ಆಘಾತಕಾರಿ : ಗುಂಡು ಹಾರಿಸಿ ಪ್ರಾಂಶುಪಾಲರನ್ನು ಕೊಂದ ವಿದ್ಯಾರ್ಥಿ, ನಂತರ ಪ್ರಾಂಶುಪಾಲರ ಬೈಕ್‌ ನಲ್ಲಿ ಪರಾರಿ

ಭೋಪಾಲ್: ಮಧ್ಯಪ್ರದೇಶದ ಛತ್ತರ್‌ಪುರದ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಧಮೋರಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಂದ್ರ ಕುಮಾರ ಸಕ್ಸೇನಾ (55) ಅವರು ಬಾತ್‌ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಸುಮಾರು ಐದು ವರ್ಷಗಳಿಂದ ಶಾಲೆಯ ಪ್ರಾಂಶುಪಾಲರಾಗಿದ್ದರು. ಮೂಲಗಳ ಪ್ರಕಾರ, ಅವರ ಮೇಲೆ ಗುಂಡು ಹಾರಿಸಿದನೆಂದು ಹೇಳಲಾದ ವಿದ್ಯಾರ್ಥಿಯು ಅವರನ್ನು … Continued

ಸಂಸತ್ ಅಧಿವೇಶನ: ಕಾಂಗ್ರೆಸ್​ ಸಂಸದರ ಸೀಟಿನಡಿ ಕಂತೆ ನೋಟುಗಳು ಪತ್ತೆ, ಸದನದಲ್ಲಿ ಗದ್ದಲ

ನವದೆಹಲಿ: ಕಾಂಗ್ರೆಸ್​ನ ರಾಜ್ಯಸಭಾ ಸಂಸದರೊಬ್ಬರ ಸೀಟಿನಡಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಯಾಗಿದೆ. ರಾಜ್ಯಸಭಾ ಸಂಸದರ ಸೀಟಿನ ಸಂಖ್ಯೆ 222 ರ ಅಡಿಯಲ್ಲಿ 500 ರೂ ನೋಟುಗಳ ಬಂಡಲ್ ಪತ್ತೆಯಾಗಿದೆ. ತೆಲಂಗಾಣದಿಂದ ಕಾಂಗ್ರೆಸ್​ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರು ಕುಳಿತುಕೊಳ್ಳುವ ಸೀಟಿನಲ್ಲಿ ಹಣವಿತ್ತು ಎಂದು ಹೇಳಲಾಗಿದೆ. ಸಭಾಪತಿ ಜಗದೀಪ ಧನಕರ … Continued

ವೀಡಿಯೊ..| ಬರಿಗೈಯಲ್ಲಿ ಚಿರತೆಯ ಕುತ್ತಿಗೆ ಅಮುಕಿ ಹಿಡಿದ ಗುಂಪು ; ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ಷೇಪ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಗ್ರಾಮಸ್ಥರ ಗುಂಪು ತಮ್ಮ ಕೈಗಳಿಂದಲೇ ಚಿರತೆ ಹಿಡಿದುಕೊಂಡಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಲಾಲ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಮ್ಮ ಪ್ರದೇಶದಲ್ಲಿ ಅವರೇ ಚಿರತೆ ಹಿಡಿದ ನಂತರ ಚಿರತೆಯ ಕುತ್ತಿಗೆಯನ್ನು ಕೆಲವರು ಬರಿ ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಚಿರತೆಯನ್ನು ನಿರ್ವಹಿಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. … Continued

ಮೈ ಜುಂ ಎನ್ನುವ ವೀಡಿಯೊ..| ಜಾತ್ರೆಯಲ್ಲಿ ಎಡವಟ್ಟಾಗಿ 60 ಅಡಿ ಎತ್ತರದ ಫೆರ್ರಿಸ್ ಚಕ್ರದಲ್ಲಿ ತೂಗಾಡಿದ ಹುಡುಗಿ…!

