ದೆಹಲಿ ಪಿಜಿ ಕಟ್ಟಡ ಕುಸಿತ : ಸಾವಿನ ಸಂಖ್ಯೆ 6ಕ್ಕೆ ಏರಿಕೆ

ನವದೆಹಲಿ: ದಕ್ಷಿಣ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಸಂಭವಿಸಿದ ಐದು ಅಂತಸ್ತಿನ ಪಿಜಿ ಹಾಸ್ಟೆಲ್‌ (PG hostel) ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಭಾನುವಾರ ನಡೆದ ಈ ದುರಂತದ ರಾತ್ರಿ ಕಾರ್ಯಾಚರಣೆ ವೇಳೆ ರಕ್ಷಿಸಲಾದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ 11 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 30 … Continued

ರಕ್ಷಾ ಬಂಧನ ಹಬ್ಬದಂದೇ ಮಾರಕವಾಯ್ತು ಮಾತು : ಅತ್ತಿಗೆಯನ್ನು ಕೊಂದು ಟ್ಯಾಂಕ್‌ಗೆ ಶವ ಎಸೆದ ನಾದಿನಿ !

ಇಂದೋರ್ (ಮಧ್ಯಪ್ರದೇಶ): ರಕ್ಷಾಬಂಧನ ಹಬ್ಬದಂದೇ ಸಣ್ಣ ಮಾತಿನ ಚಕಮಕಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಜೈಲಿನಲ್ಲಿರುವ ತನ್ನ ಸಹೋದರನ ಕುರಿತು ಹಗುರವಾಗಿ ಮಾತನಾಡಿದಳೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸ್ವಂತ ಅತ್ತಿಗೆಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ದುರ್ದೈವಿಯನ್ನು ವಂದನಾ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಆಕೆಯ ನಾದಿನಿ ಪಾರ್ವತಿ ಬಾಯಿ … Continued

ಕೊಪ್ಪಳ | ಕೆಲಸದಿಂದ ತಪ್ಪಿಸಿಕೊಳ್ಳಲು ʼಎಐʼನಲ್ಲಿ ಹುಲಿ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟು ಹೆದರಿಸಿದ ಯುವಕ ; ಕೊನೆಗೂ ಸಿಕ್ಕಿಬಿದ್ದ

ಕೊಪ್ಪಳ : ಕೀಟಲೆ ಮಾಡುವವರ ಕೈಗೆ ಕೃತಕ ಬುದ್ಧಿಮತ್ತೆ (AI) ಸಿಕ್ಕಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ತಾಜಾಉದಾರಹರಣೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೆಲಸಕ್ಕೆ ಹೋಗಲು ಇಷ್ಟವಿಲ್ಲದ ಯುವಕನೊಬ್ಬ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಹುಲಿಯ ನಕಲಿ ಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನಂತರ ಆ ಸುದ್ದಿ ಕ್ಷನಾರ್ಧದಲ್ಲಿ ಕಾಡ್ಗಿಚ್ಚಿನಂತೆ ಕೊಪ್ಪಳ ಜಿಲ್ಲೆಯ ಕಾವಲಿ … Continued

‘ಸತ್ತಿದ್ದಾನೆ’ ಎಂದು ಭಾವಿಸಲಾಗಿದ್ದ ತಮ್ಮ 35 ವರ್ಷಗಳ ಬಳಿಕ ಪತ್ತೆ : ಕುಟುಂಬ ಒಂದಾಗಿಸಿದ ಮತದಾರರ ‘ಎಸ್‌ಐಆರ್‌’ ಪರಿಶೀಲನೆ !

