ವೀಡಿಯೊ…| ಬೋಟ್ಸ್ವಾನಾ ಗಣಿಯಲ್ಲಿ 2492-ಕ್ಯಾರೆಟ್ ನ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ ; ಇದರ ಬೆಲೆ ಕೇಳಿದ್ರೆ…

ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಕೆನಡಾದ ಲುಕಾರಾ ಡೈಮಂಡ್‌ ಒಡೆತನದ ಗಣಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕಂಡುಬಂದ ಅತಿದೊಡ್ಡ ವಜ್ರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106-ಕ್ಯಾರೆಟ್ ಬೃಹತ್‌ ಕುಲ್ಲಿನಾನ್ ವಜ್ರದ ನಂತರ ಇದು ಪತ್ತೆಯಾದ ಅತಿದೊಡ್ಡ ವಜ್ರವಾಗಿದ್ದು, ಇದು 2,492-ಕ್ಯಾರೆಟ್ ಡೈಮಂಡ್‌ ಅಗಿದೆ ಎಂದು ಬೋಟ್ಸ್ವಾನಾ … Continued

ಬ್ರಿಟನ್ನಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್…!

ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮುಂದಿನ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಪಕ್ಷ ಸೋಮವಾರ ತಿಳಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಖಾನ್‌ರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಲಂಡನ್ ಮೂಲದ ವಕ್ತಾರ ಸಯದ್ ಜುಲ್ಫಿಕರ್ ಬುಖಾರಿ ಮೂಲಕ ಅರ್ಜಿಯನ್ನು “ಔಪಚಾರಿಕವಾಗಿ ಸಲ್ಲಿಸಿದ್ದಾರೆ” ಎಂದು … Continued

ಗಡ್ಡ ಬೆಳೆಸದ ಕಾರಣಕ್ಕೆ 280ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವಜಾಗೊಳಿಸಿದ ತಾಲಿಬಾನ್ ನೈತಿಕ ಸಚಿವಾಲಯ

ಕಾಬೂಲ್: ತಾಲಿಬಾನ್‌ನ ನೈತಿಕತೆ ಸಚಿವಾಲಯವು ಗಡ್ಡವನ್ನು ಬೆಳೆಸದ ಕಾರಣಕ್ಕಾಗಿ ಭದ್ರತಾ ಪಡೆಯ 280 ಕ್ಕೂ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ ಮತ್ತು ಕಳೆದ ವರ್ಷದಲ್ಲಿ “ಅನೈತಿಕ ಕೃತ್ಯ”ಗಳಿಗಾಗಿ ಅಫ್ಘಾನಿಸ್ತಾನದಲ್ಲಿ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಅರ್ಧದಷ್ಟು ಜನರನ್ನು 24 ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. … Continued

ಎಐ(AI) ಕಮಾಲ್‌..: ಬಿಲಿಯನೇರ್ ಮಸ್ಕ್-ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಭರ್ಜರಿ ಡ್ಯಾನ್ಸ್‌ ಮಾಡಿದ ವೀಡಿಯೊ ವೈರಲ್‌ | ವೀಕ್ಷಿಸಿ

ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು, ಬೀ ಗೀಸ್ ಅವರ ‘ಸ್ಟೇಯಿನ್’ ಅಲೈವ್’ ಹಾಡಿಗೆ ಭರ್ಜರಿ ಡ್ಯಾನ್ಸ್‌ ಹೆಜ್ಜೆಗಳನ್ನು ಪ್ರದರ್ಶಿಸುವ ಆರ್ಟಿಫಿಶೀಯಲ್‌ ರಚಿಸಿದ ( AI-generated) ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಮೂಲತಃ ಉತಾಹ್‌ನ ಅಮೆರಿಕದ ಸೆನೆಟರ್ ಮೈಕ್ ಲೀ ಅವರು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಚಿತ್ರಿಸಲಾದ ಈ ಜೋಡಿಯು … Continued

ವೀಡಿಯೊ…| ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ ʼಲಷ್ಕರ್ ಉಗ್ರʼನ ಜತೆ ಇರುವ ವೀಡಿಯೊ ವೈರಲ್‌ !

