ಕುಂದಾಪುರ : ಗೋಪಾಡಿ ಬೀಚಿನಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಮೂವರು ಯುವಕರು

ಉಡುಪಿ : ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್ ನಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ 9 ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, … Continued

ಜೈಲಿನೊಳಗೆ ಗ್ರಂಥಾಲಯ ಗುಮಾಸ್ತರಾಗಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೆಲಸ ; ದಿನಕ್ಕೆ ಸಂಬಳ…

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ, ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಗ್ರಂಥಾಲಯ ಗುಮಾಸ್ತರಾಗಿ ಕೆಲಸ ಮಾಡಲು ನಿಯೋಜಿಸಲಾಗಿದೆ, ಅಲ್ಲಿ ಅವರು ದಿನಕ್ಕೆ 522 ರೂ. ಗಳಿಸುತ್ತಾರೆ. ಅವರ ಪ್ರಮುಖ ಜವಾಬ್ದಾರಿಗಳಲ್ಲಿ ಇತರ ಕೈದಿಗಳಿಗೆ ಪುಸ್ತಕಗಳನ್ನು ನೀಡುವುದು ಮತ್ತು … Continued

ಹಾಕಿ | 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ; ವಿಶ್ವಕಪ್‌ ಗೆ ಅರ್ಹತೆ

ನವದೆಹಲಿ: ಸೆಪ್ಟೆಂಬರ್ 7 ರ ಭಾನುವಾರ ರಾಜಗಿರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತನ್ನ 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಗಳಿಸಿದರೆ, ಸುಖಜೀತ್ ಸಿಂಗ್ ಮೊದಲ ನಿಮಿಷದಲ್ಲೇ ಗೋಲು ಗಳಿಸಿದರು ಮತ್ತು … Continued

3ನೇ ಹೆಂಡತಿಯಿಂದ ವ್ಯಕ್ತಿಯ ಕೊಲೆ…2ನೇ ಹೆಂಡತಿಯಿಂದ ಮೃತದೇಹ ಪತ್ತೆ…3 ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಹಿಂದಿತ್ತು ದ್ರೋಹ-ಪಿತೂರಿ…

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ಬಾವಿಯಲ್ಲಿ ವ್ಯಕ್ತಿಯೊಬ್ಬನ ಶವ ಕಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊಲೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡರೂ ನಂತರದಲ್ಲಿ ದ್ರೋಹ ಮತ್ತು ಪಿತೂರಿಯ ಕಥೆ ಎಂಬುದು ಬಹಿರಂಗವಾಯಿತು. ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯ ಸಕಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮೃತ ವ್ಯಕ್ತಿಯನ್ನು 60 ವರ್ಷದ ಭಯ್ಯಾಲಾಜ … Continued

ಉಪರಾಷ್ಟ್ರಪತಿ ಚುನಾವಣೆ : ಬಿಜೆಪಿ ಕಾರ್ಯಾಗಾರದಲ್ಲಿ ಕೊನೆಯ ಸಾಲಿನಲ್ಲಿ ಕುಳಿತ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿಯು ತನ್ನ ಎಲ್ಲಾ ಸಂಸದರು ಪಾಲ್ಗೊಳ್ಳುವ ಎರಡು ದಿನಗಳ ಕಾರ್ಯ ಕಾರ್ಯಾಗಾರವನ್ನು ನಡೆಸುವ ಮೂಲಕ ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಿದೆ. ಭಾನುವಾರ (ಸೆಪ್ಟೆಂಬರ್‌ 7) ಪ್ರಾರಂಭವಾದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದು ವಿಶೇಷವಾಗಿ ಗಮನಸೆಳೆಯಿತು. ಸೆಪ್ಟೆಂಬರ್ 3 ರಂದು ಜಿಎಸ್ಟಿ ಕೌನ್ಸಿಲ್ ಅನುಮೋದಿಸಿದ ಪ್ರಮುಖ ಜಿಎಸ್‌ಟಿ … Continued

ಬ್ರಿಟಿಷ್ ಅಧಿಕಾರಿಗಳಿಂದ ತಿಹಾರ್ ಜೈಲು ಪರಿಸ್ಥಿತಿ ಪರಿಶೀಲನೆ; ಭಾರತಕ್ಕೆ ಮಲ್ಯ, ಮೋದಿ ಇತರರ ಹಸ್ತಾಂತರದ ಕಾಲ ಸನ್ನಿಹಿತ..?

