ಮಂಗಳ ಗ್ರಹದ ಮೇಲ್ಮೈನ 20 ಕಿಮೀ ಕೆಳಗೆ ನೀರಿದೆಯೇ ? ಅಧ್ಯಯನವು ಏನು ಹೇಳುತ್ತದೆ..? ಅದರ ಅರ್ಥವೇನು..?

ಸಿಂಗಾಪುರ: ನಾಸಾದ ಮಾರ್ಸ್ ಇನ್‌ಸೈಟ್ ಲ್ಯಾಂಡರ್‌ ದತ್ತಾಂಶವನ್ನು ಬಳಸಿಕೊಂಡು ಬಿಡುಗಡೆಯಾದ ಅಧ್ಯಯನವು ನಾಲ್ಕನೇ ಗ್ರಹವಾದ ಮಂಗಳನ ಮೇಲ್ಮೈಗಿಂತ ಕೆಳಗಿರುವ ದ್ರವವು ನೀರಿನ ಪುರಾವೆಗಳನ್ನು ತೋರಿಸುತ್ತದೆ ಎಂದು ಹೇಳಿದೆ. 2018 ರಿಂದ ಮಂಗಳ ಗ್ರಹದಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲ್ಯಾಂಡರ್, ನಾಲ್ಕು ವರ್ಷಗಳಿಂದ ಭೂಕಂಪನ ಡೇಟಾವನ್ನು ಅಳೆಯುತ್ತಿದೆ, ಭೂಕಂಪಗಳು ಹೇಗೆ ನೆಲವನ್ನು ಅಲುಗಾಡಿಸಿದವು ಮತ್ತು ಮೇಲ್ಮೈ … Continued

ವೀಡಿಯೊ | ಒಲಿಂಪಿಕ್ಸ್ ; ಬಂಗಾರ ಗೆದ್ದ ಓಟಗಾರ್ತಿಗಿಂತ 1.5 ತಾಸು ತಡವಾಗಿ ಗೆರೆ ಮುಟ್ಟಿದ ಈ ಓಟಗಾರ್ತಿಗೆ ಭಾರಿ ಹರ್ಷೋದ್ಗಾರದ ಸ್ವಾಗತ : ಯಾಕಂದ್ರೆ…

ಪ್ಯಾರಿಸ್‌ : ಭೂತಾನ್‌ನ ಮ್ಯಾರಥಾನ್ ಓಟಗಾರ್ತಿ ಕಿನ್ಜಾಂಗ್ ಲಾಮೊ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ಮ್ಯಾರಥಾನ್ ಸ್ಪರ್ಧೆಯಲ್ಲಿ ತಲುಪುವ ಗೆರೆಯನ್ನು ದಾಟಿದಾಗ ಪ್ಯಾರಿಸ್ ಪ್ರೇಕ್ಷಕರು ಭಾರೀ ಹರ್ಷೋದ್ಗಾರ ನೀಡಿ ಅವರನ್ನು ಸ್ವಾತಿಸಿದರು. ಆದರೆ ಅವರು ಬಂಗಾರದ ಪದಕವನ್ನು ಗೆಲ್ಲಲಿಲ್ಲ. ಬೆಳ್ಳಿ ಹಾಗೂ ಕಂಚಿನ ಪದಕವನ್ನೂ ಗೆಲ್ಲಲಿಲ್ಲ. ಆದರೂ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ … Continued

ಚೀನಾದಲ್ಲಿ ಇತಿಹಾಸ ನಿರ್ಮಿಸಿದ ಭರತನಾಟ್ಯ : ಚೀನಾದ 13 ವರ್ಷದ ಹುಡುಗಿಯಿಂದ ಭರತನಾಟ್ಯ ʼಅರಂಗೇಟ್ರಂʼ

