ಬೆಂಗಳೂರು | ಸ್ಕೂಟರ್‌ ಸವಾರನ ಗಿಟಾರ್‌ ಬ್ಯಾಗನ್ನೇ ಹಿಂಬದಿ ಸವಾರ ಎಂದು ಭಾವಿಸಿದ ಟ್ರಾಫಿಕ್‌ ಕ್ಯಾಮೆರಾ : 500 ರೂಪಾಯಿ ದಂಡ !

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ಕ್ಯಾಮೆರಾ ಗಿಟಾರ್‌ ಅನ್ನು ಹೆಲ್ಮೆಟ್‌ ಧರಿಸದ ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿ ವ್ಯಕ್ತಿಯೊಬ್ಬರಿಗೆ ₹500 ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಸೌವಿಕ್‌ ದತ್ತಾ ಎಂಬುವರು ತಮ್ಮ ಪತ್ನಿಯ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು … Continued

ಕಾರು ಅಪಘಾತದ ಬಳಿಕ ಉತ್ತರಾಧಿಮಠ ಶ್ರೀಗಳಿಗೆ ಚಿಕಿತ್ಸೆ-ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ-ಭಕ್ತರಿಗೆ ವಿಡಿಯೋ ಸಂದೇಶ

ಹುಬ್ಬಳ್ಳಿ : ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಯಾಣಿಸುತ್ತಿದ್ದ ಕಾರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಮೀಪದ ಪಿಬಿ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ (ಮೀಡಿಯನ್) ಡಿಕ್ಕಿ ಹೊಡೆದಿದೆ. . ಕಾರು ಅಪಘಾತದ ಬಳಿಕ ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಈಗ ಡಿಸ್ಚಾರ್ಜ್‌ ಚೇತರಿಸಿಕೊಂಡಿದ್ದಾರೆ. ಅವರ ಪರಿವಾರದವರೂ ಆರೋಗ್ಯವಾಗಿದ್ದು, ಸ್ವತಃ ಶ್ರೀಗಳು ವಿಡಿಯೋ ಸಂದೇಶ … Continued

ಗ್ಯಾರಂಟಿ ಯೋಜನೆಗಳಿಂದ ಹಣಕಾಸು ನಿರ್ವಹಣೆ ಕಷ್ಟಕರವಾಗಿದೆ: ಎಚ್‌.ಸಿ. ಬಾಲಕೃಷ್ಣ

ರಾಮನಗರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಇರದೇ ಇದ್ದಿದ್ದರೆ ಸರ್ಕಾರದ ಹಣಕಾಸು ನಿರ್ವಹಣೆ ಹೆಚ್ಚು ಸುಲಭವಾಗುತ್ತಿತ್ತು ಎಂದು ಸಚಿವ ಎಚ್‌.ಸಿ. ಬಾಲಕೃಷ್ಣ ಹೇಳಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗವಿಕಲರೊಂದಿಗೆ ಶನಿವಾರ ರಾತ್ರಿ ಮಾತನಾಡಿದ ಅವರು, ಸರ್ಕಾರದ ಹಣಕಾಸಿನ ಮಿತಿಗಳನ್ನು ಅರ್ಥಮಾಡಿಕೊಳ್ಳುವಂತೆ ಮನವಿ ಮಾಡಿದರು. ನಗರಾಡಳಿತ ಸಚಿವರಾಗಿರುವ ಬಾಲಕೃಷ್ಣ ಅವರು, … Continued

ಶಿವಮೊಗ್ಗ : ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಸಿಂಹದ ಮರಿಗಳು ಸಾವು

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ ಜನ್ಮ ನೀಡಿದ್ದ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ. ಸಿಂಹದ ಮರಿಗಳು ಕೆಲ ದಿನಗಳ ಹಿಂದೆಯೇ ಮೃತಪಟ್ಟಿವೆ ಎನ್ನಲಾಗಿದೆ. ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತತಿ ವೃದ್ಧಿ ಉದ್ದೇಶದಿಂದ ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಿಂದ ಏಷ್ಯಾಟಿಕ್ ಸಿಂಹ ‘ಶಿವ’ ಹಾಗೂ ಐದು ವರ್ಷದ ಸಿಂಹಿಣಿ ‘ಸಾರಾ’ ಎಂಬೆರಡು … Continued

ಹಣ ಸುಲಿಗೆ ಮಾಡಲು ಮನೆಗೆ ನುಗ್ಗಿ ವೈದ್ಯರಿಗೆ ದೊಣ್ಣೆ, ಪಾತ್ರೆಗಳಿಂದ ಹೊಡೆದ ‘ಬಿಗ್ ಬಾಸ್’ ಸ್ಪರ್ಧಿ…!

