ಪಂಜಾಬ್‌ ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದಾಗಲೇ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜಾ ವಾರಿಂಗ್ ರಾಜೀನಾಮೆ

ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮುಂದಿನ 24ರಿಂದ 48 ಗಂಟೆಗಳ ಒಳಗಾಗಿ ಪಕ್ಷವು ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಚಾರವಾಗಿ ವಾರಿಂಗ್ … Continued

‘ಕೆಬಿಸಿ 18’ ಶೂಟಿಂಗ್ ವೇಳೆ ಜಾರಿ ಬಿದ್ದು ಅಮಿತಾಭ್ ಬಚ್ಚನ್‌ಗೆ ಗಾಯ

ದುಬೈ: ‘ಕೌನ್ ಬನೇಗಾ ಕರೋಡ್‌ಪತಿ 18’ (KBC 18) ಕಾರ್ಯಕ್ರಮದ ಚಿತ್ರೀಕರಣದ ವೇಳೆ ಹಿರಿಯ ನಟ ಅಮಿತಾಭ್ ಬಚ್ಚನ್ ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. 83 ವರ್ಷದ ಅಮಿತಾಭ್ ಬಚ್ಚನ್ ಸಾಮಾನ್ಯವಾಗಿ ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯ ಮಧ್ಯಭಾಗದಲ್ಲಿ ನಿಂತುಕೊಂಡೇ ತಮ್ಮ ಆರಂಭಿಕ ನಿರೂಪಣೆ ಮಾಡುತ್ತಾರೆ. ಆದರೆ ಮೊಣಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರು … Continued

ಚೂರಿ ಇರಿತಕ್ಕೊಳಗಾದರೂ ಹೋರಾಡಿ ಫ್ಲೈದುಬೈ ವಿಮಾನದಲ್ಲಿದ್ದ 180 ಜನರ ಜೀವ ಉಳಿಸಿದ ಭಾರತೀಯ ಪೈಲಟ್….

ದುಬೈ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ ಬುಧವಾರ ನಡೆದ ಕಾಕ್‌ಪಿಟ್ ಘರ್ಷಣೆ ಭಾರೀ ಆತಂಕಕ್ಕೆ ಕಾರಣವಾಗಿದೆ. ವಿಮಾನವನ್ನು ಪತನಗೊಳಿಸಲು ಸಹ ಪೈಲಟ್ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯೋಚಿತ ಕ್ರಮದಿಂದ 180 ಪ್ರಯಾಣಿಕರ ಪ್ರಾಣ ಉಳಿದಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. … Continued

ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ವರೆಗೆ ವಿಸ್ತರಣೆ

ಕಾರವಾರ: ಮಡಗಾಂವ್‌ (ಗೋವಾ)-ಮಂಗಳೂರು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಇದೀಗ ಬೆಂಗಳೂರಿನ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರದ ಮೂಲಕ ತಮಗೆ ಮಾಹಿತಿ ನೀಡಿದ್ದನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಬೆಂಗಳೂರು ಮತ್ತು ಮಡಗಾಂವ್ ನಡುವೆ … Continued

ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: 8 ಮಂದಿಗೆ ಗಾಯ ; ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದ ಜನ

ಮಂಗಳೂರು : ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌) ಆವರಣದಲ್ಲಿ ಬುಧವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಎಂಆರ್‌ಪಿಎಲ್‌ ಅಧಿಕಾರಿಯೊಬ್ಬರ ಪ್ರಕಾರ, ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕನೊಬ್ಬ ಶೇ.35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದಾನೆ. ಎಂಆರ್‌ಪಿಎಲ್‌ ಆವರಣದೊಳಗೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಸುತ್ತಮುತ್ತಲಿನ … Continued

ಪಹಲ್ಗಾಮ್ ದಾಳಿ ಪ್ರಕರಣದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಹಾಶಿಮ್ ಮೂಸಾನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ದೊರೆತಿದ್ದು, ಜಮ್ಮು-ಕಾಶ್ಮೀರದ ಮೋಸ್ಟ್‌ ವಾಂಟೆಡ್‌ ಪಾಕಿಸ್ತಾನಿ ಉಗ್ರರಲ್ಲಿ ಒಬ್ಬನಾಗಿದ್ದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ಅಸಿಫ್ ಮೂಸಾ ಅಲಿಯಾಸ್ ಅಸಿಫ್ ಫೌಜಿ ಹತನಾಗಿದ್ದಾನೆ. ಮಧ್ಯ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಯೂಸ್ಮಾರ್ಗ್ ಪ್ರವಾಸಿ ತಾಣದ ಸಮೀಪದ ಹೊಸ್ಮೆರ್ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆದ ರಾತ್ರಿಯಿಡೀ ಮುಂದುವರಿದ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ಈತ … Continued

ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ದುಬಾರಿ ಮೊಬೈಲ್‌ ಫೋನ್‌ಗಳು ಮತ್ತು ಚಿನ್ನದ ಸರ ಖರೀದಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದಂಪತಿ ತಮ್ಮ ಕೇವಲ ಒಂದು ತಿಂಗಳ ಗಂಡು ಮಗುವನ್ನು ₹1.20 ಲಕ್ಷಕ್ಕೆ ಮಾರಾಟ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಮಗುವನ್ನು … Continued

ಏಷ್ಯನ್‌ ಗೇಮ್ಸ್‌ 2026 : ಬಿಲ್ಲುಗಾರಿಕೆಯಲ್ಲಿ 2, ಮಹಿಳಾ ರಿಲೇ ಓಟದಲ್ಲಿ 1 ಚಿನ್ನದ ಪದಕ ಗೆದ್ದ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಸುವರ್ಣಮಯ ಬೆಳಗ್ಗನ್ನು ಅನುಭವಿಸಿತು. ಕೆಲವೇ ಗಂಟೆಗಳ ಅಂತರದಲ್ಲಿ ಮಹಿಳಾ ತಂಡ ಹಾಗೂ ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ಭಾರತ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿತು. ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಚಿಕಿತಾ ತಣಿಪಾರ್ಥಿ ಮತ್ತು ಸಾಹಿಲ್ ಜಾಧವ್ ಜೋಡಿ ದಕ್ಷಿಣ ಕೊರಿಯಾವನ್ನು ಶೂಟ್‌ಆಫ್‌ನಲ್ಲಿ ಮಣಿಸಿ … Continued

ಅಕ್ಟೋಬರ್‌ 3ರಿಂದ ಕೇಂದ್ರ ತಂಡದಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳ ಪರಿಶೀಲನೆ : ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಪರಿಶೀಲನೆಗಾಗಿ ಕೇಂದ್ರದ ಅಂತರ ಸಚಿವಾಲಯ ತಂಡ (IMCT) ಅಕ್ಟೋಬರ್ 3ರಿಂದ 7ರ ವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಕರ್ನಾಟಕಕ್ಕೆ ಕೇಂದ್ರದಿಂದ ತುರ್ತು ನೆರವು ನೀಡುವಂತೆ ಕೋರಿಕುಮಾರಸ್ವಾಮಿ ಅವರು ಸೆಪ್ಟೆಂಬರ್ 24ರಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರಿಗೆ … Continued

ಬಲೂಚ್ ಸಶಸ್ತ್ರ ಮಹಿಳಾ ಪಡೆಗೆ ಪಾಕ್‌ ಸೇನೆ ತತ್ತರ ; ಮೊದಲ ದಾಳಿಯಲ್ಲೇ 9 ಪಾಕ್‌ ಸೈನಿಕರ ಹತ್ಯೆ ; ದಾಳಿಯ ವಿಡಿಯೋ ಬಿಡುಗಡೆ

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತಷ್ಟು ತೀವ್ರಗೊಂಡಿದ್ದು, ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (BLF) ಹೊಸದಾಗಿ ರಚಿಸಲಾದ ತನ್ನ ಮಹಿಳಾ ಸಶಸ್ತ್ರ ಘಟಕವಾದ ಕರೀಮಾ ಆರ್ಮ್ಡ್ ಅಸಾಲ್ಟ್ ಡಿವಿಷನ್ (KAAD) ನಡೆಸಿದ ಮೊದಲ ಕಾರ್ಯಾಚರಣೆಯ ವಿಡಿಯೊವನ್ನು ಬಿಡುಗಡೆ ಮಾಡಿದೆ. ಈ ದಾಳಿಗಳಲ್ಲಿ ಒಂಬತ್ತು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಪ್ರತ್ಯೇಕತಾವಾದಿ ಉಗ್ರಗಾಮಿ … Continued