ಬೀಜಿಂಗ್‌ : 13 ವರ್ಷದ ಚೀನಾದ ಹುಡುಗಿ ಲೀ ಮುಝಿ ಚೀನಾದಲ್ಲಿ ಮೊಟ್ಟಮೊದಲ ಭರತನಾಟ್ಯ “ಅರಂಗೇಟ್ರಂ” (ರಂಗ ಪ್ರವೇಶ) ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ನಡೆದ ಈ ಕಾರ್ಯಕ್ರಮವು ನೆರೆಯ ದೇಶವಾದ ಚೀನಾದಲ್ಲಿ ಈ ಪ್ರಾಚೀನ ಭಾರತೀಯ ನೃತ್ಯ ಪ್ರಕಾರದ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಲೀ ಅವರ ಏಕವ್ಯಕ್ತಿ ನೃತ್ಯಕ್ಕೆ ಪ್ರಖ್ಯಾತ ಭರತನಾಟ್ಯ … Continued

ಪ್ಯಾರಿಸ್‌ ನಿಂದ ʼತಿಗಣೆʼಗಳು ದೇಶದೊಳಕ್ಕೆ ನುಸುಳದಂತೆ ತಡೆಯಲು ವಿಮಾನ ನಿಲ್ದಾಣದಲ್ಲಿ ʼನಾಯಿʼಯನ್ನು ನಿಯೋಜನೆ ಮಾಡಿದ ದಕ್ಷಿಣ ಕೊರಿಯಾ…!

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳು ಹಿಂದಿರುಗಿದಾಗ ಅವರೊಟ್ಟಿಗೆ ದೇಶವನ್ನು ಪ್ರವೇಶಿಸಬಹುದಾದ ತಿಗಣೆ (bedbugs)ಗಳನ್ನು ಪತ್ತೆ ಹಚ್ಚಲು ದಕ್ಷಿಣ ಕೊರಿಯಾ ತನ್ನ ಪ್ರಮುಖ ವಿಮಾನ ನಿಲ್ದಾಣವಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಡ್‌ಬಗ್ ಸ್ನಿಫರ್ ನಾಯಿಯನ್ನು ನಿಯೋಜಿಸಿದೆ…! ಸೆಕೊ ಎಂಬ ಹೆಸರಿನ ಎರಡು ವರ್ಷದ ಬೀಗಲ್ ತಳಿಯ ಈ ನಾಯಿ ತಿಗಣೆ ಪತ್ತೆ ಹಚ್ಚುವ … Continued

ಬಾಂಗ್ಲಾದೇಶ ಬಿಕ್ಕಟ್ಟು | ಸುಪ್ರೀಂ ಕೋರ್ಟಿಗೆ ಮುತ್ತಿಗೆ ; ನ್ಯಾಯಾಂಗಕ್ಕೂ ಬೆದರಿಕೆ ; ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ

ಢಾಕಾ: ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಅವರು ಶನಿವಾರ (ಆಗಸ್ಟ್‌ 10) ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಪ್ರತಿಭಟನಾಕಾರರು ಗಡುವು ನೀಡಿದ ನಂತರ “ತಾತ್ವಿಕವಾಗಿ” ರಾಜೀನಾಮೆ ನೀಡಲು ಹಸನ್ ಅವರು ಒಪ್ಪಿಕೊಂಡರು. ಅವರು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. … Continued

ವೀಡಿಯೊ..| ಗಿರಗಿಟ್ಟಿ ಹೊಡೆಯುತ್ತ ನೆಲಕ್ಕೆ ಅಪ್ಪಳಿಸಿದ ವಿಮಾನ ; ಎಲ್ಲ 62 ಮಂದಿ ಸಾವು

62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಪಘಾತದ ಸ್ಥಳದ ಬಳಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಎಟಿಆರ್ ನಿರ್ಮಿತ ವಿಮಾನವು ನಿಯಂತ್ರಣ ತಪ್ಪಿ ಗಿರಕಿ ಹೊಡೆಯುತ್ತಿರುವುದನ್ನು ತೋರಿಸಿದೆ, ಅದು ಮನೆಗಳ ಸಮೀಪವಿರುವ ಮರಗಳ ಸಮೂಹದ ಹಿಂದೆ … Continued

