ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರ, 11 ವಾಯುನೆಲೆ, 13 ಯುದ್ಧ ವಿಮಾನ ಧ್ವಂಸ : ಆಪರೇಷನ್ ಸಿಂಧೂರ ವರ್ಷಾಚರಣೆ ; ಭಾರತದಿಂದ ಮಾಹಿತಿ ಬಿಡುಗಡೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭಾರತವು ಪಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ (Operation Sindoor)ʼ ಸೇನಾ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದಂದು ಭಾರತವು ಪಾಕಿಸ್ತಾನಕ್ಕೆ ಉಂಟಾದ ಭಾರಿ ನಷ್ಟದ ಅಂಕಿಅಂಶಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳು, ವಾಯುನೆಲೆಗಳು ಮತ್ತು ಯುದ್ಧ ವಿಮಾನಗಳನ್ನು … Continued

ರಾಜೀನಾಮೆ ಕೊಡಲ್ಲ ಎಂದು ಹಠ ಹಿಡಿದ ಮಮತಾಗೆ ಶಾಕ್‌ ; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಸಂಘರ್ಷಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಬೆನ್ನಲ್ಲೇ, ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ. ವಿಧಾನಸಭೆಯ ಐದು ವರ್ಷಗಳ ಅವಧಿಯು ಗುರುವಾರ ಮಧ್ಯರಾತ್ರಿ ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ರಾಜ್ಯಪಾಲರು … Continued

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕ ನಿಧನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಜನಪರ ಹೋರಾಟಗಾರ ಹಾಗೂ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷರಾಗಿದ್ದ ರಮಾನಂದ ನಾಯಕ ಹಿಚ್ಕಡ (78) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರಬಂಧು ಬಳಗದವರನ್ನು ಅಗಲಿದ್ದಾರೆ. ಸಜ್ಜನಿಕೆ, ಸರಳತೆ … Continued

ಮನೆ ಕಟ್ಟಲು ತೋಡಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರ ಸಾವು

ಧಾರವಾಡ: ಇಬ್ಬರು ಬಾಲಕರು ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರನ್ನು ಕುಮಾರ ನಿಂಗಪ್ಪ ಮುದಕಣ್ಣವರ (7) ಮತ್ತು ಪ್ರಥಮ ಸುರೇಶ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ. ಪ್ರಥಮ ಉಳ್ಳಾಗಡ್ಡಿ ಎಂಬಾತ ಧಾರವಾಡದ ಸತ್ತೂರಿನವನು. ರಜೆ ಇದ್ದಿದ್ದರಿಂದ ಮನಸೂರಿಗೆ ಬಂದಿದ್ದ ಎನ್ನಲಾಗಿದೆ. ಇವರಿಬ್ಬರು ಬುಧವಾರ … Continued

ಪುಸ್ತಕ ಎಂಬುದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ

ಸಿದ್ದಾಪುರ : ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ; ಅದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ ಎಂದು ಸಿದ್ದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಭಿಪ್ರಾಯಪಟ್ಟರು. ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಲಯನ್ಸ್‌ ಬಾಲಭವನದಲ್ಲಿ ಆಯೋಜಿಸಲಾದ ಪತ್ರಕರ್ತ, … Continued

ಬೆಂಗಳೂರು : ಮೇ 8ರಂದು ಭಾರತೀಯ ಸಾಂಸ್ಕೃತಿಕತೆ, ನಾಟ್ಯಶಾಸ್ತ್ರ ಮತ್ತು ಯಕ್ಷಗಾನ ಕುರಿತು ಮಾತುಕತೆ-ಸಂವಾದ

ಬೆಂಗಳೂರು : ಅಜಿಂ ಪ್ರೇಮಜೀ ವಿಶ್ವ ವಿದ್ಯಾಲಯದಿಂದ ಭಾರತೀಯ ಸಾಂಸ್ಕೃತಿಕತೆ,  ನಾಟ್ಯಶಾಸ್ತ್ರ ಹಾಗೂ ಯಕ್ಷಗಾನ ಈ ಕರಾವಳಿ ಪರಂಪರೆಯ ದೃಶ್ಯ ಕಾವ್ಯದ ಕುರಿತು  ಮಾತು-ಸಂವಾದ ಕಾರ್ಯಕ್ರಮ ಬೆಂಗಳೂರಿನ ಕೋರಮಂಗಲದ ಇಂಡಿಯನ್‌ ಹೆರಿಟೇಜ್‌ ಅಕಾಡೆಮಿಯಲ್ಲಿ ಮೇ 8ರಂದು ಸಂಜೆ 6:30ರಿಂದ ನಡೆಯಲಿದೆ. ದಶಕರೂಪಕಗಳ ದಶಾವತಾರಗಳು-ಯಕ್ಷಗಾನ ಸಂಶೋಧನಾ ಕೃತಿಯ ಲೇಖಕ ಹಾಗೂ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರು  … Continued

