ವೀಡಿಯೊಗಳು | ರಷ್ಯಾದಲ್ಲಿ ಪ್ರಬಲ ಭೂಕಂಪದ ನಂತರ ಜಪಾನ್, ರಷ್ಯಾಕ್ಕೆ ಅಪ್ಪಳಿಸಿದ ಸುನಾಮಿ : ನಿಜವಾಯ್ತೆ ಜಪಾನ್‌ ಬಾಬಾ ವಂಗಾ ಭವಿಷ್ಯವಾಣಿ..?

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ವರ್ಷಗಳ ಹಿಂದೆ ಜಪಾನಿನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ತತ್ಸುಕಿ ಅವರ ಮಂಗಾದ ಒಂದು ಭಯಾನಕ ಭವಿಷ್ಯವಾಣಿ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯೂ ಬಾಬಾ ವಂಗಾ ಎಂದೂ ಕರೆಯಲ್ಪಡುವ ಮಂಗಾ ಕಲಾವಿದೆಯಾದ ರ್ಯೋ ತತ್ಸುಕಿ ಜುಲೈ 2025ರ ವಿಪತ್ತಿನ … Continued

ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಪೆಸಿಫಿಕ್‌ ಪ್ರದೇಶದಲ್ಲಿ 2011ರ ನಂತರದ ಅತ್ಯಂತ ಪ್ರಬಲ ಭೂಕಂಪ ; ಆ ಕ್ಷಣದ ವೀಡಿಯೊಗಳು

ಮಾಸ್ಕೋ: ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ಬೆಳಗಿನ ಜಾವ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 1952 ರ ನಂತರ ಈ ಪ್ರದೇಶದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ 133 ಕಿ.ಮೀ ಆಗ್ನೇಯಕ್ಕೆ, ಮೇಲ್ಮೈಯಿಂದ 74 ಕಿ.ಮೀ ಆಳದಲ್ಲಿ ಕೇಂದ್ರಬಿಂದುವಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ … Continued

ವೀಡಿಯೊ…| ಟೇಕ್‌ ಆಫ್‌ ವೇಳೆ ಬೆಂಕಿ ಹೊತ್ತಿಕೊಂಡ 173 ಪ್ರಯಾಣಿಕರಿದ್ದ ವಿಮಾನ

ವಾಷಿಂಗ್ಟನ್‌: ಅಮೆರಿಕದಲ್ಲಿ ವಿಮಾನ ಟೇಕ್‌ ಆಫ್‌ ಆಗುವಾಗ ವಿಮಾನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅನೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಿಯಾಮಿಗೆ ಹಾರಲು ಸಿದ್ಧವಾಗಿದ್ದ ಅಮೆರಿಕನ್‌ ಏರ್ಲೈನ್ಸ್ ವಿಮಾನವು ಟೇಕ್ ಆಫ್ ಆಗುವ ಮೊದಲೇ ವಿಮಾನದ ಟೈರಿಗೆ ಬೆಂಕಿ ಹೊತ್ತಿಕೊಂಡಿದೆ, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು ಅಧಿಕೃತ … Continued

ಡೈವರ್‌ಗಳ ಗುಂಪಿನ ಮೇಲೆ ಅಪಾಯಕಾರಿ ಶಾರ್ಕ್ ದಾಳಿ : ಒಬ್ಬನಿಗೆ ಕಚ್ಚಿ ತೀವ್ರ ಗಾಯ ; ದೃಶ್ಯ ವೀಡಿಯೊದಲ್ಲಿ ಸೆರೆ

