ದೆಹಲಿಯಲ್ಲಿ ಫೆ.7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧರಣಿ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲಿನ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ನಡೆಯುವ ಧರಣಿಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಅಲ್ಲದೆ, ರಾಜ್ಯದ 138 … Continued

ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ 40 ಸ್ಥಾನ ಗೆಲ್ಲುವುದು ಅನುಮಾನ: ಮಮತಾ ಬ್ಯಾನರ್ಜಿ

ಕೋಲ್ಕತ್ತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಎದುರು ಕಾಂಗ್ರೆಸ್‌ 40 ಸ್ಥಾನಗಳನ್ನು ಪಡೆಯುವ ಬಗ್ಗೆ ಅನುಮಾನವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಉಳಿಸಿಕೊಂಡಿರುವ ಬಾಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಮೂಲಕ ಸಂಚರಿಸುವ ಭಾರತ … Continued

ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದಕ್ಕೆ ದೇವೇಗೌಡ ಬೇಸರ

ನವದೆಹಲಿ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆ ವೇಳೆ ಜೆಡಿಎಸ್​ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದ್ದಾರೆ. ದೆಹಲಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೇಸರಿ ಬದಲು ನಮ್ಮ ಪಕ್ಷ ಜೆಡಿಎಸ್‌ ಶಾಲನ್ನು ಧರಿಸಬಹುದಿತ್ತು. … Continued

ಕೆಜಿಗೆ 29 ರೂ.ಗಳಂತೆ ‘ಭಾರತ ರೈಸ್’ ಅಕ್ಕಿ ಮಾರಾಟ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗಲು ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ ರೈಸ್’ ಅನ್ನು ಪ್ರತಿ ಕೆಜಿಗೆ 29 ರೂ.ಗಳಿಗೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಹಾಗೂ ಅದರ ನಿಯಂತ್ರಣದ ಭಾಗವಾಗಿ ಅಕ್ಕಿ/ಭತ್ತದ ದಾಸ್ತಾನಿನ ಬಗ್ಗೆ ಮಾಹಿತಿ ನೀಡುವಂತೆ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ. ಕಳೆದ ಒಂದು ವರ್ಷದಲ್ಲಿ ಅಕ್ಕಿ ಬೆಲೆ ಸುಮಾರು 15 ಪ್ರತಿಶತದಷ್ಟು … Continued

ಕಾಶಿ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪ್ರಾರ್ಥನೆಗೆ ಅನುಮತಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಲಕ್ನೋ: ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರಿಗೆ ಪ್ರಾರ್ಥನೆ ಮತ್ತು ಪೂಜೆ ನಡೆಸಲು ಅವಕಾಶ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ಜಾರಿಗೊಳಿಸಿದ ಪರಿಣಾಮವಾಗಿ ಜನವರಿ 17ರ ಆದೇಶಕ್ಕೆ ಈ ಸವಾಲನ್ನು ಸೇರಿಸಿ ಮುಸ್ಲಿಂ ಪಕ್ಷಕಾರರಿಗೆ (ಜಿಲ್ಲಾ … Continued

‘ಎಂದಿಗೂ ಸಹಿಸುವುದಿಲ್ಲ…’: ಸ್ವಪಕ್ಷದ ಸಂಸದ ಡಿ.ಕೆ.ಸುರೇಶ ‘ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ’ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಅವರ, ‘ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು, ಶುಕ್ರವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ದೇಶ ಒಡೆಯುವ ಬಗ್ಗೆ ಮಾತನಾಡುವವರು ಅವರು ಯಾವ ಪಕ್ಷದವರೇ ಆಗಲಿ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತಮ್ಮ ಪಕ್ಷದ ಸಂಸದ ಡಿ.ಕೆ.ಸುರೇಶ ಅವರ ವಿವಾದಾತ್ಮಕ ಹೇಳಿಕೆಗೆ … Continued

ತಮಿಳು ಸೂಪರ್‌ಸ್ಟಾರ್‌ ದಳಪತಿ ವಿಜಯ ರಾಜಕೀಯಕ್ಕೆ ಪದಾರ್ಪಣೆ : ಹೊಸ ʼರಾಜಕೀಯ ಪಕ್ಷʼ ಘೋಷಣೆ

ಚೆನ್ನೈ: ತಮಿಳು ನಟ ದಳಪತಿ ವಿಜಯ ಅವರು ಶುಕ್ರವಾರ ತಮ್ಮ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು, ‘ತಮಿಳಗ ವೆಟ್ರಿ ಕಳಗಂ’ ಹೆಸರಿನ ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಪಾರದರ್ಶಕ, ಜಾತಿ-ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ “ಮೂಲಭೂತ ರಾಜಕೀಯ ಬದಲಾವಣೆ” ಯ ಬದ್ಧತೆ ತಮ್ಮ ರಾಜಕೀಯ ಪಕ್ಷದ ಉದ್ದೇಶ ಎಂದು ಹೇಳಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ … Continued

ಮೃತ ವ್ಯಕ್ತಿಯ ಕ್ಯಾಬಿನೆಟ್‌ನಲ್ಲಿ ಪತ್ತೆಯಾದ 285 ವರ್ಷಗಳಷ್ಟು ಹಳೆಯ ನಿಂಬೆಯ ಹಣ್ಣು ₹1.48 ಲಕ್ಷಕ್ಕೆ ಮಾರಾಟ..! ಏನಿದರ ವಿಶೇಷತೆ…?

