ವೀಡಿಯೊ…| ಡ್ರಗ್ಸ್‌ ಸಾಗಿಸುವ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿದ ಅಮೆರಿಕ

ವಾಷಿಂಗ್ಟನ್ : ಕೆರಿಬಿಯನ್ ಸಮುದ್ರದಲ್ಲಿ ನಡೆದ ಮಿಲಿಟರಿ ದಾಳಿಯಲ್ಲಿ ‘ಮಾದಕವಸ್ತು ಸಾಗಣೆಯ ಜಲಾಂತರ್ಗಾಮಿ ನೌಕೆ’ಯನ್ನು ನಾಶಪಡಿಸಿದ ನಂತರ, ಬದುಕಿ ಉಳಿದ ಇಬ್ಬರು ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರನ್ನು ಅವರ ತಾಯ್ನಾಡಾದ ಈಕ್ವೆಡಾರ್ ಮತ್ತು ಕೊಲಂಬಿಯಾಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. “ಮಾದಕವಸ್ತು ಸಾಗಣೆಯ ಚಿರಪರಿಚಿತ ಮಾರ್ಗದಲ್ಲಿ, … Continued

1977ರಲ್ಲಿ ಗೆಳತಿಗೆ ಇರಿದ ವ್ಯಕ್ತಿಯನ್ನು 48 ವರ್ಷಗಳ ನಂತರ ಬಂಧಿಸಿದ ಪೊಲೀಸರು-ಜಾಮೀನು ; 81ನೇ ವಯಸ್ಸಿಗೆ ವಿಚಾರಣೆ…

ಮುಂಬೈ: ತನ್ನ ಗೆಳತಿಗೆ ಚಾಕುವಿನಿಂದ ಇರಿದ ಆರೋಪಿಗೆ ಘಟನೆ ನಡೆದ 48 ವರ್ಷಗಳ ನಂತರ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ “ತಲೆಮರೆಸಿಕೊಂಡಿದ್ದ” 81 ವರ್ಷದ ಚಂದ್ರಶೇಖರ ಮಧುಕರ ಕಾಳೇಕರ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಾಸಿಕ್ಯೂಷನ್‌ನ ಪ್ರಕಾರ, ಕಾಳೇಕರ … Continued

ಸರ್ಕಾರಿ ಜಾಗದಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಬೆಂಗಳೂರು: ಸರ್ಕಾರಿ ಜಾಗದಲ್ಲಿ ಆರ್​ಎಸ್​ಎಸ್​ ಸೇರಿದಂತೆ ಖಾಸಗಿ ಸಂಘಟನೆಗಳ ಚಟುವಟಿಕೆ ನಡೆಸಲು ಕಡ್ಡಾಯವಾಗಿ ಅನುಮತಿಪಡೆಯಬೇಕೆಂದು ಇತ್ತೀಚೆಗೆ ಸಚಿವ ಸಂಪುಟವು ನಿರ್ಧಾರ ಕೈಗೊಂಡ ನಂತರ ಈಗ ರಾಜ್ಯ ಸರ್ಕಾರವು ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರ ಶನಿವಾರ (ಅಕ್ಟೋಬರ್ 18) ಅಧಿಕೃತ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಆದೇಶ ಜಾರಿಯಾಗಲಿದೆ. ರಾಜ್ಯದ … Continued

ಶಿಕ್ಷಕ ಅಭ್ಯರ್ಥಿಗಳಿಗೆ ಸಿಹಿಸುದ್ದಿ ; ಡಿಸೆಂಬರ್ 7ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) : ಶಿಕ್ಷಣ ಇಲಾಖೆ ಘೋಷಣೆ

ಬೆಂಗಳೂರು : ಶಿಕ್ಷಕರಾಗಲು ಬಯಸುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಡಿಸೆಂಬರ್ 7ರಂದು ನಡೆಯಲಿದೆ. ಈ ಸಂಬಂಧ ಶಿಕ್ಷಣ ಇಲಾಖೆಯು ಶಿಕ್ಷಕರ ಅರ್ಹತಾ ಪರೀಕ್ಷೆ (TET)ಗೆ ಅಧಿಸೂಚನೆ ಹೊರಡಿಸಿದ್ದು, ಡಿಸೆಂಬರ್‌ 7ಕ್ಕೆ ಟಿಇಟಿ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕುರಿತ ಅಧಿಸೂಚನೆ ಹೊರಡಿಸಲಾಗಿದ್ದು, … Continued

