ಬಿಹಾರ ಚುನಾವಣೆ 2025 | ಸಿ ವೋಟರ್‌ ಸಮೀಕ್ಷೆ : ಎನ್‌ ಡಿಎ-ಮಹಾ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ, ಜನಪ್ರಿಯ ಸಿಎಂ ಅಭ್ಯರ್ಥಿ ಯಾರು…?

ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಹಾರದ ಚುನಾವಣಾ ರಾಜಕೀಯವು ಉತ್ತುಂಗದಲ್ಲಿದೆ. ಎನ್‌ಡಿಎ (NDA) ಮತ್ತು ಆರ್‌ಜೆಡಿ ನೇತೃತ್ವದ ಮಹಾ ಮೈತ್ರಿಕೂಟದ ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಭಿನ್ನಾಭಿಪ್ರಾಯಗಳು ಬೆಳೆಯುತ್ತಿವೆ. ದೆಹಲಿಯಿಂದ ಪಾಟ್ನಾದವರೆಗೆ ಸಭೆಗಳು ನಡೆಯುತ್ತಿವೆ, ಆದರೆ ಎರಡೂ ಮೈತ್ರಿಕೂಟಗಳು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಏತನ್ಮಧ್ಯೆ, ನಾಯಕರ ಪಕ್ಷಾಂತರವೂ ತೀವ್ರಗೊಂಡಿದೆ. ಪ್ರಶಾಂತ ಕಿಶೋರ ಫ್ಯಾಕ್ಟರ್‌…. … Continued

ಪಶ್ಚಿಮ ಬಂಗಾಳದಲ್ಲಿ ಒಡಿಶಾ ಮೂಲದ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಕೋಲ್ಕತಾ : ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಸಮೀಪ ಶುಕ್ರವಾರ ರಾತ್ರಿ ಒಡಿಶಾ ಮೂಲದ ದ್ವಿತೀಯ ವರ್ಷದ ಎಂಬಿಬಿಎಸ್‌ (MBBS) ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಧಿಕಾರಿಗಳ ಪ್ರಕಾರ, ಒಡಿಶಾದ ಜಲೇಶ್ವರದವರಾದ ಮತ್ತು ದುರ್ಗಾಪುರದ ಶಿವಪುರ ಪ್ರದೇಶದಲ್ಲಿರುವ ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಸುಮಾರು … Continued

ಲವರ್ ಜೊತೆ ಓಡಿ ಹೋದ ಮಗಳು; ಊರಿಗೆ ‘ತಿಥಿ’ ಊಟ ಹಾಕಿಸಿದ ತಂದೆ

ಬೆಳಗಾವಿ : ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನ ಜತೆ ಓಡಿ ಹೋದ ಮಗಳ ತಿಥಿ ನಡೆಸಿದ ತಂದೆ ಊರವರಿಗೆಲ್ಲ ಊಟ ಹಾಕಿಸಿದ ವಿದ್ಯಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ … Continued

ಹಾವೇರಿ | ನೀರು ಹಾಯಿಸಲು ಹೋದ ಸಹೋದರರ ಮೇಲೆ ಚಿರತೆ ದಾಳಿ ; ಓರ್ವ ಸಾವು

ಹಾವೇರಿ: ಜಮೀನಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ್ದು, ಓರ್ವ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ರಟ್ಟಿಹಳ್ಳಿ ತಾಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಿರತೆ ದಾಳಿಯಿಂದ ಬೀರಪ್ಪ ಹನುಮಂತಪ್ಪ ಬಳಗಾವಿ(30) ಎಂಬವರು ಮೃತಟ್ಟಿದ್ದಾರೆ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಸಹೋದರ ಗಣೇಶ ಬಳಗಾವಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. … Continued

ವಿಜಯಪುರ | ಹಲವೆಡೆ ಕಂಪಿಸಿದ ಭೂಮಿ ; ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನ

ವಿಜಯಪುರ: ವಿಜಯಪುರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕಂಪನ(Earthquake)ದ ಅನುಭವವಾಗಿದೆ ಎಂದು ವರದಿಯಾಗಿದೆ. ತಿಕೋಟ (Tikota) ತಾಲೂಕು ಹಾಗೂ ವಿಜಯಪುರ (Vijayapura) ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ 10ರ ಸುಮಾರಿಗೆ ಭೂಕಂಪನ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದರಿಂದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ ಎಂದು ಹೇಳಲಾಗಿದೆ. ವಿಜಯಪುರ ಗ್ರಾಮೀಣ ಭಾಗದ 12 … Continued

ಈ ಬಾಲಕನ ವಿಚಿತ್ರ ಹೆಸರು ಕೇಳಿದ್ರೆ ದಂಗಾಗ್ತೀರಾ…! ಇಂಗ್ಲಿಷ್ ವರ್ಣಮಾಲೆಯ 11 ಅಕ್ಷರಗಳನ್ನೇ ಮಗನಿಗೆ ಹೆಸರಾಗಿ ಇಟ್ಟ ತಂದೆ..!!

