ವಿಡಿಯೋ | ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು

ಮುಂಬೈ: ಮುಂಬೈನ ದಹಿಸರ್‌ ಪಶ್ಚಿಮ ಭಾಗದ ಕಂದರ್ಪದ ಬಾಪು ಬಾಗ್ವೆ ರಸ್ತೆಯ ಸಮೀಪದ ಮಹೇಶ್ವರ ಕಟ್ಟಡದ ವಸತಿ ಸಂಕೀರ್ಣದಲ್ಲಿ ನಡೆದ ಘಟನೆ ನಿವಾಸಿಗಳನ್ನು ಕೆಲಕಾಲ ಆತಂಕಕ್ಕೆ ದೂಡಿದೆ. ಕಟ್ಟಡದ ನಿವಾಸಿ ಸನ್ನಿ ಕಾಂಬ್ಳೆ ಅವರ ಸಹೋದರಿಯ ಕಾರಿನ ಬಾನೆಟ್‌ ಒಳಗೆ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಕಾರಿನ ಕೆಳಭಾಗದಿಂದ ಬಾನೆಟ್‌ ಕಡೆಗೆ ನಿಧಾನವಾಗಿ ಹಾವು ತೆವಳಿಕೊಂಡು ಹೋಗುತ್ತಿರುವುದನ್ನು … Continued

ರಷ್ಯಾ ವಿರುದ್ಧದ ಯುದ್ಧಕ್ಕೆ ಹೊಸ ಮಾರ್ಗ: ಅಶ್ಲೀಲ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ 30 ಸಾವಿರ ಡ್ರೋನ್‌ ಖರೀದಿಗೆ ಉಕ್ರೇನ್‌ ಚಿಂತನೆ

ಕೀವ್: ರಷ್ಯಾ ವಿರುದ್ಧದ ಯುದ್ಧಕ್ಕೆ ಹೆಚ್ಚುವರಿ ಹಣ ಸಂಗ್ರಹಿಸುವ ಉದ್ದೇಶದಿಂದ ಉಕ್ರೇನ್ ತನ್ನ ಬಹುತೇಕ ಭೂಗತವಾಗಿ ಕಾರ್ಯನಿರ್ವಹಿಸುತ್ತಿರುವ ಅಶ್ಲೀಲ (Pornography) ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ ತೆರಿಗೆ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಈ ಕ್ರಮದಿಂದ ವರ್ಷಕ್ಕೆ ದೊರೆಯಬಹುದಾದ ಆದಾಯವು ಸುಮಾರು 30,000 ಡ್ರೋನ್‌ಗಳ ಖರೀದಿಗೆ ನೆರವಾಗಬಹುದು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. … Continued

ವೃತ್ತಿಪರ ಕೋರ್ಸ್‌ಗಳಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5 ಮೀಸಲಾತಿ ; ಕರಡು ನಿಯಮ ಪ್ರಕಟಿಸಿದ ಸರ್ಕಾರ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಓದಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಸೋಮವಾರ (ಸೆಪ್ಟೆಂಬರ್ 7) ‘ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮಗಳು (ತಿದ್ದುಪಡಿ)-2026’ರ ಕರಡು ನಿಯಮಗಳ ಅಧಿಸೂಚನೆ … Continued

ಅಮೃತಸರ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ಗಳ ಹಾರಾಟ : ದೆಹಲಿ, ಚಂಡೀಗಢದತ್ತ ತಿರುಗಿ ಹೊರಟ 7 ವಿಮಾನಗಳು

ಅಮೃತಸರ: ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಲ್ಯಾಂಡಿಂಗ್‌ಗೆ ಕಾಯುತ್ತಿದ್ದ ಏಳು ವಿಮಾನಗಳನ್ನು ಚಂಡೀಗಢ ಮತ್ತು ದೆಹಲಿಗೆ ಮಾರ್ಗ ಬದಲಾಯಿಸಲಾಗಿದೆ. ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಸುಮಾರು 9:50 ಗಂಟೆಗೆ ಭಾರತೀಯ ವಾಯುಪಡೆ (IAF) ಅಧಿಕಾರಿಗಳು ವಿಮಾನ … Continued

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ನವದೆಹಲಿ : ಭಾರತದ ವಿದೇಶಿ ವಿನಿಮಯ ಸಂಗ್ರಹ (ಫಾರೆಕ್ಸ್ ರಿಸರ್ವ್) ಐತಿಹಾಸಿಕ ಗರಿಷ್ಠ ಮಟ್ಟವಾದ 740.8 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರಿಂದ ಜಾಗತಿಕ ಆರ್ಥಿಕ ಅನಿಶ್ಚಿತತೆ, ಕರೆನ್ಸಿ ಏರಿಳಿತ ಹಾಗೂ ಬಾಹ್ಯ ಆರ್ಥಿಕ ಆಘಾತಗಳನ್ನು ಎದುರಿಸಲು ದೇಶಕ್ಕೆ ಮತ್ತಷ್ಟು ಬಲಿಷ್ಠ ಹಣಕಾಸು ರಕ್ಷಣಾ ಕವಚ ದೊರೆತಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿದ ಇತ್ತೀಚಿನ … Continued

