ಟಿ20 ವಿಶ್ವಕಪ್ 2024 : ರೋಚಕ ಪಂದ್ಯದಲ್ಲಿ ಅಮೆರಿಕಕ್ಕೆ 5 ರನ್‌ ದಂಡ, ಸುಲಭವಾಯ್ತು ಭಾರತ ಗೆಲುವು..! ಅದು ಹೇಗೆ.. ಏನಿದು ನಿಯಮ..?

ಭಾರತ ತಂಡವು ಸತತ ಮೂರು ಗೆಲುವಿನೊಂದಿಗೆ ಟಿ20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಸೂಪರ್​-8ರ ಹಂತಕ್ಕೆ ಪ್ರವೇಶಿಸಿದೆ. ರೋಹಿತ್​ ಶರ್ಮಾ ನಾಯಕತ್ವದ ಭಾರತದ ತಂಡವು ಅಮೆರಿಕ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ದಾಖಲಿಸಿದ ನಂತರ ಸೂಪರ್​-8 ಹಂತಕ್ಕೆ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಮೆರಿಕ ಮಾಡಿದ ತಪ್ಪಿನಿಂದಾಗಿ ಪೆನಾಲ್ಟಿ ರೂಪದಲ್ಲಿ ಭಾರತದ ತಂಡಕ್ಕೆ … Continued

2024ರಲ್ಲಿ ವಿಶ್ವದ ಟಾಪ್‌ 10 ಅತ್ಯಮೂಲ್ಯ ʼಬ್ರ್ಯಾಂಡ್‌ʼಗಳ ಪಟ್ಟಿ ಬಿಡುಗಡೆ : ಅಗ್ರಸ್ಥಾನದಲ್ಲಿ ಆಪಲ್ ಕಂಪನಿ…

ಹೊಸ ವರದಿಯ ಪ್ರಕಾರ ಆಪಲ್ ಕಂಪನಿಯು ವಿಶ್ವದ ಅತ್ಯಮೂಲ್ಯ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರ್ಯಾಂಡ್ ಗಳಿಗೆ ನೀಡಲಾದ ಶ್ರೇಯಾಂಕಗಳು ಒಟ್ಟು 532 ವಿಭಾಗಗಳಲ್ಲಿ 21,000 ಬ್ರ್ಯಾಂಡ್‌ಗಳ ಬಗ್ಗೆ 43 ಲಕ್ಷಗಳಿಗಿಂತಲೂ ಹೆಚ್ಚು ಜನರು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿವೆ. ಈ ಪಟ್ಟಿಯು ನಾವೀನ್ಯತೆ, ಮಾರುಕಟ್ಟೆ ಉಪಸ್ಥಿತಿ ಮತ್ತು ಗ್ರಾಹಕರ ನಂಬಿಕೆಯಲ್ಲಿ ಮುನ್ನಡೆಸುವ ಕಂಪನಿಗಳನ್ನು ಗುರುತಿಸುತ್ತದೆ. ಇದು ಅನುಕ್ರಮವಾಗಿ … Continued

ಕುವೈತ್‌ ಕಟ್ಟಡದಲ್ಲಿ ಅಗ್ನಿ ಅವಘಡ ; ಭಾರತೀಯರು ಸೇರಿ 41 ಮಂದಿ ಸಾವು

ಕುವೈತ್ : ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಅನಾಹುತದಲ್ಲಿ ಕನಿಷ್ಠ 41 ಜನರು ಸಾವಿಗೀಡಾಗಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮವು ಬುಧವಾರ ವರದಿ ಮಾಡಿದೆ. ವರದಿಗಳ ಪ್ರಕಾರ, ದುರಂತ ಘಟನೆಯಲ್ಲಿ ಹಲವಾರು ಭಾರತೀಯರು ಸಹ ಮೃತಪಟ್ಟಿದ್ದಾರೆ. ಸ್ಥಳೀಯ ಮಾಧ್ಯಮಗಳು ಈ ಕಟ್ಟಡವು ಹೆಚ್ಚಿನ ಮಲಯಾಳಂ ಜನಸಂಖ್ಯೆಯನ್ನು ಹೊಂದಿದೆ ಎಂದು ವರದಿ ಮಾಡಿದೆ. … Continued