ಚಂಡೀಗಢ : ಪೋಲಿಯೋ ಚಿಕಿತ್ಸೆಯ ಖರ್ಚು ಬಡ ಕುಟುಂಬಕ್ಕೆ ಹೊರೆಯಾಗಬಾರದು ಎಂಬ ಒಂದೇ ಕಾರಣಕ್ಕೆ 35 ವರ್ಷಗಳ ಹಿಂದೆ ಮನೆ ತೊರೆದಿದ್ದ ವ್ಯಕ್ತಿಯನ್ನು ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಶೀಲನೆ’ (SIR) ಪ್ರಕ್ರಿಯೆಯು ಸುದೀರ್ಘ ಸಮಯದ ನಂತರ ಅವರ ಕುಟುಂಬದ ಜೊತೆ ಪುನರ್ಮಿಲನಕ್ಕೆ ಕಾರಣವಾದ ಅಪರೂಪದ ಭಾವನಾತ್ಮಕ ಘಟನೆ ಹರ್ಯಾಣದ ಜಿಂದ್‌ ಜಿಲ್ಲೆಯಲ್ಲಿ ನಡೆದಿದೆ. ಸೀತಾರಾಮ … Continued

‘ಬೈ ಬೈ ಪಾಪಾ’ ಎಂದು ಫೋನ್‌ನಲ್ಲಿ ತಂದೆಗೆ ಹೇಳಿ ರಭಸದ ನದಿಗೆ ಹಾರಿದ ಯುವತಿ

ಜಮ್ಮು: “ಬೈ ಬೈ ಪಪ್ಪಾ…” – ಇವು ತಂದೆಗೆ ಫೋನ್‌ ಕರೆ ಮಾಡಿ ಯುವತಿಯೊಬ್ಬಳು ಆಡಿದ ಕೊನೆಯ ಮಾತುಗಳು. ಹೀಗೆಂದ ಆಕೆ ಸೇತುವೆಯ ಮೇಲಿಂದ ಭೋರ್ಗರೆಯುವ ಚೀನಾಬ್‌ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ. ನದಿಗೆ ಹಾರಿದ ಯುವತಿಯನ್ನು ಕೃಷ್ಣಲಾಲ ಎಂಬವರ ಪುತ್ರಿ ಪಾಯಲ್ ದೇವಿ … Continued

ಎವರೆಸ್ಟ್‌ ಏರುವವರಿಂದಲೇ ಈಗ ಹಿಮನದಿಗೆ ಕಂಟಕ ; ದಿನಕ್ಕೆ 6000 ಲೀಟರ್ ಮೂತ್ರದಿಂದ ಕರಗುತ್ತಿದೆ ಹಿಮ….!

ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್‌ ಅನ್ನು ಸ್ಪರ್ಶಿಸುವ ಕನಸಿನೊಂದಿಗೆ ಸಾವಿರಾರು ಪರ್ವತಾರೋಹಿಗಳು ಪ್ರತಿವರ್ಷ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಆಗಮಿಸುತ್ತಾರೆ. ಈ ಪರ್ವತಾರೋಹಿಗಳು ಬಿಟ್ಟುಹೋಗುತ್ತಿರುವ ತ್ಯಾಜ್ಯ ಹಾಗೂ ಮಾನವ ಚಟುವಟಿಕೆಗಳು ಈಗಾಗಲೇ ಜಾಗತಿಕ ತಾಪಮಾನದಿಂದ ತತ್ತರಿಸಿರುವ ಹಿಮನದಿಯ ಮೇಲೆ ಭಾರೀ ಪರಿಣಾಮಬೀರುತ್ತಿದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ. ಅವರು ಬಿಟ್ಟುಹೋಗುತ್ತಿರುವುದು ಕೇವಲ ಹೆಜ್ಜೆಗುರುತುಗಳಲ್ಲ … Continued

ಮೈ ಜುಂ ಎನ್ನುವ ವಿಡಿಯೊ | ಹಠಾತ್‌ ಪ್ರವಾಹದಲ್ಲಿ ಸಿಲುಕಿದ ಬೈಕರ್‌; ಹಗ್ಗದಂತೆ ದುಪಟ್ಟಾ ಬಳಸಿ ಆತನನ್ನು ರಕ್ಷಿಸಿದ ಕುಟುಂಬ

ಚಂಬಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭಾರಿ ಮಳೆಯಿಂದ ಏಕಾಏಕಿ ಉಂಟಾದ ಪ್ರವಾಹದ ರಭಸಕ್ಕೆ ಸಿಲುಕಿದ್ದ ಬೈಕ್ ಸವಾರನನ್ನು ಸ್ಥಳೀಯ ಕುಟುಂಬವೊಂದು ತಮ್ಮ ಪ್ರಾಣದ ಹಂಗು ತೊರೆದು ಸಾಹಸದಿಂದ ರಕ್ಷಿಸಿದೆ. ಕುಟುಂಬದ ಇಬ್ಬರು ಮಹಿಳೆಯರು, ಅವರಲ್ಲಿ ಓರ್ವ ನವವಿವಾಹಿತೆ, ತಮ್ಮ ದುಪಟ್ಟಾವನ್ನೇ ತಾತ್ಕಾಲಿಕ ಹಗ್ಗವನ್ನಾಗಿ ಬಳಸಿ ಬೈಕ್ ಸವಾರನನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತಂದಿದ್ದಾರೆ. ಈ ರಕ್ಷಣಾ … Continued

ವಿಡಿಯೋ | ಹೈವೇಯಲ್ಲಿ ಧಗಧಗನೆ ಉರಿದ ಕೆಎಸ್‌ಆರ್‌ಟಿಸಿ ‘ಪವರ್ ಪ್ಲಸ್’ ಎಲೆಕ್ಟ್ರಿಕ್ ಬಸ್

ಮೈಸೂರು: ಬ್ರೇಕ್ ಜಾಮ್ ಆದ ಪರಿಣಾಮ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ‘ಪವರ್ ಪ್ಲಸ್’ ಎಲೆಕ್ಟ್ರಿಕ್ (EV) ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ಮೈಸೂರು-ಹುಣಸೂರು ಮುಖ್ಯ ರಸ್ತೆಯ ಬಿಳಿಕೆರೆ ಸಮೀಪದ ರಂಗಾಯಣಕೊಪ್ಪಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 18 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕೊಡಗು ಜಿಲ್ಲೆಯ … Continued

ಅಂತ್ಯಸಂಸ್ಕಾರ ನಡೆದು 15 ದಿನಗಳ ಬಳಿಕ ‘ನಿಮ್ಮ ಮಗ ಜೀವಂತವಾಗಿದ್ದಾನೆ’ ಎಂದು ಪೊಲೀಸರಿಂದ ಬಂತು ಫೋನ್‌ ಕಾಲ್‌…!

ಕಪುರ್ತಲಾ (ಪಂಜಾಬ್): ತಮ್ಮ ಮಗನನ್ನು ಕಳೆದುಕೊಂಡ ದುಃಖದಲ್ಲಿ ಅಂತ್ಯಸಂಸ್ಕಾರ ಹಾಗೂ ಪ್ರಾರ್ಥನಾ ವಿಧಿಗಳನ್ನು ನಡೆಸಿದ್ದ ಪಂಜಾಬ್‌ನ ಒಂದು ಕುಟುಂಬವೊಂದಕ್ಕೆ 15 ದಿನಗಳ ಬಳಿಕ ನಿಮ್ಮ ಮಗ ಜೀವಂತವಾಗಿದ್ದಾನೆ ಎಂದು ಜೈಲಿನಿಂದ ಕರೆಯೊಂದು ನಂತರ ಬೆಚ್ಚಿಬಿದಿದ್ದಾರೆ. ಈ ಅಚ್ಚರಿಯ ಘಟನೆ ಪಂಜಾಬ್‌ನ ಕಪುರ್ತಲಾದಲ್ಲಿ ನಡೆದಿದೆ. ಮೃತನಾಗಿದ್ದಾನೆ ಎಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ 15 ದಿನಗಳ ಬಳಿಕ ನಿಮ್ಮ … Continued

ವಿಡಿಯೋ | ಅಮೆರಿಕ ಯುದ್ಧನೌಕೆಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನಿನ 3 ತೈಲ ಟ್ಯಾಂಕರ್‌ ಧ್ವಂಸಗೊಳಿಸಿದ ಅಮೆರಿಕ

ವಾಷಿಂಗ್ಟನ್‌/ ತೆಹ್ರಾನ್‌ : ಅಮೆರಿಕದ ನೌಕಾಪಡೆಯ ಎರಡು ಯುದ್ಧನೌಕೆಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಬೆನ್ನಲ್ಲೇ ಅಮೆರಿಕ ಸೇನೆ ಶನಿವಾರ ಇರಾನ್‌ಗೆ ಸೇರಿದ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಎಕ್ಸ್‌ (X)ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, … Continued