ಆಂಥ್ರೊಪಿಕ್‌ನ ಎಐ ಸುರಕ್ಷತಾ ವಿಭಾಗದ ಮುಖ್ಯಸ್ಥ ಮೃಣಾಂಕ ಶರ್ಮಾ ರಾಜೀನಾಮೆ ; ‘ಜಗತ್ತು ಅಪಾಯದಲ್ಲಿದೆ’ ಎಂದು ಎಚ್ಚರಿಕೆ

ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಆಂಥ್ರೋಪಿಕ್’ (Anthropic) ಸಂಸ್ಥೆಯ ಸುರಕ್ಷತಾ ಸಂಶೋಧನಾ ವಿಭಾಗದ ಮುಖ್ಯಸ್ಥ ಮೃಣಾಂಕ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರ (ಫೆಬ್ರವರಿ 9) ಸಾಮಾಜಿಕ ಜಾಲತಾಣ ‘X’ ನಲ್ಲಿ ಅವರು ಹಂಚಿಕೊಂಡಿರುವ ಅವರ ರಾಜೀನಾಮೆ ಪತ್ರವು ತಂತ್ರಜ್ಞಾನ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೃಣಾಂಕ ಶರ್ಮಾ … Continued

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ ಜಾಮೀನು‌ ಅರ್ಜಿ ವಜಾ, ಬಂಧನ ಭೀತಿ

ಬೆಂಗಳೂರು : ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕೆ ಆರ್‌ ಪುರ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್‌ ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಇದರಿಂದ ಬಸವರಾಜ ಅವರಿಗೆ ಬಂಧನದ ಭೀತಿ ಎದುರಾಗಿದೆ. 2026ರ ಜನವರಿ 29ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌ ಸುನೀಲದತ್ತ ಯಾದವ್‌ ಅವರ ಏಕಸದಸ್ಯ ಪೀಠವು ಮಂಗಳವಾರ … Continued

‘ಇದೇ ಈಗಿನ ಸ್ಥಿತಿ’ : ಆತ್ಮಕಥೆ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಜನರಲ್ ನರವಾಣೆ

ನವದೆಹಲಿ: ಭಾರತೀಯ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಬಿಡುಗಡೆಗೂ ಮುನ್ನವೇ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಮೌನ ಮುರಿದಿರುವ ನರವಾಣೆ, ತಮ್ಮ ಪುಸ್ತಕದ ಪ್ರಕಟಣೆಯ ಕುರಿತು ಅಧಿಕೃತ ಪ್ರಕಾಶಕರಾದ ‘ಪೆಂಗ್ವಿನ್’ ನೀಡಿದ ಹೇಳಿಕೆಯನ್ನು ಮರುಹಂಚಿಕೊಳ್ಳುವ ಮೂಲಕ … Continued

ಟಿ20 ವಿಶ್ವಕಪ್‌ 2026 : ಭಾರತದ ವಿರುದ್ಧದ ಪಂದ್ಯ ಆಡಲ್ಲ ಎಂದಿದ್ದ ಪಾಕಿಸ್ತಾನ ಯೂ ಟರ್ನ್‌ ಹೊಡೆಯಲು ಕಾರಣಗಳೇನು..?

ಕಳೆದ ಕೆಲವು ದಿನಗಳಿಂದ ಜಾಗತಿಕ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಅನಿಶ್ಚಿತತೆ ಕೊನೆಗೊಂಡಿದೆ. ಫೆಬ್ರವರಿ 15 ರಂದು ನಡೆಯಲಿರುವ ಭಾರತ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪ್ರಸ್ತಾವಿತ ನಿರ್ಧಾರದಿಂದ ಪಾಕಿಸ್ತಾನ ಸರ್ಕಾರ ಹಿಂದೆ ಸರಿದಿದೆ. ರಾಜತಾಂತ್ರಿಕ ಸಂಘರ್ಷ ಮತ್ತು ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ … Continued

ವಿಧಾನಸೌಧದ ಸಚಿವರ ಕಚೇರಿಯಲ್ಲಿ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಕಳ್ಳತನ

ಬೆಂಗಳೂರು : ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರ ವಿಧಾನಸೌಧದಲ್ಲಿ ಕಚೇರಿಯಲ್ಲಿ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನವೀನ ಎಂಬವರು ಕೆಲಸದ ನಿಮಿತ್ತ … Continued

ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ತಂದೆ-ಮಗನ ಬಂಧನ….

