ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…

ಲಕ್ನೋ :   ಕೊಲೆ-ಆತ್ಮಹತ್ಯೆಯ ಆಘಾತಕಾರಿ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿ, ತಾಯಿ ಮತ್ತು ಮೂವರು ಮಕ್ಕಳನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಲಕ್ನೋದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಸೀತಾಪುರ ಸಮೀಪದ ರಾಮಪುರ ಮಥುರಾದ ಪಲ್ಹಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 42 … Continued

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಹಾಸನ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಹಾಸನ ಬಿಜೆಪಿ ಮುಖಂಡ ಹಾಗೂ ವಕೀಲ ಡಿ. ದೇವರಾಜೇಗೌಡ ಅವರನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ನ್ಯಾಯಾಲಯವು ಶನಿವಾರ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆರೋಪಿ ದೇವರಾಜೇಗೌಡ ಅವರನ್ನು ಶನಿವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಎಸ್‌. … Continued

ಕರ್ನಾಟಕ ವಿಧಾನ ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಪರಿಷತ್‌ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪರಿಷತ್ತಿನ 6 ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಒಂದು ಸ್ಥಾನವನ್ನು ಜೆಡಿಎಸ್‌ಗೆ ನೀಡಲಾಗಿದೆ. ಈಶಾನ್ಯ ಪದವೀಧರ, ನೈರುತ್ಯ, ಬೆಂಗಳೂರು ಪದವೀಧರ, ಆಗ್ನೇಯ … Continued

ಕೆಎಎಸ್ ಅಧಿಕಾರಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ; ಕಾರಣ ನಿಗೂಢ

ಬೆಂಗಳೂರು: ಕೆಎಎಸ್ ಅಧಿಕಾರಿ ಪತ್ನಿಯಾಗಿರುವ ಹೈಕೋರ್ಟ್‌ ವಕೀಲರಾದ ಚೈತ್ರಾಗೌಡ ಮೃತದೇಹ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಕೆಎಎಸ್ ಅಧಿಕಾರಿ ಶಿವಕುಮಾರ ಅವರ ಪತ್ನಿ ಚೈತ್ರಾಗೌಡ ಅವರು ಇಂದು, ಶನಿವಾರ ಸಂಜಯ ​ನಗರದಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನ್​​ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಯಾವುದೇ ಡೆತ್​​ನೋಟ್ ಪತ್ತೆಯಾಗಿಲ್ಲ. ಹೀಗಾಗಿ … Continued

ಕುಮಟಾ: ‘ಸೌರಭ’ಕ್ಕೆ ರಜತ ಸಂಭ್ರಮ, ಮೇ 12ರಂದು ಬೆಳಿಗ್ಗೆಯಿಂದ ರಾತ್ರಿ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ

 ಕುಮಟಾ : ಸಾಂಸ್ಕೃತಿಕ ಸಂಘಟನೆ ‘ಸೌರಭ’ವು ರಜತ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಮಿತ್ತ ಮೇ 12ರಂದು ಬೆಳಿಗ್ಗೆ 7 ರಿಂದ ರಾತ್ರಿ 9ರ ವರೆಗೆ ಉತ್ತರ ಕನ್ನಡ ಜಿಲ್ಲೆಯ   ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮವನ್ನು ನಗರದ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದೆ. 12ರಂದು ಬೆಳಿಗ್ಗೆ 7 ಗಂಟೆಗೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಗಾಯಕ … Continued

ಜತ್ತ ಬಳಿ ಕ್ರೂಸರ್ ವಾಹನ ಅಪಘಾತ : ಅಥಣಿಯ ಮೂವರು ಮಹಿಳೆಯರು ಸಾವು

ಬೆಳಗಾವಿ : ಮಹಾರಾಷ್ಟ್ರದ ಜತ್ತ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಬೆಳಗಾವಿ ಅಥಣಿ ತಾಲ್ಲೂಕಿನ ಬಳ್ಳಿಗೇರಿಯ ಮೂವರು ಮಹಿಳೆಯರು ಮೃತಪಟ್ಟ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಕ್ರೂಸರ್ ವಾಹನದ ಎಡಬದಿಯ ಟೈಯರ್‌ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತರನ್ನು ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ … Continued