ವೀಡಿಯೊ: ಒಳನುಗ್ಗಿ ಹಮಾಸ್‌ ವಶದಲ್ಲಿದ್ದ ಮೂವರು ಒತ್ತೆಯಾಳುಗಳನ್ನು ರಕ್ಷಿಸಿದ ಕ್ಷಣದ ವೀಡಿಯೊ ಬಿಡುಗಡೆ ಮಾಡಿದ ಇಸ್ರೇಲ್

ಇಸ್ರೇಲಿ ಮಿಲಿಟರಿ ವಾರಾಂತ್ಯದಲ್ಲಿ “ಸಂಕೀರ್ಣ ಹಗಲಿನ ಕಾರ್ಯಾಚರಣೆ”ಯಲ್ಲಿ ಗಾಜಾದಲ್ಲಿ ಹಮಾಸ್ ಸೆರೆಯಿಂದ ನಾಲ್ಕು ಒತ್ತೆಯಾಳುಗಳನ್ನು ಪಾರು ಮಾಡಿದ್ದಾರೆ. ನಾಲ್ವರು ಒತ್ತೆಯಾಳುಗಳಲ್ಲಿ ಮೂವರನ್ನು – ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ರಕ್ಷಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಹಮಾಸ್‌ನಿಂದ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ಗೆ ಇಸ್ರೇಲಿ … Continued

ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು ; ಸಂಪೂರ್ಣವಾಗಿ ಬಟ್ಟೆ ಧರಿಸಿದ್ದ ಸ್ಥಿತಿಯಲ್ಲೇ ಮಹಿಳೆ ಶವ ಹಾವಿನ ಹೊಟ್ಟೆಯೊಳಗೆ ಪತ್ತೆ

ಮಕಾಸ್ಸರ್ (ಇಂಡೋನೇಷ್ಯಾ): ಮಧ್ಯ ಇಂಡೋನೇಷ್ಯಾದಲ್ಲಿ ಹಾವೊಂದು ಮಹಿಳೆಯೊಬ್ಬಳನ್ನು ಜೀವಂತವಾಗಿ ಸಂಪೂರ್ಣ ನುಂಗಿದ್ದು, ಹುಡುಕಾಟದ ನಂತರ ನಂತರ ಮಹಿಳೆ ಹಾವಿನ ಹೊಟ್ಟೆಯೊಳಗೆ ಸತ್ತಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 45 ವರ್ಷದ ಫರೀದಾ ಎಂಬ ಮಹಿಳೆಯ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) … Continued

ಪ್ರಾಚೀನ ಈಜಿಪ್ಟಿನವರು ಕ್ಯಾನ್ಸರಿಗೆ ಚಿಕಿತ್ಸೆ ನೀಡುತ್ತಿದ್ದರು…! 4000 ವರ್ಷಗಳ ಹಳೆಯ ತಲೆಬುರುಡೆಗಳ ಮೇಲಿದ್ದ ಕತ್ತರಿಸಿದ ಗುರುತುಗಳಿಂದ ಇದು ಬಹಿರಂಗ..!!

ಪ್ರಾಚೀನ ಈಜಿಪ್ಟಿನ ಶಸ್ತ್ರಚಿಕಿತ್ಸಕರು ರೋಗಿಗಳ ತಲೆಬುರುಡೆಯ ಮೇಲಿನ ಗೆಡ್ಡೆಗಳನ್ನು ಕತ್ತರಿಸುವ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿರಬಹುದು ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಎರಡು ಈಜಿಪ್ಟಿನ ಶವಗಳ ಕ್ಯಾನ್ಸರ್ ಪೀಡಿತ ತಲೆಬುರುಡೆಯನ್ನು ಗಮನಿಸಿದಾಗ, ಸಾವಿರಾರು ವರ್ಷಗಳ ಹಿಂದೆಯೇ ಅಂಗಾಂಶದಲ್ಲಿನ ಕ್ಯಾನ್ಸರಿನ ಕೋಶದ ಬೆಳವಣಿಗೆಯನ್ನು ತೆಗೆದುಹಾಕಲು ವೈದ್ಯರು ಮಾಡಿದ ಕತ್ತರಿಸಿದ ಗುರುತುಗಳನ್ನು ಅಧ್ಯಯನದ ಲೇಖಕರು ಗಮನಿಸಿದ್ದಾರೆ. “ವೈದ್ಯಕೀಯ … Continued

