ತಮಿಳುನಾಡು ಚುನಾವಣೆ: ಆಸ್ತಿ ವಿವರ ಪ್ರಕಟಿಸಿದ ನಟಿ ಖುಷ್ಬೂ

ಚೆನ್ನೈ: ತಮಿಳುನಾಡಿನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ತಮ್ಮ ಆಸ್ತಿ ವಿವರ ನೀಡಿದ್ದು, ತಮ್ಮ ಬಳಿ ಒಟ್ಟು 22.55 ಕೋಟಿ ರೂ ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ. ಖುಷ್ಬೂ ತಮ್ಮ ಬಳಿ 17.99 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದ್ದು, … Continued

ಮಹಾರಾಷ್ಟ್ರದಲ್ಲಿ ಕೊವಿಡ್‌ ಕ್ರಮ: ಆರೋಗ್ಯ,ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಡೆ ಶೇ.೫೦ರಷ್ಟು ಮಾತ್ರ ಹಾಜರಾತಿ

ಮುಂಬೈ: ಹೆಚ್ಚುತ್ತಿರುವ ಕೊವಿಡ್‌ -19 ಪ್ರಕರಣಗಳ ಮಧ್ಯೆ ಮಹಾರಾಷ್ಟ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಹೊಸ ನಿಯಮಗಳ ಪ್ರಕಾರ, ಆರೋಗ್ಯ ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದ್ದನ್ನು ಹೊರತು ಪಡಿಸಿ ಖಾಸಗಿ ಕಚೇರಿಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಉತ್ಪಾದನಾ ವಲಯವು ಮಾರ್ಚ್ 31 ರವರೆಗೆ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಆದೇಶ … Continued

ಡಿಎಂಕೆ ಅಧಿಕಾರಿಕ್ಕೆ ಬಂದ್ರೆ ನೀಟ್​ ಪರೀಕ್ಷೆಯಲ್ಲಿ ಕಾಪಿ ಹೊಡೆಯಬಹುದು: ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ಮುಖಂಡ

ಚೆನ್ನೈ: ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಸಂಪೂರ್ಣವಾಗಿ ರದ್ದು ಮಾಡ್ತೇವೆ. ಅದು ಸಾಧ್ಯವಾಗಿಲ್ಲ ಅಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡುತ್ತೇವೆ ಎಂದು ಡಿಎಂಕೆ ಪಕ್ಷದ ಮಾಜಿ ಸಚಿವ ಕೆ.ಎನ್.​ ನೆಹರೂ ವಿವಾದಾತ್ಮಕ ಹೇಳಿದ್ದಾರೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಿರುಚ್ಚಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಹಾರ ಮತ್ತು … Continued

ಜೂನ್ 1ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಿದ ಬಿಐಎಸ್

ನವ ದೆಹಲಿ : ಮಹತ್ವದ ಬೆಳವಣಿಗೆಯಲ್ಲಿ 2021ರ ಜೂನ್ 1ರಿಂದ ಅನ್ವಯವಾಗುವಂತೆ ಚಿನ್ನಾಭರಣ ಮತ್ತು ಕರಕುಶಲ ವಸ್ತುಗಳನ್ನು ಕಡ್ಡಾಯವಾಗಿ ಗುರುತಿಸುವಂ ಹಾಲ್ ಮಾರ್ಕಿಂಗ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಕುರಿತು ಪ್ರಕನೆ ನೀಡಿರುವಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಜೂನ್ 1, 2021ರಿಂದ, ಚಿನ್ನಾಭರಣಗಳು ಮತ್ತು ಕರಕುಶಲ ವಸ್ತುಗಳನ್ನು … Continued

ಸುಪ್ರೀಂ ಕೋರ್ಟಿನಲ್ಲಿ ಮಾ .24ರಂದು ಹೊಸ ಚುನಾವಣಾ ಬಾಂಡ್‌ ಮಾರಾಟ ಅರ್ಜಿ ವಿಚಾರಣೆ

ನವ ದೆಹಲಿ: ಏಪ್ರಿಲ್ 1 ರಿಂದ ಹೊಸದಾಗಿ ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ಮಧ್ಯಂತರ ತಡೆ ಕೋರಿ ಎನ್ ಜಿಒ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 24 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಎಡಿಆರ್ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ತುರ್ತು ವಿಚಾರಣೆಗೆ … Continued

