ಕಾರವಾರ : ಕಸದ ರಾಶಿಯಲ್ಲಿ ಸಿಕ್ಕ ಚಿನ್ನದ ಓಲೆಯನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ನಗರಸಭೆ ಸಿಬ್ಬಂದಿ

ಕಾರವಾರ: ಕಸದ ರಾಶಿಯಲ್ಲಿ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಬದಲು, ಅವುಗಳ ವಾರಸುದಾರರನ್ನು ಪತ್ತೆಹಚ್ಚಿ ಹಿಂದಿರುಗಿಸುವ ಪ್ರಾಮಾಣಿಕತೆ ಎಲ್ಲರಲ್ಲೂ ಕಾಣಸಿಗುವುದಿಲ್ಲ. ಆದರೆ,  ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯ ಇಬ್ಬರು ಸಿಬ್ಬಂದಿ ತ್ಯಾಜ್ಯದ ರಾಶಿಯಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ದೀಪಾವಳಿ ಹಬ್ಬದ ಪೂಜೆಯ ಬಳಿಕ ಮನೆಯ ತ್ಯಾಜ್ಯವನ್ನು … Continued

ರಾಜೀವ ಗಾಂಧಿಗೆ ರಾಜಕೀಯ ಬೇಡ ಎಂದು ಬೇಡಿಕೊಂಡಿದ್ದೆ, ಆದ್ರೆ ರಾಹುಲ್‌ನನ್ನು ತಡೆಯಲಿಲ್ಲ: ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ

ನವದೆಹಲಿ: ಪತಿ ರಾಜೀವ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಬಾರದು ಎಂದು ತಾನು ಅಂಗಲಾಚಿ ಬೇಡಿಕೊಂಡಿದ್ದೆ. ಆದರೆ ಮಗ ರಾಹುಲ್ ಗಾಂಧಿ ರಾಜಕೀಯಕ್ಕೆ ಧುಮುಕುವ ನಿರ್ಧಾರ ಕೈಗೊಂಡಾಗ ತಾನು ಅದನ್ನು ವಿರೋಧಿಸಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of … Continued

ವಂದೇ ಮಾತರಂ ಗೀತೆ ಪೂರ್ಣಗೊಳ್ಳುವ ಮೊದಲೇ ಕುಳಿತ ಕೇರಳ ಆರೋಗ್ಯ ಸಚಿವ ; ವಿವಾದ

ಕಾಸರಗೋಡು:  ರಾಷ್ಟ್ರಗೀತೆಯಷ್ಟೇ ಮಹತ್ವ ಹೊಂದಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವಿಕೆ ಪೂರ್ಣಗೊಳ್ಳುವ ಮೊದಲೇ ಕೇರಳದ ಆರೋಗ್ಯ ಸಚಿವ ಕೆ. ಮುರಳೀಧರನ್ ವೇದಿಕೆಯಲ್ಲಿ ಕುಳಿತುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಚಿವರ ಜೊತೆಗೆ ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರೂ ಕುಳಿತಿದ್ದು, ಈ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಕೆಲ ನಾಯಕರು ಮತ್ತು ಅಧಿಕಾರಿಗಳು ವಂದೇ … Continued

ಆಂಧ್ರ ಡಿಸಿಎಂ-ಖ್ಯಾತ ನಟ ಪವನ ಕಲ್ಯಾಣ-ಅನ್ನಾ ದಾಂಪತ್ಯದಲ್ಲಿ ಬಿರುಕು ; ವಿಚ್ಛೇದನ ಘೋಷಣೆ

ನವದೆಹಲಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ ಕಲ್ಯಾಣ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ ಅವರು 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದಾಗಿ ದಂಪತಿ ಘೋಷಿಸಿದ್ದಾರೆ. ಪವನ ಕಲ್ಯಾಣ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಡರಾತ್ರಿ ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಪ್ರತ್ಯೇಕವಾಗುವ ನಿರ್ಧಾರವನ್ನು … Continued

2004ರಲ್ಲಿ ಸೋನಿಯಾ ಗಾಂಧಿ ಯಾಕೆ ಪ್ರಧಾನಿ ಆಗಲಿಲ್ಲ? ಮೊದಲು ʼಯಸ್‌’ ಎಂದವರು ನಂತ್ರ ನೋ’ ಎಂದಿದ್ದೇಕೆ? ಆತ್ಮಕಥೆಯಲ್ಲಿ ಕಾರಣ ಬಹಿರಂಗ

ನವದೆಹಲಿ : 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸುವುದಕ್ಕೂ ಹಲವು ತಿಂಗಳುಗಳ ಮೊದಲೇ ಸೋನಿಯಾ ಗಾಂಧಿ ಅವರು ತಾವು ಪ್ರಧಾನಿಯಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಕುರಿತು ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೇಳಿದಾಗಲೂ, ಪಕ್ಷ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. … Continued

ಕಾರವಾರ : ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್‌ ಸಿಬ್ಬಂದಿ

ಕಾರವಾರ: ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯೊಬ್ಬರನ್ನು ಸಮಯಪ್ರಜ್ಞೆಯಿಂದ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ ಬಳಿ ನಡೆದಿದೆ ಎಂದು ವರದಿಯಾಗಿದೆ. ಮಲ್ಲಾಪುರ ಪೊಲೀಸ್ ಠಾಣೆಯ ಸಾಯಿನಂದ ವಿ. ನಾಯ್ಕ ಅವರು ಕರ್ತವ್ಯ ನಿಮಿತ್ತ ಮಲ್ಲಾಪುರದಿಂದ ಕಾರವಾರಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಕೋಡಿಬಾಗ ಸೇತುವೆಯ ಮೇಲೆ … Continued

ಅತ್ಯಾಚಾರ ಪ್ರಕರಣ : ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕ ವಶಕ್ಕೆ

ಕೋಲ್ಕತ್ತಾ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಪರೇಶರಾಮ ದಾಸ್ ಅವರನ್ನು ಪೊಲೀಸರು ಸೋಮವಾರ (ನವೆಂಬರ್ 9) ಸಂಜೆ ಬಂಧಿಸಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬರುವ ಕ್ಯಾನಿಂಗ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಾಸ್, ಕಳೆದ ಸುಮಾರು 17 ದಿನಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಮುಂಬೈಗೆ ವಿಮಾನದಲ್ಲಿ … Continued