ಸೊಳ್ಳೆ ಪರದೆಯೊಳಗೆ ಕುಳಿತು ರಾತ್ರಿ ಕಾವಲು : ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾದ ಭದ್ರತಾ ಸಿಬ್ಬಂದಿ ವೈರಲ್‌ ವಿಡಿಯೋ

ಹೈದರಾಬಾದ್‌ನಿಂದ ಬಂದಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಸತಿ ಸಮುಚ್ಚಯಗಳಲ್ಲಿ (Residential Societies) ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಈ ವಿಡಿಯೋ ಎತ್ತಿ ತೋರಿಸುತ್ತಿದೆ. ಸೂರಜಕುಮಾರ ಬೌದ್ಧ ಎಂಬವರು ‘X’ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ರಾತ್ರಿ ಪಾಳಿಯಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸೊಳ್ಳೆ … Continued

ವಿಡಿಯೊ | ಸಭೆಯ ನಡುವೆಯೇ ಎಂಟ್ರಿ ಕೊಟ್ಟು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತ ಮಂಗ

ಉತ್ತರ ಪ್ರದೇಶದ  ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಧಿಕಾರಿಯೊಬ್ಬರ ಪ್ರಾಣಿ ಪ್ರೇಮ ಮತ್ತು ಶಾಂತ ಸ್ವಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ‘ರೈತರ ದಿನಾಚರಣೆ’ ಅಂಗವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತರ ನಡುವೆ ಮಹತ್ವದ ಸಭೆ ನಡೆಯುತ್ತಿತ್ತು. ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಮತ್ತು … Continued

ದೃಷ್ಟಿಹೀನತೆಯ ಸವಾಲು ಗೆದ್ದ ಜೈನಬ್: ಸಿಬಿಎಸ್‌ಇ 10ನೇ ತರಗತಿಯಲ್ಲಿ ಶೇ. 95 ಅಂಕ ಪಡೆದು ಸಾಧನೆ !

 ಶ್ರೀನಗರ: ಛಲವೊಂದಿದ್ದರೆ ದೈಹಿಕ ನ್ಯೂನತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಾಲಕಿ ಜೈನಬ್ ಬಿಲಾಲ್ ಸಾಬೀತುಪಡಿಸಿದ್ದಾರೆ. ದೃಷ್ಟಿಹೀನತೆಯ ನಡುವೆಯೂ ಅದ್ಭುತ ಸಾಧನೆ ಮಾಡಿರುವ ಜೈನಬ್ 2026ರ ಸಿಬಿಎಸ್‌ಇ (CBSE) 10ನೇ ತರಗತಿ ಪರೀಕ್ಷೆಯಲ್ಲಿ ಈಕೆ ಶೇ. 95ರಷ್ಟು ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಒಟ್ಟು 500 ಅಂಕಗಳಲ್ಲಿ … Continued

ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದ ನಾಲ್ವರು “ಕಟ್ಟರ್ ಪಂಥೀಯ” ವ್ಯಕ್ತಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ. ದೆಹಲಿ ಪೊಲೀಸ್‌ನ ವಿಶೇಷ ದಳ (Special Cell) ಈ ಕಾರ್ಯಾಚರಣೆಯನ್ನು ನಡೆಸಿದ್ದು, ಬಂಧಿತರನ್ನು ಮೊಸೈಬ್ ಅಹ್ಮದ್, … Continued

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜವಿದ್ದ ಹಡಗುಗಳ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ

ದುಬೈ/ನವದೆಹಲಿ: ಜಾಗತಿಕ ತೈಲ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಶನಿವಾರ ಭಾರೀ ಉದ್ವಿಗ್ನತೆ ಸೃಷ್ಟಿಯಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಯು ಎರಡು ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹಡಗುಗಳು ಅನಿವಾರ್ಯವಾಗಿ ತಮ್ಮ ಪಯಣವನ್ನು ಅರ್ಧಕ್ಕೇ ನಿಲ್ಲಿಸಿ ಹಿಂತಿರುಗಿವೆ ಎಂದು ಸಮುದ್ರ ಭದ್ರತಾ ಮೂಲಗಳು … Continued

