ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ

ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಚಂದ್ರಶೇಖರ ಜೋಸೆಫ್ ವಿಜಯ ಅವರು ಭಾನುವಾರ (ಮೇ 10) ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅವರು ವಿಜಯ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು ದೇವರ ಹೆಸರಿನಲ್ಲಿ ಪ್ರಮಾಣ ವಚನ … Continued

ಸಚಿವ ಡಿ.ಸುಧಾಕರ ನಿಧನ

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖಿಕ‌ ಇಲಾಖೆ ಸಚಿವ ಡಿ. ಸುಧಾಕರ (D Sudhakar passes away) ಅವರು ಇಂದು ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಡಿ. ಸುಧಾಕರ ಅವರು ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ ಬೆಂಗಳೂರಿನ ಕಿಮ್ಸ್ … Continued

ಅಮೆರಿಕ ವಿರುದ್ಧದ ಯುದ್ಧದಲ್ಲಿ ಇರಾನ್‌ ಬಲಪಡಿಸಲು ರಷ್ಯಾದಿಂದ ರಹಸ್ಯವಾಗಿ ಘಾತಕ ತಂತ್ರಜ್ಞಾನದ ನೆರವು…!

ಮಾಸ್ಕೋ: ಇರಾನ್ ವಿರುದ್ಧದ ಅಮೆರಿಕದ ಸೇನಾ ತಂತ್ರಗಳು ನಿರೀಕ್ಷಿತ ಯಶಸ್ಸು ಕಾಣದಿರಲು ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವೇ ಕಾರಣ ಎಂದುವರದಿಯೊಂದು ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾ ಈಗ ‘ಜಾಮ್’ ಮಾಡಲು ಅಸಾಧ್ಯವಾದ (Unjammable) ಅತ್ಯಾಧುನಿಕ ಡ್ರೋನ್‌ಗಳನ್ನು ಇರಾನ್‌ಗೆ ಒದಗಿಸಲು ಮುಂದಾಗಿದೆ ಎಂದು ಆ ವರದಿ ತಿಳಿಸಿದೆ. ರಷ್ಯಾದ ಸೇನಾ ಗುಪ್ತಚರ ಸಂಸ್ಥೆಯಾದ ‘ಜಿಆರ್‌ಯು’ (GRU) … Continued

ಸತೀಶನ್, ವೇಣುಗೋಪಾಲ ಅಥವಾ ಚೆನ್ನಿತ್ತಲ…? ಕೇರಳದ ಮುಂದಿನ ಸಿಎಂ ಯಾರು ?

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಪೂರ್ಣ ಬಹುಮತದೊಂದಿಗೆ ಭರ್ಜರಿ ಜಯಭೇರಿ ಬಾರಿಸಿದೆ. ಮೈತ್ರಿಕೂಟವು ಒಟ್ಟು 140 ಸ್ಥಾನಗಳಲ್ಲಿ 102 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ಪಕ್ಷವೊಂದೇ 63 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಆದರೆ, ಈ ಅಭೂತಪೂರ್ವ ಯಶಸ್ಸಿನ ನಡುವೆಯೂ ಕೇರಳಂಗೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್ … Continued

ಅಪರಾಧ ಪ್ರಜ್ಞೆ….ಡಿಎನ್‌ಎ….ʼಪ್ರೇತ’ದ ಭೀತಿ : 34 ವರ್ಷಗಳ ನಂತರ ಬಯಲಾಯ್ತು ಭೀಕರ ಕೊಲೆ ರಹಸ್ಯ !