ಬಾಂಗ್ಲಾದೇಶ ಬಿಕ್ಕಟ್ಟು | ಹಂಗಾಮಿ ಸರ್ಕಾರ ಚುನಾವಣೆ ನಡೆಸಲು ನಿರ್ಧರಿಸಿದಾಗ ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಾರೆ ; ಹಸೀನಾ ಪುತ್ರ

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದಾಗ ಅವರು ತಮ್ಮ ದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಅವರ ಮಗ ಹೇಳಿದ್ದಾರೆ. ವಾರಗಳ ಮಾರಣಾಂತಿಕ ಪ್ರತಿಭಟನೆಗಳ ನಂತರ ಹಸೀನಾ ಸೋಮವಾರ ಭಾರತಕ್ಕೆ ಪಲಾಯನ ಮಾಡಿದ್ದರು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ ಪ್ರಮಾಣ ವಚನ … Continued

ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 9ಕ್ಕೆ ಇಳಿಸುವ ಹೊಸ ಕಾನೂನು ಇರಾಕ್‌ ಸಂಸತ್ತಿನಲ್ಲಿ ಮಂಡನೆ…!

ಹೆಣ್ಣುಮಕ್ಕಳ ಕಾನೂನುಬದ್ಧ ವಿವಾಹ ವಯಸ್ಸನ್ನು 9 ವರ್ಷಕ್ಕೆ ಮತ್ತು ಗಂಡುಮಕ್ಕಳಿಗೆ 15 ವರ್ಷಕ್ಕೆ ಇಳಿಸುವ ವಿವಾದಾತ್ಮಕ ಮಸೂದೆಯನ್ನು ಇರಾಕ್ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಕರಡು ಮಸೂದೆಯು ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನ್ಯಾಯಾಂಗವನ್ನು ಆಯ್ಕೆ ಮಾಡಲು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದಕ್ಕೆ ತೀವ್ರ ಕಳವಳ ವ್ಯಕ್ತವಾಗಿದೆ. ದೇಶದಲ್ಲಿನ ಹಾಲಿ ಕಾಯ್ದೆ ಕಾನೂನುಬದ್ಧ ವಿವಾಹದ … Continued

ಡೊನಾಲ್ಡ್ ಟ್ರಂಪ್-ಅಮೆರಿಕ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಪಾಕಿಸ್ತಾನಿ ವ್ಯಕ್ತಿ ಬಂಧನ ; ಈ ಪಾಕ್‌ ವ್ಯಕ್ತಿ ಯಾರು?

ಇರಾನ್‌ನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ ಎಂಬಾತನನ್ನು ಕಳೆದ ತಿಂಗಳು ಅಮೆರಿಕದಲ್ಲಿ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಬಂಧಿಸಲಾಗಿದೆ. ಆಸಿಫ್ ಮರ್ಚೆಂಟ್ ಎಂಬಾತನ ಸಂಭಾವ್ಯ ಟಾರ್ಗೆಟ್‌ ಎಂದು ಪರಿಗಣಿಸಿದ ವ್ಯಕ್ತಿಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಒಬ್ಬರು ಎಂದು ಈ ವಿಷಯವನ್ನು ತಿಳಿದಿರುವ ವ್ಯಕ್ತಿ ಬ್ಲೂಮ್‌ಬರ್ಗ್‌ಗೆ … Continued

ಬಾಂಗ್ಲಾದೇಶ ಬಿಕ್ಕಟ್ಟು : ನೊಬೆಲ್ ಪುರಸ್ಕೃತ 84 ವರ್ಷದ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ

ನವದೆಹಲಿ : ಭಾರೀ ಪ್ರತಿಭಟನೆಗಳ ನಡುವೆ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಕಿರು ಹಣಕಾಸು ಪ್ರವರ್ತಕ ಮುಹಮ್ಮದ್ ಯೂನಸ್ ಅವರನ್ನು ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಸೀನಾ ಅವರ ಪದಚ್ಯುತಿಯಲ್ಲಿ ಪ್ರತಿಭಟನೆ ಅಂತ್ಯಗೊಂಡ ನಂತರ ವಿದ್ಯಾರ್ಥಿ ಮುಖಂಡರು ಮಂಗಳವಾರ ಸಂಜೆ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ … Continued