ವೀಡಿಯೊಗಳು…| ಪುಣೆ : ಇಂದ್ರಯಾಣಿ ನದಿ ಪ್ರವಾಸಿ ಸೇತುವೆ ಕುಸಿತ ; ಹಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಪುಣೆ: ಭಾನುವಾರ ಮಧ್ಯಾಹ್ನ ಪುಣೆ ಜಿಲ್ಲೆಯ ದೇಹುವಿನ ಕುಂಡ್ಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪಾದಾಚಾರಿ ಸೇತುವೆ ಕುಸಿದು ಹಲವಾರು ಜನರು ನದಿಯ ರಭಸದ ಪ್ರವಾಹಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 3:30 ರ ಸುಮಾರಿಗೆ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವಿಗೀಡಾಗಿರುವುದು ಎಂದು ದೃಢಪಟ್ಟಿದೆ, ಆದರೆ ಇನ್ನೂ ಅನೇಕರು ಕಾಣೆಯಾಗಿದ್ದಾರೆ. … Continued

ಭಾರಿ ಮಳೆಗೆ ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ರಸ್ತೆ ಸಂಚಾರ ಬಂದ್

ಚಿಕ್ಕಮಗಳೂರು : ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತಗಳು ಸಂಭವಿಸುತ್ತಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರ ಒಂದೇ ಸ್ಥಳದಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶೃಂಗೇರಿ-ಮಂಗಳೂರು ಮಾರ್ಗದ ರಸ್ತೆ ಸಂಚಾರವನ್ನು  ಬಂದ್ ಮಾಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೆಮ್ಮಾರು ಗ್ರಾಮದ ಬಳಿ ಗುಡ್ಡ … Continued

ವೀಡಿಯೊ..| ಜಿಪ್‌ಲೈನ್ ಅಪಘಾತ: 30 ಅಡಿ ಆಳದ ಕಮರಿಗೆ ಬಿದ್ದ 12 ವರ್ಷದ ಬಾಲಕಿ

ಮನಾಲಿಯಲ್ಲಿ ಜಿಪ್‌ಲೈನ್ ಹಗ್ಗ ತುಂಡಾಗಿ 30 ಅಡಿ ಆಳದ ಕಂದಕಕ್ಕೆ ಬಿದ್ದ ನಾಗ್ಪುರದ 12 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ಆಕೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕುಟುಂಬದ ಮೂಲಗಳ ಪ್ರಕಾರ, ತ್ರಿಶಾ ಬಿಜ್ವೆ ಎಂಬ ಬಾಲಕಿ ಮನಾಲಿಯಲ್ಲಿ ತನ್ನ ಕುಟುಂಬದೊಂದಿಗೆ ರಜೆ ಕಳೆಯುತ್ತಿದ್ದಳು. ಜಿಪ್‌ಲೈನ್ ಸವಾರಿ ಮಾಡುವಾಗ … Continued

ದಾಂಡೇಲಿ | ವೃದ್ಧೆ ಮೇಲೆ ಅತ್ಯಾಚಾರ ಪ್ರಕರಣ ; ಪರಾರಿಯಾಗಿದ್ದ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ವ್ಯಾಪ್ತಿಯಲ್ಲಿ 60 ವರ್ಷದ ವೃದ್ಧೆಯ ಮೇಲೆ ನಡೆದ ಅತ್ಯಾಚಾರ ಹಾಗೂ ದರೋಡೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಾತನನ್ನು ಬಂಧಿಸಲಾಗಿದೆ ಎಂದು … Continued

ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: 7 ಮಂದಿ ಸಾವು

ಡೆಹ್ರಾಡೂನ್‌ : ಕೇದಾರನಾಥ ದೇವಸ್ಥಾನದಿಂದ ಉತ್ತರಾಖಂಡದ ಗುಪ್ತಕಾಶಿಗೆ ಹಾರುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡು ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆರ್ಯನ್ ಏವಿಯೇಷನ್ ​​ಹೆಲಿಕಾಪ್ಟರ್ 10 ನಿಮಿಷಗಳ ಪ್ರಯಾಣದ ಸಮಯದಲ್ಲಿ ಗೌರಿಕುಂಡ ಮತ್ತು ಸೋನ್‌ಪ್ರಯಾಗ್ ನಡುವೆ ಪತನಗೊಂಡಿತು. ಅಪಘಾತದಲ್ಲಿ ಪೈಲಟ್ ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ. ಈ ಘಟನೆ ಬೆಳಿಗ್ಗೆ 5:20 ಕ್ಕೆ ಸಂಭವಿಸಿದ್ದು,ಆರು ಯಾತ್ರಿಕರು … Continued