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

 ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯ ಪುನರ್ರಚನೆಗೆ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸಚಿವ ಸಂಪುಟವು ಶನಿವಾರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (DA) ಶೇಕಡಾ 2ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಿದೆ. ಈ ಹೆಚ್ಚಳವು ಜುಲೈ 1, 2025 ರಿಂದಲೇ ಅನ್ವಯವಾಗಲಿದ್ದು, ಬಾಕಿ ಹಣದ (Arrears) ಸಮೇತ ಪಾವತಿಸಲಾಗುತ್ತದೆ. ಇದರಿಂದ ಹಾಲಿ ನೌಕರರು ಹಾಗೂ ನಿವೃತ್ತ … Continued

ವಿಡಿಯೋ |ಮೈಸೂರು : ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ಧೈರ್ಯ ತೋರಿ ಮಂಚದ ಮೇಲಿದ್ದ ಅತ್ತೆ ಹೊರತಂದ ಸೊಸೆ

ಮೈಸೂರು : ಚಿರತೆಯೊಂದು ಮನೆಯೊಳಗೆ ನುಗ್ಗಿ ಬೆಡ್‌ರೂಂ ಸೇರಿಕೊಂಡು ಮಂಚದ ಕೆಳಗೆ ಅಡಗಿದ ವಿದ್ಯಮಾನ ಮೈಸೂರು ನಗರದ ಸಿದ್ದಾರ್ಥ ನಗರದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಸುಮಾರು 4 ವರ್ಷದ ಈ ಚಿರತೆಯನ್ನು ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ (Leopard Task Force) ಯಶಸ್ವಿಯಾಗಿ ಸೆರೆಹಿಡಿಯುವ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ. ಮೈಸೂರು ನಗರದ ಸಿದ್ಧಾರ್ಥ … Continued

ಚಿಕನ್ ಖಾದ್ಯದ ಜೊತೆ ಶ್ರೀಕೃಷ್ಣನ ಚಿತ್ರವಿರುವ ಕಾರ್ಡ್ ಪ್ರಕಟಣೆ : ರೆಸ್ಟೋರೆಂಟ್ ಮಾಲೀಕನ ಬಂಧನ

ಆಲಪ್ಪುಳ: ವಿಷು ಹಬ್ಬದ ಶುಭಾಶಯ ಕೋರುವ ಕಾರ್ಡ್‌ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಮಂಡಿ’ (ಗ್ರಿಲ್ಡ್ ಚಿಕನ್ ಮತ್ತು ಅನ್ನದ ಖಾದ್ಯ) ಇರುವ ಫೋಟೋವನ್ನು ಬಳಸಿ ವಿವಾದ ಸೃಷ್ಟಿಸಿದ್ದ ಕೇರಳದ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ ‘ಮೆಹರ್ ಮಂದಿ ಅಂಡ್ ಗ್ರಿಲ್ಸ್’ ಹೋಟೆಲ್‌ನ ಮಾಲೀಕ ಅರ್ಷದ್ ಬಂಧಿತ … Continued

ರಾಹುಲ್ ಗಾಂಧಿಗೆ ಸಂಕಷ್ಟ : ಬ್ರಿಟಿಷ್ ಪೌರತ್ವ ಆರೋಪ ; ಎಫ್‌ಐಆರ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

ಲಕ್ನೋ : ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಅಲಹಾಬಾದ್ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ … Continued

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ಹಿನ್ನಡೆ : ಸಿಗದ ಮೂರನೇ ಎರಡರಷ್ಟು ಬಹುಮತ

ನವದೆಹಲಿ: ಕೇಂದ್ರ ಸರ್ಕಾರವು ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕವು ಶುಕ್ರವಾರ ಲೋಕಸಭೆಯಲ್ಲಿ ಅಗತ್ಯ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ, 2026 ಅನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿತ್ತು. ಆದರೆ ಮತದಾನದ ವೇಳೆ ವಿಧೇಯಕದ ಪರವಾಗಿ ೨೯೮ ಸಂಸದರು ಮತ್ತು ವಿರುದ್ಧವಾಗಿ 230 ಸಂಸದರು ಮತ ಚಲಾಯಿಸಿದರು. … Continued