ಯಲ್ಲಾಪುರ : ಅರಬೈಲ್​ ಘಟ್ಟದಲ್ಲಿ ಭೀಕರ ಅಪಘಾತ: ತಾಯಿ-ಮಗಳು ಸಾವು

ಕಾರವಾರ : ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಕಾರೊಂದು ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮಹಾರಾಷ್ಟ್ರದ ಪುಣೆ ಮೂಲದ ತಾಯಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಕಾರು ಚಾಲಕ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ … Continued

ಗ್ರಾಮೀಣ ಭಾಗದ ಎಲ್​ಪಿಜಿ ಸಿಲಿಂಡರ್‌ ರೀಫಿಲ್ ಬುಕಿಂಗ್ ಅವಧಿ ಕಡಿಮೆ ಮಾಡಿದ ಕೇಂದ್ರ

ನವದೆಹಲಿ: ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಮರುಬುಕ್ಕಿಂಗ್‌ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿದೆ. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ ಗೋಪಿ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದ ಪರಿಣಾಮ ಎಲ್‌ಪಿಜಿ … Continued

ಬೇಲೂರು: ಎರಡು ಮದಗಜಗಳ ಭೀಕರ ಕಾದಾಟ ; ಮನೆ ಮೇಲೆ ಬಿದ್ದ ಮರ

ಹಾಸನ : ಎರಡು ಕಾಡಾನೆಗಳು ಭೀಕರ ಕಾದಾಟನಡೆಸಿ ಎರಡು ಮರಗಳನ್ನು ನೆಲಕ್ಕುರುಳಿಸಿದ್ದರಿಂದ ಮನೆಯೊಂದು ಜಖಂಗೊಂಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಮನೆಯೊಂದರ ಸಮೀಪವೇ ಕೌರಿಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ 30ರಿಂದ 40ಕ್ಕೂ ಹೆಚ್ಚು ಆನೆಗಳು ಕೌರಿಗ್ರಾಮದ ಸುತ್ತಮುತ್ತ ಸಂಚರಿಸುತ್ತಿವೆ. ಹಿಂಡಿನಿಂದ … Continued

ವಿಡಿಯೋ | ಆಗ ಉಗ್ರರ ಕೋಟೆ, ಈಗ ಕ್ರಿಕೆಟ್ ಆಟದ ಕೇಂದ್ರ, ನೋಡಲು ಜನಸ್ತೋಮ : ಹೊಸ ಬದುಕಿನತ್ತ ಪುಲ್ವಾಮಾ

ಪುಲ್ವಾಮಾ: ಒಂದು ಕಾಲದಲ್ಲಿ ಭಯೋತ್ಪಾದನೆ, ಕಲ್ಲು ತೂರಾಟ ಮತ್ತು ಅಶಾಂತಿಯ ಕಾರಣದಿಂದ ಸುದ್ದಿಯಾಗುತ್ತಿದ್ದ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆ ಈಗ ಕ್ರೀಡೆಯ ಮೂಲಕ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದೆ. ಶನಿವಾರ ರಾತ್ರಿ ಪುಲ್ವಾಮಾ ನಿದ್ರಿಸಲೇ ಇಲ್ಲ. ರಾಯಲ್ ಪ್ರೀಮಿಯರ್ ಲೀಗ್ (ಆರ್‌ಪಿಎಲ್) ಫೈನಲ್ ಪಂದ್ಯ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದತ್ತ ಹರಿದುಬಂದಿದ್ದು, ಪ್ರತಿಯೊಂದು ಚೆಂಡು, ವಿಕೆಟ್ ಹಾಗೂ ಬೌಂಡರಿಯನ್ನು … Continued

ಲ್ಯಾಂಡಿಂಗ್‌ ಆಗುವಾಗ ಅಪಘಾತಕ್ಕೀಡಾದ ಅಮೆಜಾನ್ ಸರಕು ವಿಮಾನ ; 5 ಸಾವು : ಅಪಘಾತ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಾಷಿಂಗ್ಟನ್:  ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆಜಾನ್‌ನ ಸರಕು ಸಾಗಣೆ (ಕಾರ್ಗೋ) ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿದೆ. ಈ ದುರ್ಘಟನೆಯಲ್ಲಿ ಕನಿಷ್ಠ ಐದು ಜನರು ಸಾವಿಗೀಡಾಗಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರೈಮ್ ಏರ್ ಫ್ಲೈಟ್ 759 logic (7598) ಎಂಬ ಬೋಯಿಂಗ್ 767 ವಿಮಾನವು … Continued