ಶಿರಸಿ | ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ: ಶಿರಸಿ- ಕುಮಟಾ ರಸ್ತೆ ಸಂಪರ್ಕ ಕಡಿತ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಸಂಪರ್ಕ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಇಂದು (ಭಾನುವಾರ) ನಸುಕಿನಲ್ಲಿ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ. ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ರ ದೇವಿಮನೆ ಘಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಹೆದ್ದಾರಿ ಮೇಲೆ ಕಲ್ಲು, ಮರಗಳು ಬಂದು … Continued

ತಿಂಗಳಿಗೆ 1.20 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು ಗುಹೆಯಲ್ಲಿ ವಾಸಿಸುತ್ತಿರುವ 35 ವರ್ಷದ ವ್ಯಕ್ತಿ..! ಮದುವೆ ಎಂಬುದು “ಸಮಯ ವ್ಯರ್ಥʼವಂತೆ..!!

ಚೀನಾದ ಸಿಚುವಾನ್ ಪ್ರಾಂತ್ಯದ 35 ವರ್ಷದ ವ್ಯಕ್ತಿ ಮಿನ್ ಹೆಂಗ್ಕೈ ಎಂಬವರು ಉದ್ಯೋಗ ಮತ್ತು ಮದುವೆ ಅರ್ಥಹೀನವೆಂದು ಭಾವಿಸಿ ಗುಹೆಯಲ್ಲಿ ಏಕಾಂತವಾಗಿ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಸಾಲಗಳನ್ನು ತೀರಿಸಲು ದಿನಕ್ಕೆ 10 ಗಂಟೆಗಳ ಕಾಲ ರೈಡ್-ಹೇಲಿಂಗ್ ಚಾಲಕನಾಗಿ ಕೆಲಸ ಮಾಡಿದ ನಂತರ, ಅವರು ತಮ್ಮ ಕೆಲಸ ತಮ್ಮ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ಕಂಡುಕೊಂಡರು. ಹೀಗಾಗಿ ಅವರು … Continued

ರಕ್ಷಣಾ ವ್ಯವಸ್ಥೆ ಭೇದಿಸಿ ಇಸ್ರೇಲ್ ರಕ್ಷಣಾ ಕೇಂದ್ರ ಕಚೇರಿಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ : ಅದು ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಕ್ಷಿಪಣಿಗಳ ದಾಳಿಯಿಂದ ರಕ್ಷಿಸುತ್ತಿದ್ದ ಐರನ್ ಡೋಮ್ ವಾಯು ರಕ್ಷಣೆಯ ವೈಫಲ್ಯದಲ್ಲಿ ಇರಾನ್ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದೆ. 24 ಗಂಟೆಗಳ ಒಳಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಎರಡು ಅಲೆಗಳ ವಾಯುದಾಳಿಯ ನಂತರ ಇರಾನ್ ಪ್ರತಿದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ … Continued

ವೀಡಿಯೊ..| ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ

ದುಬೈ: ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ ಎಂದು ದುಬೈ ಮಾಧ್ಯಮ ಕಚೇರಿ (DMO) ಶನಿವಾರ ತಿಳಿಸಿದೆ. ಶುಕ್ರವಾರ ರಾತ್ರಿ ಬೆಂಕಿ ಪ್ರಾರಂಭವಾದ ನಂತರ ಮರೀನಾ ಪಿನ್ನಾಕಲ್‌ನ 764 ಅಪಾರ್ಟ್‌ಮೆಂಟ್‌ಗಳ ಎಲ್ಲಾ 3,820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ದುಬೈ ನಾಗರಿಕ ರಕ್ಷಣಾ ತಂಡಗಳು ಆರು ಗಂಟೆಗಳ ಕಾಲ ಅವಿಶ್ರಾಂತವಾಗಿ ಕೆಲಸ … Continued

ಜೂನ್‌ 15ರಿಂದ ಆಗುಂಬೆ ಘಾಟ್‌ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ಶಿವಮೊಗ್ಗ: ಭಾರಿ ಮಳೆಯಿಂದ ಭೂ ಕುಸಿತ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಗುಂಬೆ ಘಾಟ್‌ನಲ್ಲಿ (Agumbe Ghat) ಜೂ.15ರಿಂದ ಸೆಪ್ಟೆಂಬರ್ 30ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ … Continued