂಭವಾಗಿದೆ. ಇಲ್ಲಿ ಸೇರುವ ಸಂತರು ಮತ್ತು ಭಕ್ತ ಸಾಗರದ ನಡುವೆ, ಅತೀಂದ್ರಿಯ ಮತ್ತು ತಪಸ್ವಿಗಳ ಒಂದು ಅನನ್ಯ ಸಮೂಹ ಇದೆ, ಅವರ ನಿಗೂಢ ನೋಟ ಮತ್ತು ಅಸಾಧಾರಣ ಆಚರಣೆಗಳು ಅವರನ್ನು ಧಾರ್ಮಿಕ ಉತ್ಸವದಲ್ಲಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ. ಅಂಥವರಲ್ಲಿ ರುದ್ರಾಕ್ಷ ಬಾಬಾ … Continued

ವೀಡಿಯೊ..| ಶಾಪಿಂಗ್ ಮಾಲ್‌ ಗೆ ನುಗ್ಗಿದ ಮಂಗ, ಮಹಿಳೆ ಮೇಲೆ ದಾಳಿ; ಹಿಡಿಯಲು ಹೋದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ವಾನರ..

ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ಮಾಲ್‌ನಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ದಾಳಿ ಮಾಡಿದ ನಂತರ ಗೊಂದಲ ಉಂಟಾದ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಝಾನ್ಸಿಯ ಸಿಟಿ ಕಾರ್ ಮಾಲ್‌ನಲ್ಲಿರುವ ಅಂಗಡಿಯೊಳಗೆ ಮಂಗವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಮಂಗವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದರಿಂದ ತಪ್ಪಿಸಿಕೊಳ್ಳುತ್ತ ಮಂಗವು ಎಲ್ಲೆಂದರಲ್ಲಿ ಓಡಾಡಿದೆ. ಇದ್ದಕ್ಕಿದ್ದಂತೆ ಕೋತಿ ಭಯದಿಂದ ಕುಳಿತಿದ್ದ … Continued

ದಂಪತಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ….!

ಮೀರತ್ : ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್‌  ಗಾರ್ಡನ್‌ ನಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿವೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ. ಓರ್ವ ಪುರುಷ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ … Continued

ಗಂಡ, ಆರು ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿಹೋದ ಮಹಿಳೆ…!

ಹರ್ದೋಯ್ : ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಓಡಿಹೋದ ಘಟನೆ ನಡೆದಿದೆ. ಪತಿ ರಾಜು ಅಪಹರಣದ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ ನಂತರ ಮಹಿಳೆ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ದೂರಿನಲ್ಲಿ, 45 ವರ್ಷದ … Continued