ವೀಡಿಯೊಗಳು…| ದಿಗ್ಭ್ರಮೆಗೊಳಿಸುವ ಅಪರೂಪದ ವರ್ಣರಂಜಿತ ಬೆಳಕಿನ ಪ್ರದರ್ಶನಕ್ಕೆ ಕಾರಣವಾಯ್ತು ʼಪ್ರಬಲʼ ಸೌರ ಚಂಡಮಾರುತ : ವೀಕ್ಷಿಸಿ

‘ತೀವ್ರ’ ಸೌರ ಚಂಡಮಾರುತವು ಭೂಮಿಯನ್ನು ಅಪ್ಪಳಿಸಿದೆ. ಇದು ವಿದ್ಯುತ್‌ ಮತ್ತು ದೂರ ಸಂಪರ್ಕಗಳಿಗೆ ಅಡ್ಡಿಪಡಿಸುವ ಬಗ್ಗೆ ಆತಂಕ ಎದುರಾಗಿದೆ. ಅಸಾಧಾರಣವಾಗಿ ಪ್ರಬಲವಾದ ಸೌರ ಚಂಡಮಾರುತವು ಟ್ಯಾಸ್ಮೆನಿಯಾದಿಂದ ಬ್ರಿಟನ್ ಮತ್ತು ಕೆನಡಾದಿಂದ ಅಮೆರಿಕದ ವರೆಗೆ ಆಕಾಶದಲ್ಲಿ ಅದ್ಭುತವಾದ ಬೆಳಕಿನ ಪ್ರದರ್ಶನಗಳನ್ನು ಮಾಡಿದೆ. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದ ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತವು ಭೂಮಿಗೆ ಅಪ್ಪಳಿಸಿದ ನಂತರ … Continued

ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಭಾರತ ಬಣ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರವನ್ನು ಶುದ್ಧೀಕರಿಸಲಾಗುತ್ತದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಶುಕ್ರವಾರ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಈ ಕುರಿತು ಮಾತನಾಡಿದ ನಾನಾ ಪಟೋಲೆ, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಅಧಿಕಾರಕ್ಕೇರಿದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಶುದ್ಧೀಕರಿಸಲಾಗುತ್ತದೆ. ಅಲ್ಲಿರುವುದು … Continued

ವೀಡಿಯೊ..| ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರ ಹೃದಯಗೆದ್ದ ವಿಶೇಷಚೇತನ ಸಮಾಜ ಸೇವಕ ಬೆಂಗಳೂರಿನ ಡಾ.ರಾಜಣ್ಣ ; ವೀಡಿಯೊ ಭಾರೀ ವೈರಲ್‌

ನವದೆಹಲಿ: ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ವಿಶೇಷಚೇತನ ಸಮಾಜ ಸೇವಕ ಡಾ.ಕೆ.ಎಸ್.ರಾಜಣ್ಣ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಭಾರೀ ಕರತಾಡನದ ಮಧ್ಯೆ ಅವರು ಪ್ರಶ್ತಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ಕೆ.ಎಸ್.ರಾಜಣ್ಣ ಅವರು ತಮ್ಮ ಬಾಲ್ಯದಲ್ಲಿ ಪೋಲಿಯೋಗೆ ತುತ್ತಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು … Continued

ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್​ಎಸ್​ಎಲ್​ಸಿ ಫಲಿತಾಂಶ ಹೊರಬಿದ್ದ ಮೇ 9ರಂದು ಆರೋಪಿ ವಿದ್ಯಾರ್ಥಿನಿ ಮೀನಾ (16) ರುಂಡ ಕತ್ತರಿಸಿ ರುಂಡದ ಸಮೇತ ಪರಾರಿಯಾಗಿದ್ದ. ಆತನ ಸ್ವಗ್ರಾಮ ಹಮ್ಮಿಯಾಲದ ಸಮೀಪದ ಕಾಡಿನಲ್ಲಿ ಅಡಗಿಕೊಂಡಿದ್ದ ಆರೋಪಿ ಪ್ರಕಾಶ (32) ನನ್ನು … Continued