59% ಭಾರತೀಯ ಉದ್ಯೋಗದಾತರು ರಿಮೋಟ್‌ ವರ್ಕಿಂಗ್‌ ಪರ ಇಲ್ಲ: ಸಮೀಕ್ಷೆಯಲ್ಲಿ ಬೆಳಕಿಗೆ

ನವ ದೆಹಲಿ: ಸಾಂಕ್ರಾಮಿಕ ರೋಗವು ಕಚೇರಿಯಿಂದ ಕೆಲಸ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದರೂ ಭಾರತದಲ್ಲಿ ಶೇ 59 ರಷ್ಟು ಉದ್ಯೋಗದಾತರು ದೂರಸ್ಥ (ರಿಮೋಟ್‌ ವರ್ಕಿಂಗ್‌) ಕೆಲಸದ ಪರ ಇಲ್ಲ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಜಾಬ್ ಸೈಟ್ ನಡೆಸಿದ ಸಮೀಕ್ಷೆಯ ಪ್ರಕಾರ, 67 ಪ್ರತಿಶತದಷ್ಟು ದೊಡ್ಡದಾದ ಮತ್ತು 70 ಪ್ರತಿಶತದಷ್ಟು ಮಧ್ಯಮ ಗಾತ್ರದ ಭಾರತೀಯ ಸಂಸ್ಥೆಗಳು ತಮ್ಮ ಜಾಗತಿಕ … Continued

ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತ ಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿದ್ಯಮಾನವೂ ನಡೆದಿದೆ. ಇದು ನಡೆದ್ದು ಮಧ್ಯಪ್ರದೇಶದಲ್ಲಿ.ಮಧ್ಯಪ್ರದೇಶದ ರೇವಾದಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿಯೇ ಮದುವೆ ನಡೆದಿದೆ. ರೈತ ಯೂನಿಯನ್ ಮುಖ್ಯಸ್ಥ ಮಗನಾದ ಸಚಿನ್ ಹಾಗೂ ಅಸ್ಮಾ ಸಿಂಗ್ ಜೊತೆ … Continued

ಭಾರತದಲ್ಲಿ 40 ಸಾವಿರ ಸನಿಹಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ಶುಕ್ರವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ ಕೊನೆಯ 24 ಗಂಟೆಗಳಲ್ಲಿ ಭಾರತದಲ್ಲಿ 39,726 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 154 ಜನರು ಇದಕ್ಕೆ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,15,14,331ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,59,370 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 2,71,282 … Continued

ವಿಮಾ ಕ್ಷೇತ್ರದಲ್ಲಿ ಶೇ.74 ಎಫ್‍ಡಿಐಗೆ ರಾಜ್ಯಸಭೆಯಲ್ಲೂ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ವಯ ವಿಮಾ ಕ್ಷೇತ್ರದಲ್ಲಿ ಶೇ.74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ವಿಮಾ ತಿದ್ದುಪಡಿ ಕಾಯ್ದೆಗೆ ರಾಜ್ಯ ಸಭೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದ ವಿಮಾ ಕ್ಷೇತ್ರದ ತಿದ್ದುಪಡಿ ಕಾಯ್ದೆಗೆ ರಾಜ್ಯಸಭೆಯ ಒಪ್ಪಿಗೆ ಪಡೆದುಕೊಳ್ಳಲಾಗಿದೆ.ಇದುವರೆಗೂ ವಿಮಾ ಕ್ಷೇತ್ರದಲ್ಲಿ ಶೇ.49ರಷ್ಟು ವಿದೇಶಿ ನೇರ ಬಂಡವಾಳ … Continued

ಕೃಷಿ ಕಾನೂನು ರದ್ದುಪಡಿಸದಿದ್ದರೆ ಖಾಸಗಿ ಸಂಸ್ಥೆಗಳ ಗೋದಾಮು ಧ್ವಂಸ: ಟಿಕಾಯತ್‌ ಎಚ್ಚರಿಕೆ

ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಖಾಸಗಿ ಸಂಸ್ಥೆಗಳು ಆಹಾರಧಾನ್ಯ ಸಂಗ್ರಹಕ್ಕಾಗಿ ನಿರ್ಮಿಸುತ್ತಿರುವ ಗೋದಾಮುಗಳನ್ನು ಕೆಡವಲಾಗುವುದು ಎಂದು ರೈತರ ಆಂದೋಲನದ ಮುಖಂಡ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್‌ನ ಅಬೋಹರ್ ಸಮೀಪ ಆಯೋಜಿಸಿದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಟಿಕಾಯತ್‌, ನೂತನ ಕೃಷಿ ಕಾನೂನುಗಳು ಜಾರಿಗೊಳ್ಳದಿದ್ದರೂ ಕೂಡ ಕೆಲವು ಸಂಸ್ಥೆಗಳು ಧಾನ್ಯ ಸಂಗ್ರಹಕ್ಕೆ ಬೃಹತ್‌ … Continued