285 ವರ್ಷ ಹಳೆಯ ನಿಂಬೆಹಣ್ಣು ಬರೋಬ್ಬರಿ £1,416 (ಅಂದಾಜು ₹1,48,000)ಗಳಿಗೆ ಹರಾಜಾಗಿದೆ. ಈ ವಿಶಿಷ್ಟವಾದ ಒಣಗಿದ ನಿಂಬೆ ಹಣ್ಣು 19ನೇ ಶತಮಾನದ ಕ್ಯಾಬಿನೆಟ್‌ (ಸಣ್ಣ ಕಪಾಟು)ನಲ್ಲಿ ಪತ್ತೆಯಾಗಿದೆ. ಇದನ್ನು ದಿವಂಗತ ಚಿಕ್ಕಪ್ಪನಿಂದ ಆನುವಂಶಿಕವಾಗಿ ಕ್ಯಾಬಿನೆಟ್‌ ಪಡೆದ ಕುಟುಂಬವು ಅದನ್ನು ಬ್ರಿಟನ್‌(UK)ನ ಶ್ರಾಪ್‌ಶೈರ್‌ನಲ್ಲಿರುವ ಬ್ರೆಟೆಲ್ಸ್ ನಲ್ಲಿ ಹರಾಜು ಮಾಡಲು ನೀಡಿತ್ತು. ಸ್ಪೆಷಲಿಸ್ಟ್, ಮಾರಾಟಕ್ಕೆಂದು ಕ್ಯಾಬಿನೆಟ್ ಅನ್ನು ನಿಖರವಾಗಿ … Continued

ತಾನು ಸಾಕಿದ ನಾಯಿ, ಬೆಕ್ಕಿಗೆ ₹23 ಕೋಟಿ ಮೌಲ್ಯದ ಆಸ್ತಿ ಬರೆದ ಮಹಿಳೆ…! ಯಾಕೆಂದರೆ….

ಶಾಂಘೈ: ಚೀನಾದಲ್ಲಿ ವಯಸ್ಸಾದ ಮಹಿಳೆಯೊಬ್ಬರು ತನ್ನ 20 ಮಿಲಿಯನ್ ಯುವಾನ್ (23.58 ಕೋಟಿ ರೂ.) ಸಂಪತ್ತನ್ನು ತನ್ನ ಬೆಕ್ಕು ಮತ್ತು ನಾಯಿಗಳ ಹೆಸರಿಗೆ ಮಾಡಿದ್ದಾರೆ…! ಅವರು ತನ್ನ ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳದ ಸ್ವಾರ್ಥಿ ಮಕ್ಕಳಿಗೆ ಏನನ್ನೂ ಕೊಡಲಿಲ್ಲ. ಶಾಂಘೈನ ಲಿಯು ಎಂಬವರು, ಕೆಲವು ವರ್ಷಗಳ ಹಿಂದೆ ತನ್ನ ಮೂರು ಮಕ್ಕಳಿಗೆ ಎಲ್ಲವನ್ನೂ ಬಿಟ್ಟುಕೊಡುವ ಮನಸ್ಸು ಮಾಡಿದ್ದರು. … Continued

ಅಯೋಧ್ಯೆ ಬಾಲರಾಮನ ಕಣ್ತುಂಬಿಕೊಳ್ಳಲು ಭಕ್ತ ಸಾಗರ: 11 ದಿನದಲ್ಲಿ ರಾಮಮಂದಿರಕ್ಕೆ ಭೇಟಿ ನೀಡಿದವರು ಎಷ್ಟು ಗೊತ್ತಾ..?

ಅಯೋಧ್ಯಾ : ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ನಂತರ, ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಟ್ರಸ್ಟ್‌ನ ಕಚೇರಿ ಪ್ರಭಾರಿ ಪ್ರಕಾಶ ಗುಪ್ತಾ ಪ್ರಕಾರ, ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂಪಾಯಿಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಸಂಗ್ರಹವಾಗಿದೆ. ಚೆಕ್ ಮತ್ತು ಆನ್‌ಲೈನ್ ಮೂಲಕ ಪಡೆದ … Continued