ವೀಡಿಯೊ…: ಹೆಲ್ಮೆಟ್‌ನೊಳಗೆ ಅಡಗಿಕೊಂಡಿತ್ತು ವಿಷಪೂರಿತ ನಾಗರಹಾವು…ಅದೃಷ್ಟವಶಾತ್‌ ವ್ಯಕ್ತಿ ಕಡಿತದಿಂದ ಪಾರು | ವೀಕ್ಷಿಸಿ

ಕೇರಳದ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟಿದ್ದ ಹೆಲ್ಮೆಟ್‌ನಲ್ಲಿ ನಾಗರಹಾವನ್ನು ಪತ್ತೆಯಾಗಿದೆ. ವಾಹನ ಸವಾರ ಈ ವಿಷಕಾರಿ ಹಾವಿನ ಕಡಿತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತ್ರಿಶೂರ್ ಮೂಲದ ಸೋಜನ್, ತನ್ನ ಕೆಲಸದ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ಹೆಲ್ಮೆಟ್ ಇರಿಸಿದ್ದರು. ಸಂಜೆ ಅವರು ಹೊರಡುವಾಗ ತಮ್ಮ ಹೆಲ್ಮೆಟ್‌ ತೆಗೆದಾಗ ಅವರಿಗೆ ಹೆಲ್ಮೆಟ್‌ ಒಳಗೆ ಏನೋ ಪ್ರವೇಶಿಸಿದೆ ಎಂಬುದು … Continued

ಲೋಕಸಭೆ ಚುನಾವಣೆ : ಬಿಹಾರದಲ್ಲಿ ನಿತೀಶ ಲೆಕ್ಕಾಚಾರ ಫಲ ನೀಡುವುದೇ..? ; ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಹಲವು ವರ್ಷಗಳಿಂದ ಅತ್ಯಂತ ಅಸ್ಥಿರವಾಗಿರುವ ಬಿಹಾರ ರಾಜಕೀಯವು ಹಲವಾರು ಸಮ್ಮಿಶ್ರ ಸರ್ಕಾರಗಳ ರಚನೆ ಮತ್ತು ಸಾಕಷ್ಟು ತಿರುವುಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ರಾಜ್ಯದಲ್ಲಿನ ರಾಜಕೀಯ ಸನ್ನಿವೇಶದಲ್ಲಿನ ಕ್ರಿಯಾತ್ಮಕ ಬದಲಾವಣೆಗಳು 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಮಾಡಿದೆ. ಶನಿವಾರ (ಅಕ್ಟೋಬರ್ 7) ನಡೆಸಿದ ಇತ್ತೀಚಿನ ಇಂಡಿಯಾ ಟಿವಿ-ಸಿಎನ್‌ಎಕ್ಸ್ … Continued

ಆರು ತಿಂಗಳ ಜೈಲು ಶಿಕ್ಷೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ನಟಿ ಜಯಪ್ರದಾ

ಚೆನ್ನೈ: ತಮ್ಮ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳ ವಿಮಾ ಪಾಲಿನ ಹಣದ ಬಾಕಿ ಮೊತ್ತ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತನಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್‌ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಜಯಪ್ರದಾ ಅವರು ತಮ್ಮ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳ ವಿಮಾ … Continued

2024ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಭಾರತದ ʼಗಗನಯಾನ ನೌಕೆʼಯ ಮೊದಲ ಚಿತ್ರ ಬಿಡುಗಡೆ : ಇದನ್ನು ಹೇಗೆ ಮಾಡಲಾಗುತ್ತದೆ ಎಂದು ಹೇಳಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು, ಶನಿವಾರ ಅದು ಡಿಸೆಂಬರ್ 2024 ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಸಜ್ಜಾಗಿರುವ ʼಗಗನಯಾನʼ ಬಾಹ್ಯಾಕಾಶ ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಈ ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಬಾಹ್ಯಾಕಾಶ ಸಂಸ್ಥೆ ಹೇಳಿದೆ. “ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ. … Continued

ಸಿಕ್ಕಿಂ ಹಠಾತ್ ಪ್ರವಾಹ: ಸಾವಿನ ಸಂಖ್ಯೆ 56ಕ್ಕೆ ಏರಿಕೆ, 100ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆ

ಸಿಕ್ಕಿಂನಲ್ಲಿ ಸಂಭವಿಸಿದ ತೀಸ್ತಾ ನದಿಯ ಭಾರೀ ಪ್ರವಾಹದಲ್ಲಿ ಸತ್ತವರ ಸಂಖ್ಯೆ ಶನಿವಾರ 56 ಕ್ಕೆ ತಲುಪಿದೆ. ಇದುವರೆಗೆ ಸಿಕ್ಕಿಂನಲ್ಲಿ 26 ಮೃತದೇಹಗಳು ಪತ್ತೆಯಾದರೆ, ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಪತ್ತೆಯಾಗಿವೆ. ಸೇನಾ ಸಿಬ್ಬಂದಿ ಸೇರಿದಂತೆ ಸಿಕ್ಕಿಂನಲ್ಲಿ ಕನಿಷ್ಠ 142 ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ವಿಪತ್ತು ನಿರ್ವಹಣಾ ಅಧಿಕಾರಿಗಳು ಸಿಕ್ಕಿಂನಲ್ಲಿ ಇದುವರೆಗೆ … Continued