ಪುಣೆ:  ₹5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ಕೊಡದೇ ಇದ್ದುದಕ್ಕೆ ಕೆಲವರೊಂದಿಗೆ ವೈದ್ಯರ ಮನೆಗೆನುಗ್ಗಿ ಹಲ್ಲೆ ನಡೆಸಿ, ಮನೆ ವಸ್ತುಗಳನ್ನು ಧ್ವಂಸಗೊಳಿಸಿ ಕಾರನ್ನು ಕಸಿದುಕೊಂಡ ಆರೋಪದ ಮೇಲೆ ‘ಬಿಗ್ ಬಾಸ್ ಮರಾಠಿ’ ಖ್ಯಾತಿಯ ರೀಲ್ ಸ್ಟಾರ್ ದಿವ್ಯಾ ಶಿಂಧೆ ಸೇರಿದಂತೆ ಎಂಟುಜನರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುಣೆ ಕ್ಯಾಂಟೋನ್ಮೆಂಟ್ ಮಂಡಳಿಯ … Continued

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 12 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಡೇರಾ ಇಸ್ಮಾಯಿಲ್ ಖಾನ್: ಪಾಕಿಸ್ತಾನದ ವಾಯವ್ಯ ಭಾಗದಲ್ಲಿರುವ ಖೈಬರ್‌ ಪಖ್ತುನ್‌ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಶನಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿದ್ದ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಸ್ಫೋಟಕ ತುಂಬಿದ್ದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ … Continued

“ನಿರಂತರ ಭಯೋತ್ಪಾದನೆಯಲ್ಲಿ ತೊಡಗಿರುವ ದೇಶ”: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ ತೀವ್ರ ವಾಗ್ದಾಳಿ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಶನಿವಾರದ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಸರಣಿ ಅಭ್ಯಾಸಿ’ (serial practitioner of terrorism) ಎಂದು ಬಣ್ಣಿಸಿದ ಅವರು, ಹಿಂದಿನ ದಿನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆ ವೇದಿಕೆಯಲ್ಲಿ ವಾಸ್ತವಾಂಶಗಳನ್ನು ತಪ್ಪಾಗಿ … Continued

ಮಂಗಳೂರು : ಬಾಲ್ಕನಿ ರೇಲಿಂಗ್ ಕುಸಿದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಮಂಗಳೂರು: ಕಾಲೇಜು ಚುನಾವಣೆ ಹಾಗೂ ನೂತನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂಭ್ರಮದ ವೇಳೆ ಮೊದಲ ಮಹಡಿಯ ಬಾಲ್ಕನಿ ರೇಲಿಂಗ್ ಕುಸಿದು ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಪಾಂಡೇಶ್ವರದಲ್ಲಿರುವ ರಾಮ ಲಕ್ಷ್ಮೀನಾರಾಯಣ ಕನ್ವೆನ್ಶನ್ ಹಾಲ್‌ನಲ್ಲಿ ಶನಿವಾರ (ಸೆ.26) ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ತಲೆಗೆ ಗಂಭೀರವಾಗಿ ಏಟಾದ ಪರಿಣಾಮ 16 … Continued

ವಿಡಿಯೋ : ಸಾರಾಯಿ ಅಂಗಡಿಗೆ ನುಗ್ಗಿ ಬಾಟಲಿಯಲ್ಲಿದ್ದ ಮದ್ಯ ಕುಡಿದು ಅಂಗಡಿಯಲ್ಲೇ ಗಡದ್ದಾಗಿ ನಿದ್ದೆ ಹೊಡೆದ ಮಂಗ !

ರಾಂಚಿ: ಸಾಮಾನ್ಯವಾಗಿ ಕಳ್ಳತನಕ್ಕೆ ನುಗ್ಗಿದ ಕಳ್ಳ ಸಿಕ್ಕಿಬಿದ್ದರೆ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸುವುದು ಅಥವಾ ಅಂಗಡಿಯಿಂದ ಹೊರಹಾಕುವುದು ಸಹಜ. ಆದರೆ ಮದ್ಯದ ಅಂಗಡಿಗೆ ನುಗ್ಗಿದ “ಕಳ್ಳ”ನನ್ನು ಕಂಡ ಜನರು ಮಾತ್ರ ಅದನ್ನು ಶಿಕ್ಷಿಸುವ ಬದಲು ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣ, ಮದ್ಯದ ಅಂಗಡಿಗೆ ನುಗ್ಗಿ ಮಂಗ ವೋಡ್ಕಾ ಕುಡಿದು ಮತ್ತು ಏರಿ ಅಂಗಡಿಯಲ್ಲೇ … Continued

ಉತ್ತರ ಪ್ರದೇಶ ಚುನಾವಣೆ 2027 : ʼಗೆಲ್ಲುವ ಸಾಮರ್ಥ್ಯವೇ ಮಾನದಂಡ’: ಅಖಿಲೇಶ ಹೇಳಿಕೆಯಿಂದ ಕಾಂಗ್ರೆಸ್–ಎಸ್‌ಪಿ ನಡುವೆ ಅಪಸ್ವರ

ಲಕ್ನೋ: 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)–ಕಾಂಗ್ರೆಸ್ ಮೈತ್ರಿಕೂಟವು 80 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದು ಗಮನಾರ್ಹ ಯಶಸ್ಸು ಸಾಧಿಸಿತ್ತು. ಈ ಗೆಲುವಿನ ಉತ್ಸಾಹದಲ್ಲಿರುವ ಎರಡೂ ಪಕ್ಷಗಳು 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಆದರೆ ಸ್ಥಾನ ಹಂಚಿಕೆ ಸೂತ್ರದ ವಿಚಾರದಲ್ಲಿ ಈಗಾಗಲೇ ಭಿನ್ನಾಭಿಪ್ರಾಯದ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ. … Continued