ಹೆಲಿಕಾಪ್ಟರ್‌ ಅಪಘಾತದ ಮೊದಲಿನ ತಮ್ಮ ಅಧ್ಯಕ್ಷರ ಕೊನೆಯ ವೀಡಿಯೊ ದೃಶ್ಯಗಳನ್ನು ಹಂಚಿಕೊಂಡ ಇರಾನಿನ ಸರ್ಕಾರಿ ಮಾಧ್ಯಮ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಎಂಟು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದು, ದುರಂತ ಸಂಭವಿಸುವ ಗಂಟೆಗಳ ಮೊದಲು, ಇರಾನ್ ಸರ್ಕಾರಿ ಮಾಧ್ಯಮವು ಭಾನುವಾರ ಹೆಲಿಕಾಪ್ಟರ್‌ನಲ್ಲಿದ್ದ ತಮ್ಮ ಅಧ್ಯಕ್ಷರ ವೀಡಿಯೊಗಳನ್ನು ಹಂಚಿಕೊಂಡಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ ದೂರದ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗುವ ಸ್ವಲ್ಪ ಮೊದಲು ಹೆಲಿಕಾಪ್ಟರ್‌ನಲ್ಲಿ … Continued

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

ದುರಂತ ಘಟನೆಯೊಂದರಲ್ಲಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿದ್ದ ಹೆಲಿಕಾಪ್ಟರ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಅಧಿಕಾರಿಯನ್ನು ಉಲ್ಲೇಖಿಸಿ ಸೋಮವಾರ ರಾಯಿಟರ್ಸ್ ವರದಿ ಮಾಡಿದೆ. ಇರಾನ್ ಸರ್ಕಾರಿ ಸುದ್ದಿ ವಾಹಿನಿ IRINN ಮತ್ತು ಸುದ್ದಿ ಸಂಸ್ಥೆ ಮೆಹರ್ ನ್ಯೂಸ್ ಪ್ರಕಾರ, ಅಪಘಾತದಲ್ಲಿ ಯಾರೂ ಬದುಕುಳಿಯಲಿಲ್ಲ. ಅಜೆರ್ಬೈಜಾನಿ … Continued

ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

ಸಿಂಗಾಪುರ: ಸಿಂಗಾಪುರವು ಮತ್ತೊಂದು ಕೋವಿಡ್‌-19 (COVID-19) ಅಲೆಯ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮೇ 5 ರಿಂದ ಮೇ 11ರವರೆಗೆ 25,900 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಜನರಿಗೆ ಮತ್ತೆ ಮಾಸ್ಕ್‌ಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ, ಅದು ಸ್ಥಿರವಾಗಿ … Continued

ವೀಡಿಯೊ..| ಸ್ಲೋವಾಕಿಯಾ ಪ್ರಧಾನಿ ಮೇಲೆ ನಡೆದ ಗುಂಡಿನ ದಾಳಿಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ; ಶಂಕಿತ 71 ವರ್ಷ ವಯಸ್ಸಿನ ಬರಹಗಾರ

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ನಂಬಲಾಗಿದೆ. ಪ್ರಧಾನಿ ಫಿಕೊ, 59, ತಮ್ಮ ಮೇಲೆ ಹತ್ಯೆಯ ಯತ್ನ ನಡೆದಾಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅವರು ಬೆಂಬಲಿಗರನ್ನು ಸ್ವಾಗತಿಸುತ್ತಿದ್ದರು, ಚುನಾವಣೆಗೆ ವಾರಗಳ ಮೊದಲು ಅವರ ಮೇಲೆ ಹತ್ಯೆ ಯತ್ನದ ದಾಳಿ ನಡೆದಿದೆ. … Continued

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಹ್ಯಾಂಡ್ಲೊವಾ: ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ. ರಾಜಧಾನಿ ಬ್ರಟಿಸ್ಲಾವಾದಿಂದ ಉತ್ತರಕ್ಕಿರುವ ಹ್ಯಾಂಡ್ಲೊವಾದಲ್ಲಿ ಆಯೋಜನೆಗೊಂಡಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡ ನಂತರ ಹೊರಬರುತ್ತಿದ್ದ ಅವರ ಮೇಲೆ ವ್ಯಕ್ತಿಯೊಬ್ಬ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಫಿಕೊ ಅವರ … Continued

ವೀಡಿಯೊ…| ಸ್ವರ್ಗಕ್ಕೆ ಹೋಗಲು 500 ಮೀಟರ್ ಎತ್ತರದ ಬೆಳಗುವ ಏಣಿ : ಕಲಾವಿದನ ಸೃಜನಶೀಲತೆಯ ಅದ್ಭುತ ಪ್ರದರ್ಶನ ; ವೀಕ್ಷಿಸಿ

ಚೀನಾದ ಕಲಾವಿದರೊಬ್ಬರ ಸೃಜನಶೀಲತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಆಕಾಶದಲ್ಲಿ ಏಣಿಯ ಮೆಟ್ಟಿಲುಗಳು ಬೆಳಗುತ್ತಿರುವುದನ್ನು ಮತ್ತು ಏಣಿ ಬೆಳಗುತ್ತ ಆಕಾಶದ ಕಡೆಗೆ ಹೋಗುವುದನ್ನು ತೋರಿಸುತ್ತದೆ. ವೀಡಿಯೊವನ್ನು ಹಂಚಿಕೊಂಡಿರುವ ಹ್ಯಾಂಡಲ್‌ಗಳು ಇದನ್ನು “ಸ್ವರ್ಗಕ್ಕೆ ಮೆಟ್ಟಿಲು” ಎಂದು ಕರೆದಿದ್ದಾರೆ ಮತ್ತು ಇದನ್ನು ಚೀನಾದ ಪಟಾಕಿ ಕಲಾವಿದ ಕೈ ಗುವೊ-ಕಿಯಾಂಗ್ ರಚಿಸಿದ್ದಾರೆ ಎಂದು … Continued

ಭಾರತ ನೀಡಿದ ವಿಮಾನ ಹಾರಿಸಲು ನಮ್ಮ ಪೈಲಟ್‌ಗಳಿಗೆ ಬರುವುದಿಲ್ಲ ಎಂದು ಒಪ್ಪಿಕೊಂಡ ಮಾಲ್ಡೀವ್ಸ್ ರಕ್ಷಣಾ ಸಚಿವ…!