ಅಹಮದಾಬಾದ್ : ಅಹಮದಾಬಾದ್ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಬರೋಬ್ಬರಿ ಮೂರು ದಶಕಗಳ ಕಾಲ ರಹಸ್ಯವಾಗಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. 18 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಲಾಗಿದ್ದ ಮಹಿಳೆಯ ಅಸ್ಥಿಪಂಜರವನ್ನು ಡಿಎನ್‌ಎ (DNA) ಪರೀಕ್ಷೆಯ ನೆರವಿನಿಂದ ಗುರುತಿಸುವ ಮೂಲಕ, 34 ವರ್ಷಗಳ ಹಿಂದೆ ನಡೆದಿದ್ದ ಅಪರಾಧಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಹೂತುಹೋಗಿದ್ದ ರಹಸ್ಯ ಹೊರಬಂದಿದ್ದು … Continued

ತಮಿಳುನಾಡಲ್ಲಿ ರಾಜಕೀಯ ಅನಿಶ್ಚಿತತೆ ಅಂತ್ಯ : ತಮಿಳುನಾಡು ಸಿಎಂ ಆಗಿ ವಿಜಯ ನಾಳೆ ಪ್ರಮಾಣವಚನ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತಾಗಿದ್ದ ಕುತೂಹಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ ಅವರು ಶನಿವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲರ ಅನುಮೋದನೆಯ ನಂತರ, ಭಾನುವಾರ (ಮೇ ೧೦) ಬೆಳಿಗ್ಗೆ 10 ಗಂಟೆಗೆ ವಿಜಯ ತಮಿಳುನಾಡಿನ ಮುಖ್ಯಮಂತ್ರಿಯಾಗಿ … Continued

ತಮಿಳುನಾಡು : ವಿಜಯ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ; ಸರ್ಕಾರ ರಚನೆಗೆ ಹಾದಿ ಸುಗಮ

ಚೆನ್ನೈ : ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರ ‘ಸಂಖ್ಯಾಬಲದ ಆತಂಕ’ ಕೊನೆಗೂ ಮುಗಿದಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚನೆ ಹಾದಿ ಸುಗಮವಾಗಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮೈತ್ರಿಕೂಟವು ಈ ಮೊದಲು 116 ಸದಸ್ಯರ ಬಲ ಹೊಂದಿತ್ತು. ಈಗ ವಿಸಿಕೆ (VCK) … Continued

ವಿಡಿಯೋ | ಬಂಗಾಳ ಸಿಎಂ ಪದಗ್ರಹಣ ಸಮಾರಂಭಲ್ಲಿ 98 ವರ್ಷದ ಮಖನ್‌ಲಾಲ ಸರ್ಕಾರ ಪಾದಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ : ಇವರು ಯಾರು ?

ಕೋಲ್ಕತ್ತಾ: ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಸುವೇಂದು ಅಧಿಕಾರಿ ಅವರ ನೇತೃತ್ವದ ರಾಜ್ಯದ ಮೊತ್ತಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಜನಸಂಘದ ಕಾಲದ ಹಿರಿಯ ನಾಯಕ, 98 ವರ್ಷದ ಮಾಖನ್‌ಲಾಲ್ ಸರ್ಕಾರ ಅವರ ಪಾದ … Continued

ಪಶ್ಚಿಮ ಬಂಗಾಳದ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ: ಸಚಿವರಾಗಿ ಐವರಿಂದ ಪ್ರಮಾಣ ವಚನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು, ಶನಿವಾರ ಬಿಜೆಪಿಯ ಯುಗ ಆರಂಭವಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಸುವೇಂದು ಅಧಿಕಾರಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಐವರು ಶಾಕಸರು ಸಚಿವರಾಗಿ … Continued

ವಿಡಿಯೋ | ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ: 30 ವರ್ಷಗಳ ಹಿಂದಿನ ಪ್ರಮೋದ ಮಹಾಜನ್ ಮಾರ್ಮಿಕ ಭಾಷಣ ಈಗ ಮತ್ತೆ ವೈರಲ್‌

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿರುವ ಬೆನ್ನಲ್ಲೇ, ಸುಮಾರು ಮೂರು ದಶಕಗಳ ಹಿಂದಿನ ಸಂಸತ್ತಿನ ರೋಚಕ ಪ್ರಸಂಗವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಅಂದು ಬಿಜೆಪಿ ನಾಯಕ ಪ್ರಮೋದ ಮಹಾಜನ್ ಅವರು ಮೈತ್ರಿ ರಾಜಕೀಯದ ವಿಡಂಬನೆ ಮಾಡುತ್ತಾ ನೀಡಿದ್ದ ಭಾಷಣವು ಇಂದಿನ … Continued