ಗ್ರಿಲ್‌ಗೆ ಕೈಗಳನ್ನು ಕಟ್ಟಿದ್ದರು…ಬಾಯಿಗೆ ಬಟ್ಟೆ ತುರುಕಿದ್ದರು..: ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ ಪೊಲೀಸರು-ಕುಟುಂಬಸ್ಥರೇ ಬೆಸ್ತುಬಿದ್ದರು…!

 ಸೂರತ್: ಗುಜರಾತಿನ ಸೂರತ್‌ನಲ್ಲಿ 36 ವರ್ಷದ ಉದ್ಯಮಿಯೊಬ್ಬರು ಹಠಾತ್ತನೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ, ಕುಟುಂಬ ಸದಸ್ಯರಿಗೆ ಆ ವ್ಯಕ್ತಿಯ ಫೋನ್‌ನಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದವು. ಅದರಲ್ಲಿ ಆತನನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು. ಹಾಗೂ ಸುರಕ್ಷಿತವಾಗಿ ಬಿಡಲು  50 ಲಕ್ಷ ರೂ.ಹಣ ನೀಡಬೇಕು ಎಂದು ಬೇಡಿಕೆ … Continued

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ‘ಪ್ರಜಾಸೇವೆ ಇಲಾಖೆ’ ಸ್ಥಾಪನೆ : ಸಿಎಂ ಘೋಷಣೆ

ಬೆಂಗಳೂರು : “ಸಾರ್ವಜನಿಕರ ಕುಂದುಕೊರತೆಗಳು, ಅಹವಾಲುಗಳನ್ನು ಆಲಿಸಲು “ಪ್ರಜಾಸೇವೆ ಇಲಾಖೆ” ಯನ್ನು ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಇದಕ್ಕಾಗಿಯೇ  ಪ್ರತ್ಯೇಕವಾಗಿ ಸಚಿವರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಹೇಳಿದರು. “ಜನರ ಕಷ್ಟ ಅರಿತು, ಕಾನೂನು … Continued

ಅಮೆರಿಕ-ಇರಾನ್ ಶಾಂತಿ ಒಪ್ಪಂದ ವಿವರ ಬಿಡುಗಡೆ ವಿಳಂಬ : ಪಾಕಿಸ್ತಾನದ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಕಾರಣ ಎಂದ ಅಮೆರಿಕ ಉಪಾಧ್ಯಕ್ಷ

ವಾಷಿಂಗ್ಟನ್ : ಇತ್ತೀಚೆಗೆ ಸಹಿ ಹಾಕಲಾದ ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ಪೂರ್ಣ ಪಠ್ಯವನ್ನು ಬಿಡುಗಡೆ ಮಾಡಲು ವಿಳಂಬವಾಗಿರುವುದಕ್ಕೆ ಪಾಕಿಸ್ತಾನದ ಮಾಧ್ಯಮ ಸ್ವಾತಂತ್ರ್ಯದ ಕೊರತೆಯೇ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ನೇರವಾಗಿ ದೂಷಿಸಿದ್ದಾರೆ. ‘ಇಂಟರೆಸ್ಟಿಂಗ್ ಟೈಮ್ಸ್ ವಿತ್ ರಾಸ್ ದೌಥತ್’ (Interesting Times with Ross … Continued

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ತೆಹ್ರಾನ್‌ : ಇರಾನ್ ಮತ್ತು ಅಮೆರಿಕ ನಡುವೆ ಎರಡು ದಿನಗಳ ಹಿಂದಷ್ಟೇ ಆಗಿದ್ದ ಮಧ್ಯಂತರ ಒಪ್ಪಂದಕ್ಕೆ ಭಾರಿ ಹಿನ್ನಡೆಯಾಗಿದ್ದು, ಇರಾನ್ ಶನಿವಾರ ಮಹತ್ವದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಸಮುದ್ರ ಮಾರ್ಗವನ್ನು ಮತ್ತೆ ಮುಚ್ಚಿರುವುದಾಗಿ ಪ್ರಕಟಿಸಿದೆ. ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಮತ್ತು ಅಮೆರಿಕ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ತೋರಿರುವ “ನಂಬಿಕೆ ದ್ರೋಹ”ವೇ … Continued