ಹೆಲಿಕಾಪ್ಟರ್‌ ಅಪಘಾತದ ಮೊದಲಿನ ತಮ್ಮ ಅಧ್ಯಕ್ಷರ ಕೊನೆಯ ವೀಡಿಯೊ ದೃಶ್ಯಗಳನ್ನು ಹಂಚಿಕೊಂಡ ಇರಾನಿನ ಸರ್ಕಾರಿ ಮಾಧ್ಯಮ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಎಂಟು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದು, ದುರಂತ ಸಂಭವಿಸುವ ಗಂಟೆಗಳ ಮೊದಲು, ಇರಾನ್ ಸರ್ಕಾರಿ ಮಾಧ್ಯಮವು ಭಾನುವಾರ ಹೆಲಿಕಾಪ್ಟರ್‌ನಲ್ಲಿದ್ದ ತಮ್ಮ ಅಧ್ಯಕ್ಷರ ವೀಡಿಯೊಗಳನ್ನು ಹಂಚಿಕೊಂಡಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ ದೂರದ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗುವ ಸ್ವಲ್ಪ ಮೊದಲು ಹೆಲಿಕಾಪ್ಟರ್‌ನಲ್ಲಿ … Continued

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

ದುರಂತ ಘಟನೆಯೊಂದರಲ್ಲಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿದ್ದ ಹೆಲಿಕಾಪ್ಟರ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಅಧಿಕಾರಿಯನ್ನು ಉಲ್ಲೇಖಿಸಿ ಸೋಮವಾರ ರಾಯಿಟರ್ಸ್ ವರದಿ ಮಾಡಿದೆ. ಇರಾನ್ ಸರ್ಕಾರಿ ಸುದ್ದಿ ವಾಹಿನಿ IRINN ಮತ್ತು ಸುದ್ದಿ ಸಂಸ್ಥೆ ಮೆಹರ್ ನ್ಯೂಸ್ ಪ್ರಕಾರ, ಅಪಘಾತದಲ್ಲಿ ಯಾರೂ ಬದುಕುಳಿಯಲಿಲ್ಲ. ಅಜೆರ್ಬೈಜಾನಿ … Continued

ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

ಸಿಂಗಾಪುರ: ಸಿಂಗಾಪುರವು ಮತ್ತೊಂದು ಕೋವಿಡ್‌-19 (COVID-19) ಅಲೆಯ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳು ಮೇ 5 ರಿಂದ ಮೇ 11ರವರೆಗೆ 25,900 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಜನರಿಗೆ ಮತ್ತೆ ಮಾಸ್ಕ್‌ಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ, ಅದು ಸ್ಥಿರವಾಗಿ … Continued

ವೀಡಿಯೊ..| ಸ್ಲೋವಾಕಿಯಾ ಪ್ರಧಾನಿ ಮೇಲೆ ನಡೆದ ಗುಂಡಿನ ದಾಳಿಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ; ಶಂಕಿತ 71 ವರ್ಷ ವಯಸ್ಸಿನ ಬರಹಗಾರ

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ನಂಬಲಾಗಿದೆ. ಪ್ರಧಾನಿ ಫಿಕೊ, 59, ತಮ್ಮ ಮೇಲೆ ಹತ್ಯೆಯ ಯತ್ನ ನಡೆದಾಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅವರು ಬೆಂಬಲಿಗರನ್ನು ಸ್ವಾಗತಿಸುತ್ತಿದ್ದರು, ಚುನಾವಣೆಗೆ ವಾರಗಳ ಮೊದಲು ಅವರ ಮೇಲೆ ಹತ್ಯೆ ಯತ್ನದ ದಾಳಿ ನಡೆದಿದೆ. … Continued