ವೀಡಿಯೊ…| ಟಿಎಂಸಿ ಕೌನ್ಸಿಲರ್ ಮೇಲೆ ಗುಂಡಿನ ದಾಳಿಗೆ ಯತ್ನ ; ಶೂಟರ್ ನನ್ನು ಬೆನ್ನಟ್ಟಿದ ಕೌನ್ಸಿಲರ್‌ ; ಓರ್ವನ ಸೆರೆ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ (TMC) ಕೌನ್ಸಿಲರ್ ಸುಶಾಂತ ಘೋಷ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಆದರೆ ರಿವಾಲ್ವರ್‌ನಿಂದ ಗುಂಡು ಹಾರದ ಕಾರಣ ಹತ್ಯೆ ಯತ್ನ ವಿಫಲವಾಗಿದೆ. ಆರೋಪಿಯನ್ನು ಕೌನ್ಸಿಲರ್‌ ಹಾಗೂ ಇತರರು ಬೆನ್ನಟ್ಟಿ ಹಿಡಿದಿದ್ದಾರೆ. ಶುಕ್ರವಾರ (ನ. 15) ರಾತ್ರಿ 8:10ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು … Continued

ಝಾನ್ಸಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳ ಸಾವು, 16 ಮಕ್ಕಳಿಗೆ ಗಾಯ

ಝಾನ್ಸಿ/ಲಕ್ನೋ : ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ನವಜಾತ ಶಿಶುಗಳು ಮೃತಪಟ್ಟಿವೆ ಹಾಗೂ ಕನಿಷ್ಠ 16 ಮಕ್ಕಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಶುಕ್ರವಾರ ರಾತ್ರಿ 10:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ … Continued

ವೀಡಿಯೊ…| ಒಂದೇ ಬೈಕ್‌ನಲ್ಲಿ 8 ಜನರ ಪ್ರಯಾಣ; ಬೈಕ್‌ ತಡೆದ ಪೊಲೀಸರೇ ಶಾಕ್‌…!

ಶಹಜಹಾನಪುರ : ಅಚ್ಚರಿಯ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಕುಟುಂಬದ ಏಳು ಜನರೊಂದಿಗೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಸವಾರಿಯನ್ನು ಸ್ಥಳೀಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸಿದ್ದು, ಬೈಕಿನಲ್ಲಿ ಎಂಟು ಜನ ಹೋಗುತ್ತಿರುವುದನ್ನು ನೋಡಿ ಪೊಲೀಸ್‌ ಅಧಿಕಾರಿಯೇ ಗಬರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಹಜಹಾನಪುರದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ … Continued

ಐಪಿಎಲ್-2025 ಮೆಗಾ ಹರಾಜಿನಲ್ಲಿ 13 ವರ್ಷದ ಕ್ರಿಕೆಟ್‌ ಆಟಗಾರ ಅತ್ಯಂತ ಕಿರಿಯ ; ಈತನ ಮೂಲ ಬೆಲೆ…

ನವದೆಹಲಿ: ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರು 2 ಕೋಟಿ ರೂ.ಗಳ ಉನ್ನತ ಮೂಲ ಬೆಲೆಯೊಂದಿಗೆ 574 ಆಟಗಾರರ ಪಟ್ಟಿಯಲ್ಲಿ ಇರುವ ಪ್ರಮುಖರಾಗಿದ್ದಾರೆ. 574 ಆಟಗಾರರ ಪಟ್ಟಿಯಲ್ಲಿ ಅತ್ಯಂತ … Continued

ವೀಡಿಯೊ…| ತಡರಾತ್ರಿ ಪಿಜ್ಜಾ ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಕೆಫೆಯಲ್ಲಿ ಗುಂಡು ಹಾರಿಸಿ ಸಿಬ್ಬಂದಿ ಬೆದರಿಸಿ ಪಿಜ್ಜಾ ತಿಂದ ಇಬ್ಬರು ಯುವಕರು…!

ಭೋಪಾಲ್ : ತಡರಾತ್ರಿ ಪಿಜ್ಜಾ ನೀಡಲು ಸಿಬ್ಬಂದಿ ನಿರಾಕರಿಸಿದ ಕಾರಣ ರೌಡಿಯೊಬ್ಬ ಕೆಫೆಯ ಪ್ರವೇಶ ದ್ವಾರದಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಕೆಲವೇ ಜನರಿದ್ದರು ಮತ್ತು ಕೆಫೆ ಮುಚ್ಚುವ ಸಮಯದಲ್ಲಿ ಕೆಫೆಗೆ ಇಬ್ಬರು ಯುವಕರು ನುಗ್ಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಲ್ಲಿ ಒಬ್ಬ ಕೈಯಲ್ಲಿ ಕಪ್ಪು … Continued

ವೀಡಿಯೊ…| ಹರಿಯಾಣದ ಮೊಟ್ಟೆ ತಿನ್ನುವ ಈ ದೈತ್ಯ ಕೋಣದ ತೂಕ 1500 ಕೆಜಿ…! ಇದರ ಬೆಲೆ ₹23 ಕೋಟಿ….!!

