ಮೈ ಜುಂ ಎನ್ನುವ ವಿಡಿಯೋ | ಕೆಸರು ಮಿಶ್ರಿತ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲೇ ಕೊಚ್ಚಿಹೋದ ನೀತಿ ಕಣಿವೆ ಸೇತುವೆ

ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರಬಲ ನೀರಿನ ಪ್ರವಾಹಕ್ಕೆ ಚಮೋಲಿ ಜಿಲ್ಲೆಯ ನೀತಿ ಕಣಿವೆ ಪ್ರದೇಶದಲ್ಲಿದ್ದ ಲೋಹದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ನೀತಿ ಕಣಿವೆಯಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಮ್ಮೆಲೇ ಸುರಿದ ಕುಂಬಧ್ರೋಣ ಮಳೆಯಿಂದಾಗಿ ಭಾರಿ ಪ್ರಮಾಣದ ಕೆಸರು ಮಿಶ್ರಿತ ನೀರು ಗುಡ್ಡದಿಂದ ರಭಸವಾಗಿ ಕೆಳಮುಖವಾಗಿ ಹರಿದು ಬಂದು … Continued

ಏಕಾಂಗಿಯಾಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕ್ಕಿಗಾಗಿ ಹುಡುಕಾಟ

ಬೆಂಗಳೂರು: ಬೆಂಗಳೂರಿನ ಹೊರವಲಯದ ಶಿವಗಂಗೆ ಬೆಟ್ಟಕ್ಕೆ ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದ 31 ವರ್ಷದ ಸಾಫ್ಟ್‌ವೇರ್ ವೃತ್ತಿಪರ ಅದ್ವೈತ ಉಪಾಧ್ಯಾಯ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ವಿವಿಧ ರಕ್ಷಣಾ ಸಂಸ್ಥೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಬೆಟ್ಟದ ಕಲ್ಲುಬಂಡೆಗಳು, ಪೊದೆಗಳು ಮತ್ತು ದಟ್ಟ ಸಸ್ಯವರ್ಗದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ ಮೂಲದ ಉಪಾಧ್ಯಾಯ, ವೈಟ್‌ಫೀಲ್ಡ್‌ನ … Continued

ವಸತಿ ಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರ

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನ ಜಪತಲಾಯಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಶಂಕಿತ ಹಾವು ಕಡಿತದ ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 14 ವಿದ್ಯಾರ್ಥಿನಿಯರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಹೇಳಲಾಗಿದೆ. ಜಪತಲಾಯಿ ಗ್ರಾಮದ ಕುಪರ್ಲಿಂಗೋ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಡೆವಲಪ್‌ಮೆಂಟ್ … Continued

ಜಾರ್ಖಂಡ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್, ಅಶ್ರುವಾಯು; ಮಾಜಿ ಪರೀಕ್ಷಾ ಮುಖ್ಯಸ್ಥ ಬಂಧನ

ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ವಿರುದ್ಧ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜಧಾನಿ ರಾಂಚಿಯಲ್ಲಿ ವಿಧಾನಸಭೆಯತ್ತ ಮೆರವಣಿಗೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿ, ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ … Continued

ವಿಡಿಯೋ | “ನರೇಂದ್ರ” ಹೆಸರೇ ನನಗೆ ಆಗ್ಬರಲ್ಲ ; ಪಾಕ್ ಬಾಕ್ಸರ್ ಹೇಳಿದ್ದನ್ನು ಮೋದಿಗೆ ಹೇಳಿದ ಭಾರತದ ಬಾಕ್ಸರ್; ಮೋದಿ ಪ್ರತಿಕ್ರಿಯೆ ನೋಡಿ

ನವದೆಹಲಿ: ಕ್ರೀಡಾಂಗಣದಲ್ಲಿ ನಡೆಯುವ ರೋಚಕ ಹೋರಾಟಗಳು ಕೇವಲ ಗೆಲುವು–ಸೋಲಿನ ಕಥೆಗಳಾಗಿ ಉಳಿಯುವುದಿಲ್ಲ. ಹಲವು ಸಂದರ್ಭಗಳಲ್ಲಿ ಕ್ರೀಡಾಪಟುಗಳ ನಡುವಿನ ಸ್ವಾರಸ್ಯಕರ ಘಟನೆಗಳು ದಶಕಗಳವರೆಗೆ ನೆನಪಿನಲ್ಲಿ ಉಳಿಯುತ್ತವೆ. ಅಂತಹದ್ದೇ ಒಂದು ತಮಾಷೆಯ ಪ್ರಸಂಗವನ್ನು ಭಾರತೀಯ ಬಾಕ್ಸರ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ನರೇಂದ್ರ ಬೇರವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸನ್ಮಾನ … Continued

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸು

ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ ಸ್ಲೀಪರ್ ರೈಲು ಸೇವೆ ಆರಂಭಿಸಲು ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿದ್ಧತೆ ನಡೆಸಿದೆ. ಬೆಂಗಳೂರು ಮೂಲದ ರೈಲ್ವೆ ವಲಯಕ್ಕೆ ಬಿಇಎಂಎಲ್ ನಿರ್ಮಿಸಿರುವ ಎರಡು 16 ಬೋಗಿಗಳ ವಂದೇ ಭಾರತ ಸ್ಲೀಪರ್ ರೈಲು ಸೆಟ್‌ಗಳು ತಲುಪಿದ್ದು, ಅವುಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್ … Continued

ಹಾರ್ಮುಜ್ ಜಲಸಂಧಿಯಲ್ಲಿ 20ಕ್ಕೂ ಹೆಚ್ಚು ಯುದ್ಧನೌಕೆ ನಿಯೋಜಿಸಿದ ಅಮೆರಿಕ ; ಇರಾನ್‌ ವಿರುದ್ಧ ನೌಕಾ ದಿಗ್ಬಂಧನ ಮತ್ತಷ್ಟು ಬಿಗಿ

ವಾಷಿಂಗ್ಟನ್: ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಮೆರಿಕವು ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ಬೆಳವಣಿಗೆಯಿಂದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದ ನೌಕಾಪಡೆಯ ವಿನಾಶಕಾರಿ ಯುದ್ಧನೌಕೆ ʼಯುಎಸ್‌ಎಸ್ ರಾಸ್ (USS Ross)ʼನಲ್ಲಿರುವ ನಾವಿಕರೂ ಈ … Continued

ಬಾಸ್ಫರಸ್, ಹಾರ್ಮುಜ್‌ಗೆ ಪರ್ಯಾಯ ಮಾರ್ಗ ; ಮಾಸ್ಕೋದಿಂದ ಭಾರತಕ್ಕೆ ನೇರ ರೈಲು ಸಂಪರ್ಕಕ್ಕೆ ರಷ್ಯಾ ಚಿಂತನೆ

ಮಾಸ್ಕೋ: ಬಾಸ್ಫರಸ್ ಜಲಸಂಧಿ ಹಾಗೂ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಣೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ಹಿಂದೂ ಮಹಾಸಾಗರದವರೆಗೆ ನೇರ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ರಷ್ಯಾ ಪರಿಶೀಲಿಸಬೇಕು ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಹೇಳಿದ್ದಾರೆ. ಸುದ್ದಿ ಸಂಸ್ಥೆ ಟಾಸ್ (TASS)ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು … Continued