ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಒಂದು ವಾರ ಮಳೆ ಸಾಧ್ಯತೆ : ಹವಾಮಾನ ಇಲಾಖೆ

ಬೆಂಗಳೂರು: ಮುಂದಿನ 7 ದಿನಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಅಕ್ಟೋಬರ್ 16 ರಿಂದ 22 ರವರೆಗೆ ಕರ್ನಾಟಕದಾದ್ಯಂತ ಮಳೆ ಮುಂದುವರಿಯಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ … Continued

ವೀಡಿಯೊ..| ಪಾಕ್ ಸೇನೆ ಔಟ್‌ ಪೋಸ್ಟ್ ಮೇಲೆ ಡ್ರೋನ್ ಬಾಂಬ್ ದಾಳಿ ಮಾಡಿದ ಅಫ್ಘಾನಿಸ್ತಾನ ; ವೀಡಿಯೊ ಹಂಚಿಕೊಂಡ ತಾಲಿಬಾನ್

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನ ದೇಶಗಳು ಭೀಕರ ಸಂಘರ್ಷಕ್ಕೆ ಇಳಿದಿದ್ದು, ದೇಶದ ಗಡಿ ಔಟ್‌ಪೋಸ್ಟ್‌ಗಳ ಮೇಲೆ ನಡೆಸಲಾದ ಡ್ರೋನ್ ದಾಳಿಯ ದೃಶ್ಯಾವಳಿಗಳನ್ನು ಅಫ್ಘಾನ್ ತಾಲಿಬಾನ್ ಆಡಳಿತ ಬಿಡುಗಡೆ ಮಾಡಿದೆ. ಈ ಸಂಘರ್ಷದಲ್ಲಿ ಪಾಕಿಸ್ತಾನದ ಡಜನ್‌ಗಟ್ಟಲೆ ಸೈನಿಕರು ಸಾವಿಗೀಡಾಗಿದೆ, ಹಲವರು ಕಾಣೆಯಾಗಿದ್ದಾರೆ. ಅಫ್ಘಾನ್ ತಾಲಿಬಾನ್ ಪಡೆಗಳಿಗೂ ನಷ್ಟ ಉಂಟಾಗಿದೆ. ಅಫ್ಘಾನ್ ತಾಲಿಬಾನ್ ಬಿಡುಗಡೆ ಮಾಡಿದ ಕಪ್ಪು-ಬಿಳುಪು … Continued

ಅಹಮದಾಬಾದಿಗೆ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಶಿಫಾರಸು ; ಅಂತಿಮ ನಿರ್ಧಾರ ನವೆಂಬರ್ 26ಕ್ಕೆ

ಅಹಮದಾಬಾದ್: 2030 ರ ಕಾಮನ್‌ವೆಲ್ತ್ ಗೇಮ್ಸ್ (CWG) ಆಯೋಜಿಸಲು ಗುಜರಾತಿನ ಅಹಮದಾಬಾದ್‌ ನಗರವನ್ನು ಪ್ರಸ್ತಾವಿತ ಆತಿಥೇಯ ನಗರವನ್ನಾಗಿ ಕಾಮನ್‌ವೆಲ್ತ್ ಸ್ಪೋರ್ಟ್‌ನ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಕಾಮನ್‌ವೆಲ್ತ್ ಸ್ಪೋರ್ಟ್‌ನ ಸಂಪೂರ್ಣ ಸದಸ್ಯ ಮಂಡಳಿಗೆ ಈ ಶಿಫಾರಸು ಈಗ ಹೋಗಲಿದ್ದು, ನವೆಂಬರ್ 26ರಂದು ಗ್ಲಾಸ್ಗೋದಲ್ಲಿ ನಡೆಯುವ ಮಹಾಸಭೆಯಲ್ಲಿ (General Assembly) ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ಪರಿಷ್ಕೃತ ನಿಯಮಗಳ … Continued

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌ ; ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ತುಟ್ಟಿಭತ್ಯೆ ದರವನ್ನು ಶೇ.12.25ರಿಂದ 14.25ರಷ್ಟು ಪರಿಷ್ಕರಿಸಿ ಸರ್ಕಾರ ಆದೇಶಿಸಿದ್ದು, ಈ ಬಗ್ಗೆ ಸರ್ಕಾರದ ಆರ್ಥಿಕ ಇಲಾಖೆಯ (ಸೇವೆಗಳು-2) ಜಂಟಿ ಕಾರ್ಯದರ್ಶಿ ಉಮಾ ಕೆ. ಅವರು … Continued

ಹಿರಿಯ ನಟ, ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿ ಪಂಕಜ ಧೀರ್ ನಿಧನ

ಮುಂಬೈ: ಬಿ.ಆರ್. ಚೋಪ್ರಾ ಅವರ 1988 ರ ಟಿವಿ ಸರಣಿ ‘ಮಹಾಭಾರತ’ದಲ್ಲಿ ‘ಕರ್ಣ’ನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ಪಂಕಜ ಧೀರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಂಕಜ ಧೀರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಪಂಕಜ ಧೀರ್ ಅವರು ‘ಚಂದ್ರಕಾಂತಾ’, … Continued