ದೇವಸ್ಥಾನದ ಸಭಾಮಂಟಪದ ಮೇಲ್ಛಾವಣಿ ಕುಸಿತ; ನಾಲ್ವರು ಸಾವು, 23 ಮಂದಿಗೆ ಗಾಯ

ಪರ್ಭಾನಿ : ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಪ್ರಸಿದ್ಧ ಯಶವಾಡಿ ದೇವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾಮಂಟಪದ ಮೇಲ್ಛಾವಣಿ ಹಠಾತ್ತನೆ ಕುಸಿದು ಬಿದ್ದು  ನಾಲ್ವರು ಸಾವಿಗೀಡಾಗಿದ್ದು, 23 ಜನರು ಗಾಯಗೊಂಡ ಭೀಕರ ಘಟನೆ ಶನಿವಾರ ಸಂಭವಿಸಿದೆ. ಛತ್ರಪತಿ ಸಂಭಾಜಿನಗರದಿಂದ ಸುಮಾರು 190 ಕಿ.ಮೀ ದೂರದಲ್ಲಿರುವ ಯಶವಾಡಿ ಗ್ರಾಮದಲ್ಲಿ ಈ ದೇವಸ್ಥಾನವಿದ್ದು, ಘಟನೆ ನಡೆದಾಗ ಸುಮಾರು 27 ಜನರು ಅವಶೇಷಗಳ … Continued

ಮುಂಗಾರು ಮತ್ತೆ ಚುರುಕು ; ಬಲಗೊಳ್ಳುತ್ತಿರುವ ಮಳೆ ಮೋಡಗಳು ; ಜೂ. 21ರಿಂದ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸುಮಾರು ಎರಡು ವಾರಗಳ ಮುಂಗಾರು ಮಳೆ ಕೈಕೊಟ್ಟ ನಂತರ ಈಗ ನೈಋತ್ಯ ಮಾನ್ಸೂನ್ ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಮುಂಗಾರು ಮಾರುತಗಳು ದಿನದಿಂದ ದಿನಕ್ಕೆ ಚುರುಕಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲು ವಾತಾವರಣ ಪೂರಕವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕರಾವಳಿ ತೀರ, ಮಲೆನಾಡು ಹಾಗೂ … Continued

ಗ್ಯಾರೆಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿ : ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ ಸೂಚನೆ

ಬೆಂಗಳೂರು : ಗ್ಯಾರೆಂಟಿ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಮತ್ತು ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ಇದೇ ವೇಳೆ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಶುಕ್ರವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ಯಾರೆಂಟಿ ಯೋಜನೆಗಳ ದುರ್ಬಳಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಧಿಕಾರಿಗಳ ಜೊತೆ ಸಭೆ … Continued

ಟ್ರಂಪ್ ಮೆಚ್ಚಿದ ಇಬ್ಬರು ಜಾಗತಿಕ ನಾಯಕರು ಯಾರು ? : ಒಬ್ಬರು ಪ್ರಧಾನಿ ಮೋದಿ, ಮತ್ತೊಬ್ಬರು….?

ಎವಿಯನ್ (ಫ್ರಾನ್ಸ್) : ಫ್ರಾನ್ಸ್‌ನಲ್ಲಿ ನಡೆದ ಜಿ-7 (G7) ಶೃಂಗಸಭೆಯ ಸಂದರ್ಭದಲ್ಲಿ ಜಾಗತಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಪ್ರಭಾವದ ಕುರಿತು ನಡೆದ ಚರ್ಚೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಾಗತಿಕ ನಾಯಕರಲ್ಲಿ ತಾವು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಇಷ್ಟಪಡುವ ನಾಯಕರ ಪಟ್ಟಿಯಲ್ಲಿ … Continued

ಬಂಡಾಯದ ಬಿರುಗಾಳಿ: ನಂಬಿಕೆ ಇಲ್ಲದಿದ್ರೆ ಶಿವಸೇನೆ ಮುಖ್ಯಸ್ಥನ ಸ್ಥಾನ ತ್ಯಜಿಸಲು ಸಿದ್ಧ ಎಂದ ಉದ್ಧವ್ ಠಾಕ್ರೆ

ಮುಂಬೈ: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಬಂಡಾಯದ ಬಿರುಗಾಳಿ ತೀವ್ರಗೊಂಡಿರುವ ಬೆನ್ನಲ್ಲೇ, ಪಕ್ಷದ ಕಾರ್ಯಕರ್ತರಿಗೆ ತಮ್ಮ ನಾಯಕತ್ವದ ಮೇಲೆ ವಿಶ್ವಾಸವಿಲ್ಲದಿದ್ದರೆ ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ. ಕಾರ್ಯಕರ್ತರು ತಾವು ಈ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಭಾವಿಸಿದರೆ, ಪಕ್ಷದ ಚುಕ್ಕಾಣಿಯನ್ನು ಯಾವುದೇ ಸಾಮಾನ್ಯ … Continued