ಭಾರತೀಯ ಸಂಪ್ರದಾಯದ ಪ್ರಕಾರ, ಮಗುವಿನ ಹೆಸರು ಮಹತ್ವ ಹೊಂದಿರುತ್ತದೆ. ಆದ್ದರಿಂದ, ಸರಿಯಾದ ಹೆಸರನ್ನು ಆಯ್ಕೆ ಮಾಡಲು ಸಾಕಷ್ಟು ಯೋಚನೆ ಮಾಡುತ್ತಾರೆ. ಆದರೆ, ಇಂಡೋನೇಷ್ಯಾದ ಒಬ್ಬ ತಂದೆ ತಮ್ಮ ಮಗುವಿಗೆ ಹೆಸರಿಡುವಲ್ಲಿ ಸಂಪೂರ್ಣ ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ. ಅವರು ಕೇವಲ ತಮ್ಮ ಮನಸ್ಸಿಗೆ ಬಂದ ಹೆಸರನ್ನು ಆರಿಸಿಕೊಂಡಿದ್ದು, ಅದು ಈಗ ಗಮನಸೆಳೆಯಲು ಕಾರಣವಾಗಿದೆ. ಈ ಬಾಲಕ ತನ್ನ … Continued

ಅಮೆರಿಕ-ಚೀನಾ ವಾಣಿಜ್ಯ ಸಮರ ತೀವ್ರ : ಚೀನಾ ಸರಕುಗಳ ಮೇಲೆ ಹೆಚ್ಚುವರಿ ಶೇ.100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ವಿರುದ್ಧ ಹೊಸ ವ್ಯಾಪಾರ ಸುಂಕಗಳನ್ನು ಘೋಷಿಸಿದ್ದಾರೆ. ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಚೀನಾದಿಂದ ಆಮದಾಗುವ ಎಲ್ಲ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಹಾಗೂ ಅಮೆರಿಕದಲ್ಲಿ ತಯಾರಾದ ಪ್ರಮುಖ ಸಾಫ್ಟ್‌ವೇರ್‌ಗಳ ರಫ್ತಿನ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರುವುದಾಗಿ ಅವರು ಶುಕ್ರವಾರ … Continued

ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿಷೇಧ…!

 ನವದೆಹಲಿ : ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಮೀರ್ ಖಾನ್ ಮುತ್ತಕಿ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಭಾಗವಾಗಿದ್ದು, ಈ ಗುಂಪು ಮಹಿಳೆಯರ ಮೇಲೆ ನಿರ್ಬಂಧಗಳನ್ನು ವಿಧಿಸುವುದಕ್ಕೆ, ವಿಶೇಷವಾಗಿ ಅವರು ಕೆಲಸ ಮಾಡುವುದನ್ನು ನಿರ್ಬಂಧಿಸುವುದಕ್ಕೆ ಹೆಸರುವಾಸಿಯಾಗಿದೆ. ಗುರುವಾರ ಭಾರತಕ್ಕೆ … Continued

ನಿವೃತ್ತ ಎಂಜಿನಿಯರ್‌ ನ ಐಷಾರಾಮಿ ಸಾಮ್ರಾಜ್ಯ : ಪತ್ತೆಯಾಯ್ತು ಕೇಜಿ ಗಟ್ಟಲೆ ಚಿನ್ನ-ಬೆಳ್ಳಿ, ಐಷಾರಾಮಿ ಕಾರುಗಳು, 17 ಟನ್ ಜೇನುತುಪ್ಪ…!

ಭೋಪಾಲ (ಮಧ್ಯಪ್ರದೇಶ): ಭೋಪಾಲ ನಗರದಲ್ಲಿ ಲೋಕೋಪಯೋಗಿ ಇಲಾಖೆಯ (PWD) ನಿವೃತ್ತ ಮುಖ್ಯ ಇಂಜಿನಿಯರ್ ಜಿ.ಪಿ. ಮೆಹ್ರಾ ಅವರ ನಿವಾಸ ಮತ್ತು ಆಸ್ತಿಗಳ ಮೇಲೆ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಾಯುಕ್ತ ನಡೆಸಿದ ದಾಳಿಯ ನಂತರ ಅಲ್ಲಿ ಪತ್ತೆಯಾದ ಸಂಪತ್ತು ನೋಡಿ ಲೋಕಾಯುಕ್ತವೇ ಬೆಚ್ಚಿಬಿದ್ದಿದೆ…! ಹೆಚ್ಚಿನ ಆಸ್ತಿಗಳ ತನಿಖೆಯು, ಮಧ್ಯಪ್ರದೇಶದ ರಾಜ್ಯದಲ್ಲಿ ಇತ್ತೀಚಿನ ವರ್ಷಗಳ ಅತ್ಯಂತ ಸಂಚಲನ ಮೂಡಿಸಿದ  … Continued

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಕೈತಪ್ಪಿದ ನೊಬೆಲ್ ಶಾಂತಿ ಪ್ರಶಸ್ತಿ ; ಅಮೆರಿಕ ಶ್ವೇತ ಭವನ ಹೇಳಿದ್ದೇನು ಗೊತ್ತೆ…?

ವಾಷಿಂಗ್ಟನ್‌: ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿ (Nobel Award) ಘೋಷಿಸಿದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಿಗೆ ಪ್ರಶಸ್ತಿ ಸಿಗದಕ್ಕೆ ಶ್ವೇತ ಭವನ ಖಾರವಾಗಿ ಪ್ರತಿಕ್ರಿಯಿಸಿದೆ. ನೊಬೆಲ್ ಸಮಿತಿಯು ಶಾಂತಿಯ ಮೇಲೆ ರಾಜಕೀಯವನ್ನು ಇರಿಸುತ್ತದೆ ಎಂದು ಸಾಬೀತುಪಡಿಸಿದೆ” ಎಂದು ಶ್ವೇತಭವನದ ವಕ್ತಾರ ಸ್ಟೀವನ್ … Continued