ಅಜ್ಮೇರ್ : ಇಲ್ಲಿನ ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಎಂಟು ವರ್ಷದ ಕೋಣ ಎಲ್ಲರ ಗಮನ ಸೆಳೆದಿದೆ. ಈ ಕೊಬ್ಬಿದ ಕೋಣದ ಹೆಸರು ಅನ್ಮೋಲ್. ಈ ಕೋಣದ ತೂಕ ಬರೋಬ್ಬರಿ 1500 ಕೆಜಿ…! ಅಂದರೆ 15 ಟನ್‌…! ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ … Continued

ಎಚ್ಚರ…| ವಂಚಕರಿಂದ ʼಡಿಜಿಟಲ್ ಬಂಧನʼ : 10 ಕೋಟಿ ರೂ. ಕಳೆದುಕೊಂಡ 70 ವರ್ಷದ ನಿವೃತ್ತ ಇಂಜಿನಿಯರ್…!

ನವದೆಹಲಿ: ದೆಹಲಿಯ 70 ವರ್ಷದ ನಿವೃತ್ತ ಇಂಜಿನಿಯರ್ ಡಿಜಿಟಲ್ ಬಂಧನದ ಹಗರಣಕ್ಕೆ ಬಲಿಯಾದ ನಂತರ ತನ್ನ ಜೀವಮಾನದ ಉಳಿತಾಯದ ಹಣ ಕಳೆದುಕೊಂಡಿದ್ದಾರೆ. ತೈವಾನ್‌ನಿಂದ ನಿಷೇಧಿತ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್ ನಿಮ್ಮ ಹೆಸರಿಗೆ ಕಳುಹಿಸಲಾಗಿದೆ ಎಂದು ಫೋನ್‌ ಮಾಡಿ ಹೆದರಿಸಿ ವಂಚಕರು ಅವರಿಂದ 10 ಕೋಟಿ ರೂ.ಗಳಿಗೂ ಹೆಚ್ಚು ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ಪೊಲೀಸರಂತೆ … Continued

ವೀಡಿಯೊ…| ಸೈಕಲ್ ಮೇಲಿದ್ದ 5 ವರ್ಷದ ಬಾಲಕನ ಮೇಲೆ ಓಡಿದ ಕಾರು ; ಪವಾಡ ಸದೃಶರೀತಿಯಲ್ಲಿ ಪಾರಾದ ಬಾಲಕ…!

ಸೈಕಲ್ ಮೇಲೆ ಕುಳಿತು ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಕಾರು ಆತನ ಮೇಲೆ ಹತ್ತಿ ಹೋದರೂ ಆತ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಮಧ್ಯಪ್ರದೇಶದ ಬೇತುಲ್‌ ಎಂಬಲ್ಲಿ ನಡೆದಿದೆ. ಈ ಘಟನೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೇತುಲ್ ಜಿಲ್ಲೆಯ ಕೊತ್ವಾಲಿ ಪೊಲೀಸ್ … Continued

ವೀಡಿಯೊ..| ಚುನಾವಣೆ : ಕರ್ತವ್ಯ ನಿರತ ಹಿರಿಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ದರ್ಪ ತೋರಿದ ಅಭ್ಯರ್ಥಿ…!

ಜೈಪುರ: ರಾಜಸ್ತಾನದ  ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತಗಟ್ಟೆಯ ಹೊರಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಸ್ವತಂತ್ರ ಅಭ್ಯರ್ಥಿ ನರೇಶ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ರಕ್ಷಣಾ ಕವಚಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ … Continued

ವೈದ್ಯರ ಎಡವಟ್ಟು…: ಎಡಗಣ್ಣಿನ ಬದಲು ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು…!

ನೋಯ್ಡಾ : ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಹೋದ ಏಳು ವರ್ಷದ ಬಾಲಕನ ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 12 ರಂದು ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಲಕನ ತಂದೆ ನಿತಿನ್ ಭಾಟಿ ಪ್ರಕಾರ, ಎಡಗಣ್ಣಿನಿಂದ … Continued