ಹಾಲಿವುಡ್‌ನ ಫ್ಲೋರಿಡಾ ಬೀಚ್‌ನಲ್ಲಿ ಶಾರ್ಕ್ ದಾಳಿಯಲ್ಲಿ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಾರ್ಕ್ ಕಡಿತದಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 40 ವರ್ಷ ವಯಸ್ಸಿನವರೆಂದು ಹೇಳಲಾಗುವ ಈ ವ್ಯಕ್ತಿಯ ತೋಳಿನ ಮೇಲ್ಭಾಗಕ್ಕೆ ಗಾಯವಾಗಿದೆ. ಮಂಗಳವಾರ ಮಧ್ಯಾಹ್ನ ಹಾಲಿವುಡ್ ಅಗ್ನಿಶಾಮಕ ದಳಕ್ಕೆ ಕರೆ ಬಂತು. ಸಹಾಯ ಮಾಡಲು ಧಾವಿಸಿದಾಗ ಗಾಯಗೊಂಡ ವ್ಯಕ್ತಿ ನೀರಿನಿಂದ ಹೊರಗಿದ್ದರು. … Continued

₹5.4 ಕೋಟಿ ವಿಮೆ ಪಡೆಯಲು ತನ್ನ ಕಾಲುಗಳನ್ನು ತಾನೇ ಕತ್ತರಿಸಿಕೊಂಡ ವೈದ್ಯ…!

ಬ್ರಿಟನ್‌ನ ನಾಳೀಯ ಶಸ್ತ್ರಚಿಕಿತ್ಸಕ(vascular surgeon)ರೊಬ್ಬರು 500,000 ಪೌಂಡ್‌ಗಳ ( ₹5.4 ಕೋಟಿ) ವಿಮಾ ಪರಿಹಾರ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಾರ್ನ್‌ವಾಲ್‌ನ 49 ವರ್ಷದ ನೀಲ್ ಹಾಪರ್, ಸೆಪ್ಸಿಸ್‌ನಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ತಾನೇ ಸ್ವಯಂ ಮಾಡಿಕೊಂಡಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಸಾಕ್ಷ್ಯದ ಪ್ರಕಾರ, ಅವರು ಒಂದು ವಿಮಾದಾರ – … Continued

ಮೈ ಜುಂ ಎನ್ನುವ ವೀಡಿಯೊ..|ಹೆದ್ದಾರಿಗೆ ಅಪ್ಪಳಿಸಿದ ಪತನ; ಭೀಕರ ಸ್ಫೋಟ, ಇಬ್ಬರು ಸಾವು

ಉತ್ತರ ಇಟಲಿಯ ಬ್ರೆಸಿಯಾದಲ್ಲಿ ಸಣ್ಣ ವಿಮಾನವೊಂದು ಅಪ್ಪಳಿಸಿ ಹೆದ್ದಾರಿಗೆ ಇಬ್ಬರು ಸಾವಿಗೀಡಾಗಿದ್ದಾರೆ. ಫ್ರೆಸಿಯಾ ಆರ್‌ಜಿ ಅಲ್ಟ್ರಾಲೈಟ್ ವಿಮಾನವು ಮೂಗು ತೂರಿಸಿ ರಸ್ತೆಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ, ಇದರಿಂದಾಗಿ ಭಾರಿ ಬೆಂಕಿ ಮತ್ತು ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿತು. ಮೃತರನ್ನು ಮಿಲನ್‌ನ 75 ವರ್ಷದ ವಕೀಲ ಮತ್ತು ಪೈಲಟ್ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ … Continued

ರಷ್ಯಾದ ವಿಮಾನ ಪತನ ; ವಿಮಾನದಲ್ಲಿದ್ದ ಎಲ್ಲಾ 49 ಮಂದಿ ಸಾವು

ಮಾಸ್ಕೋ: ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 49 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಆನ್ -24 ವಿಮಾನವು ಗುರುವಾರ ಸೈಬಿರಿಯಾದ ಪರ್ವತ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಸೈಬೀರಿಯಾ ಮೂಲದ ಅಂಗಾರ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಈ ದುರದೃಷ್ಟಕರ ವಿಮಾನವು ಬ್ಲಾಗೊವೆಶ್ಚೆನ್ಸ್ಕ್ ನಿಂದ ಹೊರಟು ರಷ್ಯಾ-ಚೀನಾ … Continued

ಪತ್ನಿಯ ಸಹಾಯಕ್ಕೆ ಹೋಗಿದ್ದ ಗಂಡನನ್ನು ಒಳಕ್ಕೆ ಎಳೆದುಕೊಂಡ ಎಂಆರ್‌ಐ ಸ್ಕ್ಯಾನ್‌ ಯಂತ್ರ ; ವ್ಯಕ್ತಿ ಸಾವು, ಕಾರಣ ಧರಿಸಿದ್ದ ಚೈನ್‌….!