ಉತ್ತರ ಪ್ರದೇಶದ ಜಾತ್ರೆಯೊಂದರಲ್ಲಿ 13 ವರ್ಷದ ಬಾಲಕಿಯೊಬ್ಬಳು 60 ಅಡಿ ಎತ್ತರದ ಫೆರ್ರಿಸ್ ಚಕ್ರಕ್ಕೆ ತೂಗಾಡುತ್ತಿರುವ ದೃಶ್ಯ ಕಂಡುಬಂದಿದೆ. ಆತಂಕದ ಕ್ಷಣಗಳ ನಂತರ ಮತ್ತು ಫೆರ್ರಿಸ್ ಚಕ್ರ ನಿರ್ವಹಿಸುವವರ ಕಡೆಯಿಂದ ಕೆಲವು ತ್ವರಿತ ಕಾರ್ಯಾಚರಣೆಯ ನಂತರ, ಹುಡುಗಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಈ ಘಟನೆಯು ಬುಧವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 130 ಕಿಮೀ ದೂರದಲ್ಲಿರುವ … Continued

ಮುಡಾ ಹಗರಣ | ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ ಜನವರಿ 25ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ ವಾದಿಸಿತು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ಅನುಮತಿಸಿರುವುದನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ, … Continued

ವೀಡಿಯೊಗಳು..| ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವೀಸ್‌, ಡಿಸೆಂಗಳಾಗಿ ಏಕನಾಥ ಶಿಂಧೆ, ಅಜಿತ ಪವಾರ್ ಪ್ರಮಾಣ ವಚನ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅ ಮೂಲಕ ಸುಮಾರು ಎರಡು ವಾರಗಳ ಸಸ್ಪೆನ್ಸ್ ಮತ್ತು ಬಿಜೆಪಿ ಮತ್ತು ಶಿವಸೇನೆ ನಡುವಿನ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಏಕನಾಥ ಶಿಂಧೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಸಿಪಿ ರಾಧಾಕೃಷ್ಣನ್‌ ಅವರು ನೂತನ … Continued

‘ಪುಷ್ಪಾ 2’ ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಮಹಿಳೆ ಸಾವು, ಮಗನಿಗೆ ಗಾಯ

ಹೈದರಾಬಾದ್ : ಬುಧವಾರ (ಡಿಸೆಂಬರ್‌ ೪) ಸಂಜೆ ಹೈದರಾಬಾದ್‌ನ ಥಿಯೇಟರ್‌ನಲ್ಲಿ ‘ಪುಷ್ಪಾ 2: ದಿ ರೂಲ್’ ಚಿತ್ರದ ಪ್ರಥಮ ಪ್ರದರ್ಶನದ ವೇಳೆ 35 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಅವರ ಒಂಬತ್ತು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದ್ದು, ಚಿತ್ರದ ನಾಯಕ ನಟ ಅಲ್ಲು … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ 4-5 ದಿನ ಮಳೆ ; ಮುನ್ಸೂಚನೆ

ಬೆಂಗಳೂರು ; ಫೆಂಗಲ್ ಚಂಡಮಾರುತದ ದುರ್ಬಲವಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಅದರ ಪ್ರಭಾವದಿಂದ ಮಳೆ ಬೀಳುತ್ತಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಡಿಸೆಂಬರ್ 9ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, … Continued

ಮಹಾರಾಷ್ಟ್ರ | ಗುರುವಾರ ದೇವೇಂದ್ರ ಫಡ್ನವೀಸ್‌, ಇಬ್ಬರು ಡಿಸಿಎಂಗಳ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಮುಂಬೈ: ಮಹಾರಾಷ್ಟ್ರದ (Maharashtra) ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಜೊತೆ ಶಿವಸೇನೆ ನಾಯಕ ಏಕನಾಥ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಬಿಜೆಪಿ, ಶಿವಸೇನೆ ಶಿಂಧೆ ಬಣ ಮತ್ತು ಎನ್‌ಸಿಪಿ … Continued

ಕಾಂಗ್ರೆಸ್‌ ನಾಯಕ ಶಶಿ ತರೂರ್ ಮೈಮೇಲೆ ಮಲಗಿದ ಎಲ್ಲಿಂದಲೋ ಬಂದ ಮಂಗ..! ಹೃದಯಸ್ಪರ್ಶಿ ಫೋಟೋ ಹಂಚಿಕೊಂಡ ಸಂಸದ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ಮಂಗನೊಂದಿಗೆ ತಾವು ಮುಖಾಮುಖಿಯಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದನ್ನು ತಮಗಾದ “ಅಸಾಧಾರಣ ಅನುಭವ” ಎಂದು ಕರೆದಿದ್ದಾರೆ. ತಮ್ಮ ತೋಟದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವರಿಸಿದ ಅವರು, ಮಂಗವು ಅವರ ಕಾಲ ಮೇಲೆ ವಿಶ್ರಮಿಸುತ್ತಿರುವ ಮತ್ತು ಅದಕ್ಕೆ ನೀಡಿದ ಬಾಳೆಹಣ್ಣನ್ನು ತಿನ್ನುತ್ತ ಆನಂದಿಸುತ್ತಿರುವ ದೃಶ್ಯಗಳನ್ನು … Continued