ವಿಡಿಯೋ | ರಷ್ಯಾದ ಪರಮಾಣು ಸಾಮರ್ಥ್ಯದ ಬಾಂಬರ್‌ ವಿಮಾನ ಪತನ: 6 ಸಿಬ್ಬಂದಿ ಸಾವು

ಮಾಸ್ಕೋ: ರಷ್ಯಾದ ಅಮೂರ್ ಪ್ರದೇಶದಲ್ಲಿ ಮಂಗಳವಾರ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ಸೇನಾ ವಿಮಾನವೊಂದು ಪತನಗೊಂಡ ಪರಿಣಾಮ ಆರು ಸಿಬ್ಬಂದಿ ಮೃತಪಟ್ಟಿದ್ದು, ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ವಿಮಾನವು ಟು-95 (Tu-95) ಮಾದರಿಯದ್ದಾಗಿದ್ದು, ಇದು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಭಾರೀ ಬಾಂಬರ್ ವಿಮಾನವಾಗಿದೆ. ಸೋವಿಯತ್ ಒಕ್ಕೂಟದ ಅವಧಿಯಲ್ಲಿ ವಿನ್ಯಾಸಗೊಳಿಸಲಾದ ಈ ವಿಮಾನವು ಅಪಘಾತದ ವೇಳೆ … Continued

ಘೋರ ಕೃತ್ಯ ; ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಸಿಐಎಸ್‌ಎಫ್ ಯೋಧ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಸಹೋದ್ಯೋಗಿಯಾಗಿದ್ದ ಅಧಿಕಾರಿಯೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ವಾಗ್ವಾದದ ಬಳಿಕ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಠುವಾದ ಬಸೋಹ್ಲಿ ಪ್ರದೇಶದ ಮಶ್ಕಾ ಗ್ರಾಮದಲ್ಲಿರುವ ಸೇವಾ ವಿದ್ಯುತ್ ಯೋಜನೆಯಲ್ಲಿ ನಿಯೋಜಿಸಲಾಗಿರುವ ಸಿಐಎಸ್‌ಎಫ್ ಘಟಕದಲ್ಲಿ … Continued

ಅಮೆರಿಕದ ’10 ಮೋಸ್ಟ್‌ ವಾಂಟೆಡ್‌’ ಪಟ್ಟಿಗೆ ಗ್ಯಾಂಗ್‌ಸ್ಟರ್ ʼಗೋಲ್ಡಿ ಬ್ರಾರ್ʼ ; ಮಾಹಿತಿ ನೀಡಿದವರಿಗೆ ₹9.59 ಕೋಟಿ ಬಹುಮಾನ ಘೋಷಣೆ

ನವದೆಹಲಿ: ಕೊಲೆ, ಸುಲಿಗೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತುಗಳ ಸಾಗಣೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಭಾರತದಿಂದ ಪರಾರಿಯಾಗಿರುವ ಹಾಗೂ ಉಗ್ರನಾಗಿ ಗುರುತಿಸಲ್ಪಟ್ಟ ಸತಿಂದರಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ನನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತನ್ನ ಟಾಪ್-10 ಮೋಸ್ಟ್ ವಾಂಟೆಡ್ ಪರಾರಿಯಾದ ಅಪರಾಧಿಗಳ ಪಟ್ಟಿಗೆ ಸೇರಿಸಿದೆ. ಬ್ರಾರ್ ಬಂಧನಕ್ಕೆ … Continued

ವಿಡಿಯೋ..| ಬೆಂಗಳೂರು : ಬಾಡಿಗೆ ವಿಚಾರಕ್ಕೆ ನಡು ರಸ್ತೆಯಲ್ಲೇ ಇಬ್ಬರು ಯುವತಿಯರು-ಆಟೋ ಚಾಲಕನ ನಡುವೆ ಹೊಡೆದಾಟ

ಬೆಂಗಳೂರು: ಬೆಂಗಳೂರು ಮಹಾನಗರದ ನಗರದ ಎಚ್‌ಎಸ್‌ಆರ್ ಲೇಔಟ್ 3ನೇ ಸೆಕ್ಟರ್‌ನಲ್ಲಿ ಇಬ್ಬರು ಯುವತಿಯರು ಮತ್ತು ಆಟೋ ಚಾಲಕನ ನಡುವೆ ನಡೆದ ಬೀದಿ ಜಗಳದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಯುವತಿಯರು ಮತ್ತು ಆಟೋ ಚಾಲಕ ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. … Continued

ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಉಕ್ಕು ಘಟಕ ನಿರ್ಮಿಸಲಿರುವ ಭಾರತದ ಎಸ್ಸಾರ್‌ ಕಂಪನಿ : ಟ್ರಂಪ್‌ ಘೋಷಣೆ