ವೈದ್ಯಕೀಯ ಕೇಂದ್ರವೊಂದರಲ್ಲಿ ಭಾರವಾದ ಲೋಹದ ಹಾರವನ್ನು ಧರಿಸಿದ್ದ 61 ವರ್ಷದ ವ್ಯಕ್ತಿಯೊಬ್ಬರನ್ನು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಯಂತ್ರವು ಒಳಗೆ ಎಳೆದುಕೊಂಡ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ವೆಸ್ಟ್‌ಬರಿಯಲ್ಲಿರುವ ನಸ್ಸೌ ಓಪನ್ ಎಂಆರ್‌ಐ (MRI) ಯಂತ್ರ ಚಾಲನೆಯಲ್ಲಿದ್ದಾಗ ಆ ವ್ಯಕ್ತಿ ಅನುಮತಿಯಿಲ್ಲದೆ ಕೋಣೆಗೆ ಪ್ರವೇಶಿಸಿದ್ದಾನೆ ಎಂದು ನಸ್ಸೌ ಕೌಂಟಿ ಪೊಲೀಸ್ ಇಲಾಖೆ … Continued

20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್’ ಅಲ್ ವಲೀದ್ ಬಿನ್ ಖಲೀದ್ ನಿಧನ

ನವದೆಹಲಿ:  “ಸ್ಲೀಪಿಂಗ್ ಪ್ರಿನ್ಸ್” ಎಂದು ವ್ಯಾಪಕವಾಗಿ ಕರೆಯಲ್ಪಡುವ ಸೌದಿ ರಾಜಮನೆತನದ ಪ್ರಿನ್ಸ್ ಅಲ್ ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಕೋಮಾಕ್ಕೆ ಜಾರಿದ ಸುಮಾರು 20 ವರ್ಷಗಳ ನಂತರ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ 1990 ರಲ್ಲಿ ಜನಿಸಿದ ಪ್ರಿನ್ಸ್ ಅಲ್ ವಲೀದ್, ಪ್ರಮುಖ ಸೌದಿ ರಾಜಮನೆತನದವರೂ ಮತ್ತು ಬಿಲಿಯನೇರ್ … Continued

ವಿಶ್ವದ ಟಾಪ್ 10 ಶ್ರೀಮಂತರು | ಜೆಫ್ ಬೆಜೋಸ್, ಮಾರ್ಕ್ ಜುಕರ್‌ ಬರ್ಗ್‌ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದ ಲ್ಯಾರಿ ಎಲಿಸನ್ ; ನಂ.1 ಯಾರೆಂದರೆ…

ನವದೆಹಲಿ: 2025ರ ಜುಲೈ ತಿಂಗಳ ಪ್ರಕಾರ ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿ 3,028 ಕ್ಕೆ ಏರಿದೆ. ಮತ್ತು 2025 ರಲ್ಲಿ ಜಾಗತಿಕ ವ್ಯಾಪಾರ ಪ್ರಮುಖರು ಮತ್ತು ಉದ್ಯಮಿಗಳು ತಮ್ಮ ಸಂಪತ್ತಿನಲ್ಲಿ ಏರಿಕೆ ಕಂಡಿದ್ದಾರೆ. $393.1 ಬಿಲಿಯನ್ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿರುವ ಎಲೋನ್ ಮಸ್ಕ್, 2025ರ ಜುಲೈ ತಿಂಗಳಲ್ಲೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ; … Continued