ಪಾಟ್ನಾ: ಸುಮಾರು 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಬಿಹಾರದ ಕುಖ್ಯಾತ ಅಪರಾಧಿಗಳಾದ ಮನೋಜ ಸಿಂಗ್ ಮತ್ತು ಆತನ ಪುತ್ರ ಮಾಣಿಕ್ ಸಿಂಗ್‌ನನ್ನು ಬಿಹಾರ ವಿಶೇಷ ಕಾರ್ಯಪಡೆ (STF) ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧಿಸಿದೆ. ಈ ಕಾರ್ಯಾಚರಣೆಗೆ ಬೆಂಗಳೂರಿನ ರಾಜ್ಯ ಗುಪ್ತಚರ ವಿಭಾಗದ ಪೊಲೀಸರು ಸಾಥ್ ನೀಡಿದ್ದಾರೆ. ಬಂಧಿತರಿಂದ ಎಂಟು ಡಾಂಗಲ್‌ಗಳು, ಒಂಬತ್ತು … Continued

ಐಷಾರಾಮಿ ಜೀವನಕ್ಕಾಗಿ 60 ಕಡೆ ದರೋಡೆ: ಬಿಎಂಡಬ್ಲ್ಯೂ ಕಾರು ಇರುವ ಮಾಜಿ ಐಟಿ ಉದ್ಯೋಗಿಯ ಬಂಧನ…!

ವಿಶಾಖಪಟ್ಟಣ: ಐಷಾರಾಮಿ ಜೀವನದ ವ್ಯಾಮೋಹಕ್ಕೆ ಬಿದ್ದು ವಿಶಾಖಪಟ್ಟಣ ಸೇರಿದಂತೆ ಆಂಧ್ರಪ್ರದೇಶದಾದ್ಯಂತ ಸರಣಿ ಮನೆಗಳ್ಳತನ ನಡೆಸುತ್ತಿದ್ದ 27 ವರ್ಷದ ಮಾಜಿ ಐಟಿ ಉದ್ಯೋಗಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಕೇಳಿಬರುತ್ತಿದ್ದ ರಾತ್ರಿ ವೇಳೆಯ ಕಳ್ಳತನದ ದೂರುಗಳ ಬೆನ್ನತ್ತಿದ ಪೊಲೀಸರು, ಸುದೀರ್ಘ ತನಿಖೆಯ ನಂತರ ಅಚ್ಚಿ ಮಹೇಶ ರೆಡ್ಡಿ ಅಲಿಯಾಸ್ ‘ಸನ್ನಿ’ ಎಂಬಾತನನ್ನು ಸೆರೆಹಿಡಿಯುವಲ್ಲಿ … Continued

₹1,000 ಹಣ ಪಡೆದು ಪತ್ನಿಯನ್ನೇ ಸ್ನೇಹಿತರಿಗೆ ಒಪ್ಪಿಸಿದ ಪತಿ ; ಅವರಿಂದ ಸಾಮೂಹಿಕ ಅತ್ಯಾಚಾರ

ಬದೌನ್ (ಉತ್ತರ ಪ್ರದೇಶ): ಕೇವಲ ಒಂದು ಸಾವಿರ ರೂಪಾಯಿ ಹಣಕ್ಕಾಗಿ ಪತಿಯೇ ತನ್ನ ಪತ್ನಿಯನ್ನು ಸ್ನೇಹಿತರಿಗೆ ಒಪ್ಪಿಸಿದ ನಂತರ ಅವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಫೈಜ್‌ಗಂಜ್ ಬೆಹ್ತಾ ಪೊಲೀಸ್ ಠಾಣಾ … Continued

ಟಿ20 ವಿಶ್ವಕಪ್ : ಯು-ಟರ್ನ್ ಹೊಡೆದ ಪಾಕಿಸ್ತಾನ ; ಭಾರತದ ವಿರುದ್ಧದ ಪಂದ್ಯ ಆಡಲು ನಿರ್ಧಾರ…!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)  ಯೂ ಟರ್ನ್‌ ಹೊಡೆದಿದೆ. ಐಸಿಸಿ (ICC) ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ, ಅದು ತಾನು ಈ ಹಿಂದೆ  ಘೋಷಿಸಿದ್ದ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಮೂಲಕ 2026ರ ಟಿ20 ವಿಶ್ವಕಪ್‌ನಲ್ಲಿ ನಿಗದಿಯಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಖಚಿತವಾಗಿದೆ. ಪಾಕಿಸ್ತಾನ … Continued

ರಾಜ್ಯಮಟ್ಟದ ಪ್ರತಿಭಾ ಕಾರಂಜಿ : ಚಿನ್ಮಯ ಕೆರೆಗದ್ದೆ ಪ್ರಥಮ

ಶಿರಸಿ; ಶಾಲಾ ಶಿಕ್ಷಣ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಚಿನ್ಮಯ ಕೆರೆಗದ್ದೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈತ ಪತ್ರಕರ್ತ ಕೃಷ್ಣಮೂರ್ತಿ ಕೆರೆಗದ್ದೆ ಮತ್ತು ಆಶಾ ಕೆರೆಗದ್ದೆ ದಂಪತಿ ಪುತ್ರ. … Continued