ವಾಷಿಂಗ್ಟನ್‌ : ಭಾರತದ ಎಸ್ಸಾರ್‌ ಗ್ರೂಪ್‌ ಅಮೆರಿಕದಲ್ಲಿ ತನ್ನ ಅತಿದೊಡ್ಡ ವಿದೇಶಿ ಹೂಡಿಕೆ ಯೋಜನೆಗಳಲ್ಲಿ ಒಂದನ್ನು ಘೋಷಿಸಿದ್ದು, ಒಟ್ಟು $18 ಬಿಲಿಯನ್‌ (ಸುಮಾರು ₹15 ಲಕ್ಷ ಕೋಟಿ) ಹೂಡಿಕೆ ಮಾಡಲು ಮುಂದಾಗಿದೆ. ಇದರಲ್ಲಿ $15 ಬಿಲಿಯನ್‌ ವೆಚ್ಚದ ಬೃಹತ್‌ ಉಕ್ಕು ಘಟಕವನ್ನು ಅಯೋವಾ ರಾಜ್ಯದಲ್ಲಿ ಸ್ಥಾಪಿಸುವ ಯೋಜನೆ ಸೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು … Continued

ಹುಣಸೂರು : ಶಾಲಾ ಬಸ್ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಶಾಲಾ ಬಸ್ ಹರಿದು ಮಗು ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಾಲಾ ವಾಹನದಲ್ಲಿತನ್ನ ೪ ವರ್ಷದ ಮಗನನ್ನು ಖಾಸಗಿ ವಿದ್ಯಾ ಸಂಸ್ಥೆಯ ಶಾಲಾ ವಾಹನದಿಂದ ಕೆಳಗಿಳಿಸಲು ತಾಯಿ ಹೋಗಿದ್ದಾಗ ಈ ದುರಂತ ಸಂಭವಿಸಿದೆ. … Continued

ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ; ಆದ್ರೆ ಯಾವುದೇ ಪಕ್ಷ ಸೇರಲ್ಲ ಎಂದು ಸ್ಪಷ್ಟನೆ

ಲಕ್ನೋ : ಉತ್ತರ ಪ್ರದೇಶ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಆಡಳಿತ ಸೇವೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳ ಬಳಿಕ ಮಂಗಳವಾರ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ರಾಜಕೀಯ ಪಯಣವು ಉತ್ತರ ಪ್ರದೇಶದಿಂದಲೇ ಆರಂಭವಾಗಲಿದ್ದು, ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆಯ ನಂತರ ಅವರ ಮುಂದಿನ … Continued

ಅಕ್ಟೋಬರ್ 6ರ ವರೆಗೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ; ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತಿಮ ಹಂತದಲ್ಲಿದ್ದರೂ, ಅರಬ್ಬಿ ಸಮುದ್ರದಿಂದ ಬರುತ್ತಿರುವ ತೇವಾಂಶಭರಿತ ಗಾಳಿಯ ಪರಿಣಾಮವಾಗಿ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಅಕ್ಟೋಬರ್ 6ರವರೆಗೆ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೋಮವಾರ ತಡರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕರಾವಳಿ ಕರ್ನಾಟಕದ ಕೆಲವು ಕಡೆ ಮಂಗಳವಾರ … Continued

ಷೇರುಪೇಟೆ ಲಿಸ್ಟಿಂಗ್‌ ತಪ್ಪಿಸಲು ಟಾಟಾ ಸನ್ಸ್‌ ಪುನರ್ರಚನೆಗೆ ಟಾಟಾ ಟ್ರಸ್ಟ್‌ಗಳಿಂದ ಪ್ರಸ್ತಾವನೆ

ಮುಂಬೈ: ಟಾಟಾ ಸಮೂಹದ ಹೋಲ್ಡಿಂಗ್‌ ಕಂಪನಿಯಾದ ಟಾಟಾ ಸನ್ಸ್‌ ಅನ್ನು ಪುನರ್ರಚಿಸುವ ಮಹತ್ವದ ಯೋಜನೆಯನ್ನು ಟಾಟಾ ಟ್ರಸ್ಟ್‌ಗಳು ಮುಂದಿಟ್ಟಿವೆ. ಇದರ ಭಾಗವಾಗಿ ಟಾಟಾ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ (TESS) ಮತ್ತು ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ (TCE) ಕಂಪನಿಗಳನ್ನು ಟಾಟಾ ಸನ್ಸ್‌ ಜತೆಗೆ ವಿಲೀನಗೊಳಿಸುವ ಪ್ರಸ್ತಾವನೆ ಮಾಡಲಾಗಿದೆ. ಈ ಯೋಜನೆಯಿಂದ ಟಾಟಾ ಸನ್ಸ್‌ ಅನ್ನು … Continued

ಬೆಚ್ಚಿಬೀಳಿಸುವ ವಿಡಿಯೋ | ನೇಪಾಳದಲ್ಲಿ ಮತ್ತೊಂದು ಭೀಕರ ಭೂಕುಸಿತ: ಕೆಲವೇ ಸೆಕೆಂಡ್‌ಗಳಲ್ಲಿ ಬೆಟ್ಟವೇ ಇಲ್ಲ !

ಕಠ್ಮಂಡು: ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನೇಪಾಳದ ಮುಸ್ತಾಂಗ್ ಜಿಲ್ಲೆಯಲ್ಲಿ ಪರ್ವತದ ಒಂದು ಭಾಗ ಕಾಳಿ ಗಂಡಕಿ ನದಿಗೆ ಕುಸಿದುಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಬೆಟ್ಟದ ಇಳಿಜಾರು ಕುಸಿದು ನದಿಗೆ ಬೀಳುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಜನರು … Continued