ಐತಿಹಾಸಿಕ…: ಏಷ್ಯನ್ ಗೇಮ್ಸ್‌ನಲ್ಲಿ 100-ಪದಕಗಳ ಮೈಲಿಗಲ್ಲು ಮುಟ್ಟಿದ ಭಾರತ

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತವು ಅಧಿಕೃತವಾಗಿ 100 ಪದಕಗಳ ಮೈಲಿಗಲ್ಲನ್ನು ತಲುಪಿದೆ. ಶನಿವಾರ ಬೆಳಿಗ್ಗೆ ಭಾರತೀಯ ಕ್ರೀಡಾಪಟುಗಳು ಅಮೋಘ ಸಾಧನೆಗೈದಿದ್ದು 3 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಣ ದಿನವನ್ನು ಆರಂಭಿಸಿದ್ದಾರೆ. ಏಶ್ಯನ್‌ ಗೇಮ್ಸ್‌ ಶನಿವಾರ (ಅ.7) ನಡೆದ ಕಬ್ಬಡ್ಡಿಯ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ … Continued

ದೇಶದ ಉತ್ತರದ ಗಡಿ ತಿರುಚಲು ಯತ್ನ : ಎಫ್‌ಐಆರ್‌ನಲ್ಲಿ ನ್ಯೂಸ್‌ಕ್ಲಿಕ್‌ ಸಂಸ್ಥಾಪಕರ ವಿರುದ್ಧ ಆರೋಪ

ನವದೆಹಲಿ: ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಮತ್ತು ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರು ವಿದೇಶಿ ನಿಧಿಯ ಮೂಲಕ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದಾರೆ. ಹಾಗೂ ಅದನ್ನು ಭಾರತದ ಸಮಗ್ರತೆ ಮತ್ತು ಭದ್ರತೆಗೆ ಹಾನಿ ಮಾಡಲು ಬಳಕೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸ್‌ ವಿಶೇಷ ಘಟಕ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಎಫ್‌ಐಆರ್‌ನಲ್ಲಿ ಪ್ರಬೀರ್‌, ಚಕ್ರವರ್ತಿ … Continued

ಇರಾನಿನ ನರ್ಗೆಸ್ ಮೊಹಮ್ಮದಿ ಅವರಂತೆಯೇ ಇವರಿಗೂ ಜೈಲಿನಲ್ಲಿದ್ದಾಗಲೇ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿತ್ತು

ತುಳಿತಕ್ಕೊಳಗಾದ ಮಹಿಳೆಯರ ಪರವಾಗಿ ಹೋರಾಡಿದ ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರಿಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿರುವ ಅವರಿ ಈಗ ಇರಾನಿನ ಜೈಲಿನಲ್ಲಿದ್ದಾರೆ. ಇರಾನ್ ಸರ್ಕಾರವು ನರ್ಗೆಸ್ ಮೊಹಮ್ಮದಿಯನ್ನು 13 ಬಾರಿ ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು … Continued

ಭಾರತ ‘ಗಡುವು’ ನೀಡಿದ ನಂತರ ಭಾರತದಿಂದ ಅನೇಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ : ವರದಿ

ಟೊರೊಂಟೊ : ಕೆನಡಾ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಸೂಚಿಸಿ ಅಕ್ಟೋಬರ್ 10ರ ಗಡುವು ನೀಡಿದ ನಂತರ ಕೆನಡಾವು ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ … Continued

ಏಷ್ಯನ್ ಗೇಮ್ಸ್ 2023: ಜಪಾನ್ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ

ಹ್ಯಾಂಗ್‌ಝೌನ : ಚೀನಾದ ಹ್ಯಾಂಗ್‌ಝೌನ ನಲ್ಲಿ ಶುಕ್ರವಾರ, ಅಕ್ಟೋಬರ್ 6 ರಂದು ನಡೆದ ಏಷ್ಯನ್ ಗೇಮ್ಸ್ 2023 ರ ಹಾಕಿ ಪುರುಷರ ಫೈನಲ್‌ನಲ್ಲಿ ಭಾರತ ತಂಡವು ಜಪಾನ್ ಅನ್ನು 5-1 ಗೋಲುಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಭಾರತದ ಪರ ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ಮತ್ತು ಅಮಿತ್ ರೋಹಿದಾಸ್ ಗೋಲು ಗಳಿಸುವ ಮೂಲಕ … Continued