ಜಾವೆಲಿನ್‌ ಥ್ರೋದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್, ಅಮೆರಿಕದಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಮೊಹಮ್ಮದ್ ಹ್ಯಾರಿಸ್ ಧರ್ ಅವರೊಂದಿಗೆ ಕಾಣಿಸಿಕೊಂಡ ವೀಡಿಯೊವೊಂದು ವೈರಲ್ ಆದ ನಂತರ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆನ್‌ಲೈನ್ ಚರ್ಚೆಗೆ ಕಾರಣವಾಗಿರುವ ಈ ವೀಡಿಯೊ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ರಾಜಕೀಯ ಫ್ರಂಟ್‌ ಮರ್ಕಝಿ ಮುಸ್ಲಿಂ ಲೀಗ್ … Continued

ಮಂಗಳ ಗ್ರಹದ ಮೇಲ್ಮೈನ 20 ಕಿಮೀ ಕೆಳಗೆ ನೀರಿದೆಯೇ ? ಅಧ್ಯಯನವು ಏನು ಹೇಳುತ್ತದೆ..? ಅದರ ಅರ್ಥವೇನು..?

ಸಿಂಗಾಪುರ: ನಾಸಾದ ಮಾರ್ಸ್ ಇನ್‌ಸೈಟ್ ಲ್ಯಾಂಡರ್‌ ದತ್ತಾಂಶವನ್ನು ಬಳಸಿಕೊಂಡು ಬಿಡುಗಡೆಯಾದ ಅಧ್ಯಯನವು ನಾಲ್ಕನೇ ಗ್ರಹವಾದ ಮಂಗಳನ ಮೇಲ್ಮೈಗಿಂತ ಕೆಳಗಿರುವ ದ್ರವವು ನೀರಿನ ಪುರಾವೆಗಳನ್ನು ತೋರಿಸುತ್ತದೆ ಎಂದು ಹೇಳಿದೆ. 2018 ರಿಂದ ಮಂಗಳ ಗ್ರಹದಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲ್ಯಾಂಡರ್, ನಾಲ್ಕು ವರ್ಷಗಳಿಂದ ಭೂಕಂಪನ ಡೇಟಾವನ್ನು ಅಳೆಯುತ್ತಿದೆ, ಭೂಕಂಪಗಳು ಹೇಗೆ ನೆಲವನ್ನು ಅಲುಗಾಡಿಸಿದವು ಮತ್ತು ಮೇಲ್ಮೈ … Continued

ವೀಡಿಯೊ | ಒಲಿಂಪಿಕ್ಸ್ ; ಬಂಗಾರ ಗೆದ್ದ ಓಟಗಾರ್ತಿಗಿಂತ 1.5 ತಾಸು ತಡವಾಗಿ ಗೆರೆ ಮುಟ್ಟಿದ ಈ ಓಟಗಾರ್ತಿಗೆ ಭಾರಿ ಹರ್ಷೋದ್ಗಾರದ ಸ್ವಾಗತ : ಯಾಕಂದ್ರೆ…

ಪ್ಯಾರಿಸ್‌ : ಭೂತಾನ್‌ನ ಮ್ಯಾರಥಾನ್ ಓಟಗಾರ್ತಿ ಕಿನ್ಜಾಂಗ್ ಲಾಮೊ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ಮ್ಯಾರಥಾನ್ ಸ್ಪರ್ಧೆಯಲ್ಲಿ ತಲುಪುವ ಗೆರೆಯನ್ನು ದಾಟಿದಾಗ ಪ್ಯಾರಿಸ್ ಪ್ರೇಕ್ಷಕರು ಭಾರೀ ಹರ್ಷೋದ್ಗಾರ ನೀಡಿ ಅವರನ್ನು ಸ್ವಾತಿಸಿದರು. ಆದರೆ ಅವರು ಬಂಗಾರದ ಪದಕವನ್ನು ಗೆಲ್ಲಲಿಲ್ಲ. ಬೆಳ್ಳಿ ಹಾಗೂ ಕಂಚಿನ ಪದಕವನ್ನೂ ಗೆಲ್ಲಲಿಲ್ಲ. ಆದರೂ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ … Continued

