ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸೌಧದ ಎದುರು ಧರಣಿ ಕುಳಿತ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು : ಭೋವಿ ನಿಗಮದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನಲ್ಲಿ ಇಂದು (ಸೋಮವಾರ) ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ತಮ್ಮ ವಿರುದ್ಧದ ಆರೋಪಗಳನ್ನು ಹಿಂಪಡೆಯಬೇಕು ಅಥವಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ … Continued

ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲ ರೈಲುಗಳು ಆಗಸ್ಟ್‌ 4ರ ವರೆಗೆ ರದ್ದು

ಮಂಗಳೂರು: ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಸಂಭವಿಸಿದ ಭೂಕುಸಿತ ಹಿನ್ನೆಲೆಯಲ್ಲಿ ಆಗಸ್ಟ್‌ 4 ರವರೆಗೆ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಹಾಗೂ ಆಗಮಿಸುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಜುಲೈ 29 ರಿಂದ ಆಗಸ್ಟ್‌ 3 ರವರೆಗೆ, ಕಣ್ಣೂರು – ಬೆಂಗಳೂರು ಎಕ್ಸ್‌ಪ್ರೆಸ್‌ … Continued

ವಾಯವ್ಯ ಪಾಕಿಸ್ತಾನದಲ್ಲಿ ಎರಡು ಬುಡಕಟ್ಟುಗಳ ನಡುವೆ ಸಶಸ್ತ್ರ ಘರ್ಷಣೆ ; 36 ಸಾವು, 162 ಮಂದಿಗೆ ಗಾಯ

ಇಸ್ಲಾಮಾಬಾದ್‌ : ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯಲ್ಲಿ ಒಂದು ತುಂಡು ಭೂಮಿಗಾಗಿ ಹೋರಾಡುತ್ತಿರುವ ಎರಡು ಬುಡಕಟ್ಟುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಪ್ಪರ್ ಕುರ್ರಂ ಜಿಲ್ಲೆಯ ಬೊಶೆರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಭಾರಿ ಘರ್ಷಣೆಗಳು ಪ್ರಾರಂಭವಾದವು … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ಮೂಗಿನಿಂದ ರಕ್ತಸ್ರಾವ : ಆಸ್ಪತ್ರೆಯಿಂದ ಸಚಿವ ಕುಮಾರಸ್ವಾಮಿ ಡಿಸ್ಚಾರ್ಜ್‌

ಬೆಂಗಳೂರು: ಮುಡಾ ಪ್ರಕರಣದ ಬಗ್ಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಬಿಜೆಪಿ- ಜೆಡಿಎಸ್‌ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿ ವೇಳೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಅವರು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿಸ್ಚಾರ್ಜ್‌ ಆಗಿದ್ದಾರೆ. ಭಾನುವಾರ ರಾತ್ರಿ ಜಯನಗರದ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, … Continued

ಮನೆಗೆ ನೀರು ನುಗ್ಗಿದ ಸುದ್ದಿ ಕೇಳಿ ವ್ಯಕ್ತಿ ಹೃದಯಘಾತದಿಂದ ಸಾವು

ಬೆಳಗಾವಿ: ಜಿಲ್ಲೆಯ ಗೋಕಾಕ ನಗರದ ಉಪ್ಪಾರಗಲ್ಲಿಯಲ್ಲಿ ದಶರಥ ಬಂಡಿ(80)ಎಂಬವರು ತಮ್ಮ ಮನೆಗೆ ಮಳೆ ನೀರು ನುಗ್ಗಿರುವ ವಿಷಯ ತಿಳಿದು ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಹೊತ್ತು ಮನೆಗೆ ಮಳೆ ನೀರು ಬಂದಿರುವ ವಿಷಯ ತಿಳಿದ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಘಟಪ್ರಭಾ ನದಿಯಿಂದ ಪ್ರವಾಹ ಬಂದು ಎಲ್ಲರೂ ಮನೆ ಖಾಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿ … Continued

ಯಲ್ಲಾಪುರ : ಅತಿಕ್ರಮಣದಾರರಿಗೆ ಸಂಸದ ಕಾಗೇರಿ ಭರವಸೆ

ಯಲ್ಲಾಪುರ : ಈಗಾಗಲೇ ಅತಿಕ್ರಮಣ ಆಗಿರುವ ಜಾಗದಿಂದ ಯಾರನ್ನೂ ಕದಲಿಸಲು ಬಿಡುವುದಿಲ್ಲ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿಕ್ರಮಣದಾರರಿಗೆ ಭರವಸೆ ನೀಡಿದ್ದಾರೆ. ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಅತಿಕ್ರಮಣದಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮ ಹಕ್ಕಿಗೆ ತೊಂದರೆಯಾಗದ ಹಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹೊಸದಾಗಿ ಏನೂ ಮಾಡಲು ಹೋಗುವುದು ಬೇಡ. … Continued

ಬೆಳಗಾವಿ ಜಿಲ್ಲೆಯ 2 ತಾಲೂಕಿನ‌ ಶಾಲೆಗಳಿಗೆ, ಕೆಲ ತಾಲೂಕಿನ ಆಯ್ದ ಗ್ರಾಮಗಳ ಶಾಲೆಗಳಿಗೆ ಜುಲೈ 29-30 ರಂದು ರಜೆ ಘೋಷಣೆ

ಬೆಳಗಾವಿ : ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ‌ ಘೋಷಿಸಲಾಗಿದೆ. ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಬಾರವಾಡ, ಕಾರದಗಾ ಗ್ರಾಮಗಳು, ಹುಕ್ಕೇರಿ ತಾಲೂಕಿನ … Continued

ಮಾಧ್ಯಮಗಳ ಜೊತೆ ಮಾತನಾಡುವಾಗ ಎಚ್‌ ಡಿ ಕುಮಾರಸ್ವಾಮಿಗೆ ಮೂಗಿನಲ್ಲಿ ರಕ್ತಸ್ರಾವ : ತಕ್ಷಣವೇ ಆಸ್ಪತ್ರೆಗೆ ದಾಖಲು

 ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಇಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣವೇ ಕೇಂದ್ರ ಸಚಿವರನ್ನು ಇಲ್ಲಿನ ಜಯನಗರ ಬಡಾವಣೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಪುತ್ರ ನಿಖಿಲ್ … Continued

ಶಿರೂರು ಗುಡ್ಡ ಕುಸಿತ ದುರಂತ : 13ನೇ ದಿನವೂ ಸಿಗದ ನಾಪತ್ತೆಯಾದವರ ಸುಳಿವು ; ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸತತ 13 ದಿನಗಳ ಕಾರ್ಚಾರಣೆ ನಡೆದರೂ ಕೇರಳ ಲಾರಿ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾಗಿರುವ ಮೂವರು ಮತ್ತು ಲಾರಿ ಪತ್ತೆಯಾಗಿಲ್ಲ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಶೋಧ ಕಾರ್ಯಚರಣೆಯನ್ನು … Continued