ನವದೆಹಲಿ : ಭಾರತದಲ್ಲಿ ವಿವಿಧ ಹಗರಣಗಳಲ್ಲಿ ಭಾಗಿಯಾದ ಆರೋಪಗಳನ್ನು ಹೊತ್ತು ದೇಶದ ಕಾನೂನಿನಿಂದ ತಪ್ಪಿಸಿಕೊಳ್ಳು ಬ್ರಿಟನ್ನಿ​ಗೆ ಪಲಾಯನಗೈದ ವಿಜಯ ಮಲ್ಯ, ನೀರವ್ ಮೋದಿ ಮತ್ತಿತರರು ಭಾರತದ ವಶಕ್ಕೆ ಹಸ್ತಾಂತರವಾಗುವ ಸನ್ನಿಹಿತವಾದಂತೆ ಕಾಣುತ್ತಿದೆ. ಬ್ರಿಟನ್​ನ ಅಧಿಕಾರಿಗಳ ತಂಡವೊಂದು ದೆಹಲಿಯ (Delhi) ತಿಹಾರ್ ಜೈಲಿನ ಪರಿಸ್ಥಿತಿಯನ್ನು ಇತ್ತೀಚಿಗೆ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದ್ದು, ಇದು ಅವರು ಭಾರತಕ್ಕೆ ಹಸ್ತಾಂತರವಾಗುವ … Continued

ಶಿರಸಿ : ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿದ್ದ ಓರ್ವ ನಾಪತ್ತೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲ ಸಮೀಪದ ಬೆಣ್ಣೆಹೊಳೆ ಜಲಪಾತ ನೋಡಲು ಭಾನುವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ನಾಪತ್ತೆಯಾಗಿದ್ದಿನ್ನೋರ್ವ ವಿದ್ಯಾರ್ಥಿಯನ್ನು ಶೋಧ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ. ನಗರದ ಅರಣ್ಯ ಪದವಿ ಕಾಲೇಜಿನ ರಾಹುಲ್ ಎಂಬಾತ ನೀರಿನಲ್ಲಿ ಕಣ್ಮರೆಯಾದ ವಿದ್ಯಾರ್ಥಿ. ಎನ್ನಲಾಗಿದೆ. … Continued

ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಪಾನ್ ಪ್ರಧಾನಿ ಶಿಗೇರು ಇಶಿಬಾ

ಟೋಕಿಯೊ : ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್‌ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಯುದ್ಧಾನಂತರದ ಹೆಚ್ಚಿನ ಅವಧಿಗೆ ಜಪಾನ್ ನಲ್ಲಿ ಆಡಳಿತ ನಡೆಸಿದ ಇಶಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಮತ್ತು ಅದರ … Continued

ರಮೇಶಬಾಬು, ಜಕ್ಕಪ್ಪನವರ ಸೇರಿ ವಿಧಾನ ಪರಿಷತ್ತಿಗೆ ನಾಲ್ವರ ನೇಮಕ ; ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಸುಮಾರು ಆರೇಳು ತಿಂಗಳಿಂದ ಖಾಲಿಯಿದ್ದ ನಾಲ್ಕು ವಿಧಾನ ಪರಿಷತ್‌ ಸ್ಥಾನಗಳಿಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ ಬಾಬು ಸೇರಿದಂತೆ ನಾಲ್ವರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ ಬಾಬು, ಕರ್ನಾಟಕ … Continued

ಬಂಡೀಪುರ | ಸಫಾರಿ ವಾಹನ ಅಟ್ಟಾಡಿಸಿಕೊಂಡು ಬಂದ ಕಾಡಾನೆ ; ವೀಡಿಯೋ ವೈರಲ್…

ಚಾಮರಾಜನಗರ : ಸಫಾರಿ ವಾಹನದ ಮೇಲೆ ಕಾಡಾನೆ (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ನಡೆದಿದೆ. ಈಗ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಫಾರಿ (Safari) ವಾಹನ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆ ಸಫಾರಿ ಜೀಪ್ ಕಂಡ ಕೂಡಲೇ ಕೋಪಗೊಂಡು ಅಟ್ಟಾಡಿಸಿಕೊಂಡು … Continued