ಚೀನಾದಲ್ಲಿ ಇತಿಹಾಸ ನಿರ್ಮಿಸಿದ ಭರತನಾಟ್ಯ : ಚೀನಾದ 13 ವರ್ಷದ ಹುಡುಗಿಯಿಂದ ಭರತನಾಟ್ಯ ʼಅರಂಗೇಟ್ರಂʼ

ಬೀಜಿಂಗ್‌ : 13 ವರ್ಷದ ಚೀನಾದ ಹುಡುಗಿ ಲೀ ಮುಝಿ ಚೀನಾದಲ್ಲಿ ಮೊಟ್ಟಮೊದಲ ಭರತನಾಟ್ಯ “ಅರಂಗೇಟ್ರಂ” (ರಂಗ ಪ್ರವೇಶ) ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ನಡೆದ ಈ ಕಾರ್ಯಕ್ರಮವು ನೆರೆಯ ದೇಶವಾದ ಚೀನಾದಲ್ಲಿ ಈ ಪ್ರಾಚೀನ ಭಾರತೀಯ ನೃತ್ಯ ಪ್ರಕಾರದ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಲೀ ಅವರ ಏಕವ್ಯಕ್ತಿ ನೃತ್ಯಕ್ಕೆ ಪ್ರಖ್ಯಾತ ಭರತನಾಟ್ಯ … Continued

ಪ್ಯಾರಿಸ್‌ ನಿಂದ ʼತಿಗಣೆʼಗಳು ದೇಶದೊಳಕ್ಕೆ ನುಸುಳದಂತೆ ತಡೆಯಲು ವಿಮಾನ ನಿಲ್ದಾಣದಲ್ಲಿ ʼನಾಯಿʼಯನ್ನು ನಿಯೋಜನೆ ಮಾಡಿದ ದಕ್ಷಿಣ ಕೊರಿಯಾ…!

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳು ಹಿಂದಿರುಗಿದಾಗ ಅವರೊಟ್ಟಿಗೆ ದೇಶವನ್ನು ಪ್ರವೇಶಿಸಬಹುದಾದ ತಿಗಣೆ (bedbugs)ಗಳನ್ನು ಪತ್ತೆ ಹಚ್ಚಲು ದಕ್ಷಿಣ ಕೊರಿಯಾ ತನ್ನ ಪ್ರಮುಖ ವಿಮಾನ ನಿಲ್ದಾಣವಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಡ್‌ಬಗ್ ಸ್ನಿಫರ್ ನಾಯಿಯನ್ನು ನಿಯೋಜಿಸಿದೆ…! ಸೆಕೊ ಎಂಬ ಹೆಸರಿನ ಎರಡು ವರ್ಷದ ಬೀಗಲ್ ತಳಿಯ ಈ ನಾಯಿ ತಿಗಣೆ ಪತ್ತೆ ಹಚ್ಚುವ … Continued

ಬಾಂಗ್ಲಾದೇಶ ಬಿಕ್ಕಟ್ಟು | ಸುಪ್ರೀಂ ಕೋರ್ಟಿಗೆ ಮುತ್ತಿಗೆ ; ನ್ಯಾಯಾಂಗಕ್ಕೂ ಬೆದರಿಕೆ ; ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ

ಢಾಕಾ: ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಅವರು ಶನಿವಾರ (ಆಗಸ್ಟ್‌ 10) ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಪ್ರತಿಭಟನಾಕಾರರು ಗಡುವು ನೀಡಿದ ನಂತರ “ತಾತ್ವಿಕವಾಗಿ” ರಾಜೀನಾಮೆ ನೀಡಲು ಹಸನ್ ಅವರು ಒಪ್ಪಿಕೊಂಡರು. ಅವರು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. … Continued