ಮಾಲೆ: ಭಾರತದ ಎಲ್ಲ ರಕ್ಷಣಾ ಸಿಬ್ಬಂದಿ ದ್ವೀಪ ರಾಷ್ಟ್ರ ತೊರೆದ ಕೆಲವು ದಿನಗಳ ನಂತರ ಮಾಲ್ಡೀವ್ಸ್‌ನ ರಕ್ಷಣಾ ಸಚಿವ ಘಾಸನ್ ಮೌಮೂನ್ ಅವರು ತಮ್ಮ ಸೇನೆಯಲ್ಲಿ ಭಾರತ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳ ಕೊರತೆಯಿದೆ ಎಂದು ಒಪ್ಪಿಕೊಂಡಿದ್ದಾರೆ. ಭಾನುವಾರ ಮಾಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಘಾಸನ್ ಮೌಮೂನ್, “ವಿಮಾನವನ್ನು ಹಾರಿಸಲು … Continued

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಕಾಮಿ ರೀಟಾ ಶೆರ್ಪಾ

ಕಠ್ಮಂಡು: ‘ಎವರೆಸ್ಟ್ ಮ್ಯಾನ್’ ಎಂದು ಕರೆಯಲ್ಪಡುವ ನೇಪಾಳದ ಕಾಮಿ ರೀಟಾ ಶೆರ್ಪಾ ಅವರು ಭಾನುವಾರ ಬೆಳಿಗ್ಗೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 29 ನೇ ಬಾರಿಗೆ ಏರುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪ್ರಕಾರ, ದಾಖಲೆ ಸ್ಥಾಪಿಸಿದ ಆರೋಹಿ ಭಾನುವಾರ 7:25 AMಕ್ಕೆ ಎವರೆಸ್ಟ್ ಶಿಖರದ … Continued

ವೀಡಿಯೊಗಳು…| ದಿಗ್ಭ್ರಮೆಗೊಳಿಸುವ ಅಪರೂಪದ ವರ್ಣರಂಜಿತ ಬೆಳಕಿನ ಪ್ರದರ್ಶನಕ್ಕೆ ಕಾರಣವಾಯ್ತು ʼಪ್ರಬಲʼ ಸೌರ ಚಂಡಮಾರುತ : ವೀಕ್ಷಿಸಿ

‘ತೀವ್ರ’ ಸೌರ ಚಂಡಮಾರುತವು ಭೂಮಿಯನ್ನು ಅಪ್ಪಳಿಸಿದೆ. ಇದು ವಿದ್ಯುತ್‌ ಮತ್ತು ದೂರ ಸಂಪರ್ಕಗಳಿಗೆ ಅಡ್ಡಿಪಡಿಸುವ ಬಗ್ಗೆ ಆತಂಕ ಎದುರಾಗಿದೆ. ಅಸಾಧಾರಣವಾಗಿ ಪ್ರಬಲವಾದ ಸೌರ ಚಂಡಮಾರುತವು ಟ್ಯಾಸ್ಮೆನಿಯಾದಿಂದ ಬ್ರಿಟನ್ ಮತ್ತು ಕೆನಡಾದಿಂದ ಅಮೆರಿಕದ ವರೆಗೆ ಆಕಾಶದಲ್ಲಿ ಅದ್ಭುತವಾದ ಬೆಳಕಿನ ಪ್ರದರ್ಶನಗಳನ್ನು ಮಾಡಿದೆ. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದ ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತವು ಭೂಮಿಗೆ ಅಪ್ಪಳಿಸಿದ ನಂತರ … Continued

ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ….ವಧುವಿಗೆ 96 ವರ್ಷ…!

ಬೊಕಾ ರಾಟನ್: ಅಮೆರಿಕನ್ನರಾದ ಹೆರಾಲ್ಡ್ ಟೆರೆನ್ಸ್ ಮತ್ತು ಜೀನ್ ಸ್ವೆರ್ಲಿನ್ ಅವರ ಪ್ರಣಯವು “ರೋಮಿಯೋ ಮತ್ತು ಜೂಲಿಯೆಟ್‌ಗಿಂತ ಕಡಿಮೆಯೇನಿಲ್ಲ” ಎಂದು ಈ ಜೋಡಿ ಹೇಳಿಕೊಳ್ಳುತ್ತದೆ. ಯಾಕೆಂದರೆ ಹೆರಾಲ್ಡ್ ಟೆರೆನ್ಸ್ ಅವರಿಗೆ 100 ವರ್ಷ, ಜೀನ್ ಸ್ವೆರ್ಲಿನ್ ವಯಸ್ಸು 96, ಮತ್ತು ಅವರು ಮುಂದಿನ ತಿಂಗಳು ಫ್ರಾನ್ಸ್‌ನಲ್ಲಿ ಮದುವೆಯಾಗಲಿದ್ದಾರೆ. ಯಾಕೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ವರ ಫ್ರಾನ್ಸ್‌ನಲ್ಲಿ … Continued