ಅಂಕೋಲಾ | ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದ ಬಸ್ …

ಅಂಕೋಲಾ: ಬಳ್ಳಾರಿಯಿಂದ ಕುಮಟಾ ಕಡೆಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕ ನಿರ್ವಾಹಕ ಸೇರಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಕುಮಟಾ ಶಿರಸಿ ರಸ್ತೆಯು ಕಾಮಗಾರಿಯ … Continued

ಸವದತ್ತಿ: ವಿಚ್ಛೇದಿತ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಮಾಜಿ ಪತಿ

ಬೆಳಗಾವಿ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನಂತರ ವಿಚ್ಛೇದನ ಪಡೆದ ನಂತರವೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಮಾಜಿ ಪತಿ ಆಕೆಯನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಜಿಲ್ಲೆಯ ಸವದತ್ತಿಯ ರಾಮಸೈಟಿನಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಬಸ್ ನಿರ್ವಾಹಕಿ ಕಾಶವ್ವ ಕರೀಕಟ್ಟಿ (34) ತನ್ನ ಮಾಜಿ ಪತಿಯಿಂದಲೇ ಕೊಲೆಯಾದವರು ಎಂದು … Continued

ಮದುವೆಯಾಗಿ ಹಣ, ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದ ‘ವಧು’ವಿನ ಬಂಧನ ; ಹಲವು ಅವಿವಾಹಿತರಿಗೆ ವಂಚಿಸಿದ ಜಾಲ…!

ಗುರುಗ್ರಾಮ : ಮದುವೆಯಾಗಿ, ನಂತರ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಹಲವಾರು ಪುರುಷರನ್ನು ವಂಚಿಸಿದ್ದ ಯವತಿಯೊಬ್ಬಳನ್ನು ರಾಜಸ್ಥಾನ ಪೊಲೀಸರು ಗುರುವಾರ ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ವಂಚಕಿ ‘ವಧು’ ವನ್ನು ಕಾಜಲ್ ಎಂದು ಗುರುತಿಸಲಾಗಿದೆ. ಈಕೆ ಕಳೆದ ಒಂದು ವರ್ಷದಿಂದ ಪೊಲೀಸರಿಂದ ತಪ್ಪಿಸಿಕೊಂಡು ಗುರುಗ್ರಾಮದ ಎನ್‌ಕ್ಲೇವ್‌ ಒಂದರಲ್ಲಿ ಅಡಗಿ ಕುಳಿತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆ … Continued

ವೀಡಿಯೊ..| ಬೆಂಗಳೂರಲ್ಲಿ ಕ್ರೂರ ಸರಗಳ್ಳತನ ; ಕತ್ತಿ ಹಿಡಿದು ಮಹಿಳೆಯರಿಗೆ ಹೆದರಿಸಿ, ಓರ್ವ ಮಹಿಳೆ ಬೆರಳು ಕತ್ತರಿಸಿ ಸರ ದೋಚಿದ ಕಳ್ಳರು

ಬೆಂಗಳೂರು: ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ಕತ್ತಿ ಹಿಡಿದು ಬೆದರಿಸಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳರು ಕಸಿದುಕೊಂಡ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ಮಹಿಳೆ ವಿರೋಧಿಸಿದಾಗ, ಸರಗಳ್ಳ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಇಬ್ಬರು ಸರಗಳ್ಳರಾದ ಪ್ರವೀಣ ಮತ್ತು ಯೋಗಾನಂದ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. … Continued

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ; ಸಂಪುಟದ ನಿರ್ಣಯ ಪ್ರಶ್ನಿಸಿ ಹೈಕೋರ್ಟಿ​ಗೆ ಅರ್ಜಿ

ಬೆಂಗಳೂರು : ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್ ನಾಗಮೋಹನದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯಕ್ಕೆ ಆಕ್ಷೇಪಿಸಿ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿವೆ. ಬಂಜಾರ, ಭೋವಿ, ಕೊರಮ, ಕೊರಚ ಸಮಾಜ … Continued

ಸಿಂದಗಿ : ಪೊಲೀಸರ ಗುಂಡೇಟಿಗೆ ರೌಡಿಶೀಟರ್ ಸಾವು

ವಿಜಯಪುರ: ದರೋಡೆ ಮಾಡಿ ಪರಾರಿಯಾಗುವ ಯತ್ನದಲ್ಲಿದ್ದಾಗ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಾವಿಗೀಡಾದ ಘಟನೆ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಯುನೂಸ್ ಇಕ್ಲಾಸ್ ಪಟೇಲ್ (35) ಮೃತಪಟ್ಟ ರೌಡಿಶೀಟರ್ ಎಂದು ಗುರುತಿಸಲಾಗಿದೆ. … Continued