ಜೈಲಿನಲ್ಲಿರುವ ಇರಾನ್ ಮಾನವ ಹಕ್ಕು ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪ್ರಕಟ

ಸ್ಟಾಕ್‌ಹೋಂ : ಜೈಲಿನಲ್ಲಿರುವ ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಿಸಲಾಗಿದೆ. ತನ್ನ ದೇಶದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಹೋರಾಟ ಮತ್ತು “ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಉತ್ತೇಜಿಸುವುದಕ್ಕಾಗಿ” 2023 ರ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದಾರೆ. ನೊಬೆಲ್ ಪ್ರಶಸ್ತಿ ಸಮಿತಿಯ ಪ್ರಕಾರ, … Continued

ವಿಶ್ವಕಪ್ 2023 : ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ

ನವದೆಹಲಿ: ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಆರಂಭಿಕ ಪಂದ್ಯಕ್ಕೆ ಎರಡು ದಿನಗಳ ಮೊದಲು ಟೀಮ್ ಇಂಡಿಯಾ ಶುಕ್ರವಾರ ಭಾರಿ ಶಾಕ್‌ ಎದುರಾಗಿದೆ. ಭಾರತದ ಇನ್ ಫಾರ್ಮ್ ಆರಂಭಿಕ ಬ್ಯಾಟರ್‌ ಶುಬ್ಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಆದ್ದರಿಂದ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯದಿಂದ ಹೊರಗುಳಿಯುವ … Continued

‘ಅವರು ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಅವರನ್ನು “ಅತ್ಯಂತ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ರಷ್ಯಾದ ಸುದ್ದಿ ಪ್ಲಾಟ್‌ಫಾರ್ಮ್, ಆರ್‌ಟಿ ನ್ಯೂಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ “ಮಾರ್ಗದರ್ಶನ” ಅಡಿಯಲ್ಲಿ ಭಾರತವು ಮಾಡಿದ ಮಹತ್ವದ ಪ್ರಗತಿಯ ಬಗ್ಗೆ ಪುತಿನ್ ಮಾತನಾಡಿದ್ದಾರೆ. ಸೋಚಿಯಲ್ಲಿ … Continued

ಮುಂಬೈಯಲ್ಲಿ ಘೋರ ಅಗ್ನಿ ದುರಂತ: 7 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ | ವೀಡಿಯೊ

ಮುಂಬೈ: ಶುಕ್ರವಾರ ಮುಂಜಾನೆ ಮುಂಬೈನ ಗೋರೆಗಾಂವ ಪಶ್ಚಿಮದ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಗೋರೆಗಾಂವ್ ವೆಸ್ಟ್‌ನ ಆಜಾದ್ ನಗರ ಪ್ರದೇಶದಲ್ಲಿರುವ ಜಯ ಭವಾನಿ ಕಟ್ಟಡದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) … Continued

ಸತತ 4ನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಮುಖ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ತಿಳಿಸಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) 6.5%ರಲ್ಲಿ ನಿರ್ವಹಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಇದು ಅರ್ಥಶಾಸ್ತ್ರಜ್ಞರ ನಿರೀಕ್ಷೆಗಳಿಗೆ ಅನುಗುಣವಾಗಿರುತ್ತದೆ ಎಂದು ಅವರು ತಿಳಿಸಿದರು. … Continued

ರಾಜಸ್ಥಾನದಲ್ಲಿ 17,000 ಶತಾಯುಷಿ ಮತದಾರರು…! ಪುರುಷರಿಗೆ ಹೋಲಿಸಿದರೆ ಮಹಿಳಾ ಶತಾಯುಷಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು..!!

ಜೈಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನವು ಇದೇ ಮೊದಲ ಬಾರಿಗೆ ಮತದಾನ ಮಾಡುವ 22 ಲಕ್ಷ ಹೊಸ ಮಾತದಾರರನ್ನು ಹೊಂದಿದೆ ಮತ್ತು ಅದೇ ಸಮಯದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ 17,241 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಧಾನಸಭಾ ಚುನಾವಣೆ-2023ರ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ. 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ 48,91,545 … Continued

ಮಹಾದೇವ ಆ್ಯಪ್‌ ಪ್ರಕರಣ: ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್ ಗೆ ಇ.ಡಿ.ಸಮನ್ಸ್: ವರದಿ

ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿನೆಮಾ ನಟಿಯರಾದ ಶ್ರದ್ಧಾ ಕಪೂರ್, ಹುಮಾ ಖುರೇಷಿ, ಹಿನಾ ಖಾನ್ ಮತ್ತು ಹಾಸ್ಯ ಶೋ ನಡೆಸುವ ಕಪಿಲ್ ಶರ್ಮಾ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ ಎಂದು ವರದಿಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ನಡೆದ ಮಹಾದೇವ ಬುಕ್ ಆ್ಯಪ್‌ನ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಆ್ಯಪ್‌ನ ಪ್ರಚಾರಕ್ಕಾಗಿ ಹುಮಾ … Continued

ಅಕ್ಟೋಬರ್ 9 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ನವದೆಹಲಿ: ಪ್ರಸ್ತುತ ರಾಜಕೀಯ ಪರಿಸ್ಥಿತಿ, ಜಾತಿ ಗಣತಿ ಮತ್ತು ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯುಸಿ (CWC) ಅಕ್ಟೋಬರ್ 9 ರಂದು ದೆಹಲಿಯಲ್ಲಿ ಸಭೆ ನಡೆಸಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಅಧಿಕಾರವನ್ನು ಬರಲು ಹಾಗೂ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಅಧಿಕಾರವನ್ನು … Continued

ಬೆಂಗಳೂರು : ಪೊಲೀಸ್‌ ಆಯುಕ್ತರ ಕಚೇರಿ ಬಳಿಯ ಬಸ್‌ ಶೆಲ್ಟರ್‌ ಅನ್ನೇ ಕದ್ದೊಯ್ದ ಕಳ್ಳರು…!

ಬೆಂಗಳೂರು: ಬೆಂಗಳೂರಿನಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿದ ಒಂದು ವಾರದ ನಂತರ 10 ಲಕ್ಷ ರೂ.ವೆಚ್ಚದಲ್ಲಿ ಸ್ಟೀಲ್ ರಚನೆಯೊಂದಿಗೆ ನಿರ್ಮಾಣವಾಗಿದ್ದ ಬಸ್‌ ನಿಲ್ದಾಣ ನಾಪತ್ತೆಯಾಗಿದೆ…! ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯಲ್ಲೇ ನೂತನವಾಗಿ ನಿರ್ಮಿಸಲಾಗಿದ್ದ ಬಿಎಂಟಿಸಿ ಬಸ್ ತಂಗುದಾಣ (ಬಸ್ ಶೆಲ್ಟರ್)ವನ್ನು ಇತ್ತೀಚಿಗೆ ಕಳ್ಳರು ನಾಪತ್ತೆ ಮಾಡಿದ್ದಾರೆ. ಈ ಜಾಗದಲ್ಲಿದ್ದ … Continued

ಏಷ್ಯನ್ ಗೇಮ್ಸ್ 2023 : ಸಂಯುಕ್ತ ಬಿಲ್ಲುಗಾರಿಕೆಯಲ್ಲಿ ಚಿನ್ನ ಗೆದ್ದ ಭಾರತದ ಪುರುಷ, ಮಹಿಳಾ ತಂಡ, ಮಿಶ್ರ ಸ್ಕ್ವಾಶ್‌ ನಲ್ಲೂ ಬಂಗಾರದ ಪದಕ

ಹ್ಯಾಂಗ್‌ಝೌ : ​ಚೀನಾದಲ್ಲಿ ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಓಜಸ್ ದಿಯೋತಾಲೆ, ಅಭಿಷೇಕ ವರ್ಮಾ ಮತ್ತು ಪ್ರಥಮೇಶ ಜಾವ್ಕರ್ ಅವರ ಭಾರತೀಯ ಪುರುಷರ ಸಂಯುಕ್ತ ಬಿಲ್ಲುಗಾರಿಕೆ ತಂಡವು ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ. ಇದು ಭಾರತದ 23ನೇ ಚಿನ್ನದ ಪದಕವಾಗಿದೆ. ಭಾರತದ ಮೂವರು ಕೊರಿಯಾದ ಜೇಹೂನ್ ಜೂ, ಜೇವೊನ್ ಯಾಂಗ್ ಮತ್ತು ಜೊಂಗೊ … Continued