ಮಹಿಳಾ ಸುರಕ್ಷತೆ ಪರಿಶೀಲಿಸಲು ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ ನಿಂತ ಕಮಿಷನರ್ ; ಕಾಡಿದ 40 ಕಾಮುಕರು !

ಹೈದರಾಬಾದ್: ನಗರದಲ್ಲಿ ತಡರಾತ್ರಿ ಸಂಚರಿಸುವ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಖುದ್ದಾಗಿ ಕಣಕ್ಕಿಳಿದ ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ವಿ. ಸುಮತಿ ಅವರು ನಡೆಸಿದ ಕಾರ್ಯಾಚರಣೆಯು ಕರಾಳ ಸತ್ಯವೊಂದನ್ನು ಬಯಲು ಮಾಡಿದೆ. ಸಾಮಾನ್ಯ ಪ್ರಯಾಣಿಕಳಂತೆ ವೇಷ ಧರಿಸಿ ರಸ್ತೆಗಿಳಿದ ಅಧಿಕಾರಿಯನ್ನು ಕೇವಲ 3 ಗಂಟೆಯಲ್ಲಿ ಬರೋಬ್ಬರಿ 40 ಮಂದಿ ಪೀಡಿಸಿದ್ದಾರೆ ! ಬುಧವಾರ … Continued

ಮಮತಾ ಬ್ಯಾನರ್ಜಿಗೆ ಸೋಲುಣಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಗುಂಡಿಕ್ಕಿ ಹತ್ಯೆ

ನವದೆಹಲಿ: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಮತ್ತೆ ರಕ್ತಪಾತ ಮುಂದುವರಿದಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕ ಹಾಗೂ ಮಮತಾ ಬ್ಯಾನರ್ಜಿ ಅವರನ್ನು ಅವರ ಸ್ವಕ್ಷೇತ್ರದಲ್ಲೇ ಹೀನಾಯವಾಗಿ ಸೋಲಿಸಿರುವ ಬಿಜೆಪಿಯ ಹಿರಿಯ ಮುಖಂಡ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರನ್ನು ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು … Continued

ರಾಜ್ಯಪಾಲರಿಗೆ ಮನವರಿಕೆಯಾಗದ ಟಿವಿಕೆ ಸಂಖ್ಯಾ ಬಲ ; ಅಧಿಕಾರಕ್ಕಾಗಿ ತಮಿಳುನಾಡಿನಲ್ಲಿ ಮುಂದುವರಿದ ಕಸರತ್ತು

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜಕಾರಣದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿವೆ. ಚಿತ್ರರಂಗದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಮೊದಲ ಚುನಾವಣೆಯಲ್ಲೇ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)ಪಕ್ಷವು ಸರಳ ಬಹುಮತದ ಸಮೀಪ ಬಂದಿದ್ದರೂ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ಹೆಣಗಾಡುತ್ತಿದೆ. ಏಪ್ರಿಲ್ … Continued

ಜೇನು ತೆಗೆಯಲು ಹೋಗಿ ಬಂಡೆಯ ಸಂದಿನಲ್ಲಿ ಸಿಲುಕಿದ ಬಾಲಕನ ತಲೆ : ಅಲ್ಲಿಯೇ ಇತ್ತು ದೊಡ್ಡ ವಿಷಪೂರಿತ ಹಾವು !

ನಯಾಗಢ (ಒಡಿಶಾ): ಜೇನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಬಂಡೆಯ ಸಂದಿನಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡಿದ ಘಟನೆ ಓಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಬಾಲಕನ ತಲೆ ಸಿಲುಕಿದ್ದ ಅದೇ ಬಂಡೆಯ ಸಂದಿಯಲ್ಲಿ ವಿಷಪೂರಿತ ದೊಡ್ಡ ಹಾವೊಂದು ಕುಳಿತಿದ್ದು, ಬಾಲಕ ಅದರಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ. ಬುಧವಾರ ನಡೆದ ಸುಮಾರು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ … Continued