ಅರಿವಳಿಕೆ ಔಷಧಿ ನೀಡಿ ವೈದ್ಯೆ ಪತ್ನಿಯ ಕೊಲೆ ಆರೋಪ ; 6 ತಿಂಗಳ ಬಳಿಕ ವೈದ್ಯ ಪತಿಯ ಬಂಧನ

ಬೆಂಗಳೂರು: ಆರು ತಿಂಗಳ ಹಿಂದೆ ತಮ್ಮ ವೈದ್ಯೆ ನಿಗೂಢವಾಗಿ ಸಾವಿಗೀಡಾದ ಪ್ರಕರಣದ ರಹಸ್ಯ ಬಯಲಾಗಿದ್ದು, ಕೊಲೆ ಆರೋಪದ ಮೇಲೆ ಪೊಲೀಸರು ಆಕೆಯ ವೈದ್ಯ ಪತಿಯನ್ನು ಬಂಧಿಸಿದ್ದಾರೆ. ಪೂರ್ವ ಬೆಂಗಳೂರಿನ ಮುನ್ನೇಕೊಳಲು ಪ್ರದೇಶದಲ್ಲಿ ವಾಸವಾಗಿದ್ದ ಜನರಲ್‌ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ ಅವರು, ಏಪ್ರಿಲ್ 21 ರಂದು ತಮ್ಮ ಮನೆಯಲ್ಲಿಯೇ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ … Continued

2026ರಲ್ಲಿ ಭಾರೀ ಆರ್ಥಿಕ ವಿಪತ್ತು…ಮಹಾಯುದ್ಧದ ಭೀತಿ ? ಆತಂಕಕ್ಕೆ ಕಾರಣವಾಯ್ತು ಬಾಬಾ ವಂಗಾ ಭವಿಷ್ಯವಾಣಿ…

2025ರ ವರ್ಷವು ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧಗಳು, ಸಂಘರ್ಷಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ತುಂಬಿದೆ. ಇಸ್ರೇಲ್-ಹಮಾಸ್ ಯುದ್ಧದ ಮುಂದುವರಿಕೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ, ಮತ್ತು ಎಂದಿಗೂ ಮುಗಿಯದ ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಇಡೀ ವರ್ಷ ಕೆಟ್ಟ ಸುದ್ದಿಗಳೇ ಹೆಚ್ಚಾಗಿವೆ. ಇದಲ್ಲದೆ, ಪ್ರಪಂಚದ ಹಲವು ಸ್ಥಳಗಳಲ್ಲಿ ಭೀಕರ ಪ್ರವಾಹ, ಭೂಕಂಪಗಳು ಮತ್ತು ತೀವ್ರ ಉಷ್ಣತೆಯ ಅಲೆಗಳಿಂದ … Continued

ಎಸ್ ಎಸ್ ಎಲ್ ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ; ಪಾಸಿಂಗ್ ಮಾರ್ಕ್ಸ್ ಇಳಿಕೆ ಮಾಡಿದ ಸರ್ಕಾರ…!

ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಇದೇ ವರ್ಷದಿಂದ ಜಾರಿಯಾಗುವಂತೆ, ಪಾಸ್‌ ಆಗಲು ಬೇಕಾದ ಕನಿಷ್ಠ ಅಂಕಗಳನ್ನು ಕಡಿಮೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಇನ್ಮುಂದೆ ಪಾಸ್‌ ಆಗಲು 33% ಅಂಕ ಪಡೆದರೆ ಸಾಕು ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾಗಲು 30% ಅಂಕ ಪಡೆದರೆ ತೇರ್ಗಡೆ ಆಗಲಿದ್ದಾರೆ. ಈ ವರೆಗೆ ಎಸ್‌ಎಸ್‌ಎಲ್‌ಸಿ ಯಲ್ಲಿ ಪಾಸ್‌ … Continued

ಹೃದಯ ಸ್ತಂಭನ ; ಗೋವಾ ಕೃಷಿ ಸಚಿವ, ಮಾಜಿ ಸಿಎಂ ರವಿ ನಾಯ್ಕ ನಿಧನ

ಪಣಜಿ: ಗೋವಾದ ಕೃಷಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹಿರಿಯ ರಾಜಕಾರಣಿ ರವಿ ನಾಯ್ಕ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳು ಪಿಟಿಐಗೆ ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ಮುಂಜಾನೆ ಪಣಜಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಅವರಿಗೆ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಪೊಂಡಾದಲ್ಲಿರುವ ಖಾಸಗಿ ಆಸ್ಪತ್ರೆಗೆ … Continued

ಅತ್ಯಂತ ರಹಸ್ಯ ದಾಖಲೆ ಸಂಗ್ರಹಿಸಿ ಇಟ್ಟುಕೊಂಡ ಆರೋಪದ ಮೇಲೆ ಅಮೆರಿಕದಲ್ಲಿ ಭಾರತೀಯ ಮೂಲದ ರಕ್ಷಣಾ ತಜ್ಞನ ಬಂಧನ

ವಾಷಿಂಗ್ಟನ್: ಭಾರತೀಯ ಮೂಲದ ಪ್ರಖ್ಯಾತ ವಿದೇಶಾಂಗ ನೀತಿ ವಿದ್ವಾಂಸ ಮತ್ತು ರಕ್ಷಣಾ ತಂತ್ರಜ್ಞ, ಆಶ್ಲೇ ಜೆ. ಟೆಲ್ಲಿಸ್ (Ashley J Tellis) ಅವರನ್ನು ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡ ಆರೋಪದ ಮೇಲೆ ಬಂಧಿಸಿ, ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕ ಅಟಾರ್ನಿ ಕಚೇರಿ ಫಾರ್ ದಿ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವರ್ಜೀನಿಯಾ ತಿಳಿಸಿದೆ. ಅಮೆರಿಕದ … Continued